ಸಿಹಿ ಸುದ್ದಿ! ರಾಜ್ಯ ಸರ್ಕಾರದ ನಂತರ ಈಗ ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ₹6000 ಸಿಗುವ ಬಂಪರ್ ಯೋಜನೆ
ಇದೀಗ ಕೇಂದ್ರ ಸರ್ಕಾರವು ದೇಶದ ಹೆಣ್ಣುಮಕ್ಕಳಿಗೆ ಮತ್ತೊಂದು ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಪ್ರಯೋಜನವನ್ನು ನಮ್ಮ ರಾಜ್ಯದ ಹೆಣ್ಣುಮಕ್ಕಳು ಕೂಡ ಪಡೆಯಬಹುದು.
Pradhan Mantri Matru Vandana Yojana : ನಮ್ಮ ರಾಜ್ಯದಲ್ಲಿ ಈಗ ಕಾಂಗ್ರೆಸ್ ಸರ್ಕಾರದ ಆಳ್ವಿಕೆ ನಡೆಯುತ್ತಿದೆ. ಕಾಂಗ್ರೆಸ್ ಸರ್ಕಾರ ಈಗ ರಾಜ್ಯದ ಹೆಣ್ಣುಮಕ್ಕಳಿಗಾಗಿ ಯೋಜನೆಗಳನ್ನು ತಂದಿದೆ. ಪ್ರಸ್ತುತ ನಮ್ಮ ರಾಜ್ಯದಲ್ಲಿ ಹೆಣ್ಣುಮಕ್ಕಳಿಗಾಗಿ ಶಕ್ತಿ ಯೋಜನೆ (Shakti Yojane) ಮತ್ತು ಗೃಹಲಕ್ಷ್ಮಿ ಯೋಜನೆಯನ್ನು (Gruha Lakshmi Yojane) ಜಾರಿಗೆ ತರಲಾಗಿದೆ.
ಈ ಎರಡು ಯೋಜನೆಗಳ ಮೂಲಕ ಮಹಿಳೆಯರಿಗೆ ಸಾಕಷ್ಟು ಅನುಕೂಲವಾಗುತ್ತಿದೆ. ಶಕ್ತಿ ಯೋಜನೆಯ ಮೂಲಕ ಹೆಣ್ಣುಮಕ್ಳಳು ರಾಜ್ಯದ ಎಲ್ಲಾ ಕಡೆ ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ.
ಕೆಲಸಕ್ಕೆ ಹೋಗುವ ಹೆಣ್ಣುಮಕ್ಕಳಿಗೆ ಇದು ಬಹಳ ಸಹಾಯ ಆಗಿದೆ ಎಂದು ಹೇಳಬಹುದು. ಇನ್ನು ಗೃಹಲಕ್ಷ್ಮಿ ಯೋಜನೆಯಿಂದ ಮನೆಯ ಯಜಮಾನಿಯರಿಗೆ ಸಹಾಯ ಆಗಿದೆ. ಮನೆಯನ್ನು ನಡೆಸುವ ಹೆಣ್ಣುಮಕ್ಕಳಿಗೆ ಆರ್ಥಿಕವಾಗಿ ಯಾವುದೇ ತೊಂದರೆ ಆಗಬಾರದು ಎಂದು ಈ ಯೋಜನೆಯನ್ನು ಜಾರಿಗೆ ತಂದಿದೆ. ರಾಜ್ಯ ಸರ್ಕಾರ ಮಾತ್ರವಲ್ಲ ಕೇಂದ್ರ ಸರ್ಕಾರ (Central Government) ಕೂಡ ಹೆಣ್ಣುಮಕ್ಕಳಿಗೆ ಸಹಾಯ ಆಗುವಂಥ ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದೆ..
20 ವರ್ಷದಿಂದ ಒಂದೇ ಬಾಡಿಗೆ ಮನೆಯಲ್ಲಿ ಇರುವವರಿಗೆ ರಾತ್ರೋ ರಾತ್ರಿ ಹೊಸ ರೂಲ್ಸ್! ಖುಷಿಯಲ್ಲಿ ಬಾಡಿಗೆದಾರರು
ಹೆಣ್ಣುಮಕ್ಕಳು ಆರ್ಥಿಕವಾಗಿ ಸಬಲವಾಗಿ ಇರಬೇಕು, ಹೆಣ್ಣು ಅಭಿವೃದ್ಧಿ ಹೊಂದಬೇಕು, ಹೆಣ್ಣಿನ ಜೀವನದಲ್ಲಿ ಯಾವುದೇ ತೊಂದರೆ ಆಗಬಾರದು ಎಂದು ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದ್ದು, ಇದೀಗ ಕೇಂದ್ರ ಸರ್ಕಾರವು ದೇಶದ ಹೆಣ್ಣುಮಕ್ಕಳಿಗೆ ಮತ್ತೊಂದು ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಪ್ರಯೋಜನವನ್ನು ನಮ್ಮ ರಾಜ್ಯದ ಹೆಣ್ಣುಮಕ್ಕಳು ಕೂಡ ಪಡೆಯಬಹುದು. ಇದು ವಿಶೇಷವಾಗಿ ಗರ್ಭಿಣಿ ಹೆಣ್ಣುಮಕ್ಕಳಿಗಾಗಿ ತಂದಿರುವ ಯೋಜನೆ ಆಗಿದೆ.
ಗರ್ಭಿಣಿ ಮಹಿಳೆಯರಿಗಾಗಿ ಈಗ ಕೇಂದ್ರ ಸರ್ಕಾರವು ಬರೋಬ್ಬರಿ 615 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಇದು ಮಾತೃ ವಂದನಾ ಯೋಜನೆಯ ಅಡಿಯಲ್ಲಿ ಇಷ್ಟು ಹಣ ಬಿಡುಗಡೆ ಆಗಿದ್ದು, ಇಷ್ಟು ಹಣ ರಾಜ್ಯದ ಹೆಣ್ಣುಮಕ್ಕಳಿಗೆ ಆಗಿದೆ.
ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಸಿಗಲಿದೆ ಉಚಿತ ಹೊಲಿಗೆ ಯಂತ್ರ, ಪಡೆಯಲು ನೀವು ಮಾಡಬೇಕಾದ್ದು ಇಷ್ಟೇ!
ಈ ಬಗ್ಗೆ ಕೇಂದ್ರ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆಯ ಸಚಿವೆ ಸ್ಮೃತಿ ಇರಾನಿ ಅವರು ಅಧಿಕೃತವಾಗಿ ಮಾಹಿತಿ ನೀಡಿದ್ದು, 615ಕೋಟಿ ರೂಪಾಯಿಗಳನ್ನು ಮೀಸಲಾಗಿ ಇಡಲಾಗಿದೆ ಎಂದು ತಿಳಿಸಿದ್ದಾರೆ. ಕೆಲವು ಗರ್ಭಿಣಿ ಮಹಿಳೆಯರು ಆರ್ಥಿಕವಾಗಿ ಸಂಕಷ್ಟದಲ್ಲಿರುತ್ತಾರೆ ಅಂಥ ಮಹಿಳೆಯರಿಗೆ ಸಹಾಯ ಆಗಲಿ ಎಂದು ಈ ಯೋಜನೆಯನ್ನು ಜಾರಿಗೆ ತರಲಾಗಿದೆ.
ಈ ಯೋಜನೆಯಲ್ಲಿ ಎಷ್ಟೆಲ್ಲಾ ಮಹಿಳೆಯರು ಪ್ರಯೋಜನ ಪಡೆದುಕೊಂಡಿದ್ದಾರೆ ಎಂದು ಹಾಗೂ ಈ ಯೋಜನೆ ಬಗ್ಗೆ ಇನ್ನಿತರ ಮಾಹಿತಿಗಳನ್ನು ತಿಳಿಸುತ್ತೇವೆ ನೋಡಿ..
ಡೈರಿ ಫಾರ್ಮ್ ಸ್ಥಾಪಿಸಲು ಸರ್ಕಾರದ ಸಹಾಯ ಧನ! 90% ಸಬ್ಸಿಡಿ ಸಿಗುವ ಯೋಜನೆಗೆ ಇಂದೇ ಅಪ್ಲೈ ಮಾಡಿ
ಸಧ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ಮಾತೃ ವಂದನಾ ಯೋಜೆನೆಯ (Matru Vandana Yojana Scheme) ಅಡಿಯಲ್ಲಿ 20.72 ಲಕ್ಷ ಮಹಿಳೆಯರು ರಿಜಿಸ್ಟರ್ ಮಾಡಿಕೊಂಡಿದ್ದಾರೆ. ಇನ್ನು ಒಟ್ಟಾರೆಯಾಗಿ ಹೇಳುವುದಾದರೆ, 3.36ಕೋಟಿ ಗರ್ಭಿಣಿ ಮಹಿಳೆಯರಿಗೆ ಈ ಯೋಜನೆಯಿಂದ ಲಾಭ ಸಿಗುತ್ತಿದೆ. ಈ ಅಂಕಿ ಅಂಶವು ಸರ್ಕಾರದಿಂದಲೇ ಸಿಕ್ಕಿದೆ.
ಈ ಯೋಜನೆಯ ಮೂಲಕ ಹೆರಿಗೆ ಆಗಿರುವ ತಾಯಂದಿರಿಗೆ ಮೂರು ಕಂತುಗಳಲ್ಲಿ ₹6000 ರೂಪಾಯಿ ಹಣ ಸಿಗುತ್ತಿದೆ. ಈ ರೀತಿಯಾಗಿ ತಾಯಂದಿರಿಗೆ ಹಣಕಾಸಿನ ಸಹಾಯ ಮಾಡಲಾಗುತ್ತಿದೆ. ಹಣಕಾಸಿನ ವಿಷಯದಲ್ಲಿ ತೊಂದರೆ ಅನುಭವಿಸುತ್ತಿರುವ ಮಹಿಳೆಯರಿಗೆ ಈ ಮೂಲಕ ಕೇಂದ್ರ ಸರ್ಕಾರ ಸಹಾಯ ಮಾಡುತ್ತಿದೆ.
After state government now big gift to women from central government