ರೈತರಿಗೆ ಸಿಗುತ್ತೆ 5 ಲಕ್ಷದ ವರೆಗೆ ಬಡ್ಡಿ ರಹಿತ ಸಾಲ; ಅರ್ಜಿ ಸಲ್ಲಿಸಲು ಈ ದಾಖಲೆ ಇದ್ರೆ ಸಾಕು
agriculture loan : ರೈತರಿಗೆ (farmers) ತಮ್ಮ ಭೂಮಿಯಲ್ಲಿ ಬೆಳೆ ಬೆಳೆಯುವುದಕ್ಕೆ ಬಿತ್ತನೆ ಬೀಜ, ಕೃಷಿ ಉಪಕರಣಗಳು (agriculture equipment) ಮೊದಲಾದ ವಸ್ತುಗಳು ಬೇಕೇ ಬೇಕು, ಇದೆಲ್ಲವನ್ನು ಒದಗಿಸಿಕೊಳ್ಳುವುದಕ್ಕೆ ರೈತರಿಗೆ ಕಷ್ಟವಾಗಬಹುದು ಇದೇ ಕಾರಣಕ್ಕೆ ಸರ್ಕಾರ ರೈತರಿಗೆ ಅನುಕೂಲವಾಗುವಂತೆ ಬೇರೆ ಬೇರೆ ರೀತಿಯ ಸಾಲ ಸೌಲಭ್ಯಗಳನ್ನು (loan facility) ನೀಡುತ್ತಿದೆ.
ಕೆಲವು ಸಾಲ ಸೌಲಭ್ಯಗಳಿಗೆ ಯಾವುದೇ ರೀತಿಯ ಬಡ್ಡಿಯನ್ನು ಸರ್ಕಾರ ವಿಧಿಸುವುದಿಲ್ಲ. ಇನ್ನು ಕೆಲವು ಸಾಲಕ್ಕೆ ಅತಿ ಕಡಿಮೆ ಬಡ್ಡಿ ದರ (low interest rate for loan) ಇರುತ್ತದೆ ಹಾಗೂ ಸಬ್ಸಿಡಿ ಕೂಡ ಸರ್ಕಾರದಿಂದ ಸಿಗುತ್ತದೆ.
ಕುಳಿತಲ್ಲೇ ವಾಟ್ಸಾಪ್ ಮೂಲಕವೇ ಬುಕ್ ಮಾಡಿ ಗ್ಯಾಸ್ ಸಿಲಿಂಡರ್! ಬುಕಿಂಗ್ ಇನ್ನಷ್ಟು ಸುಲಭ
ಈಗ ರೈತರ ಕೆಲವು ಕೃಷಿ ಚಟುವಟಿಕೆಗಳಿಗಾಗಿ ಬಡ್ಡಿ ರಹಿತ ಸಾಲ (without interest loan) ನೀಡಲು ಸರ್ಕಾರ ಮುಂದಾಗಿದ್ದು ಅಂತಹ ಯೋಜನೆಯ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಸರ್ಕಾರದಿಂದ ಬಡ್ಡಿ ರಹಿತ ಸಾಲವನ್ನು ಪಡೆದುಕೊಳ್ಳಬಹುದು ಕೃಷಿ ಚಟುವಟಿಕೆಗಾಗಿ ಡಿಸಿಸಿ ಬ್ಯಾಂಕ್ ನಲ್ಲಿ ಈ ಕೆಲವು ಚಟುವಟಿಕೆಗಳಿಗೆ ವಿಶೇಷ ಸಾಲ ಸೌಲಭ್ಯ ಸಿಗಲಿದೆ. ಕುರಿ ಸಾಕಾಣಿಕೆ, ಹೈನುಗಾರಿಕೆ, ಬಡ್ಡಿ ರಹಿತ ಕೃಷಿ ಸಾಲ, ವಿವಿಧ ಬೆಳೆಗಳ ಮೇಲೆ ಸಾಲ ಸೌಲಭ್ಯವನ್ನು ನೀಡಲಾಗುತ್ತಿದೆ.
ಇಂತಹ ರೈತರು ಪ್ರತಿ ತಿಂಗಳು ಪಡೆದುಕೊಳ್ಳಬಹುದು ₹3,000 ರೂಪಾಯಿ! ಇಲ್ಲಿದೆ ಮಾಹಿತಿ
ಕೃಷಿ ಸಾಲ ಪಡೆದುಕೊಳ್ಳುವುದು ಹೇಗೆ? (How to get agriculture loan)
ಕೃಷಿ ಚಟುವಟಿಕೆಗಾಗಿ 1- 3% ನಷ್ಟು ಮಾತ್ರ ಬಡ್ಡಿ ದರ ನಿಗದಿಪಡಿಸಲಾಗಿರುವ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಜೊತೆಗೆ ಬಡ್ಡಿ ರಹಿತ ಸಾಲ ಸೌಲಭ್ಯ ಕೂಡ ಲಭ್ಯವಿದೆ, ಆದರೆ ರೈತರು ಈ ಸಾಲ ಸೌಲಭ್ಯ ಪಡೆದುಕೊಳ್ಳಲು ಮುಖ್ಯವಾಗಿ ಫ್ರೂಟ್ಸ್ ಐಡಿ (FID) ಹೊಂದಿರಬೇಕು. ಹಾಗೂ ಈ ಐಡಿ ಜೊತೆಗೆ ಸರ್ವೇ ನಂಬರ್ ಲಿಂಕ್ (survey number link) ಆಗಿರಬೇಕು.
ಡಿಸಿಸಿ ಬ್ಯಾಂಕ್ (DCC bank loan) ನಲ್ಲಿ ಖಾತೆ ಹೊಂದಿರುವವರು ಕೃಷಿ ಸಾಲವನ್ನು ಪಡೆದುಕೊಳ್ಳಬಹುದು. ಸರ್ವೇ ನಂಬರ್ ಹಾಗೂ ಪಹಣಿ ಪತ್ರವನ್ನು ಸಾಲ ಪಡೆದುಕೊಳ್ಳಲು ನೀಡಬೇಕಾಗಿರುವ ದಾಖಲೆಗಳಾಗಿವೆ.
PhonePe Loan: ಫೋನ್‌ಪೇ ಮೂಲಕ ಪೇಮೆಂಟ್ ಮಾತ್ರವಲ್ಲ, ಕ್ಷಣಮಾತ್ರದಲ್ಲಿ ಪಡೆಯಿರಿ ಲೋನ್
ಇನ್ನು ಈ ಕೃಷಿ ಸಾಲವನ್ನು ಪಡೆದುಕೊಂಡ ನಂತರ ಒಂದು ವರ್ಷಗಳಲ್ಲಿ ಮರುಪಾವತಿ ಮಾಡಿ ಮತ್ತೆ ಹಿಂಪಡೆದುಕೊಳ್ಳಬಹುದು. ಅಂದ್ರೆ ಇಲ್ಲಿ ಸಾಲ ರಿನಿವಲ್ (yearly renewal) ಆಗುತ್ತದೆ, ಎಷ್ಟು ವರ್ಷಗಳವರೆಗೆ ಬೇಕಾದರೂ ಮಾಡಿಕೊಳ್ಳಬಹುದಾಗಿದೆ.
ನೀವು ರಿನಿವಲ್ ಮಾಡಿಕೊಳ್ಳದೆ ಇದ್ದರೆ ಆ ಸಾಲದ ಮೇಲೆ ಬಡ್ಡಿ ವಿಧಿಸಲಾಗುತ್ತದೆ. ಸದ್ಯ ಡಿಸಿಸಿ ಬ್ಯಾಂಕ್ ನಲ್ಲಿ ಸಿಗುತ್ತಿರುವ ಈ ಸಾಲ ಸೌಲಭ್ಯ ಪಡೆದುಕೊಳ್ಳಲು ಹತ್ತಿರದ ಡಿಸಿಸಿ ಬ್ಯಾಂಕ್ ಶಾಖೆಗೆ ಹೋಗಿ ರೈತರು ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು.
ಎಜುಕೇಶನ್ ಲೋನ್ ತೆಗೆದುಕೊಳ್ಳುವ ಮುನ್ನ ನೀವು ತಿಳಿದುಕೊಳ್ಳಬೇಕಾದ ವಿಷಯಗಳಿವು
Farmers get interest-free loan up to 5 lakhs, This document is enough to apply