ದೇಶದ ರೈತರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಯೋಜನೆ, ಇಂದೇ ನೋಂದಾಯಿಸಿಕೊಳ್ಳಿ

ಕೇಂದ್ರ ಸರ್ಕಾರ (Central government) ಅರ್ಹ ರೈತರಿಗೆ ನಾಲ್ಕು ಕಂತುಗಳಲ್ಲಿ 6000ಗಳನ್ನು ನೇರವಾಗಿ ರೈತರ ಖಾತೆಗೆ (Bank Account) ಜಮಾ ಮಾಡುತ್ತಿದೆ

Bengaluru, Karnataka, India
Edited By: Satish Raj Goravigere

ಕೃಷಿಕರಿಗೆ ಸರ್ಕಾರ ಕೆಲವು ಪ್ರಮುಖ ಯೋಜನೆಗಳನ್ನು ಜಾರಿಗೆ ತಂದಿದೆ. ಇದರಿಂದ ನಿಜಕ್ಕೂ ರೈತರು ಆರ್ಥಿಕವಾಗಿ ಸ್ವಲ್ಪವಾದರೂ ಸಹಾಯ ಪಡೆದುಕೊಳ್ಳಬಹುದು.

ರೈತರ ಜಮೀನು ಮಳೆ ಹಾಗೂ ಪ್ರಕೃತಿಯನ್ನೇ ಅವಲಂಬಿಸಿರುವ ಹಿನ್ನೆಲೆಯಲ್ಲಿ ಈ ಬಾರಿಯಂತೂ ಮಳೆಯ ಅಭಾವದಿಂದಾಗಿ ಸರಿಯಾಗಿ ಫಸಲು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರದ ಕೆಲವು ಯೋಜನೆಗಳು ಆರ್ಥಿಕ ನೆರವನ್ನು ನೀಡುತ್ತಿದೆ.

PM Kisan Yojana New Update on Deposit of Money to Bank Account

ಈ ಸರ್ಕಾರಿ ಯೋಜನೆಯಲ್ಲಿ ಸಿಗುತ್ತೆ 15 ಸಾವಿರ ಸಹಾಯಧನ, 3 ಲಕ್ಷ ಸಾಲ; ಅಪ್ಲೈ ಮಾಡಿ

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ನೋಂದಾವಣಿ ಆರಂಭ (Pradhanmantri Kisan Samman Nidhi scheme)

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಡಿಯಲ್ಲಿ ವಾರ್ಷಿಕವಾಗಿ ರೈತರಿಗೆ 6,000ಗಳನ್ನು ನೀಡಲಾಗುತ್ತದೆ. ವರ್ಷಕ್ಕೆ 4 ಕಂತುಗಳಲ್ಲಿ ಪ್ರತಿ ಕಂತಿಗೆ 2,000 ರೂ.ಗಳಂತೆ 6,000ಗಳನ್ನು ನೀಡಲಾಗುತ್ತದೆ. ಈಗಾಗಲೇ ಪಿಎಂ ಕಿಸಾನ್ ಯೋಜನೆಯ 15 ಕಂತುಗಳು ಬಿಡುಗಡೆ ಆಗಿವೆ, ಈಗ 16ನೇ ಕಂತಿನ ಹಣ ಪಡೆದುಕೊಳ್ಳಲು ನೋಂದಣಿ ಆರಂಭವಾಗಿದೆ.

ಹೌದು, ಕೇಂದ್ರ ಸರ್ಕಾರ (Central government) ಅರ್ಹ ರೈತರಿಗೆ ನಾಲ್ಕು ಕಂತುಗಳಲ್ಲಿ 6000ಗಳನ್ನು ನೇರವಾಗಿ ರೈತರ ಖಾತೆಗೆ (Bank Account) ಜಮಾ ಮಾಡುತ್ತಿದೆ. ಆದರೆ ನೀವು ರೈತರಾಗಿದ್ದು ಇಲ್ಲಿಯವರೆಗೆ ಪ್ರಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಪ್ರಯೋಜನ ಪಡೆದುಕೊಳ್ಳದೆ ಇದ್ದರೆ 16ನೇ ಕಂತಿನಿಂದ ಹಣ ಪಡೆದುಕೊಳ್ಳಲು ನೋಂದಾಯಿಸಿಕೊಳ್ಳಲು ಸರ್ಕಾರ ಅವಕಾಶ ಮಾಡಿಕೊಡುತ್ತದೆ.

ಪಿಎಂ ಕಿಸಾನ್ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು? (Apply for PM Kisan Yojana)

2ಹೆಕ್ಟೇರ್ ಭೂಮಿ ಹೊಂದಿರುವ ಸಣ್ಣ ಹಾಗೂ ಅತಿ ಸಣ್ಣ ರೈತರು (Farmers) ಅರ್ಜಿ ಸಲ್ಲಿಸಬಹುದು. ರಾಜ್ಯ ಅಥವಾ ಕೇಂದ್ರ ಸರ್ಕಾರಿ ನೌಕರರಾಗಿದ್ದರೆ ಅರ್ಜಿ ಸಲ್ಲಿಸುವಂತಿಲ್ಲ.

ಹತ್ತು ಸಾವಿರ ರೂಪಾಯಿಗಿಂತ ಹೆಚ್ಚು ಮಾಸಿಕ ಪಿಂಚಣಿ ಪಡೆಯುವ ವೈದ್ಯರು, ಇಂಜಿನಿಯರ್, ವಕೀಲರ ವೃತ್ತಿ ಮಾಡುವವರು ಯೋಜನೆಗೆ ಅರ್ಜಿ ಸಲ್ಲಿಸುವಂತಿಲ್ಲ. ಆದಾಯ ತೆರಿಗೆ ಪಾವತಿ ಮಾಡುವ ರೈತರು ಕಿಸಾನ್ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಸಾಧ್ಯವಿಲ್ಲ.

ಸೈಟ್, ಮನೆ, ಆಸ್ತಿ ಖರೀದಿ ಮಾಡುವವರಿಗೆ ಕೇಂದ್ರದಿಂದ ಹೊಸ ಮಾರ್ಗಸೂಚಿ! ಹೊಸ ರೂಲ್ಸ್

ಪಿಎಂ ಕಿಸಾನ್ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? (To apply for Kisan Yojana)

Kisan Samman Nidhi schemeಮನೆಯಲ್ಲಿಯೇ ಕುಳಿತು ಮೊಬೈಲ್ (Smartphone) ಸಹಾಯದಿಂದ ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್ಸೈಟ್ನಲ್ಲಿ pkisan.gov.in ಅರ್ಜಿ ಸಲ್ಲಿಸಬಹುದಾಗಿದೆ.

ಕ್ರೆಡಿಟ್ ಕಾರ್ಡ್ ಮೂಲಕವೇ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸುವುದು ಹೇಗೆ ಗೊತ್ತಾ?

*ಮೊದಲಿಗೆ ಪಿಎಂ ಕಿಸಾನ್ ಅಧಿಕೃತ ವೆಬ್ಸೈಟ್ ಗೆ (Kisan Website) ಲಾಗಿನ್ ಆಗಬೇಕು

*ಎರಡನೆಯದಾಗಿ ಫಾರ್ಮರ್ಸ್ ಕಾರ್ನರ್ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. “New registration” ಆಯ್ಕೆ ಕಾಣಿಸುತ್ತಿದೆ ಅದರ ಮೇಲೆ ಕ್ಲಿಕ್ ಮಾಡಿ.

*ಈಗ ನೀವು ನಗರಗಳನ್ನು (Select City) ಆಯ್ಕೆ ಮಾಡಿಕೊಳ್ಳಬೇಕು.

*ನಂತರ ಮತ್ತೊಂದು ಪುಟ ತೆರೆದುಕೊಳ್ಳುತ್ತದೆ ಅದರಲ್ಲಿ ನೀವು ಆಧಾರ್ ಸಂಖ್ಯೆ (Aadhaar Number) ಹಾಗೂ ನಿಮ್ಮ ಮೊಬೈಲ್ ಸಂಖ್ಯೆಯನ್ನು (Mobile Number) ನಮೂದಿಸಬೇಕು.

*ಬಳಿಕ ನಿಮ್ಮ ರಾಜ್ಯವನ್ನು ಆಯ್ಕೆ ಮಾಡಿಕೊಂಡು ಗೆಟ್ ಓಟಿಪಿ (Get OTP) ಎಂದು ಕ್ಲಿಕ್ ಮಾಡಿ.

*ಈಗ ನೀವು ನಮೂದಿಸಿದ ಮೊಬೈಲ್ ಸಂಖ್ಯೆಗೆ ಓಟಿಪಿ ಕಳುಹಿಸಲಾಗುತ್ತದೆ.

*ಒಟಿಪಿಯನ್ನು ನಮೂದಿಸಿ ಪ್ರೋಸೀಡ್ ಫಾರ್ ರಿಜಿಸ್ಟ್ರೇಷನ್ ಎನ್ನುವುದನ್ನು ಆಯ್ಕೆ ಮಾಡಿಕೊಳ್ಳಿ.

*ಭಾರತದಲ್ಲಿ ಅಗತ್ಯ ಇರುವ ಎಲ್ಲಾ ಮಾಹಿತಿಗಳನ್ನು ಅರ್ಜಿ ಫಾರಂನಲ್ಲಿ ಭರ್ತಿ ಮಾಡಬೇಕಾಗುತ್ತದೆ.

*ಬಳಿಕ ಮತ್ತೊಂದು ಓಟಿಪಿ ಸ್ವೀಕರಿಸುತ್ತೀರಿ ಆ ಓಟಿಪಿಯನ್ನು ನಮೂದಿಸಿ ಸಬ್ಮಿಟ್ ಎಂದು ಕೊಟ್ಟರೆ ಮುಂದಿನ ಹಂತದಲ್ಲಿ ನೀವು ಕೃಷಿಗೆ ಸಂಬಂಧಿಸಿದ ಎಲ್ಲಾ ವಿವರ ಹಾಗೂ ದಾಖಲೆಗಳನ್ನು ಸ್ಕ್ಯಾನ್ ಕಾಪಿ ಅಪ್ಲೋಡ್ ಮಾಡಬೇಕಾಗುತ್ತೆ.

*ಅಪ್ಲೋಡ್ ಮಾಡಿದ ನಂತರ ಸಬ್ಮಿಟ್ ಕೊಟ್ಟರೆ ನಿಮ್ಮ ನೋಂದಣಿ ಪೂರ್ಣಗೊಳ್ಳುತ್ತದೆ ಹಾಗೂ ಪೂರ್ಣಗೊಂಡಿರುವ ಬಗ್ಗೆ ನಿಮ್ಮ ಮೊಬೈಲ್ ಸಂಖ್ಯೆಗೆ ಸಂದೇಶವನ್ನು ಕೂಡ ಕಳುಹಿಸಲಾಗುತ್ತದೆ.

Great Scheme from central government for farmers of the country, register today