ಈ ಸರ್ಕಾರಿ ಯೋಜನೆಯಲ್ಲಿ ಸಿಗುತ್ತೆ 15 ಸಾವಿರ ಸಹಾಯಧನ, 3 ಲಕ್ಷ ಸಾಲ; ಅಪ್ಲೈ ಮಾಡಿ

Story Highlights

ಜಾಮೀನು ರಹಿತ ಸಾಲವನ್ನು (Loan) ಪಡೆದುಕೊಳ್ಳಬಹುದು, ಮೂರು ಲಕ್ಷದವರೆಗೆ ಕೇವಲ 5% ಬಡ್ಡಿ ದರದಲ್ಲಿ ಸಾಲ ಸೌಲಭ್ಯ (Loan Facility) ನೀಡಲಾಗುತ್ತದೆ.

ಕೇಂದ್ರ ಸರ್ಕಾರ (Central government) ದೇಶದಲ್ಲಿ ವಾಸಿಸುವ ಬೇರೆ ಬೇರೆ ವೃತ್ತಿಗಳನ್ನು ಅವಲಂಬಿಸಿರುವ ಜನರಿಗೆ ತಮ್ಮ ವೃತ್ತಿಯನ್ನು ಇನ್ನಷ್ಟು ಅಭಿವೃದ್ಧಿ ಪಡಿಸಿಕೊಳ್ಳಲು ಸಹಾಯಕವಾಗುವಂತೆ ಕೆಲವು ಯೋಜನೆಗಳನ್ನು ರೂಪಿಸಿದೆ

ಈ ಯೋಜನೆಗಳಿಗೆ ಸ್ವಂತ ಉದ್ಯಮ (Own Business) ಮಾಡುತ್ತಿರುವ ಹಾಗೂ ಸಾಂಪ್ರದಾಯಿಕ ಉದ್ಯಮವನ್ನು ಮುಂದುವರೆಸಿಕೊಂಡು ಬಂದಿರುವ ಉದ್ಯಮಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಈ ಯೋಜನೆಯ ಬಗ್ಗೆ ಇಲ್ಲಿ ಸಂಪೂರ್ಣವಾದ ಮಾಹಿತಿ ನೀಡಲಾಗಿದ್ದು ನೀವು ಕೂಡ ಅಗತ್ಯವಿದ್ದರೆ ಅರ್ಜಿ ಸಲ್ಲಿಸಿ ಆರ್ಥಿಕ ಸಹಾಯ (Loan) ಪಡೆದುಕೊಳ್ಳಿ.

ಸೈಟ್, ಮನೆ, ಆಸ್ತಿ ಖರೀದಿ ಮಾಡುವವರಿಗೆ ಕೇಂದ್ರದಿಂದ ಹೊಸ ಮಾರ್ಗಸೂಚಿ! ಹೊಸ ರೂಲ್ಸ್

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ! (PM Vishwakharma Yojana)

2023 ರಲ್ಲಿ ಸಾಂಪ್ರದಾಯಿಕ ವೃತ್ತಿಯನ್ನು (traditional profession) ಮಾಡಿಕೊಂಡು ಬಂದಿರುವ ಕುಶಲಕರ್ಮಿ ಉದ್ಯಮಿಗಳಿಗಾಗಿ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಜಾರಿಗೆ ತರಲಾಗಿದೆ.

ಸರ್ಕಾರದ ಈ ನೂತನ ಯೋಜನೆಗೆ ಅರ್ಜಿ ಸಲ್ಲಿಸಲು ದೇಶದ ಗುಡಿ ಮತ್ತು ಕೌಶಲ್ಯ ಆಧಾರಿತ ವೃತ್ತಿಯನ್ನು ಮಾಡುತ್ತಿರುವ ಪ್ರತಿಯೊಬ್ಬರು ಕೂಡ ಆರ್ಥಿಕ ನೆರವು ಪಡೆದುಕೊಳ್ಳಲು ಸಾಧ್ಯವಿದೆ.

ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು?

Loanಕಮ್ಮಾರರು, ಶಸ್ತ್ರ ತಯಾರಿಸುವವರು, ಬಟ್ಟೆ ಚಾಪೆ ಕಸ ಪೊರಕೆ ತಯಾರಿಸುವವರು, ಸಾಂಪ್ರದಾಯಿಕವಾಗಿ ಗೊಂಬೆ ಆಟಿಕೆ ತಯಾರಿಸುವವರು, ಹೂಮಾಲೆ, ಅಗರ್ಬತ್ತಿ ತಯಾರಿಸುವವರು, ಕುಂಬಾರ ವೃತ್ತಿ ಮಾಡುವವರು, ಮೀನು ಬಲೆ ಹೆಣೆಯುವವರು, ಮೂರ್ತಿ ಕೆತ್ತನೆಯಂತಹ ಶಿಲ್ಪಿಗಳು, ಕ್ಷೌರಿಕರು, ಡೋಬಿಗಳು, ಬಟ್ಟೆ ಹೊಲಿಯುವವರು ಹೀಗೆ ಸಾಂಪ್ರದಾಯಿಕ ವೃತ್ತಿ ಜೀವನವನ್ನು ಮೆಚ್ಚಿಕೊಂಡು ಬಂದಿರುವ ಜನರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಸ್ಟಾರ್ ಚಿಹ್ನೆ ಇರೋ ₹500 ರೂಪಾಯಿ ನೋಟಿನ ಬಗ್ಗೆ ಹೊಸ ಅಪ್ಡೇಟ್! ಮಹತ್ವದ ಮಾಹಿತಿ

ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ಅರ್ಹತೆಗಳು

*ಈ ಯೋಜನೆಗೆ ಅರ್ಜಿ ಸಲ್ಲಿಸುವವರು ಸಾಂಪ್ರದಾಯಿಕ ವೃತ್ತಿಯಲ್ಲಿ ತೊಡಗಿಕೊಂಡಿರಬೇಕು.

*18 ವರ್ಷ ತುಂಬಿದ ಪ್ರತಿಯೊಬ್ಬರು ಅರ್ಜಿ ಸಲ್ಲಿಸಬಹುದಾಗಿದೆ.

*ಕಳೆದ ಐದು ವರ್ಷಗಳಲ್ಲಿ ಕೇಂದ್ರ ಸರ್ಕಾರದ ಇತರ ಸ್ವನಿಧಿ ಯೋಜನಾ, ಮುದ್ರ ಯೋಜನಾ ಮೊದಲಾದ ಸಾಲ ನೀಡುವ ಯೋಜನೆಗಳಲ್ಲಿ ಸಹಾಯಧನ ಪಡೆದಿರಬಾರದು.

ಬೇಕಾಗಿರುವ ದಾಖಲೆಗಳು

ಅರ್ಜಿದಾರರ ಆಧಾರ್ ಕಾರ್ಡ್

ತಮ್ಮ ವೃತ್ತಿಯ ಬಗ್ಗೆ ಮಾಹಿತಿ

ಆದಾಯ ಪ್ರಮಾಣ ಪತ್ರ

ರೇಷನ್ ಕಾರ್ಡ್

ಬ್ಯಾಂಕ್ ಪಾಸ್ ಬುಕ್ ಪ್ರತಿ

ಅರ್ಜಿದಾರರ ಫೋಟೋ

ಕ್ರೆಡಿಟ್ ಕಾರ್ಡ್ ಮೂಲಕವೇ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸುವುದು ಹೇಗೆ ಗೊತ್ತಾ?

ವಿಶ್ವಕರ್ಮ ಯೋಜನೆಯಲ್ಲಿ ಸಿಗುವ ಸೌಲಭ್ಯಗಳು ಯಾವವು?

*ಜಾಮೀನು ರಹಿತ ಸಾಲವನ್ನು (Loan) ಪಡೆದುಕೊಳ್ಳಬಹುದು, ಮೂರು ಲಕ್ಷದವರೆಗೆ ಕೇವಲ 5% ಬಡ್ಡಿ ದರದಲ್ಲಿ ಸಾಲ ಸೌಲಭ್ಯ (Loan Facility) ನೀಡಲಾಗುತ್ತದೆ. ಮೊದಲ ಹಂತದಲ್ಲಿ ಒಂದು ಲಕ್ಷ ರೂಪಾಯಿಗಳನ್ನು ಸಾಲವಾಗಿ ಪಡೆದುಕೊಳ್ಳಬಹುದು ಹಾಗೂ 18 ತಿಂಗಳ ಒಳಗೆ ಮರುಪಾವತಿ ಮಾಡಬೇಕು.

ಎರಡನೇ ಹಂತದಲ್ಲಿ ಅಂದರೆ ಈ ಮೊದಲ ಹಂತದ ಸಾಲ ಮರುಪಾವತಿ (Loan Re Payment) ಮಾಡಿದ ನಂತರ ಎರಡು ಲಕ್ಷ ರೂಪಾಯಿಗಳ ಸಾಲ ಪಡೆದುಕೊಳ್ಳಬಹುದು ಇದನ್ನ ಮರುಪಾವತಿ ಮಾಡಲು 30 ತಿಂಗಳ ಅವಕಾಶ ಇರುತ್ತದೆ.

*ಎರಡನೆಯದಾಗಿ ಹದಿನೈದು ಸಾವಿರ ರೂಪಾಯಿಗಳ ಮೊತ್ತದ ಉಪಕರಣವನ್ನು ಖರೀದಿ ಮಾಡಲು ಸಹಾಯಧನ ಒದಗಿಸಲಾಗುತ್ತದೆ.

*ನೀವು ಯಾವ ವೃತ್ತಿ ಮಾಡುತ್ತಿದ್ದೀರಾ ಅದೇ ವೃತ್ತಿಗೆ ಸಂಬಂಧಪಟ್ಟಂತೆ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ನೀಡಲಾಗುತ್ತದೆ. ತರಬೇತಿಯ ಸಮಯದಲ್ಲಿ 500 ರೂಪಾಯಿಗಳ ಸ್ಟೈಫಂಡ್ ಕೂಡ ನೀಡಲಾಗುತ್ತಿದ್ದು, ತರಬೇತಿ ಮುಗಿದ ನಂತರ ತರಬೇತಿ ಪ್ರಮಾಣ ಪತ್ರ ಬ್ರಾಂಡಿಂಗ್ ಹಾಗೂ ನಿಮ್ಮದೇ ಉತ್ಪನ್ನ ತಯಾರಿಕೆಗೆ ಮಾರಾಟ ಮಾಡಲು ಜಾಹೀರಾತು ಹಾಗೂ ಮಾರ್ಕೆಟಿಂಗ್ ಸಹಾಯವನ್ನು ಕೂಡ ಸರ್ಕಾರವೇ ಒದಗಿಸುತ್ತದೆ.

ಸ್ವಂತ ಮನೆ ಕಟ್ಟಿಕೊಳ್ಳಲು ಸಿಗುತ್ತೆ ₹2.67 ಲಕ್ಷ ಸಬ್ಸಿಡಿ ಸಾಲ! ಸರ್ಕಾರದ ಹೊಸ ಯೋಜನೆ

ಅರ್ಜಿ ಸಲ್ಲಿಸುವುದು ಹೇಗೆ?

ಪ್ರಧಾನ ಮಂತ್ರಿ ವಿಶ್ವಕರ್ಮ ಅಧಿಕೃತ ವೆಬ್ಸೈಟ್ https://pmvishwakarma.gov.in/ ನಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಅಥವಾ ಹತ್ತಿರದ ಸಿ ಎಸ್ ಸಿ ಸೆಂಟರ್ ನಲ್ಲಿ ಅಗತ್ಯ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಬಹುದು.

15 thousand subsidy and 3 lakh loan will be available in this government scheme

Related Stories