ಪಿಎಂ ಕಿಸಾನ್ ಹಣ ಬಂದಿಲ್ವಾ? ಹಾಗಾದ್ರೆ ಇಲ್ಲಿದೆ ಸಹಾಯವಾಣಿ ಸಂಖ್ಯೆ
PM ಕಿಸಾನ್ ಯೋಜನೆಯ 19ನೇ ಹಂತದಲ್ಲಿ ಹಣ ಖಾತೆಗೆ ಜಮೆಯಾಗದಿದ್ದರೆ ಆತಂಕಪಡಬೇಡಿ. ಆರ್ಥಿಕ ಸಹಾಯವನ್ನು ಪಡೆಯಲು ಪರಿಶೀಲನೆ ಮತ್ತು ದೂರು ಪ್ರಕ್ರಿಯೆಗಳ ವಿವರ ಇಲ್ಲಿದೆ.
- ಖಾತೆಗೆ ಹಣ ಜಮೆಯಾಗದಿದ್ದರೆ ದೂರು ಸಲ್ಲಿಸುವ ವಿಧಾನ
- PM ಕಿಸಾನ್ ವೆಬ್‌ಸೈಟ್‌ನಲ್ಲಿ ಖಾತಾ ಸ್ಥಿತಿಯನ್ನು ಪರಿಶೀಲಿಸುವ ಪ್ರಕ್ರಿಯೆ
- ಸಹಾಯಕ್ಕಾಗಿ ಸಂಪರ್ಕಿಸಬಹುದಾದ ಇಮೇಲ್ ಮತ್ತು ಟೋಲ್-ಫ್ರೀ ಸಂಖ್ಯೆಗಳು
PM Kisan : ನಿಮ್ಮ PM ಕಿಸಾನ್ ಯೋಜನೆಯ ಹಣ ಇನ್ನೂ ಖಾತೆಗೆ ಜಮಾ ಆಗಿಲ್ಲವೇ? ಈ ಬಾರಿ ಫೆಬ್ರವರಿ 24ರಂದು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 19ನೇ ಹಂತದ ಹಣವನ್ನು ಸರ್ಕಾರ ಬಿಡುಗಡೆ ಮಾಡಿದೆ. ಆದರೆ, ಇನ್ನು ಕೆಲವು ರೈತರ ಖಾತೆಗೆ ಹಣ ಸೇರಿಲ್ಲ. ಆದರೆ ನೀವು ಆತಂಕ ಪಡುವ ಅವಶ್ಯಕತೆ ಇಲ್ಲ, ಸರಿಯಾದ ಕ್ರಮಗಳನ್ನು ತೆಗೆದುಕೊಂಡರೆ ಸಮಸ್ಯೆ ಪರಿಹಾರವಾಗುತ್ತದೆ.
ಮೊದಲಿಗೆ, ನೀವು ಈ ಯೋಜನೆಗೆ ಅರ್ಹರಾಗಿದ್ದೀರಾ ಎಂದು ಖಚಿತಪಡಿಸಿಕೊಳ್ಳಿ. PM ಕಿಸಾನ್ ವೆಬ್‌ಸೈಟ್‌ನಲ್ಲಿ ಫಲಾನುಭವಿಗಳ ಪಟ್ಟಿಯನ್ನು ಪರಿಶೀಲಿಸಿ.
ಇದನ್ನೂ ಓದಿ: ಏಪ್ರಿಲ್ 1ರಿಂದ ಹೊಸ ಪಿಂಚಣಿ ಯೋಜನೆ ! ಏನೆಲ್ಲಾ ಸವಲತ್ತು ಸಿಗುತ್ತೆ ಗೊತ್ತಾ
ನಂತರ, ನಿಮ್ಮ ಖಾತೆಯ eKYC ಪ್ರಕ್ರಿಯೆ ಪೂರ್ಣಗೊಂಡಿದೆಯಾ ಎಂಬುದನ್ನು ದೃಢಪಡಿಸಿಕೊಳ್ಳಿ. KYC ಅಪ್‌ಡೇಟ್ ಆಗಿರದಿದ್ದರೆ, ಹಣ ಜಮಾ ಆಗದಿರುವ ಸಾಧ್ಯತೆ ಹೆಚ್ಚಾಗಿರುತ್ತದೆ.
ನೀವು ಈ ಎಲ್ಲಾ ಹಂತಗಳನ್ನು ಸರಿಯಾಗಿ ಅನುಸರಿಸಿದರೂ ಹಣ ಖಾತೆಗೆ ಬರದಿದ್ದರೆ, ಅಧಿಕೃತವಾಗಿ ದೂರು ನೀಡಬಹುದು.
ಇಮೇಲ್ ಮೂಲಕ ನಿಮ್ಮ ಸಮಸ್ಯೆಯನ್ನು pmkisan-ict@gov.in ಅಥವಾ pmkisan-funds@gov.in ಗೆ ಕಳುಹಿಸಿ. ಅಲ್ಲದೆ, ಟೋಲ್-ಫ್ರೀ ನಂಬರ್ 1800-115-526 ಅಥವಾ 011-24300606 ಗೆ ಕರೆ ಮಾಡಬಹುದು.
ಇದನ್ನೂ ಓದಿ: ರೈಲು ಪ್ರಯಾಣಿಕರಿಗೆ ಬಂಪರ್ ಸುದ್ದಿ! ಟಿಕೆಟ್ ಬುಕ್ಕಿಂಗ್ ಸುಲಭ, ರಿಫಂಡ್ ಲಭ್ಯ
ಹೆಚ್ಚಿನ ಮಾಹಿತಿ ಮತ್ತು ನೇರವಾಗಿ ನಿಮ್ಮ ಖಾತೆಯ ಸ್ಥಿತಿಯನ್ನು ಪರಿಶೀಲಿಸಲು, https://pmkisan.gov.in ವೆಬ್‌ಸೈಟ್‌ಗೆ ಭೇಟಿ ನೀಡಿ. ಫಲಾನುಭವಿಗಳ ಸ್ಥಿತಿಯಲ್ಲಿ ಆಧಾರ್ ಸಂಖ್ಯೆ ಅಥವಾ ಮೊಬೈಲ್ ಸಂಖ್ಯೆಯನ್ನು ನಮೂದಿಸಿ, “ಗೇಟ್ ಡೇಟಾ” ಕ್ಲಿಕ್ ಮಾಡಿ. ಇದರಿಂದ ನಿಮ್ಮ ಪಾವತಿ ಸ್ಥಿತಿ ತಿಳಿಯುತ್ತದೆ.
ಈ ಎಲ್ಲ ಹಂತಗಳನ್ನು ಸರಿಯಾಗಿ ಅನುಸರಿಸಿದರೆ, ನಿಮ್ಮ PM ಕಿಸಾನ್ ಹಣ ಖಾತೆಗೆ ತಲುಪುತ್ತದೆ. ರೈತರು ಈ ಸವಲತ್ತನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಮರೆಯಬೇಡಿ!
Here is the Solution for PM Kisan Payment Issue
Our Whatsapp Channel is Live Now 👇