ಸರ್ಕಾರ ಬಿಪಿಎಲ್ ( BPL card) ಹಾಗೂ ಅಂತ್ಯೋದಯ ಕಾರ್ಡ್ (antyodaya card) ಹೊಂದಿರುವವರಿಗೆ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತಿದೆ. ಗರಿಬ್ ಕಲ್ಯಾಣ ಯೋಜನೆ (Garib Kalyan Yojana) ಅಡಿಯಲ್ಲಿ ಬಡತನ ರೇಖೆಗಿಂತ ಕೆಳಗಿರುವವರಿಗೆ (below poverty line) ಬಿಪಿಎಲ್ ಕಾರ್ಡ್ ವಿತರಣೆ ಮಾಡಲಾಗಿದ್ದು ದೇಶಾದ್ಯಂತ ಜನರು ಬಿಪಿಎಲ್ ಕಾರ್ಡ್ (BPL Ration Card) ಹೊಂದಿದ್ದರೆ ಉಚಿತ ಪಡಿತರ ವಸ್ತುಗಳನ್ನ ಪಡೆದುಕೊಳ್ಳಬಹುದಾಗಿದೆ.
ಇತ್ತೀಚಿಗಷ್ಟೇ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ (pm Narendra Modi) ಅವರು ಪ್ರತಿ ರಾಜ್ಯದಲ್ಲಿ ಉಚಿತವಾಗಿ ಕೊಡುತ್ತಿರುವ 5 ಕೆಜಿ ಅಕ್ಕಿ ಪ್ರಯೋಜನವನ್ನು ಇನ್ನೂ ಐದು ವರ್ಷಗಳ ಕಾಲ ಮುಂದುವರಿಸುವುದಾಗಿ ತಿಳಿಸಿದ್ದಾರೆ.
ಉಚಿತವಾಗಿ ಅಕ್ಕಿ ಕೊಡುವ ನಿರ್ಧಾರ ಕೇಂದ್ರ ಸರ್ಕಾರ ಕರೋನಾ ಸಮಯದಲ್ಲಿ ಕೈಗೊಂಡಿತ್ತು ಅದು ಬಹುಶ: ಎರಡು ವರ್ಷಗಳಲ್ಲಿ ಮುಗಿದು ಹೋಗಬಹುದು ಎಂದು ಜನ ಭಾವಿಸಿದ್ದರು, ಆದರೆ ಬಡವರಿಗೆ ಅನುಕೂಲ ಆಗಲಿ ಎನ್ನುವ ಕಾರಣಕ್ಕೆ ಕೇಂದ್ರ ಸರ್ಕಾರ ಇನ್ನು ಐದು ವರ್ಷಗಳ ಕಾಲ ಪಡಿತರ ಚೀಟಿ ಹೊಂದಿರುವವರಿಗೆ 5 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುವುದು. ಇದರಿಂದ 15 ಕೋಟಿ ಕುಟುಂಬದ 80 ಕೋಟಿ ಜನರು ಪ್ರಯೋಜನ ಪಡೆದುಕೊಳ್ಳಲಿದ್ದಾರೆ.
ಈ ಯೋಜನೆ ಅಡಿ ಮಹಿಳೆಯರಿಗೆ ಸಿಗುತ್ತೆ 6,000 ರೂಪಾಯಿ ಉಚಿತ! ಅರ್ಜಿ ಸಲ್ಲಿಸುವುದು ಹೇಗೆ ಗೊತ್ತಾ?
ಚುನಾವಣೆಗೂ ಮೊದಲೇ ಬಿಡುಗಡೆಯಾದ ಯೋಜನೆಗಳು!
ಇನ್ನು ಕೆಲವೇ ದಿನಗಳಲ್ಲಿ ಪಂಚ ರಾಜ್ಯಗಳಲ್ಲಿ ಚುನಾವಣೆ (election) ನಡೆಯಲಿದೆ, ಈ ಹಿನ್ನೆಲೆಯಲ್ಲಿ ಚುನಾವಣೆಯ ಪ್ರಚಾರದ ಸಮಯದಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಪಕ್ಷದವರು ತಮ್ಮ ಗೆಲುವಿಗಾಗಿ ಹೊಸ ಹೊಸ ಯೋಜನೆಗಳನ್ನು ಘೋಷಿಸುತ್ತಿದ್ದಾರೆ.
ಮಧ್ಯಪ್ರದೇಶದಲ್ಲಿ ಬಿಜೆಪಿ ಅಧ್ಯಕ್ಷ ಜಿಪಿ ನಡ್ಡಾ (JP nadda) ಅವರು ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಈ ಪ್ರಣಾಳಿಕೆಯಲ್ಲಿ ಮಧ್ಯಪ್ರದೇಶ ರಾಜ್ಯದ ಜನತೆಗೆ ಅನುಕೂಲವಾಗುವ ಸಾಕಷ್ಟು ಯೋಜನೆಗಳನ್ನು ಹೇಳಲಾಗಿದೆ.
ಆಧಾರ್ ಕಾರ್ಡ್ ನಲ್ಲಿ ಫೋಟೋ ಬದಲಾವಣೆ ಈಗ ಇನ್ನಷ್ಟು ಸುಲಭ! ಇಲ್ಲಿದೆ ಸುಲಭ ವಿಧಾನ
ಐದು ವರ್ಷಗಳವರೆಗೆ ಯೋಜನೆ ಮುಂದುವರಿಕೆ!
2028ರ ವರೆಗೆ ಉಚಿತವಾಗಿ ಕೇಂದ್ರ ಸರ್ಕಾರ ಬಿಪಿಎಲ್ ಕಾರ್ಡ್ ಇರುವವರಿಗೆ ಅಕ್ಕಿಯನ್ನು ನೀಡಲಿದೆ, ಇದರ ಜೊತೆಗೆ ಮಧ್ಯಪ್ರದೇಶದಲ್ಲಿ ಯಾವೆಲ್ಲ ಯೋಚನೆಗಳ ಮೂಲಕ ಜನರಿಗೆ ಪ್ರಯೋಜನವಾಗಲಿದೆ ನೋಡೋಣ.
ಬಿಜೆಪಿ ಸರ್ಕಾರ ಮಧ್ಯಪ್ರದೇಶದಲ್ಲಿ ಘೋಷಿಸಿರುವ ಭರವಸೆ ಯೋಜನೆಗಳು ಅಂದ್ರೆ, ಗರೀಬ್ ಕಲ್ಯಾಣ ಯೋಜನೆಯ ಅಡಿಯಲ್ಲಿ ಜನರಿಗೆ ಈಗಾಗಲೇ ನೀಡುತ್ತಿರುವ ಪಡಿತರ ವಸ್ತುಗಳಾದ ಗೋದಿ, ಅಕ್ಕಿ, ಬೇಳೆ ಕಾಳುಗಳ ಜೊತೆಗೆ ಸಾಸಿವೆ ಎಣ್ಣೆ ಹಾಗೂ ಸಕ್ಕರೆಯನ್ನು ವಿತರಣೆ ಮಾಡುವುದಾಗಿ ತಿಳಿಸಿದೆ. ಎರಡನೆಯದಾಗಿ 450 ರೂಪಾಯಿಗಳಿಗೆ ಎಲ್ ಪಿ ಜಿ ಸಿಲಿಂಡರ್ (free LPG cylinder) ಒದಗಿಸುವುದಾಗಿ ಹೇಳಿದೆ.
ರಾಜ್ಯದ ಮಹಿಳೆಯರಿಗೆ ದೀಪಾವಳಿ ಗಿಫ್ಟ್! ಗೃಹಿಣಿಯರಿಗೆ ಸಿಗಲಿದೆ ಉಚಿತ 50,000 ರೂಪಾಯಿ
ಒಂದು ಲಕ್ಷ ಮಹಿಳೆಯರಿಗೆ ಶಾಶ್ವತ ಮನೆ ಸೌಲಭ್ಯ ಕಲ್ಪಿಸಿಕೊಡಲಾಗುವುದು. ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಆರ್ಥಿಕ ಸಬಲೀಕರಣಕ್ಕಾಗಿ ಲಾಡ್ಲಿ ಲಕ್ಷ್ಮಿ (ladli Lakshmi) ಮತ್ತು ಬಹನ್ ಯೋಜನೆ (bahan scheme) ಮುಂದುವರಿಸುವುದು. ಆದಿವಾಸಿ ಜನರ ಕಲ್ಯಾಣಕ್ಕಾಗಿ 3 ಸಾವಿರ ಕೋಟಿ ರೂಪಾಯಿಗಳನ್ನು ಮೀಸಲಿಡುವುದು. ಮಧ್ಯಪ್ರದೇಶದಲ್ಲಿ ವೈದ್ಯಕೀಯ ಶಿಕ್ಷಣವನ್ನು ಅಭಿವೃದ್ಧಿಪಡಿಸುವುದು.
ಈ ಮೇಲಿನ ಎಲ್ಲ ಯೋಜನೆಗಳನ್ನು ಚುನಾವಣೆಯ ನಂತರ ಅಧಿಕಾರಕ್ಕೆ ಬಂದರೆ ತಕ್ಷಣವೇ ಜಾರಿಗೆ ತರುವುದಾಗಿ ಬಿಜೆಪಿ ಸರ್ಕಾರ ತಿಳಿಸಿದೆ. ಇನ್ನೂ ಬೇರೆ ರಾಜ್ಯಗಳಲ್ಲಿಯೂ ಕೂಡ ಪ್ರಣಾಳಿಕೆ ಹೊರಡಿಸಲಾಗಿದ್ದು ಇಂತಹ ಚುನಾವಣಾ ಟ್ರಿಕ್ಸ್ ಈ ಬಾರಿ ವರ್ಕ್ ಆಗುತ್ತಾ ನೋಡಬೇಕು.
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.