ಮಹಾಲಕ್ಷ್ಮಿ ಭಾಗ್ಯ; ಮದುವೆಯಾಗುವ ಯುವತಿಯರಿಗೆ ಸಿಗಲಿದೆ 1 ಲಕ್ಷ ಹಾಗೂ 10 ಗ್ರಾಂ ಚಿನ್ನ!
ಮಹಾಲಕ್ಷ್ಮಿ ಯೋಜನೆ (Mahalakshmi Scheme) ಯಡಿಯಲ್ಲಿ 2,500 ರೂಪಾಯಿಗಳನ್ನು ಹಾಗೂ ಮದುವೆಯಾಗದ ಯುವತಿಯರಿಗೆ ಮದುವೆಯ ಸಮಯದಲ್ಲಿ ಒಂದು ಲಕ್ಷ ರೂಪಾಯಿ ಹಾಗೂ 10 ಗ್ರಾಂ ಚಿನ್ನವನ್ನು (10 Gram Gold) ನೀಡಲು ಕಾಂಗ್ರೆಸ್ ಮುಂದಾಗಿದೆ.
ಮದುವೆ ಆಗಿರುವ ಮನೆಯ ಮೊದಲ ಗೃಹಿಣಿಯರ ಖಾತೆಗೆ (Bank Account) ಎರಡು ಸಾವಿರ ರೂಪಾಯಿಗಳನ್ನು ಉಚಿತವಾಗಿ ಪ್ರತಿ ತಿಂಗಳು ನೀಡುವ ಗೃಹಲಕ್ಷ್ಮಿ (Gruha Lakshmi scheme) ಯೋಜನೆ ಈಗಾಗಲೇ ಜಾರಿಗೆ ಬಂದಿದೆ.
ಇದರಿಂದಾಗಿ ರಾಜ್ಯದಲ್ಲಿ ಲಕ್ಷಾಂತರ ಕುಟುಂಬಗಳಿಗೆ ಅನುಕೂಲವಾಗಲಿದೆ. ಮೊದಲನೇ ಕಂತಿನ ಹಣವನ್ನ ಕೂಡ ಸರ್ಕಾರ ಬಿಡುಗಡೆ ಮಾಡಿದೆ, ಸರ್ಕಾರ ಇದಕ್ಕಿಂತ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಮದುವೆ ಆಗದೆ ಇರುವ ಯುವತಿಯರಿಗೆ ಮತ್ತೊಂದು ಹೊಸ ಯೋಜನೆಯನ್ನು ಜಾರಿಗೆ ತರಲು ನಿರ್ಧರಿಸಿದೆ.
ಇದಪ್ಪಾ ಘೋಷಣೆ ಅಂದ್ರೆ; ಮಹಿಳೆಯರಿಗೆ ₹2500 ಹಣ, ಜೊತೆಗೆ ₹500 ರೂ.ಗೆ ಗ್ಯಾಸ್ ಸಿಲಿಂಡರ್
ಚುನಾವಣಾ ಬಿಸಿ!
ನವೆಂಬರ್ ತಿಂಗಳಲ್ಲಿ ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ (Vidhan sabha election 2023) ನಡೆಯಲಿದೆ, ಅದಾದ ನಂತರ 2024ರಲ್ಲಿ ರಾಷ್ಟ್ರದಲ್ಲಿ ಮತ್ತೊಂದು ದೊಡ್ಡ ಚುನಾವಣೆ ಇಡೀ ರಾಷ್ಟ್ರದ ಭವಿಷ್ಯವನ್ನು ನಿರ್ಧಾರ ಮಾಡಲಿದೆ ಎನ್ನಬಹುದು.
ಇದರ ಪರಿಣಾಮವಾಗಿ ಪ್ರತಿಯೊಂದು ರಾಜ್ಯದಲ್ಲಿಯೂ ಅಧಿಕಾರದಲ್ಲಿರುವ ಪಕ್ಷ ಹಾಗೂ ಅಧಿಕಾರಕ್ಕೆ ಬರಲು ಬಯಸುವ ಪಕ್ಷಗಳು ಜನರನ್ನು ಸೆಳೆಯುವಂತಹ ಭರವಸೆ ಯೋಜನೆಗಳ ಜಾರಿಗೆ ನಾನಾ ಸರ್ಕಸ್ ಮಾಡುತ್ತಿವೆ.
ಹೌದು ಯಾವುದೇ ಪಕ್ಷ ಅಧಿಕಾರಕ್ಕೆ (ruling party) ಬರಬೇಕು ಅಂದ್ರೆ ಅಲ್ಲಿ ಜನರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು, ಇದೇ ಕಾರಣಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ (Congress government) ಇಂದು ಅಧಿಕಾರದಲ್ಲಿ ಇರುವುದು.
ಹೌದು ವಿಧಾನಸಭಾ ಎಲೆಕ್ಷನ್ಗೂ ಮೊದಲೇ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಹೊರಡಿಸಿದ ಗ್ಯಾರಂಟಿ ಯೋಜನೆಗಳಿಂದಾಗಿ (guarantee schemes) ಈಗ ಅಧಿಕಾರಕ್ಕೆ ಬಂದಿರುವುದು ಎಂದರೆ ತಪ್ಪಾಗಲಿಕ್ಕಿಲ್ಲ. ಅದೇ ರೀತಿ ಗ್ಯಾರೆಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದು ಆಗಿದೆ.
ಈ ಮೇಕೆ ತಳಿ ಸಾಕಾಣಿಕೆಗೆ ಸರ್ಕಾರವೇ ಕೊಡುತ್ತೆ ಸಬ್ಸಿಡಿ, ಸುಲಭವಾಗಿ ಗಳಿಸಿ ಲಕ್ಷ ಲಕ್ಷ ಆದಾಯ
ತೆಲಂಗಾಣದಲ್ಲೂ ಗ್ಯಾರಂಟಿ ಯೋಜನೆಯ ಉಪಕ್ರಮ!
ಇದೀಗ ತೆಲಂಗಾಣದಲ್ಲಿಯೂ (Telangana) ಕಾಂಗ್ರೆಸ್ ಪಕ್ಷ ಕರ್ನಾಟಕದ ಚುನಾವಣಾ ಟ್ರಿಕ್ಸ್ (election tricks) ಅನ್ನೇ ಬಳಕೆ ಮಾಡಲು ಶುರು ಮಾಡಿದೆ. ಕರ್ನಾಟಕದಲ್ಲಿ ಪ್ರತಿ ಮದುವೆಯಾದ ಸ್ತ್ರೀಯರಿಗೆ 2,000 ಕೊಟ್ಟರೆ, ತೆಲಂಗಾಣದಲ್ಲಿ ಮಹಾಲಕ್ಷ್ಮಿ ಯೋಜನೆ (Mahalakshmi Scheme) ಯಡಿಯಲ್ಲಿ 2,500 ರೂಪಾಯಿಗಳನ್ನು ಹಾಗೂ ಮದುವೆಯಾಗದ ಯುವತಿಯರಿಗೆ ಮದುವೆಯ ಸಮಯದಲ್ಲಿ ಒಂದು ಲಕ್ಷ ರೂಪಾಯಿ ಹಾಗೂ 10 ಗ್ರಾಂ ಚಿನ್ನವನ್ನು ನೀಡಲು ಕಾಂಗ್ರೆಸ್ ಮುಂದಾಗಿದೆ.
ಆರ್ಗಾನಿಕ್ ಜೇನು ಸಾಕಾಣಿಕೆಗೂ ಬಂತು ವಿಶೇಷ ವ್ಯಾಲ್ಯೂ; ದುಡಿಯಬಹುದು ಲಕ್ಷ ಲಕ್ಷ ಹಣ!
500 ರೂಪಾಯಿಗಳಿಗೆ ಸಿಲಿಂಡರ್!
ಇತ್ತೀಚಿನ ದಿನಗಳಲ್ಲಿ ಗ್ಯಾಸ್ ಸಿಲಿಂಡರ್ (LPG gas cylinder) ದರ ಗಗನಕ್ಕೆ ಏರಿದೆ, ಕೇಂದ್ರ ಸರ್ಕಾರ ಇನ್ನೂರು ರೂಪಾಯಿಗಳನ್ನು ಕಡಿತ ಮಾಡಿದ್ದು, ತುಸು ಸಮಾಧಾನ ಎನಿಸಿದರು, ಇದರಿಂದ ಜನರಿಗೆ ಹೆಚ್ಚು ಪ್ರಯೋಜನ ಆಗಿಲ್ಲ.
ಆದರೆ ಈಗ ತೆಲಂಗಾಣ ಸರ್ಕಾರ 500 ರೂಪಾಯಿಗಳಿಗೆ ಸಿಲಿಂಡರ್ ನೀಡುವ ಭರವಸೆಯನ್ನು ನೀಡಿದೆ, ಹಾಗಾಗಿ ನವೆಂಬರ್ ನಲ್ಲಿ ನಡೆಯುವ ಚುನಾವಣೆಗೆ ಅಧಿಕಾರಕ್ಕೆ ಬಂದರೆ ಐನೂರು ರೂಪಾಯಿಗಳಿಗೆ ತೆಲಂಗಾಣ ಪ್ರಜೆಗಳಿಗೆ ಗ್ಯಾಸ್ ಸಿಲೆಂಡರ್ ಲಭ್ಯವಾಗುವ ಸಾಧ್ಯತೆ ಇದೆ.
ಇದರ ಜೊತೆಗೆ ಮಧ್ಯಪ್ರದೇಶದಲ್ಲಿಯೂ ಕೂಡ ಕಾಂಗ್ರೆಸ್ ಇದೆ ಚುನಾವಣಾ ಟ್ರಿಕ್ಸ್ ಬಳಸುತ್ತಿದ್ದು ಪಿಂಚಣಿಯನ್ನು (pension) ಹೆಚ್ಚಿಸುವುದರ ಮೂಲಕ ಜನರ ಗಮನ ಸೆಳೆಯುತ್ತಿದೆ. ಪ್ರತಿಯೊಂದು ರಾಜ್ಯವು ಕೂಡ ಸದ್ಯ ಪ್ರಣಾಳಿಕೆಯಲ್ಲಿ ಗ್ಯಾರಂಟಿ ಯೋಜನೆಗಳನ್ನು ಘೋಷಿಸುವುದರ ಮೂಲಕ ಜನರ ಗಮನ ಸೆಳೆಯುವಲ್ಲಿ ನಿರತವಾಗಿವೆ.
Telangana Government Mahalakshmi Scheme Details