ಗುರು ಶಿಷ್ಯರ ಜೋಕ್ಸ್- ಕನ್ನಡ ಕಚಗುಳಿ

Teacher and Student Latest Jokes - | itskannada jokes

(itskannada): Latest Kannada jokes

ಗುರು ಶಿಷ್ಯರ ಜೋಕ್ಸ್- ಕನ್ನಡ ಕಚಗುಳಿ

ನೂರಕ್ಕೆ ನೂರು ಅಂಕಗಳು ! ಗುರು ಶಿಷ್ಯರ ಜೋಕ್ಸ್

ಮೇಷ್ಟ್ರು : ನೋಡ್ರೂ ಎಲ್ಲರೂ , ಈ ಸಲದ ಪರೀಕ್ಷೆಯಲ್ಲಿ 100ಕ್ಕೆ 75% ತೆಗೀಬೇಕು .
ಮಕ್ಕಳು : ಬರೀ 75% ಏನ್ ಸಾರ್ 100ಕ್ಕೆ 100 ತೇಗಿತೀವಿ . . . .
(ಮೇಷ್ಟ್ರು ಆಶ್ಚರ್ಯದಿಂದ )
ಎನ್ರೋ ನಿವೇಳ್ತಾಯಿರೋದು ನಿಜಾನಾ , ಕಾಮಿಡಿ ಮಾಡಬೇಡಿ . . .
ಮಕ್ಕಳು : ಇನ್ನೇನ್ ಸಾರ್ , ಮೊದಲು ಕಾಮಿಡಿ ಶುರು ಮಾಡಿದ್ದು ನೀವೇ ತಾನೇ ?

ಕಿವಿ ಮುಚ್ಕೋಬೇಕು ! ಗುರು ಶಿಷ್ಯರ ಜೋಕ್ಸ್

ಮೇಷ್ಟ್ರು : ಮಕ್ಕಳೇ ಈ ದಿನದ ಪಾಠ ಶುರು ಮಾಡೋಣವಾ ?
ಮಕ್ಕಳು : ಆಯ್ತು ಸಾರ್ . .
ಮೇಷ್ಟ್ರು : ಲೇ ಗುಂಡ , ಶಬ್ದ ಮಾಲಿನ್ಯಕ್ಕೆ ಏನ್ ಮಾಡಬೇಕೋ ?
ಗುಂಡ : ಅದು , ಅದು ಅದು , ಕಿವಿ ಮುಚ್ಕೋಬೇಕು ಸಾರ್ …

ಗುರು ಶಿಷ್ಯರ ಜೋಕ್ಸ್- ಕನ್ನಡ ಕಚಗುಳಿ - Kannada News

ಬ್ಲಾಕ್ & ವೈಟ್ ಕಾಲ ! ಗುರು ಶಿಷ್ಯರ ಜೋಕ್ಸ್

ಮೇಷ್ಟ್ರು : ನೆನ್ನೆ ಮಾಡಿದ ಪಾಠ ಓದ್ ಕೊಂಡು ಬಂದಿದೀರ….
ಮಕ್ಕಳು ; ಹೌದು , ಸಾರ್ .
ಮೇಷ್ಟ್ರು : ಆಗದ್ರೆ , ಪ್ರಶ್ನೆ ಕೇಳಬಹುದಾ ?
ಮಕ್ಕಳು : ಕೇಳಿ ಸಾರ್ …
ಮೇಷ್ಟ್ರು : ಲೇ ಗುಂಡ , ನಮ್ಮ್ ಜಗತ್ತಿನ ಅತ್ಯಂತ ಹಳೆಯ ಪ್ರಾಣಿ ಯಾವುದ್ಲಾ ?
ಗುಂಡ : ಪ್ರಾಣಿ , ಪ್ರಾಣಿ , ಅದು ಜೀಬ್ರಾ ಸಾರ್ .
ಮೇಷ್ಟ್ರು : ಜೀಬ್ರಾನ . . ! ಅದೇಗೋ ?
ಗುಂಡ : ಅದರ ಬಣ್ಣ ನೋಡಿದ್ರೇನೇ ಹೇಳಬಹುದು ಸಾರ್ … ಅದು ಬ್ಲಾಕ್ & ವೈಟ್ ಕಾಲದಿಂದಲೂ ಇದೆ ಅಂತ .

ಅಬ್ರಹಾಂ ಲಿಂಕನ್ ಗೆ ಹತ್ತು ವರ್ಷ ! ಗುರು ಶಿಷ್ಯರ ಜೋಕ್ಸ್

ಗುರು : 1809 ರಲ್ಲಿ ಏನಾಯಿತು?
ಶಿಷ್ಯ : ಅಬ್ರಹಾಂ ಲಿಂಕನ್ ಜನಿಸಿದರು.
ಗುರು : 1819 ರಲ್ಲಿ ಏನಾಯಿತು?
ಶಿಷ್ಯ : ಅಬ್ರಹಾಂ ಲಿಂಕನ್ ಗೆ ಹತ್ತು ವರ್ಷ ವಯಸ್ಸಾಗಿತ್ತು.

ನಾನು ಹುಟ್ಟಿದ ಮೇಲೆ ತಾನೇ ತಂದೆಯಾಗಿದ್ದು !

ಗುರು: ನಿಮ್ಮ ತಂದೆಗೆ ಎಷ್ಟು ವಯಸ್ಸಾಗಿದೆ.
ಶಿಷ್ಯ: ಅವರು ನನಗಿಂತ ಚಿಕ್ಕವರು.
ಗುರು: ಏನ್ ಹೇಳ್ತಾಯಿದೀಯಾ ? ಅದು ಹೇಗೆ ಸಾಧ್ಯ?
ಶಿಷ್ಯ: ಹೇಗೆ ಅಂದರೆ ಅವರು, ನಾನು ಹುಟ್ಟಿದ ಮೇಲೆ ತಾನೇ ತಂದೆಯಾಗಿದ್ದು.

ಉತ್ತರ ಪತ್ರಿಕೆಯಲ್ಲಿ ಉತ್ತರವಿಲ್ಲ ! ಗುರು ಶಿಷ್ಯರ ಜೋಕ್ಸ್

(ಪರೀಕ್ಷಾ ಕೊಠಡಿಯಲ್ಲಿ ) ಗುರು : ಎಲ್ಲಾರಿಗೂ ಪ್ರಶ್ನೆ ಪತ್ರಿಕೆ ಸಿಕ್ಕಾಯಿತಲ್ವಾ ? ಚನ್ನಾಗಿ ಬರೆಯಿರಿ,ಏನಾದರು ಡೌಟ್ ಇದ್ದರೆ ಕೇಳಿ !
ಶಿಷ್ಯ : ಸಾರ್ , ನನಗೆ ಡೌಟ್ ಇದೆ ಸಾರ್ ?
ಗುರು : ವೆರಿ ಗುಡ್ , ಶಿಷ್ಯ ಅಂದರೆ ನೀನೇ ನೋಡು,ಕೇಳು ?
ಶಿಷ್ಯ : ಸಾರ್ ಪ್ರಶ್ನೆ ಪತ್ರಿಕೆಯಲ್ಲಿ ಪ್ರಶ್ನೆ ಏನೋ ಇದೆ ಆದರೆ ಉತ್ತರಪತ್ರಿಕೆಯಲ್ಲಿ ಉತ್ತರವಿಲ್ಲ. . ಪ್ರಿಂಟಿಂಗ್ ಮಿಸ್ಟೇಕ್ ಇರ್ಬೇಕು.

ಮನೆಯಲ್ಲಿ ಇರೋದು ಒಂದೇ ನಾಯಿ ! ಗುರು ಶಿಷ್ಯರ ಜೋಕ್ಸ್

ಗುರು : ಮಕ್ಕಳೇ ಇವತ್ತಿನ ಪ್ರಬಂಧದ ವಿಷಯ ‘ನಾಯಿ ” ಎಲ್ಲರು ನಾಯಿಯ ಬಗ್ಗೆ ಬರೆಯಿರಿ ನೋಡೋಣ…
ಶಿಷ್ಯರು: ಆಯ್ತು ಸಾರ್ … ( ಸ್ವಲ್ಪ ತಾಸಿನ ಬಳಿಕ ಮಕ್ಕಳು ತಾವು ಬರೆದ ಪ್ರಬಂಧವನ್ನು ಒಬ್ಬೊಬ್ಬರಾಗಿ ಶಿಕ್ಷಕರಿಗೆ ಕೊಡುತ್ತಾರೆ.
(ಶಿಕ್ಷಕರು ಎಲ್ಲಾ ಪ್ರಬಂಧಗಳನ್ನು ಪರಿಶೀಲಿಸಿದ ನಂತರ)
ಲೇ ಗುಂಡ … ಲೇ ತಿಮ್ಮಾ … ಎನ್ರೋ ನಿಮ್ಮಿಬ್ಬರ ಪ್ರಬಂಧ ಒಂದೇತರ ಇದೆ .. ನೋಡ್ಕೊಂಡು ಬರೆದ್ರಾ .ಏಕೆ ಪ್ರಬಂಧಗಳು ಒಂದೇ ಆಗಿವೆ?
ಗುಂಡ ಮತ್ತು ತಿಮ್ಮ : ಸರ್, ನಮ್ಮ ಮನೆಯಲ್ಲಿ ಇರೋದು ಒಂದೇ ನಾಯಿ ಸಾರ್.

ನೀರು ಮತ್ತು ಭೂಮಿಯ ಮೇಲೆ ಬದುಕಬಲ್ಲ ಪ್ರಾಣಿ !

ಶಿಕ್ಷಕ: ನೀರು ಮತ್ತು ಭೂಮಿಯ ಮೇಲೆ ಬದುಕಬಲ್ಲ ಪ್ರಾಣಿಗಳ ಒಂದು ಉದಾಹರಣೆ ನನಗೆ ಹೇಳಿ.
ವಿದ್ಯಾರ್ಥಿ: ಕಪ್ಪೆ.
ಶಿಕ್ಷಕ: ಇನ್ನೊಂದು ಉದಾಹರಣೆ.
ವಿದ್ಯಾರ್ಥಿ: ಮತ್ತೊಂದು ಕಪ್ಪೆ. itskannada jokes

 

ಗುರು ಶಿಷ್ಯರ ಜೋಕ್ಸ್- ಕನ್ನಡ ಕಚಗುಳಿ

WebTitle: Teacher and Student Latest Jokes


 ಇಟ್ಸ್ ಕನ್ನಡ : ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ. ಕನ್ನಡ ಹಾಸ್ಯಕ್ಕಾಗಿ  ಹಾಸ್ಯ-ಲಾಸ್ಯ ಪುಟ ಕ್ಲಿಕ್ಕಿಸಿ ಅಥವಾ ಇಟ್ಸ್ ಕನ್ನಡ ಹಾಸ್ಯ ಪುಟ –ಕನ್ನಡ ಜೋಕ್ಸ್-ಇಲ್ಲವೇ ವಿಭಾಗ ಕನ್ನಡ ಕಾಮಿಡಿ ಕ್ಲಿಕ್ಕಿಸಿ itskannada :News-Entertainment-Information: for latest news visit-Kannada news– more in kannada Jokes click Kannada Jokes or look at Latest Kannada comedy

Follow us On

FaceBook Google News

Advertisement

ಗುರು ಶಿಷ್ಯರ ಜೋಕ್ಸ್- ಕನ್ನಡ ಕಚಗುಳಿ - Kannada News

Read More News Today