ನಿಮ್ಮ ಹೊಲ, ತೋಟಕ್ಕೆ ಸೌರ ಪಂಪಸೆಟ್ ಹಾಕಿಸಲು ಸರ್ಕಾರದಿಂದ ಬಂಪರ್ ಆಫರ್

Story Highlights

ಸೋಲಾರ್ ವಿದ್ಯುತ್ (Solar Electricity) ಪಂಪ್ಸೆಟ್ ಹಾಗೂ ಪ್ಯಾನಲ್ ಖರೀದಿಗೆ ಮೊದಲು ಶೇ.೩೦ ರಷ್ಟು ಸಬ್ಸಿಡಿ ನೀಡಲಾಗುತ್ತಿತ್ತು. ಇದೀಗ ಇದನ್ನು ಶೇ.೫೦ಕ್ಕೆ ಹೆಚ್ಚಳ ಮಾಡಲಾಗಿದೆ.

ಪ್ರಸಕ್ತ ವರ್ಷದಲ್ಲಿ ರಾಜ್ಯದಲ್ಲಿ ಬರ ಕಾಣಿಸಿಕೊಂಡಿರುವುದರಿಂದ ರೈತರು ಸಮಸ್ಯೆಯಲ್ಲಿದ್ದಾರೆ. ರೈತರ ಜೊತೆ ರಾಜ್ಯ ಸರ್ಕಾರ ಕೂಡ ಸಮಸ್ಯೆಯಲ್ಲಿದೆ. ಕಾರಣ ಸರಿಯಾಗಿ ಮಳೆಯಾಗದ ಕಾರಣ ಯಾವ ಡ್ಯಾಂಗಳು ಕೂಡ ಭರ್ತಿಯಾಗಿಲ್ಲ.

ಇದರಿಂದ ವಿದ್ಯುತ್ ಉತ್ಪಾದನೆಯ ಮೇಲೆ ಹೊಡೆತ ಬಿದ್ದಿದೆ. ರಾಜ್ಯ ಸರ್ಕಾರವು ಗೃಹ ಜ್ಯೋತಿ ಯೋಜನೆ ಅಡಿಯಲ್ಲಿ ವಿದ್ಯುತ್ ಉಚಿತವಾಗಿ ನೀಡುತ್ತಿರುವುದರಿಂದ ವಿವಿದ್ಯುತ್ ಬಳಕೆಯು ಅಧಿಕವಾಗಿದೆ. ಹೀಗಾಗಿ ರಾಜ್ಯ ಸರ್ಕಾರವು ಸೌರ ವಿದ್ಯುತ್ ಉತ್ಪಾದನೆ ಹೆಚ್ಚಳಕ್ಕೆ ನಿರ್ದಾರ ಮಾಡಿದೆ. ಈ ಕುರಿತು ಮುಖ್ಯಮಂತ್ರಿ ಸಿದ್ಧರಾಮಯ್ಯ ಮಹತ್ವದ ಘೋಷಣೆ ಮಾಡಿದ್ದಾರೆ.

ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಿದ್ದೀರಾ? ಈ ಕಾರಣಕ್ಕೆ ರದ್ದಾಗುತ್ತೆ ನಿಮ್ಮ ಅರ್ಜಿ

ಮೊನ್ನೆ ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ನಡೆದ ಸೌರ ಶಕ್ತಿ ಮೇಳವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಮುಂದಿನ ಏಳು ವರ್ಷಗಳಲ್ಲಿ ೬೦ ಸಾವಿರ ಮೆ.ವ್ಯಾ ಸೌರ ವಿದ್ಯುತ್ (solar) ಉತ್ಪಾದನೆ ಮಾಡುವ ಗುರಿ ಹೊಂದಲಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಇಂಧನ ಇಲಾಖೆ ಸಿದ್ಧತೆಯಲ್ಲಿ ತೊಡಗಿದೆ. ರೈತರು ಸಹ ಸೌರ ವಿದ್ಯುತ್ ಬಳಕೆಗೆ ಆದ್ಯತೆ ನೀಡಬೇಕು. ರೈತರು ಸೌರ ಪಂಪಸೆಟ್ ಖರೀದಿಸಲು ಮುಂದಾದರೆ ಶೇ.೨೦ ರಷ್ಟು ಭರಿಸಿದರೆ ಸಾಕು. ಉಳಿದ ಹಣವನ್ನು ರಾಜ್ಯ ಸರ್ಕಾರ ನೀಡಲಿದೆ ಎಂದು ತಿಳಿಸಿದ್ದಾರೆ.

ಇಷ್ಟು ದಿನ ಆದ್ರೂ ಗೃಹಲಕ್ಷ್ಮಿ ಯೋಜನೆ ಹಣ ಬಂದಿಲ್ಲ! ಅನ್ನೋರಿಗೆ ಬಿಗ್ ಅಪ್ಡೇಟ್

solar water pumpನಮ್ಮ ಮೊದಲ ಅವಧಿಯಲ್ಲಿಯೂ ಸಹ ಏನೇ ಸಮಸ್ಯೆ ಬಂದರೂ ನಾವು ಇಂಧನ ಇಲಾಖೆ ನಿರ್ಲಕ್ಷ್ಯ ಮಾಡಿರಲಿಲ್ಲ. ಹಾಗಾಗಿ ಆಗಲೇ ವಿದ್ಯುತ್ ಉತ್ಪಾದನೆ ದುಪ್ಪಟ್ಟಾಗಿತ್ತು. ನಂತರ ಬಂದ ಬಿಜೆಪಿ ಸರ್ಕಾರ ವಿದ್ಯುತ್ ಉತ್ಪಾದನೆ ಕಡೆಗೆ ಹೆಚ್ಚಿನ ಲಕ್ಷ್ಯ ನೀಡಲಿಲ್ಲ. ಇದರಿಂದ ವಿದ್ಯುತ್ ಉತ್ಪಾದನೆ ನಮ್ಮ ನಿರೀಕ್ಷೆಗೆ ತಕ್ಕ ಹಾಗೆ ಆಗಲಿಲ್ಲ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಆರೋಪಿಸಿದರು. ಸದ್ಯ ರಾಜ್ಯದಲ್ಲಿ ೩೨ ಸಾವಿರ ಮೆ.ವ್ಯಾ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಹೊಸ ರೇಷನ್ ಕಾರ್ಡ್ ಅರ್ಜಿಗೆ ಅವಕಾಶ! ಇನ್ನೊಂದೆಡೆ ಅಕ್ರಮ ರೇಷನ್ ಕಾರ್ಡ್ ಕ್ಯಾನ್ಸಲ್

ದೇಶದಲ್ಲಿ ಅತಿ ಹೆಚ್ಚು ಒಣ ಭೂಮಿ ಹೊಂದಿರುವ ರಾಜ್ಯಗಳ ಪೈಕಿ ಕರ್ನಾಟಕವು ೨ನೇ ಸ್ಥಾನದಲ್ಲಿದೆ. ಹಾಗಾಗಿ ರಾಜ್ಯದಲ್ಲಿ ಒಣ ಭೂಮಿಯ ಕೃಷಿಗೆ ಆದ್ಯತೆ ನೀಡಿ ತಂತ್ರಜ್ಞಾನ ಹೆಚ್ಚು ಬಳಕೆ ಮಾಡಬೇಕು. ಜನಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೆ ರೈತರ ಇಳುವರಿ ಪ್ರಮಾಣ ಕುಸಿಯುತ್ತಿದೆ. ಹಾಗಾಗಿ ಸಮಗ್ರ ಕೃಷಿಯ ಕಡೆಗೆ ರೈತರು ಗಮನ ಹರಿಸಬೇಕು. ಸೋಲಾರ್ ವಿದ್ಯುತ್ ಪಂಪ್ ಸೆಟ್ (solar pumpset) ಖರೀದಿ ಅದರಲ್ಲಿ ಒಂದಾಗಿದೆ. ಈ ಯೋಜನೆಗೆ ರೈತರು ಶೇ. ೨೦ ರಷ್ಟು ವೆಚ್ಚ ಮಾಡಿದರೆ ಸಾಕು. ಉಳಿದ ಹಣವನ್ನು ರಾಜ್ಯ ಸರ್ಕಾರವೇ ಭರಿಸುತ್ತದೆ ಎಂದರು.

ಇನ್ಮುಂದೆ ಗೃಹಲಕ್ಷ್ಮಿ ಹಣ ಇಂತಹ ಮಹಿಳೆಯರ ಖಾತೆಗೆ ಜಮಾ ಆಗೋದಿಲ್ಲ; ಇಲ್ಲಿದೆ ಕಾರಣ

ಸೋಲಾರ್ ವಿದ್ಯುತ್ (Solar Electricity) ಪಂಪ್ಸೆಟ್ ಹಾಗೂ ಪ್ಯಾನಲ್ ಖರೀದಿಗೆ ಮೊದಲು ಶೇ.೩೦ ರಷ್ಟು ಸಬ್ಸಿಡಿ ನೀಡಲಾಗುತ್ತಿತ್ತು. ಇದೀಗ ಇದನ್ನು ಶೇ.೫೦ಕ್ಕೆ ಹೆಚ್ಚಳ ಮಾಡಲಾಗಿದೆ. ರೈತರು ಈ ಯೋಜನೆಯ ಲಾಭ ಪಡೆದುಕೊಳ್ಳಬೇಕು ಎಂದು ಮುಖ್ಯಮಂತ್ರಿಗಳು ಮನವಿ ಮಾಡಿದರು.

Bumper offer from the government to install solar pumpset

Related Stories