ರದ್ದಾದ ರೇಷನ್ ಕಾರ್ಡ್ ಲಿಸ್ಟ್ ಬಿಡುಗಡೆ! ಇವರಿಗೆ ಅನ್ನಭಾಗ್ಯ, ಗೃಹಲಕ್ಷ್ಮಿ ಹಣ ಸಿಗೋದಿಲ್ಲ

ಈಗಾಗಲೇ ಸಾಕಷ್ಟು ಬಿಪಿಎಲ್ ಕಾರ್ಡ್ (BPL Card) ಅನ್ನು ರದ್ದುಪಡಿಸಲಾಗಿದೆ (ration card cancellation). ಸುಮಾರು ಮೂರು ಲಕ್ಷಕ್ಕೂ ಅಧಿಕ ಬಿಪಿಎಲ್ ಕಾರ್ಡ್ ಬಳಕೆಯಾಗದೆ ಹಾಗೆಯೇ ಉಳಿದಿರುವುದು ಸರ್ಕಾರದ ಗಮನಕ್ಕೆ ಬಂದಿದೆ

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಪ್ರತಿ ತಿಂಗಳು ಹಾಲಿ ಮತ್ತು ಚಾಲ್ತಿಯಲ್ಲಿರುವ ಪಡಿತರ ಚೀಟಿ ಲಿಸ್ಟ್ (Ration card list) ಅನ್ನು ಬಿಡುಗಡೆ ಮಾಡುತ್ತಿದೆ, ಯಾರು ಪಡಿತರ ಚೀಟಿಯನ್ನು ಹೊಂದಿದ್ದಾರೆ ಹಾಗೂ ಯಾರ ಪಡಿತರ ಚೀಟಿ ರದ್ದಾಗಿದೆ (Ration Card Cancel) ಎಂಬುದನ್ನ ತಿಳಿದುಕೊಳ್ಳಬಹುದು.

ಹೌದು, ರಾಜ್ಯದಲ್ಲಿ ರೇಷನ್ ಕಾರ್ಡ್ ಮಹತ್ವ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈಗಾಗಲೇ ಅರ್ಜಿ ಸಲ್ಲಿಸಿರುವ ಎರಡುವರೆ ಲಕ್ಷಕ್ಕೂ ಅಧಿಕ ಜನ ಹೊಸ ಬಿಪಿಎಲ್ (BPL card) ಕಾರ್ಡ್ ಪಡೆದುಕೊಳ್ಳಲು ಕಾದು ಕುಳಿತಿದ್ದಾರೆ.

ಆದರೆ ಇನ್ನೊಂದು ಕಡೆ ಬಿಪಿಎಲ್ ಕಾರ್ಡ್ ಹೊಂದಿದ್ದರು ಕೂಡ ಅದರ ಸದ್ಬಳಕೆ ಮಾಡಿಕೊಳ್ಳದೆ ಅನುಪಯುಕ್ತಗೊಳಿಸಿರುವ ಕುಟುಂಬದ ಬಿಪಿಎಲ್ ಕಾರ್ಡ್ ರದ್ದುಗೊಳಿಸುವ ಪ್ರಕ್ರಿಯೆ ಕೂಡ ನಡೆಯುತ್ತಿದೆ.

ರದ್ದಾದ ರೇಷನ್ ಕಾರ್ಡ್ ಲಿಸ್ಟ್ ಬಿಡುಗಡೆ! ಇವರಿಗೆ ಅನ್ನಭಾಗ್ಯ, ಗೃಹಲಕ್ಷ್ಮಿ ಹಣ ಸಿಗೋದಿಲ್ಲ - Kannada News

ಈಗಾಗಲೇ ಸಾಕಷ್ಟು ಬಿಪಿಎಲ್ ಕಾರ್ಡ್ (BPL Card) ಅನ್ನು ರದ್ದುಪಡಿಸಲಾಗಿದೆ (ration card cancellation). ಸುಮಾರು ಮೂರು ಲಕ್ಷಕ್ಕೂ ಅಧಿಕ ಬಿಪಿಎಲ್ ಕಾರ್ಡ್ ಬಳಕೆಯಾಗದೆ ಹಾಗೆಯೇ ಉಳಿದಿರುವುದು ಸರ್ಕಾರದ ಗಮನಕ್ಕೆ ಬಂದಿದೆ ಹಾಗಾಗಿ ಇಂತಹ ಎಲ್ಲ ರೇಷನ್ ಕಾರ್ಡ್ ಗಳು ಕೂಡ ರದ್ದಾಗಲಿವೆ.

ಮಹಿಳೆಯರಿಗೆ ಉಚಿತ ಬಸ್, ಶಕ್ತಿ ಯೋಜನೆಯಲ್ಲಿ ಮಹತ್ವದ ಬದಲಾವಣೆ; ಹೊಸ ನಿಯಮ

ಹಾಲಿ ಮತ್ತು ಚಾಲ್ತಿ ಪಡಿತರ ಚೀಟಿ ಲಿಸ್ಟ್ ನಲ್ಲಿ ನಿಮ್ಮ ಹೆಸರು ಬಂದಿದ್ಯ ಚೆಕ್ ಮಾಡಿ!

Ration Card

ಗೃಹಲಕ್ಷ್ಮಿ ಹಣ ಸಿಗದವರು ಈ ದಾಖಲೆಗಳನ್ನು ರೆಡಿ ಇಟ್ಟುಕೊಳ್ಳಿ, ಮನೆ ಬಾಗಿಲಿಗೆ ಬರಲಿದೆ ಹಣ

ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ (official website) ನೀವು ಪ್ರತಿ ತಿಂಗಳು ಹಾಲಿ ಮತ್ತು ಚಾಲ್ತಿಯಲ್ಲಿ ಇರುವ ಪಡಿತರ ಚೀಟಿ ಲಿಸ್ಟ್ (Ration card list) ಪರಿಶೀಲನೆ ಮಾಡಬಹುದು. ಇದರಲ್ಲಿ ರದ್ದಾಗಿರುವ ಹಾಗೂ ರದ್ದುಪಡಿಗೆ ಪರಿಶೀಲನೆ ಮಾಡುತ್ತಿರುವ ಬಿಪಿಎಲ್ ಕಾರ್ಡ್ ಪಡಿತರ ಚೀಟಿ ಹೊಂದಿರುವ ಮನೆ ಯಜಮಾನನ ಹೆಸರನ್ನು ಪ್ರಕಟಿಸಲಾಗುತ್ತದೆ.

ಇದನ್ನು ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕ ಚೆಕ್ (check in mobile or computer) ಮಾಡುವುದು ಹೇಗೆ ನೋಡೋಣ!

*ಲಿಸ್ಟ್ ಚೆಕ್ ಮಾಡಲು ಮೊದಲು https://ahara.kar.nic.in/Home/Home ಈ ವೆಬ್ ಸೈಟ್ ಗೆ ಭೇಟಿ ನೀಡಿ. ನೀವು ಮೊಬೈಲ್ ನಲ್ಲಿ ನೋಡುತ್ತಿದ್ದರೆ ಡೆಸ್ಕ್ ಟಾಪ್ ವೀವ್ (desk top view) ಎನ್ನುವ ಆಯ್ಕೆಯನ್ನು ಸೆಲೆಕ್ಟ್ (select) ಮಾಡಿಕೊಳ್ಳಿ, ಆಗ ಸಂಪೂರ್ಣ ವಿವರಗಳು ಸರಿಯಾಗಿ ಕಾಣಿಸುತ್ತದೆ.

*ವೆಬ್ಸೈಟ್ ನ ಮುಖಪುಟ ತೆರೆದಾಗ ಈ ಸರ್ವಿಸ್ ಎನ್ನುವ ಆಯ್ಕೆ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.

*ನಂತರ ಈ ಪಡಿತರ ಚೀಟಿ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿದಾಗ ರದ್ದುಗೊಳಿಸಲಾಗಿರುವ/ತಡೆಹಿಡಿಯಲಾದ ಪಟ್ಟಿ ಎನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ.

*ಈ ಪುಟದಲ್ಲಿ ನೀವು ಜಿಲ್ಲೆ, ತಿಂಗಳು, ವರ್ಷ ಮೊದಲಾದ ಮಾಹಿತಿಯನ್ನು ನೀಡಿ ಗೋ (Go) ಎನ್ನುವ ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ರದ್ದುಪಡಿಸಲಾಗಿರುವ ಅಥವಾ ತಡೆಹಿಡಿಯಲಾಗಿರುವ ಹೆಸರುಗಳ ಪಟ್ಟಿ ಗೋಚರಿಸುತ್ತದೆ.

ಇನ್ಮುಂದೆ ಗ್ರಾಮ ಪಂಚಾಯಿತಿಯಲ್ಲಿಯೇ ಸಿಗಲಿದೆ 20 ಉಚಿತ ಸೇವೆಗಳು! ಒಂದೇ ಸೂರಿನಡಿ ಸೌಲಭ್ಯ

ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದ್ರೆ ಏನು ಮಾಡಬೇಕು?

Ration Card Cancellationಒಂದು ವೇಳೆ ನೀವು ಆಹಾರ ಇಲಾಖೆಯ ಮಾರ್ಗಸೂಚಿಗಳನ್ನು ಪಾಲಿಸಿದ್ದು ನಿಮ್ಮ ಪಡಿತರ ಚೀಟಿಯಲ್ಲಿ ಯಾವುದೇ ಲೋಪದೋಷ ಇಲ್ಲದೆ ಇದ್ದರೂ ಕೂಡ ನಿಮ್ಮ ಹೆಸರು ಬಂದಿದ್ದರೆ ತಕ್ಷಣಕ್ಕೆ ಆಹಾರ ಇಲಾಖೆಯ ಕಚೇರಿಗೆ ಹೋಗಿ ರೇಷನ್ ಕಾರ್ಡ್ ರದ್ದುಪಡಿಸಿರುವುದನ್ನು ಮರು ಪರಿಶೀಲನೆ ಮಾಡುವಂತೆ ಮತ್ತೊಂದು ಅರ್ಜಿ ಕೊಡಬೇಕು.

ರೈತರಿಗೆ ಸಿಗಲಿದೆ ಸರ್ಕಾರಿ ಜಮೀನು, ಭೂಮಿ ವಿಲೇವಾರಿ ಮಾಡಲು ಸರ್ಕಾರ ನಿರ್ಧಾರ

ಆಹಾರ ಇಲಾಖೆಯ ವಿಳಾಸ ಎಲ್ಲಿ ಸಿಗುತ್ತೆ?

ನೀವು ರದ್ದುಪಡಿ ಆಗಿರುವ ರೇಷನ್ ಕಾರ್ಡ್ ಹಿಂಪಡೆಯಲು ಆಹಾರ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಬೇಕಾಗುತ್ತದೆ. ಅದಕ್ಕಾಗಿ https://ahara.kar.nic.in/Home/Offices ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಆಹಾರ ಇಲಾಖೆಯ ವೆಬ್ ಸೈಟ್ (Website) ತೆರೆದುಕೊಳ್ಳುತ್ತದೆ.

ಅಲ್ಲಿ ಫುಡ್ ಇನ್ಸ್ಪೆಕ್ಟರ್ ವಿಭಾಗದಲ್ಲಿ ನಿಮ್ಮ ಜಿಲ್ಲೆ ಹಾಗೂ ತಾಲೂಕನ್ನು ನಮೂದಿಸಿದರೆ ಫೋಟೋ ಅಧಿಕಾರಿಗಳ ವಿಳಾಸ ದೊರೆಯುತ್ತದೆ. ನಂತರ ಅವರನ್ನು ನೇರವಾಗಿ ನೀವು ಸಂಪರ್ಕ ಮಾಡಬಹುದು.

ಅಕಸ್ಮಾತ್ ರೇಷನ್ ಕಾರ್ಡ್ ರದ್ದಾದರೆ ನಿಮಗೆ ಅನ್ನಭಾಗ್ಯ ಯೋಜನೆಯ (Annabhagya Yojana) ಹಣ ಹಾಗೂ ಗೃಹಲಕ್ಷ್ಮಿ ಯೋಜನೆಯ (Gruha Lakshmi Yojane) ಹಣ ಸಹ ಸಿಗುವುದಿಲ್ಲ, ಜೊತೆಗೆ ಸರ್ಕಾರದ ಯಾವುದೇ ಯೋಜನೆಗಳ ಸೌಲಭ್ಯ ಇಲ್ಲವಾಗುತ್ತದೆ.

Canceled ration card list released, Such people not get Annabhagya, Gruha Lakshmi money

Follow us On

FaceBook Google News

Canceled ration card list released, Such people not get Annabhagya, Gruha Lakshmi money