ಮಹಿಳೆಯರಿಗೆ ಉಚಿತ ಬಸ್, ಶಕ್ತಿ ಯೋಜನೆಯಲ್ಲಿ ಮಹತ್ವದ ಬದಲಾವಣೆ; ಹೊಸ ನಿಯಮ

ಮಹಿಳೆಯರಿಗೆ ಹಬ್ಬದ ದಿನಗಳು (festival) ಜೂನ್ ತಿಂಗಳಿನಿಂದಲೇ ಆರಂಭವಾಗಿದೆ ಎನ್ನಬಹುದು, ಯಾಕೆಂದರೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು (government schemes) ಮಹಿಳೆಯರಿಗೆ ಹಬ್ಬ ಆಚರಣೆ ಮಾಡಿದಷ್ಟೇ ಖುಷಿ ನೀಡಿವೆ.
ರಾಜ್ಯದಿಂದ ಕರ್ನಾಟಕ ರಸ್ತೆ ಸಾರಿಗೆಯಲ್ಲಿ (Karnataka road transportation) ಉಚಿತವಾಗಿ ಮಹಿಳೆಯರು ಪ್ರಯಾಣಿಸಬಹುದು, ಅದರ ಜೊತೆಗೆ ಗೃಹಲಕ್ಷ್ಮಿ ಯೋಜನೆಯ (Gruha Lakshmi Yojana) ಮೂಲಕ 2000 ರೂಗಳನ್ನು ಉಚಿತವಾಗಿ ಪಡೆಯಬಹುದು, ಹಾಗಾಗಿ ಮಹಿಳೆಯರ ಮುಖದಲ್ಲಿ ರಾಜ್ಯ ಸರ್ಕಾರ ಮಂದಹಾಸ ಮೂಡಿಸಿದೆ ಎನ್ನಬಹುದು.
ಇನ್ಮುಂದೆ ಗ್ರಾಮ ಪಂಚಾಯಿತಿಯಲ್ಲಿಯೇ ಸಿಗಲಿದೆ 20 ಉಚಿತ ಸೇವೆಗಳು! ಒಂದೇ ಸೂರಿನಡಿ ಸೌಲಭ್ಯ
ಶಕ್ತಿ ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿರುವ ಮಹಿಳೆಯರು!
ಕಳೆದ ಜೂನ್ ತಿಂಗಳಿಂದ ಶಕ್ತಿ ಯೋಜನೆಯನ್ನು (Shakti Yojana) ರಾಜ್ಯ ಸರ್ಕಾರ ಜಾರಿಗೆ ತಂದಿದೆ, ಈ ಯೋಜನೆಯ ಅಡಿಯಲ್ಲಿ ರಾಜ್ಯದ ಪ್ರತಿಯೊಬ್ಬ ಮಹಿಳೆಯರು ಕೂಡ, ಕರ್ನಾಟಕ ರಸ್ತೆ ಸಾರಿಗೆ ನಿಗಮ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಈ ನಾಲ್ಕು ನಿಗಮಗಳ ಬಸ್ಗಳಲ್ಲಿ ಉಚಿತವಾಗಿ ಒಂದು ರೂಪಾಯಿ ಕೂಡ ಟಿಕೆಟ್ ಗೆ ಹಣ ಖರ್ಚು ಮಾಡದೆ ಪ್ರಯಾಣಿಸಬಹುದಾಗಿದೆ.
ರಾಜ್ಯದ ಇತರ ಗ್ಯಾರಂಟಿ ಯೋಜನೆಗಳಿಗೆ ಇರುವ ಯಾವ ನಿಯಮಗಳು ಕೂಡ ಶಕ್ತಿ ಯೋಜನೆಗೆ ಇಲ್ಲ, ಬಸ್ಸುಗಳಲ್ಲಿ ಯಾವುದೇ ಮಹಿಳೆ ಬೇಕಾದ್ರೂ ಪ್ರಯಾಣಿಸಬಹುದು, ಆದರೆ ಇದಕ್ಕೆ ಮೂಲ ದಾಖಲೆಯನ್ನು ಮಾತ್ರ ನಿರ್ವಾಹಕರಿಗೆ ತೋರಿಸಬೇಕು.
ಗೃಹಲಕ್ಷ್ಮಿ ಹಣ ಸಿಗದವರು ಈ ದಾಖಲೆಗಳನ್ನು ರೆಡಿ ಇಟ್ಟುಕೊಳ್ಳಿ, ಮನೆ ಬಾಗಿಲಿಗೆ ಬರಲಿದೆ ಹಣ
ಮೂಲ ದಾಖಲೆಗಳಲ್ಲಿ ಬದಲಾವಣೆ!

ಆದರೆ ಈಗ ಈ ಕಟ್ಟುನಿಟ್ಟಿನ ನಿಯಮದಲ್ಲಿ ರಾಜ್ಯ ಸರ್ಕಾರ ತುಸು ಬದಲಾವಣೆಯನ್ನು ಮಾಡಿದೆ. ಮಹಿಳೆಯರು ಇನ್ನು ಮುಂದೆ ಆಧಾರ್ ಕಾರ್ಡ್ ಅನ್ನು ತೋರಿಸಬೇಕಾದ ಅಗತ್ಯ ಇಲ್ಲ, ಅಂದರೆ ಮೂಲ ದಾಖಲೆಗಳನ್ನು ಇಟ್ಟುಕೊಳ್ಳುವ ಅಗತ್ಯವಿಲ್ಲ.
ರೈತರಿಗೆ ಸಿಗಲಿದೆ ಸರ್ಕಾರಿ ಜಮೀನು, ಭೂಮಿ ವಿಲೇವಾರಿ ಮಾಡಲು ಸರ್ಕಾರ ನಿರ್ಧಾರ
ಅದರ ಬದಲು ಮೊಬೈಲ್ ನಲ್ಲಿ (Smartphone) ಆಧಾರ್ ಕಾರ್ಡ್ ಫೋಟೋ (keep Aadhar Card photo in your mobile) ತೆಗೆದುಕೊಂಡು ಅದನ್ನು ನಿರ್ವಾಹಕರಿಗೆ ತೋರಿಸಿ ಬಸ್ ನಲ್ಲಿ ಉಚಿತವಾಗಿ ಪ್ರಯಾಣಿಸಬಹುದು.
ಹೌದು ಪ್ರತಿಯೊಬ್ಬರ ಮಹಿಳೆಯರ ಕೈಯಲ್ಲಿ ಸ್ಮಾರ್ಟ್ ಫೋನ್ ಅಂತೂ ಇದ್ದೇ ಇರುತ್ತೆ, ಹಾಗಾಗಿ ಆಧಾರ್ ಕಾರ್ಡ್ ನ ಒಂದು ಫೋಟೋ ಕಾಪಿ ನಿಮ್ಮ ಫೋನ್ ನಲ್ಲಿ ಇದ್ದರೆ ಅದನ್ನು ನಿರ್ವಾಹಕರಿಗೆ ತೋರಿಸಿ ಉಚಿತವಾಗಿ ಪ್ರಯಾಣಿಸಬಹುದು.
ಇನ್ನು ಉಚಿತವಾಗಿ ಮಹಿಳೆಯರು ಬಸ್ ನಲ್ಲಿ ಪ್ರಯಾಣಿಸಲು ಆಧಾರ್ ಕಾರ್ಡ್ ಮಾತ್ರವಲ್ಲದೆ ಸರ್ಕಾರದಿಂದ ಸಿಗುವ ಇತರ ಗುರುತಿನ ಚೀಟಿ (identity proof) ಪ್ರತಿಯನ್ನು ತೋರಿಸಿ ಕೂಡ ಪ್ರಯಾಣಿಸಬಹುದು ಎಂದು ಸರ್ಕಾರ ತಿಳಿಸಿದೆ. ಆದರೆ ಸದ್ಯಕ್ಕಂತೂ ಬಸ್ ನಲ್ಲಿ ಪ್ರಯಾಣಿಸುವಾಗ ನಿಮ್ಮ ಬಳಿ ಆಧಾರ್ ಕಾರ್ಡ್ ನ ಒಂದು ಫೋಟೋ ಕಾಪಿ ಇಟ್ಟುಕೊಳ್ಳುವುದನ್ನು ಮರೆಯಬೇಡಿ.
Free bus for women, significant change in Shakti Yojana



