ಗೃಹಿಣಿಯರೇ ಗೃಹಲಕ್ಷ್ಮಿ ಯೋಜನೆಯ ₹6000 ಮಿಸ್ ಮಾಡ್ಕೋಬೇಡಿ, ತಕ್ಷಣವೇ ಈ ಕೆಲಸ ಮಾಡಿ
Govt Scheme : ಮೂರು ಕಂತುಗಳ ಹಣವನ್ನು (Gruha lakshmi Yojana) ಸೇರಿಸಿದರೆ ಒಟ್ಟು ಆರು ಸಾವಿರ ರೂಪಾಯಿಗಳು ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಮಹಿಳೆಯರ ಖಾತೆಗೆ (Bank Account) ಸಂದಾಯವಾಗಬೇಕು.
ಸರ್ಕಾರ (government) ನೀಡಿರುವ ಅಂಕಿ ಅಂಶಗಳ ಪ್ರಕಾರ ಸುಮಾರು 9 ಲಕ್ಷ ಮಹಿಳೆಯರಿಗೆ ಮಾತ್ರ ಹಣ ಸಂದಾಯ ಆಗಿಲ್ಲ, ಉಳಿದಂತೆ 1.14 ಕೋಟಿ ಸಲ್ಲಿಕೆಯಾಗಿರುವ ಅರ್ಜಿಗಳಲ್ಲಿ ಬಹುತೇಕ ಎಲ್ಲರಿಗೂ ಮೂರು ಕಂತಿನ ಹಣವು ಜಮಾ (Money Deposit) ಆಗಿದೆ.
ರದ್ದಾದ ರೇಷನ್ ಕಾರ್ಡ್ ಲಿಸ್ಟ್ ಬಿಡುಗಡೆ! ಇವರಿಗೆ ಅನ್ನಭಾಗ್ಯ, ಗೃಹಲಕ್ಷ್ಮಿ ಹಣ ಸಿಗೋದಿಲ್ಲ
ಆದರೆ ದಾಖಲೆಗಳು ಸರಿ ಇದ್ದರೂ ಕೂಡ ತಮ್ಮ ಖಾತೆಗೆ ಮಾತ್ರ ಹಣ ಜಮಾ ಆಗಿಲ್ಲ ಎನ್ನುವ ಬೇಸರವನ್ನು ಹಲವು ಮಹಿಳೆಯರು ವ್ಯಕ್ತಪಡಿಸಿದ್ದಾರೆ. ಇದಕ್ಕೆ ಈಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಆಗಿರುವ ಲಕ್ಷ್ಮಿ ಹೆಬ್ಬಾಳ್ಕರ್ (Lakshmi hebbalkar) ಪರಿಹಾರ ಒಂದನ್ನು ಸೂಚಿಸಿದ್ದು ಇತ್ತೀಚೆಗೆ ನಡೆದ ಪ್ರಗತಿ ಪರಿಶೀಲನ ಸಭೆಯಲ್ಲಿ ಈ ಬಗ್ಗೆ ಮಹತ್ವದ ನಿರ್ಣಯ ಕೈಕೊಂಡಿದ್ದಾರೆ.
ಗೃಹಿಣಿಯರೇ ಹಣ ಬರಲು ಹೀಗೆ ಮಾಡಿ! (Do this to get money)
ಇನ್ಮುಂದೆ ಗ್ರಾಮ ಪಂಚಾಯಿತಿಯಲ್ಲಿಯೇ ಸಿಗಲಿದೆ 20 ಉಚಿತ ಸೇವೆಗಳು! ಒಂದೇ ಸೂರಿನಡಿ ಸೌಲಭ್ಯ
ನಿಮ್ಮ ಖಾತೆಗೆ ಇನ್ನೂ ಹಣ ಸಂದಾಯ ಆಗದೆ ಇದ್ದ ಪಕ್ಷದಲ್ಲಿ ಹತ್ತಿರದ ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿಗಳಾಗಿರುವ ಸಿಡಿಪಿಓ ಅಧಿಕಾರಿಗಳನ್ನು (CDPO officer) ಭೇಟಿಯಾಗಿ ನಿಮ್ಮ ಗೃಹಲಕ್ಷ್ಮಿ ಅರ್ಜಿ ಸಲ್ಲಿಕೆಯ ಸ್ವೀಕೃತಿ, ಬ್ಯಾಂಕ್ ಪಾಸ್ ಬುಕ್ (bank passbook) ವಿವರ, ಆಧಾರ್ ಕಾರ್ಡ್ (Aadhaar Card) ಮತ್ತು ರೇಷನ್ ಕಾರ್ಡ್ (ration card) ಪ್ರತಿಯನ್ನು ನೀಡಿ ಅವರ ಬಳಿ ಸಲಹೆಯನ್ನ ಪಡೆದುಕೊಳ್ಳಿ
ನಿಮ್ಮ ಖಾತೆಗೆ ಹಣ ಜಮಾ ಆಗದೇ ಇರಲು ಸರಿಯಾದ ಕಾರಣ ಏನು ಹಾಗೂ ಅದಕ್ಕೆ ಪರಿಹಾರ ಏನು ಎಂಬುದನ್ನು ಕೂಡ ಅಧಿಕಾರಿಗಳು ಸೂಚಿಸುತ್ತಾರೆ.
ಮಹಿಳೆಯರಿಗೆ ಉಚಿತ ಬಸ್, ಶಕ್ತಿ ಯೋಜನೆಯಲ್ಲಿ ಮಹತ್ವದ ಬದಲಾವಣೆ; ಹೊಸ ನಿಯಮ
ಬ್ಯಾಂಕ್ ಖಾತೆಯ ಬದಲು ಅಂಚೆ ಕಚೇರಿಯಲ್ಲಿ ಖಾತೆ ತೆರೆಯಿರಿ!
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಹಿಳೆಯರಿಗೆ ಮತ್ತೊಂದು ಮಹತ್ವದ ಸೂಚನೆ ನೀಡಿದ್ದಾರೆ. ಬ್ಯಾಂಕ್ ಖಾತೆಯನ್ನು (Bank Account) ಹೊಂದಿರುವ ಮಹಿಳೆಯರು ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ (Aadhaar Card link) ಮಾಡಿಕೊಳ್ಳಬೇಕು.
ಆದರೆ ಸಾಕಷ್ಟು ಮಹಿಳೆಯರಿಗೆ ಇದು ಸಾಧ್ಯವಾಗಿಲ್ಲ ಆದ್ದರಿಂದ ಅಂಚೆ ಕಚೇರಿಯಲ್ಲಿ ಖಾತೆಯನ್ನು (post office account) ತೆರೆದು ಅದಕ್ಕೆ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗುವಂತೆ ಮಾಡಿಕೊಳ್ಳಬಹುದು.
ಗೃಹಲಕ್ಷ್ಮಿ ಹಣ ಸಿಗದವರು ಈ ದಾಖಲೆಗಳನ್ನು ರೆಡಿ ಇಟ್ಟುಕೊಳ್ಳಿ, ಮನೆ ಬಾಗಿಲಿಗೆ ಬರಲಿದೆ ಹಣ
ಅಂಚೆ ಕಚೇರಿಯಲ್ಲಿ ಖಾತೆ ತೆರೆದು ಕೆಲವೇ ಗಂಟೆಗಳಲ್ಲಿ ಹಣ ಜಮಾ ಆಗಿರುವ ಉದಾಹರಣೆ ಇದೆ, ಈ ಹಿನ್ನೆಲೆಯಲ್ಲಿ ಫಲಾನುಭವಿ ಮಹಿಳೆಯರು ಇನ್ನೂ ಹಣ ಜಮಾ ಆಗದೇ ಇದ್ದ ಪಕ್ಷದಲ್ಲಿ ಅಂಚೆ ಕಚೇರಿಯಲ್ಲಿ ಖಾತೆ ತೆರೆಯುವುದರ ಮೂಲಕ ಮೂರು ಕಂತಿನ 6000 ರೂ. ಖಾತೆಗೆ ಜಮಾ ಆಗುವಂತೆ ಮಾಡಿಕೊಳ್ಳಬಹುದು.
Do this immediately to get all the installments of Gruha Lakshmi Yojana