ಸರ್ಕಾರಿ ಕೆಲಸಕ್ಕೆ ಅರ್ಜಿ ಆಹ್ವಾನ, 42,000 ಮಾಸಿಕ ವೇತನ; ಕೂಡಲೇ ಅಪ್ಲೈ ಮಾಡಿ

ಪದವಿಯಲ್ಲಿ (Degree) ತೇರ್ಗಡೆ ಹೊಂದಿದ್ದು ರಾಜ್ಯ ಸರ್ಕಾರದ ಸರ್ಕಾರಿ ನೌಕರಿ (Government Job) ಪಡೆದುಕೊಳ್ಳಲು ಬಯಸುವವರಿಗೆ ಗುಡ್ ನ್ಯೂಸ್. ರಾಜ್ಯ ರೇಷ್ಮೆ ಬೆಳೆಗಾರರು ಮತ್ತು ಕರ್ನಾಟಕ ರೈತ ಸೇವಾ ಸಹಕಾರಿ ಸಂಘ (Silk Growers Farmers Service Co-operative Society Karnataka Recruitment ) ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ತಕ್ಷಣವೇ ಅರ್ಜಿ ಸಲ್ಲಿಸಿ.

ಹುದ್ದೆಯ ವಿವರ ಇಂತಿದೆ

ರೇಷ್ಮೆ ಬೆಳೆಗಾರರು & ರೈತರ ಸೇವಾ ಸಹಕಾರ ಸಂಘ ಕರ್ನಾಟಕ ನೇಮಕಾತಿ ಅಧಿಸೂಚನೆ ಪ್ರಕಾರ ಒಟ್ಟು 5 ಜೂನಿಯರ್ ಅಸಿಸ್ಟೆಂಟ್ ಮತ್ತು ಸೇಲ್ಸ್ ಕ್ಲರ್ಕ್ ಹುದ್ದೆಗಳು ಖಾಲಿ ಇವೆ.

ರೈತರ ಖಾತೆಗೆ ₹2,000 ರೂಪಾಯಿ ಜಮಾ! ರಾಜ್ಯ ಸರ್ಕಾರದಿಂದ ಮತ್ತೊಂದು ಯೋಜನೆ

ವಿದ್ಯಾರ್ಹತೆ (Education qualification)

ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಯಾವುದೇ ಮಾನ್ಯವಾಗಿರುವ ವಿಶ್ವವಿದ್ಯಾಲಯ ಅಥವಾ ಮಂಡಳಿ ಅಡಿಯಲ್ಲಿ ಪದವಿ ತೇರ್ಗಡೆ ಹೊಂದಿರುವುದು ಕಡ್ಡಾಯ ಎಂದು ರೇಷ್ಮೆ ಬೆಳೆಗಾರರು & ರೈತರ ಸೇವಾ ಸಹಕಾರ ಸಂಘ ಕರ್ನಾಟಕ ನೇಮಕಾತಿ ಅಧಿಸೂಚನೆಯಲ್ಲಿ ಪ್ರಕಟಿಸಲಾಗಿದೆ.

ವಯೋಮಿತಿ (Age)

ರೇಷ್ಮೆ ಬೆಳೆಗಾರರು & ರೈತರ ಸೇವಾ ಸಹಕಾರ ಸಂಘ ಕರ್ನಾಟಕ ನೇಮಕಾತಿ ಅಧಿಸೂಚನೆ ಪ್ರಕಾರ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ 18 ರಿಂದ 35 ವರ್ಷ ವಯಸ್ಸಾಗಿರಬೇಕು. ಆದರೆ ಎಸ್ ಸಿ, ಎಸ್ ಸಿ ಎಸ್ ಟಿ, ಪ್ರವರ್ಗ 1 ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಪ್ರವರ್ಗ 2 ಎ,ಬಿ ಪ್ರವರ್ಗ 3 ಎ,ಬಿ ಅಭ್ಯರ್ಥಿಗಳಿಗೆ 3 ವರ್ಷಗಳ ಕಾಲ ವಯೋಮಿತಿ ಸಡಿಲಿಕೆ ಇದೆ.

ಗೃಹಲಕ್ಷ್ಮಿ ಬಾಕಿ ಮೊತ್ತ ಜಮೆ, ಇಂತಹ ಮಹಿಳೆಯರಿಗೆ ಮಾತ್ರ ಹಣ ವರ್ಗಾವಣೆ; ಖಾತೆ ಚೆಕ್ ಮಾಡಿ

Govt Jobಅರ್ಜಿ ಶುಲ್ಕ (Application fee)

ರೇಷ್ಮೆ ಬೆಳೆಗಾರರು & ರೈತರ ಸೇವಾ ಸಹಕಾರ ಸಂಘ ಕರ್ನಾಟಕ ನೇಮಕಾತಿ ಅಧಿಸೂಚನೆ ಪ್ರಕಾರ ಅರ್ಜಿ ಸಲ್ಲಿಸಲು ಬಯಸುವ ಎಲ್ಲಾ ಅಭ್ಯರ್ಥಿಗಳು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು 1,000 ರೂಪಾಯಿಗಳ ಅರ್ಜಿ ಶುಲ್ಕ ಪಾವತಿಸಬೇಕು.

ವೇತನ ಮತ್ತು ಉದ್ಯೋಗ ಸ್ಥಳ (salary and job placement)

ರೇಷ್ಮೆ ಬೆಳೆಗಾರರು & ರೈತರ ಸೇವಾ ಸಹಕಾರ ಸಂಘ ಕರ್ನಾಟಕ ನೇಮಕಾತಿ ಅಧಿಸೂಚನೆ ಪ್ರಕಾರ ಆಯ್ಕೆಯಾಗಿರುವ ಅಭ್ಯರ್ಥಿಗಳು ಕರ್ನಾಟಕದಲ್ಲಿಯೇ ಅದರಲ್ಲೂ ಬೆಂಗಳೂರಿನಲ್ಲಿ (Bengaluru) ಕೆಲಸ ನಿರ್ವಹಿಸಬೇಕು ಹಾಗೂ ಪ್ರತಿ ತಿಂಗಳು 21,400ರೂ. ರಿಂದ 42,000ರೂ. ಗಳ ವರೆಗೆ ವೇತನ ಪಡೆಯಬಹುದು.

ಇಂತಹವರ ರೇಷನ್ ಕಾರ್ಡ್ ರದ್ದು! ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆ ಹಣ ಕೂಡ ಸಿಗೋಲ್ಲ

ಆಯ್ಕೆ ಪ್ರಕ್ರಿಯೆ (selection process)

ಲಿಖಿತ ಪರೀಕ್ಷೆ ಹಾಗೂ ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ (date to apply)

ಆಫ್ ಲೈನ್ ಮೂಲಕ ಅರ್ಜಿ (offline) ಸಲ್ಲಿಸಬಹುದಾಗಿದ್ದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 28 2023.

ಅರ್ಜಿ ಸಲ್ಲಿಸುವುದು ಹೇಗೆ? (How to apply)

ರೇಷ್ಮೆ ಇಲಾಖೆಯಲ್ಲಿ ಕೆಲಸ ನಿರ್ವಹಿಸಲು ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲೆಗಳ ಸಮೇತ ಈ ವಿಳಾಸಕ್ಕೆ ಪೋಸ್ಟ್ ಮೂಲಕ ಕಳುಹಿಸಿ.

ಅನ್ನಭಾಗ್ಯ ಯೋಜನೆಯ ₹1190 ರೂಪಾಯಿ ಬಿಡುಗಡೆ, ನಿಮ್ಮ ಖಾತೆ ಸ್ಟೇಟಸ್ ಚೆಕ್ ಮಾಡಿ

ಅರ್ಜಿ ಸಲ್ಲಿಸಬೇಕಾದ ವಿಳಾಸ

ಸದಸ್ಯ ಕಾರ್ಯದರ್ಶಿ, ಸಿಬ್ಬಂದಿ ನೇಮಕಾತಿ ಸಮಿತಿ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ
ರೇಷ್ಮೆ ಬೆಳೆಗಾರರು ಮತ್ತು ರೈತರ ಸೇವಾ ಸಹಕಾರ ಸಂಘ ಲಿಮಿಟೆಡ್
ಬಸ್ ನಿಲ್ದಾಣದ ಸಮೀಪ, ಸರ್ಜಾಪುರ, ಆನೇಕಲ್ ತಾಲೂಕು
ಬೆಂಗಳೂರು ನಗರ ಜಿಲ್ಲೆ-562125

Government Job with 42,000 Monthly Salary, Apply immediately

TRENDING ARTICLES1 / 4
Show More

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories