ಕರ್ನಾಟಕ ಜನತೆಗೆ ಬೆಲೆ ಏರಿಕೆ ಶಾಕ್! ಹಾಲಿನ ದರ 8 ರೂ. ಹೆಚ್ಚಳಕ್ಕೆ ಸರ್ಕಾರ ಗ್ರೀನ್ ಸಿಗ್ನಲ್

Milk Price Hike: ರಾಜ್ಯದಲ್ಲಿ ಹಾಲಿನ ದರ ಹೆಚ್ಚಳಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ಪ್ರತಿ ಲೀಟರ್‌ಗೆ 8 ರೂ. ಏರಿಕೆಯಾಗುವ ಸಾಧ್ಯತೆಯಿದೆ. ಚುನಾವಣಾ ಆಯೋಗದ ಅನುಮತಿ ಬಳಿಕ ಸರ್ಕಾರ ಅಧಿಕೃತ ಘೋಷಣೆ ಮಾಡುವ ನಿರೀಕ್ಷೆಯಿದೆ.

  • ಹಾಲಿನ ದರ ಏರಿಕೆಗೆ ಸಂಪುಟ ಒಪ್ಪಿಗೆ
  • ಲೀಟರ್‌ಗೆ ₹8 ರೂ. ಹೆಚ್ಚಳ ಸಾಧ್ಯತೆ
  • ಹೊಸ ದರಕ್ಕೆ ಆಯೋಗದ ಅನುಮತಿ ಬಾಕಿ

ಬೆಂಗಳೂರು (Bengaluru): ರಾಜ್ಯದ ಜನರಿಗೆ ಬೆಲೆ ಏರಿಕೆಯ ಮತ್ತೊಂದು ಹೊಡೆತ ಬೀಳುವ ಸಾಧ್ಯತೆಯಿದೆ. ಹಾಲಿನ ದರವನ್ನು (Milk Price Hike) ಪ್ರತಿ ಲೀಟರ್‌ಗೆ 8 ರೂ. ಹೆಚ್ಚಿಸುವ ಪ್ರಸ್ತಾವನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಇದೇ ವೇಳೆ ಬಸ್ ಟಿಕೆಟ್ ದರ ಹೆಚ್ಚಳಕ್ಕೂ ಸಂಪುಟ ಗ್ರೀನ್ ಸಿಗ್ನಲ್ ನೀಡಿದೆ.

ಹಾಲಿನ ದರ ಪರಿಷ್ಕರಣೆ ನವೆಂಬರ್ 1ರಿಂದ ಜಾರಿಗೆ ಬರುವ ಸಾಧ್ಯತೆ ಇದೆ. ಪ್ರಸ್ತುತ ಚರ್ಚೆಯಾಗಿರುವ 80:20 ಮಾದರಿಯಂತೆ ದರ ಹೆಚ್ಚಳವಾದರೆ, ಹೆಚ್ಚುವರಿ 8 ರೂ. ಪೈಕಿ 6 ರೂ. ನೇರವಾಗಿ ರೈತರಿಗೆ ನೀಡುವ ಸಾಧ್ಯತೆಯಿದೆ. ಉಳಿದ 2 ರೂ. ಹಾಲು ಒಕ್ಕೂಟಗಳಿಗೆ ಸಿಗಲಿದೆ.

ಇದನ್ನೂ ಓದಿ: ವಸತಿ ಇಲ್ಲದವರಿಗೆ ಕೈಗೆಟಕುವ ದರದಲ್ಲಿ ಮನೆ; ಕರ್ನಾಟಕ ಸಿಎಂ ಕೊಟ್ರು ಬಂಪರ್ ಗುಡ್ ನ್ಯೂಸ್

ಹಾಲು ಒಕ್ಕೂಟಗಳು ಈ ಹಿಂದೆ 70:30 ಅನುಪಾತದಲ್ಲಿ ದರ ಹೆಚ್ಚಳಕ್ಕೆ ಮನವಿ ಮಾಡಿದ್ದವು. ಆದರೆ, 80:20 ಅನುಪಾತದಲ್ಲಿ ದರ ಪರಿಷ್ಕರಣೆ ಮಾಡುವ ಬಗ್ಗೆ ಮುಖ್ಯಮಂತ್ರಿ (CM) ಡಿ.ಕೆ. ಶಿವಕುಮಾರ್ (D.K. Shivakumar) ಅವರು ಸ್ಪಷ್ಟಪಡಿಸಿದ್ದರು. ಇದೀಗ ಸಂಪುಟದ ನಿರ್ಧಾರವೂ ಇದೇ ಮಾದರಿಯಲ್ಲಿದೆ.

ಆದರೆ, ಹಾಲು ಮತ್ತು ಬಸ್ ಟಿಕೆಟ್ ದರ ಹೆಚ್ಚಳದ ಬಗ್ಗೆ ಸರ್ಕಾರ ತಕ್ಷಣವೇ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ. ಚುನಾವಣಾ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿ, ಅನುಮತಿ ದೊರೆತ ನಂತರ ಅಂತಿಮ ಘೋಷಣೆ ಮಾಡಲು ಸರ್ಕಾರ ನಿರ್ಧರಿಸಿದೆ.

ಇದನ್ನೂ ಓದಿ: ರೈತರೇ, ಈ ಗುರುತಿನ ಚೀಟಿ ಇಲ್ಲದಿದ್ರೆ ಪಿಎಂ ಕಿಸಾನ್ ಸೇರಿದಂತೆ ಸಿಗಲ್ಲ ಸರ್ಕಾರಿ ಯೋಜನೆಗಳ ಲಾಭ

8 ರೂ. ಏರಿಕೆಯಾದರೆ ಹಾಲಿನ ಹೊಸ ದರ ಎಷ್ಟು?

ಹಾಲಿನ ವಿಧ ಪ್ರಸ್ತುತ ದರ ಹೊಸ ದರ
ಟೋನ್ಡ್‌ ಹಾಲು 46 ರೂ. 54 ರೂ.
ಹೋಮೋಜಿನೈಸ್ಡ್‌ ಟೋನ್ಡ್‌ ಹಾಲು 47 ರೂ. 55 ರೂ.
ಹೋಮೋಜಿನೈಸ್ಡ್‌ ಹಸುವಿನ ಹಾಲು 50 ರೂ. 58 ರೂ.
ಶುಭಂ ಹಾಲು 52 ರೂ. 60 ರೂ.
ಸಮೃದ್ಧಿ ಹಾಲು 55 ರೂ. 64 ರೂ.
ಸ್ಪೆಷಲ್‌ ಹಾಲು 52 ರೂ. 60 ರೂ.
ಡಬಲ್‌ ಟೋನ್ಡ್‌ ಹಾಲು 43 ರೂ. 51 ರೂ.
ಆರೆಂಜ್ ಪ್ಯಾಕೆಟ್ ಹಸುವಿನ ಹಾಲು 50 ರೂ. 58 ರೂ.
ಗ್ರೀನ್ ಸ್ಪೆಷಲ್ 50 ರೂ. 58 ರೂ.
ನಾರ್ಮಲ್ ಗ್ರೀನ್ ಹಸುವಿನ ಹಾಲು 50 ರೂ. 58 ರೂ.

ಹಾಲಿನ ದರ ಹೆಚ್ಚಳ ಜಾರಿಗೆ ಬಂದರೆ, ಪ್ರತಿದಿನ ಹಾಲು ಖರೀದಿಸುವ ಕುಟುಂಬಗಳ ಮಾಸಿಕ ಖರ್ಚಿನ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ. ಆದರೆ ಅಂತಿಮ ದರ ಮತ್ತು ಜಾರಿಗೆ ಬರುವ ದಿನಾಂಕವನ್ನು ಸರ್ಕಾರದ ಅಧಿಕೃತ ಆದೇಶದ ಬಳಿಕವೇ ಖಚಿತಪಡಿಸಿಕೊಳ್ಳಬೇಕಾಗಿದೆ.

English Summary▼

ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories