ರೈತರಿಗೆ 5 ಲಕ್ಷದವರೆಗೆ ಬಡ್ಡಿ ರಹಿತ ಸಾಲ ನೀಡುವ ರಾಜ್ಯ ಸರ್ಕಾರದ ಹೊಸ ಯೋಜನೆ

ಡಿಸಿಸಿ ಬ್ಯಾಂಕ್ ನಲ್ಲಿ ಬಡ್ಡಿ ರಹಿತ (interest less loan) ಸಾಲವನ್ನು 5 ಲಕ್ಷ ರೂಪಾಯಿಗಳ ವರೆಗೆ ಪಡೆದುಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ

ರಾಜ್ಯದಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ರೈತರಿಗೆ ಅನುಕೂಲವಾಗುವಂತೆ ಕೆಲವು ಪ್ರಮುಖ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ. ಅದರಲ್ಲೂ ರೈತರು ತಮ್ಮ ಕೃಷಿ ಬೆಳೆ ಬೆಳೆಯಲು ಮಳೆಯನ್ನೆ ಅವಲಂಬಿಸಿದ್ದು ಕಾಲಕಾಲಕ್ಕೆ ತಕ್ಕಂತೆ ಮಳೆ ಆಗದೆ ಇದ್ದಲ್ಲಿ ರೈತರಿಗೆ ಕೃಷಿ ಬೆಳೆಯಲು ಸಮಸ್ಯೆ ಆಗುತ್ತದೆ.

ಈ ಹಿನ್ನೆಲೆಯಲ್ಲಿ ಸರಿಯಾದ ರೀತಿಯಲ್ಲಿ ಫಸಲು ಬೆಳೆಯಲು ಉತ್ತಮ ರೀತಿಯಾದ ಬಿತ್ತನೆ ಬೀಜಗಳನ್ನು ಬಿತ್ತಬೇಕು ಇದಕ್ಕೆ ಸಾಕಷ್ಟು ಹಣವು ವೆಚ್ಚವಾಗುತ್ತದೆ.

ಇವುಗಳನ್ನು ಗಮನಿಸಿರುವ ಸರ್ಕಾರ ರೈತರಿಗೆ ಕೃಷಿ ಚಟುವಟಿಕೆಗೆ (agriculture activities) ಅನುಕೂಲವಾಗುವಂತೆ ಸಾಲ (loan) ಸೌಲಭ್ಯವನ್ನು ಕೂಡ ಸಬ್ಸಿಡಿ (subsidy) ದರದಲ್ಲಿ ನೀಡುತ್ತಿದೆ.

Kannada News

ರೈತರು ಸರ್ಕಾರದ ಯೋಜನೆಯ ಜೊತೆಗೆ ಡಿಸಿಸಿ ಬ್ಯಾಂಕ್ ನಲ್ಲಿ ಬಡ್ಡಿ ರಹಿತ (interest less loan) ಸಾಲವನ್ನು 5 ಲಕ್ಷ ರೂಪಾಯಿಗಳ ವರೆಗೆ ಪಡೆದುಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ.

ಗೃಹಲಕ್ಷ್ಮಿ 4ನೇ ಕಂತಿನ ಹಣ ಇಂತಹವರಿಗೆ ಸಿಗೋಲ್ಲ; ಗೃಹಿಣಿಯರಿಗೆ ಶುರುವಾಯ್ತು ಆತಂಕ

ಡಿಸಿಸಿ ಬ್ಯಾಂಕ್ ನಲ್ಲಿ ಸಾಲ ಸೌಲಭ್ಯ ಪಡೆದುಕೊಳ್ಳುವುದು ಹೇಗೆ? (Get loan by DCC Bank)

loan by DCC Bank

ರೈತರ ಕೃಷಿ ಸಾಲದ ಭಾರ ಇಳಿಸಿದ ರಾಜ್ಯ ಸರ್ಕಾರ; ಕೈಗೊಂಡಿದೆ ಹೊಸ ಕ್ರಮ!

ನೀವು ಡಿಸಿಸಿ ಬ್ಯಾಂಕ್ ನಲ್ಲಿ ಸಾಲ ಸೌಲಭ್ಯ ಪಡೆದುಕೊಳ್ಳಲು ಮುಖ್ಯವಾಗಿ ಡಿಸಿಸಿ ಬ್ಯಾಂಕ್ ನಲ್ಲಿ ಖಾತೆ ಹೊಂದಿರಬೇಕು. ಕೆಲವು ಕೃಷಿ ಚಟುವಟಿಕೆಗಳ ಸಾಲಕ್ಕೆ ಬಡ್ಡಿ ಪಾವತಿಸಬೇಕಾಗಿಲ್ಲ.

ಇನ್ನೂ ಕೆಲವು ಸಾಲಕ್ಕೆ 1% ನಿಂದ 3% ವರೆಗೆ ಬಡ್ಡಿ ಚಾರ್ಜ್ ಮಾಡಲಾಗುತ್ತದೆ. ಬೆಳೆ ಸಾಲ ಪಡೆದುಕೊಂಡವರು ಹೆಚ್ಚಿನ ಬೆನಿಫಿಟ್ ಪಡೆದುಕೊಳ್ಳಬಹುದು ಯಾಕೆಂದರೆ ಪ್ರತಿ ವರ್ಷ ನೀವು ಬೆಳೆ ಸಾಲ ರಿನಿವಲ್ (loan renewal) ಮಾಡಿಕೊಳ್ಳಲು ಅವಕಾಶವಿದೆ

ಒಮ್ಮೆ ಒಟ್ಟು ಹಣವನ್ನು ಪಾವತಿಸಿ ಮತ್ತೆ ಆ ಹಣವನ್ನು ಹಿಂಪಡೆದುಕೊಂಡು ಕೃಷಿ ಚಟುವಟಿಕೆಗೆ ಬಳಸಿಕೊಳ್ಳಬಹುದು. ಪಾವತಿ ಮಾಡುವ ಫ್ರೀಕ್ವೆನ್ಸಿ ನೋಡಿ ಈ ಬೆಳೆ ಸಾಲ (crop loan) ದ ಮೊತ್ತವನ್ನು ಹೆಚ್ಚಿಸಬಹುದು.

DCC ಬ್ಯಾಂಕ್ ನಲ್ಲಿ ಬಡ್ಡಿ ರಹಿತ ಸಾಲ ಪಡೆದುಕೊಳ್ಳಲು ರೈತರು ತಮ್ಮ ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಜಮೀನು ಕುರಿತಂತೆ ಪಹಣಿ ಪತ್ರ, ಮನೆಯ ವಿಳಾಸದ ಪ್ರೂಫ್, ಫ್ರೂಟ್ ಐಡಿ FID ಸಲ್ಲಿಸಬೇಕು.

ನಂತರ ಬ್ಯಾಂಕ್ ನಲ್ಲಿ ಅರ್ಜಿ ಫಾರಂ (application form) ತೆಗೆದುಕೊಂಡು ಅರ್ಜಿ ಫಾರಂ ಅಲ್ಲಿ ಕೇಳಿದ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಬೇಕು. ಅರ್ಹ ರೈತರಿಗೆ ಬ್ಯಾಂಕ್ ತಕ್ಷಣವೇ ಸಾಲ ಮಂಜೂರು ಮಾಡುತ್ತದೆ.

ಎಪಿಎಲ್, ಬಿಪಿಎಲ್ ಕಾರ್ಡ್ ಪಡೆಯಲು ಅವಕಾಶ! ಇನ್ಮುಂದೆ ಪ್ರತಿ ತಿಂಗಳು ಹೊಸ ಅರ್ಜಿ ಸ್ವೀಕಾರ

ಫ್ರೂಟ್ಸ್ ಐಡಿ ಕಡ್ಡಾಯ! FID

ರೈತರು ಸರ್ಕಾರದ ಯಾವುದೇ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಫ್ರೂಟ್ಸ್ ಐಡಿ ಹೊಂದಿರುವುದು ಕಡ್ಡಾಯವಾಗಿದೆ, ಒಂದು ವೇಳೆ ನಿಮ್ಮ ಬಳಿ fid ಇಲ್ಲದೆ ಇದ್ದರೆ ತಕ್ಷಣವೇ ಮಾಡಿಸಿಕೊಳ್ಳಿ. ಸೇವಾ ಕೇಂದ್ರಗಳು ಅಥವಾ ತೋಟಗಾರಿಕಾ ಇಲಾಖೆಯಲ್ಲಿ ಹಾಗೂ ಕೃಷಿ ಇಲಾಖೆಯಲ್ಲಿ ಫ್ರೂಟ್ಸ್ ಐಡಿ ಮಾಡಿಸಿಕೊಳ್ಳಲು ಅವಕಾಶವಿದೆ. ಅಗತ್ಯ ಇರುವ ರೈತರು ತಕ್ಷಣವೇ ಡಿಸಿಸಿ ಬ್ಯಾಂಕ್ ಗೆ ತೆರಳಿ ಅಗತ್ಯ ಇರುವ ಸಾಲ ಸೌಲಭ್ಯ ಪಡೆದುಕೊಳ್ಳಿ.

new scheme to provide interest-free loans up to 5 lakhs to farmers

Follow us On

FaceBook Google News