ಪವಿತ್ರ ಲೋಕೇಶ್ ಮತ್ತೆ ಮದುವೆ ಸಿದ್ಧತೆ, ಇನ್ನೊಂದು ಮದುವೆ ದಿನಾಂಕ ಫಿಕ್ಸ್! ಮದುವೆಗೆ ಬನ್ನಿ ಎಂದ ಜೋಡಿ

ಟಾಲಿವುಡ್ ನಲ್ಲಿ 'ಮಳ್ಳಿ ಪೆಳ್ಳಿ' ಹಾಗೂ ಸ್ಯಾಂಡಲ್ ವುಡ್ ನಲ್ಲಿ "ಮತ್ತೆ ಮದುವೆ" ಎಂಬ ಶೀರ್ಷಿಕೆಯ ಸಿನಿಮಾ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಈ ಚಿತ್ರದ ಬಿಡುಗಡೆ ದಿನಾಂಕವನ್ನು ಇತ್ತೀಚೆಗೆ ಫಿಕ್ಸ್ ಮಾಡಲಾಗಿದೆ.

ಟಾಲಿವುಡ್ ನಲ್ಲಿ ‘ಮಳ್ಳಿ ಪೆಳ್ಳಿ’ (Malli Pelli) ಹಾಗೂ ಸ್ಯಾಂಡಲ್ ವುಡ್ ನಲ್ಲಿ “ಮತ್ತೆ ಮದುವೆ” (Matte Maduve Cinema) ಎಂಬ ಶೀರ್ಷಿಕೆಯ ಸಿನಿಮಾ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಈ ಚಿತ್ರದ ಬಿಡುಗಡೆ ದಿನಾಂಕವನ್ನು (Release Date Announced) ಇತ್ತೀಚೆಗೆ ಫಿಕ್ಸ್ ಮಾಡಲಾಗಿದೆ.

ಟಾಲಿವುಡ್ ನಟ ನರೇಶ್ (Tollywood Actor Naresh) ಇತ್ತೀಚೆಗೆ ಸುದ್ದಿಯಲ್ಲಿದ್ದಾರೆ. ನಟಿ ಪವಿತ್ರ ಲೋಕೇಶ್ (Actress Pavitra Lokesh) ಅವರೊಂದಿಗೆ ಸಂಬಂಧದಲ್ಲಿರುವ ನರೇಶ್ ಅವರು ಶೀಘ್ರದಲ್ಲೇ ಮದುವೆಯಾಗುವುದಾಗಿ ಘೋಷಿಸಿದ ನಂತರ ನಾನಾ ಘಟನೆಗಳು ಬೆಳಕಿಗೆ ಬಂದವು.

ಈಗ ಮತ್ತೆ ಮದುವೆಯಾಗುತ್ತಿರುವ ಜೋಡಿಯಾಗಿ ಟಾಲಿವುಡ್ ನಲ್ಲಿ ಸುದ್ದಿಯಾಗಿದ್ದಾರೆ. ಈ ಜೋಡಿಯ ಇತ್ತೀಚಿನ ಚಿತ್ರ ‘ಮಳ್ಳಿ ಪೆಳ್ಳಿ’ ಈಗಾಗಲೇ ಟಾಕ್ ಆಫ್ ದಿ ಟೌನ್ ಆಗಿದೆ, ಜೊತೆಗೆ ಈ ಚಿತ್ರ ಬಹುಭಾಷಾ ಚಿತ್ರವಾಗಿದ್ದು ನಮ್ಮಲ್ಲಿ ಮತ್ತೆ ಮದುವೆ ಶೀರ್ಷಿಕೆಯೊಂದಿಕೆ ಬಿಡುಗಡೆಗೆ ಸಜ್ಜಾಗಿದೆ.

Actor Naresh Pavitra Lokesh Matte Maduve Movie Release Date Announced

ಇವ್ರು ವಿಷ್ಣುವರ್ಧನ್ ಅವರ ಲಕ್ಕಿ ನಿರ್ದೇಶಕ ಎಂದೇ ಫೇಮಸ್! ಇಬ್ಬರ ಕಾಂಬಿನೇಷನ್ ಅಂದ್ರೆ ಆ ಸಿನಿಮಾ ಖಂಡಿತಾ ಸಕ್ಸಸ್! ಅಷ್ಟಕ್ಕೂ ಆತ ಯಾರು ಗೊತ್ತಾ?

ಈ ಸಿನಿಮಾವನ್ನು ಜನಪ್ರಿಯ ನಿರ್ಮಾಪಕ ಕಮ್ ನಿರ್ದೇಶಕ ಎಂಎಸ್ ರಾಜು (Director MS Raju) ನಿರ್ದೇಶಿಸುತ್ತಿರುವುದರಿಂದ ಇಂಡಸ್ಟ್ರಿ ವಲಯದಲ್ಲೂ ಈ ಸಿನಿಮಾದ ಬಗ್ಗೆ ಒಳ್ಳೆಯ ಬಝ್ ಕ್ರಿಯೇಟ್ ಆಗಿದೆ. ಮತ್ತು ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ (First Look Poster) ಪ್ರೇಕ್ಷಕರಲ್ಲಿ ನಿರೀಕ್ಷೆ ಮೂಡಿಸಿದೆ.

ಏತನ್ಮಧ್ಯೆ, ಈ ಚಿತ್ರದ ಟೀಸರ್ ಈ ನಿರೀಕ್ಷೆಗಳನ್ನು ದುಪ್ಪಟ್ಟು ಮಾಡಿದೆ. ಆದ್ರೆ, ಈ ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಎಂದು ಎಲ್ಲರೂ ಕಾತರದಿಂದ ಕಾಯುತ್ತಿರುವಾಗಲೇ ಇತ್ತೀಚೆಗಷ್ಟೇ ಚಿತ್ರತಂಡ ಈ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ.

ಬೇಸಿಗೆಯ ಉಡುಗೊರೆಯಾಗಿ ಮೇ 26ಕ್ಕೆ ‘ಮತ್ತೆ ಮದುವೆ’ ಚಿತ್ರ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಪ್ರಕಟಿಸಿದೆ. ಈ ಜೋಡಿ ತಮ್ಮ ನಿಜ ಜೀವನದ ಘಟನೆಗಳನ್ನು ರೀಲ್‌ನಲ್ಲಿ ತೋರಿಸುತ್ತಿದ್ದು, ಈ ಸಿನಿಮಾದಲ್ಲಿ ಯಾವ ರೀತಿಯ ವಿವಾದಗಳನ್ನು ಕವರ್ ಮಾಡುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ.

ಸಂಪತ್ತಿಗೆ ಸವಾಲ್ ಸಿನಿಮಾದ ಬಜಾರಿ-ಬಾಯ್ಬಡಕಿ ಪಾತ್ರಕ್ಕೆ ಮಂಜುಳಾನೇ ನಾಯಕಿಯಾಗಬೇಕೆಂದು ಅಣ್ಣವ್ರು ಪಟ್ಟು ಹಿಡಿದು ಕುಳಿತಿದ್ದು ಯಾಕೆ ಗೊತ್ತಾ?

ಆದರೆ, ಈ ಸಿನಿಮಾದ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ (Social Media) ಟ್ರೋಲಿಂಗ್ ಕೂಡ ಅದೇ ಮಟ್ಟದಲ್ಲಿ ನಡೆಯುತ್ತಿದೆ. ಈ ಜೋಡಿಯ ‘ಮತ್ತೆ ಮದುವೆ’ ಸಿನಿಮಾ ನೋಡಲು ಪ್ರೇಕ್ಷಕರು ಮತ್ತೆ ಮತ್ತೆ ಥಿಯೇಟರ್ ಗೆ ಬರುತ್ತಾರಾ ಎಂದು ಹಲವರು ವ್ಯಂಗ್ಯ ಮಾಡುತ್ತಿದ್ದಾರೆ.

ನಟ ನರೇಶ್ ಹಾಗೂ ಪವಿತ್ರ ಲೋಕೇಶ್ ನಿಜ ಜೀವನ ಕಥೆಯೇ ಸಿನಿಮಾ

Actor Naresh - Actress Pavitra Lokesh - Matte Maduve Cinema

ಹಿರಿಯ ನಟ ನರೇಶ್ – ನಟಿ ಪವಿತ್ರ ಲೋಕೇಶ್ (Naresh Pavitra Lokesh), ಕಳೆದ ಕೆಲವು ವರ್ಷಗಳಿಂದ ಟಾಲಿವುಡ್‌ನಲ್ಲಿ ವೈರಲ್ ಆಗಿರುವ ಜೋಡಿ. ಸಿನಿಮಾದಲ್ಲಿ ಜೊತೆಯಾಗಿ ನಟಿಸಿ, ಹೊರಗೆ ಸುತ್ತಾಡುತ್ತಿದ್ದುದು ಸಖತ್ ವೈರಲ್ ಆಗಿದೆ. ನಂತರ ನರೇಶ್ ತನ್ನ ಮೂರನೇ ಹೆಂಡತಿಗೆ ಲೈವ್ ಆಗಿ ಸಿಕ್ಕಿಬೀಳುತ್ತಾರೆ, ಪವಿತ್ರ ಮತ್ತು ನರೇಶ್ ಒಟ್ಟಿಗೆ ಹೋಟೆಲ್‌ನಲ್ಲಿದ್ದಾಗ ಮೂರನೇ ಹೆಂಡತಿ ಅಲ್ಲಿಗೆ ಬಂದು ರಾದ್ದಾಂತ ಸೃಷ್ಟಿಯಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಸುದ್ದಿಯಲ್ಲಿ ಇದುವೇ ಆಗಿನ ಟ್ರೆಂಡ್ ಆಗಿತ್ತು.

ಖಳನಾಟನಾಗಿ ಅಭಿನಯಿಸುತ್ತಿದ್ದ ಶಶಿಕುಮಾರ್ ನಾಯಕ ನಟನಾಗಿದ್ದು ಹೇಗೆ ಗೊತ್ತಾ? ಧಿಡೀರ್ ಅವರ ಬೇಡಿಕೆ ಕುಸಿಯಲು ಕಾರಣವೇನು?

ನರೇಶ್-ಪವಿತ್ರ ಲೋಕೇಶ್ ಸುದ್ದಿಗಳು ಮತ್ತು ಗಾಸಿಪ್‌ಗಳಿಗೆ ಪ್ರತಿಕ್ರಿಯಿಸದಿದ್ದರೂ, ಅವರು ಹೊಸ ವರ್ಷ 2023 ರ ಸಂದರ್ಭದಲ್ಲಿ ಎಲ್ಲರಿಗೂ ಶಾಕ್ ನೀಡಿದರು ಮತ್ತು ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂದು ಘೋಷಿಸಿದರು. ಇತ್ತೀಚೆಗಷ್ಟೇ ನರೇಶ್ ‘ಮತ್ತೆ ಮದುವೆ’ ಸಿನಿಮಾವನ್ನು ಅನೌನ್ಸ್ ಮಾಡಿ ಗ್ಲಿಂಪ್ಸ್ ಬಿಡುಗಡೆ ಮಾಡಿ ಎಲ್ಲರಿಗೂ ಶಾಕ್ ನೀಡಿದ್ದರು.

ಇದೆಲ್ಲಾ ಸಿನಿಮಾ ಪ್ರಚಾರ ಎಂದು ಎಲ್ಲರೂ ಅಚ್ಚರಿ ಪಟ್ಟಿದ್ದರು. ಇತ್ತೀಚೆಗಷ್ಟೇ ಚಿತ್ರದ ಟೀಸರ್ ಬಿಡುಗಡೆಯಾಗಿದೆ (Matte Maduve Teaser). ಈ ಟೀಸರ್ ನೋಡಿದ ಎಲ್ಲರಿಗೂ ಆಶ್ಚರ್ಯವಾಗಿದೆ. ಏಕೆಂದರೆ ನರೇಶ್ ಜೀವನದಲ್ಲಿ ಇಷ್ಟು ದಿನಗಳನ್ನು ಈ ಟೀಸರ್ ನಲ್ಲಿ ತೋರಿಸಲಾಗಿದೆ (Life Story as a Cinema Story).

50 ವರ್ಷವಾದರೂ ನಟಿ ಸಿತಾರ ಮದುವೆಯಾಗದೆ ಯಾರಿಗಾಗಿ ಕಾಯುತ್ತಿದ್ದಾರೆ ಗೊತ್ತೇ? ಅಷ್ಟಕ್ಕೂ ಆತ ಯಾರು ಗೊತ್ತಾ?

ನರೇಶ್ – ಪವಿತ್ರ ಸುತ್ತಾಡುವುದು, ನರೇಶ್ ಮೂರನೇ ಪತ್ನಿ ಮಾಧ್ಯಮದ ಮುಂದೆ ಹೋಗುವುದು, ನರೇಶ್ – ಪವಿತ್ರ ಲೋಕೇಶ್ ಮೂರನೇ ಪತ್ನಿ ಹೋಟೆಲ್ ನಲ್ಲಿದ್ದಾಗ ಅಲ್ಲಿಗೆ ಬರುವುದು… ನರೇಶ್ ನಿಜ ಜೀವನದಲ್ಲಿ ನಡೆದ ಎಲ್ಲಾ ದೃಶ್ಯಗಳನ್ನು ಟೀಸರ್ ನಲ್ಲಿ ತೋರಿಸಲಾಗಿದೆ. ಹಾಗಾಗಿ ಈ ಟೀಸರ್ ನೋಡಿದವರು ನರೇಶ್ ಮತ್ತು ಪವಿತ್ರ ಅವರ ನೈಜ ಕಥೆಯನ್ನು ಸಿನಿಮಾ ಮಾಡಲಾಗುತ್ತಿದೆ ಎಂದು ಭಾವಿಸಿದರು.

ಭಕ್ತ ಪ್ರಹ್ಲಾದ ಚಿತ್ರಕ್ಕೆ ಅಪ್ಪು ಪಡೆದ ಸಂಭಾವನೆ ಎಷ್ಟು ಗೊತ್ತಾ? ತಿಳಿದರೆ ನಿಜಕ್ಕೂ ನೀವು ನಂಬೋದಿಲ್ಲ!

ತಮಿಳು ನಟಿ ವನಿತಾ ವಿಜಯ್ ಕುಮಾರ್ ಈ ಸಿನಿಮಾದಲ್ಲಿ ನರೇಶ್ ಅವರ ಮೂರನೇ ಪತ್ನಿಯಾಗಿ ನಟಿಸಿದ್ದಾರೆ. ಈ ಚಿತ್ರವನ್ನು ಪ್ರಮುಖ ನಿರ್ದೇಶಕ ಮತ್ತು ನಿರ್ಮಾಪಕ ಎಂಎಸ್ ರಾಜು ನಿರ್ದೇಶಿಸುತ್ತಿದ್ದರೆ ನರೇಶ್ ಸ್ವಂತವಾಗಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಮೇ ತಿಂಗಳಿನಲ್ಲಿಯೇ ಚಿತ್ರ ಬಿಡುಗಡೆಯಾಗಲಿದೆ ಎಂದು ಘೋಷಿಸಲಾಗಿದೆ. ಇದೀಗ ಈ ಟೀಸರ್ ವೈರಲ್ ಆಗಿದೆ (Teaser Goes Viral). ಮತ್ತು ನರೇಶ್ ಅವರ ಮೂರನೇ ಪತ್ನಿ ರಮ್ಯಾ ಇದಕ್ಕೆ ಪ್ರತಿಕ್ರಿಯಿಸುತ್ತಾರೋ ಕಾದು ನೋಡಬೇಕು.

Actor Naresh Pavitra Lokesh Matte Maduve Movie Release Date Announced

Related Stories