ತಮ್ಮ ಮುಂದಿನ ಜೀವನಕ್ಕಾಗಿ ಮಹತ್ತರ ನಿರ್ಧಾರ ತೆಗೆದುಕೊಂಡ ಮೇಘನಾ ರಾಜ್! ಏನನ್ನು ಮಾಡ ಹೊರಟಿದ್ದಾರೆ ಗೊತ್ತೇ?
ಸ್ನೇಹಿತರೆ, ಸ್ಯಾಂಡಲ್ ವುಡ್ (Sandalwood) ಯುವಸಾಮ್ರಾಟ್ ಚಿರಂಜೀವಿ ಸರ್ಜಾರವರು (Actor Chiranjeevi Sarja) ಅಗಲಿ ಜೂನ್ ತಿಂಗಳು ಬಂದರೆ ಮೂರು ವರ್ಷಗಳು ತುಂಬಿ ಹೋಗುತ್ತದೆ. ಇದರ ಬೆನ್ನಲ್ಲೇ ತಂದೆ-ತಾಯಿಯೊಂದಿಗೆ ಚರ್ಚಿಸಿ ಮೇಘನಾ ರಾಜ್ (Actress Meghana Raj) ಮುಂದಿನ ಜೀವನಕ್ಕಾಗಿ ಮಹತ್ವದ ನಿರ್ಧಾರವನ್ನು ತೆಗೆದು ಕೊಂಡಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದ (Social Media) ತುಂಬೆಲ್ಲಾ ಹರಿದಾಡತೊಡಗಿದೆ.
ಅಷ್ಟಕ್ಕೂ ಮೇಘನಾ ರಾಜ್ ಕೈಗೊಳ್ಳಲಿರುವ ಮುಂದಿನ ಕೆಲಸವಾದರೂ ಏನು ಎಂಬ ಈ ಮಾಹಿತಿಯನ್ನು ತಿಳಿದು ಕೊಳ್ಳಬೇಕಾದರೆ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಅಂದಿನ ಕಾಲಕ್ಕೆ ಡಾಕ್ಟರ್ ವಿಷ್ಣುವರ್ಧನ್ ಅವರು ನಾಗರಹಾವು ಸಿನಿಮಾಗೆ ಪಡೆದಂತಹ ಸಂಭಾವನೆ ಎಷ್ಟು ಗೊತ್ತಾ?
ಹೌದು ಸ್ನೇಹಿತರೆ ಸ್ಯಾಂಡಲ್ ವುಡ್ ಕ್ಯೂಟಸ್ಟ್ ಕಪಲ್ಸ್ ಎಂದೇ ಕರೆಸಿಕೊಳ್ಳುತ್ತಿದ್ದಂತಹ ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ಸುಖವಾಗಿ ಸಂಸಾರ ನಡೆಸುತ್ತಿದ್ದರು. ಈ ಮುದ್ದಾದ ಜೋಡಿ ಮೇಲೆ ಅದ್ಯಾರ ಕಣ್ಣು ಬಿತ್ತೋ ಗೊತ್ತಿಲ್ಲ ಮೇಘನಾ ಅವರನ್ನು ಚಿರು ಒಬ್ಬಂಟಿಯಾಗಿ ಬಿಟ್ಟು ಇಹಲೋಕ ತ್ಯಜಿಸಿಬಿಟ್ಟರು.
ಸದ್ಯ ಮೇಘನಾ ರಾಜ್ ಗೆ ಇರುವಂತಹ ಒಂದೇ ಒಂದು ಖುಷಿ ಎಂದರೆ ಅದು ಅವರ ಮಗ ರಾಯನ್ ರಾಜ್ ಸರ್ಜಾ. ಎರಡು ವರ್ಷಗಳ ಕಾಲ ತಮ್ಮ ಮುದ್ದು ಮಗನ ನಗುವಿನಲ್ಲಿ ತಮ್ಮ ನೋವನ್ನು ಮರೆಯುತ್ತಿರುವಂತಹ ಮೇಘನಾ ರಾಜ್ ತಮ್ಮ ಮಗನ ಲಾಲನೆ ಪಾಲನೆಯಲ್ಲಿ ತೊಡಗಿಕೊಂಡಿದ್ದರು.
ಆತ ಪ್ರತಿನಿತ್ಯ ಮಾಡುವಂತಹ ತುಂಟತನ ಹಾಗೂ ಸುಂದರ ಕ್ಷಣಗಳ ಫೋಟೋ ಹಾಗೂ ವಿಡಿಯೋಗಳನ್ನು ಕ್ಯಾಪ್ಚರ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ.
ಟೈಗರ್ ಪ್ರಭಾಕರ್ ಅವರ ಮೊದಲ ಸಿನಿಮಾ ಯಾವುದು? ಆ ಚಿತ್ರಕ್ಕೆ ಅವರು ಪಡೆದ ಸಂಭಾವನೆ ಎಷ್ಟು ಗೊತ್ತಾ?
ಇದರ ಜೊತೆ ಜೊತೆಗೆ ತತ್ಸಮ ತದ್ಭವ ಸಿನಿಮಾದ ಶೂಟಿಂಗ್ ಕೆಲಸಗಳಲ್ಲಿ ಭಾಗಿಯಾಗುತ್ತಿದ್ದಾರೆ. ಇನ್ನು ಮತ್ತೆ ಮೊದಲಿನಂತೆ ತೆರೆಗೆ ಮೇಲೆ ಚೆನ್ನಾಗಿ ಕಾಣಿಸಿಕೊಳ್ಳುವ ಸಲುವಾಗಿ ಮೇಘನಾ ರಾಜ್ ಪ್ರತಿನಿತ್ಯ ಜಿಮ್ನಲ್ಲಿ ಪ್ರತಿನಿತ್ಯ ತಪ್ಪದೆ ವರ್ಕೌಟ್ ಮಾಡಿ ತೂಕ ಇಳಿಸಿಕೊಳ್ಳುತ್ತಿದ್ದಾರೆ
ಕನ್ನಡ (Kannada Cinema) ಮತ್ತು ಮಲಯಾಳಂ ಸಿನಿಮಾದಲ್ಲಿ ಮತ್ತೆ ನಾಯಕ ನಟಿಯಾಗಿ ಮಿಂಚಲಿದ್ದಾರೆ. ಈ ಒಂದು ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ಕೂಡ ಬಣ್ಣ ಹಚ್ಚುತ್ತಿದ್ದು, ಕಡಕ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಮೇಘನಾ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ.
ಪನ್ನಗ ಭರಣ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವಂತಹ ಈ ಒಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದಿಂದ ಮೇಘನಾ ರಾಜ್ ಮತ್ತೆ ಸಿನಿ ಜೀವನಕ್ಕೆ ಕಮ್ ಬ್ಯಾಕ್ ಮಾಡುವ ಮೂಲಕ ಅಭಿಮಾನಿಗಳಿಗೆ ಸಂತಸದ ಸುದ್ದಿ ಒಂದನ್ನು ನೀಡಿದ್ದಾರೆ.
ಇನ್ನು ನೋಡಲು ಚಿಕ್ಕ ಹುಡುಗಿಯಂತೆ ಕಾಣುವ ರಶ್ಮಿಕಾ ಮಂದಣ್ಣ ಅವರ ನಿಜವಾದ ವಯಸ್ಸೆಷ್ಟು ಗೊತ್ತೇ?
Actress Meghana Raj took a big decision for her future life