ಮತ್ತೆ ಸೀರಿಯಲ್ ಲೋಕಕ್ಕೆ ಕಾಲಿಟ್ಟ ದೀಪಿಕಾ ದಾಸ್! ಯಾವ ಧಾರಾವಾಹಿಯಲ್ಲಿ ಬಣ್ಣ ಹಚ್ಚಲಿದ್ದಾರೆ ಗೊತ್ತಾ?

ಕನ್ನಡ ಸಿನಿ ಪ್ರೇಕ್ಷಕರನ್ನು ಹಲವಾರು ವರ್ಷಗಳ ಕಾಲ ರಂಜಿಸಿ ಬಹುದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಸಂಪಾದಿಸಿಕೊಂಡಿದ್ದಂತಹ ದೀಪಿಕಾ ದಾಸ್ (Deepika Das) ಅಲಿಯಾಸ್ ನಾಗಿಣಿ ಅವರು ಇದೀಗ ಮತ್ತೆ ಕಿರುತೆರೆಗೆ ಕಂಬ್ಯಾಕ್ ಮಾಡುತ್ತಿರುವಂತಹ ವಿಶೇಷವಾದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

Bengaluru, Karnataka, India
Edited By: Satish Raj Goravigere

Deepika Das: ಸ್ನೇಹಿತರೆ ತಮ್ಮ ಅಮೋಘ ಅಭಿನಯ ಹಾಗೂ ಮಾದಕ ಸೌಂದರ್ಯದ ಮೂಲಕವೇ ಕನ್ನಡ ಸಿನಿ ಪ್ರೇಕ್ಷಕರನ್ನು ಹಲವಾರು ವರ್ಷಗಳ ಕಾಲ ರಂಜಿಸಿ ಬಹುದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಸಂಪಾದಿಸಿಕೊಂಡಿದ್ದಂತಹ ದೀಪಿಕಾ ದಾಸ್ (Deepika Das) ಅಲಿಯಾಸ್ ನಾಗಿಣಿ ಅವರು ಇದೀಗ ಮತ್ತೆ ಕಿರುತೆರೆಗೆ ಕಂಬ್ಯಾಕ್ ಮಾಡುತ್ತಿರುವಂತಹ ವಿಶೇಷವಾದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಈ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ (Zee Kannada TV) ಪ್ರಸಾರವಾಗುತ್ತಿದ್ದ ನಾಗಿಣಿ ಎಂಬ ಸೀರಿಯಲ್ ನಲ್ಲಿ (Nagini TV Serial) ಹಲವಾರು ವರ್ಷಗಳ ಕಾಲ ಸಕ್ರಿಯರಾಗಿ ನಟಿಸುತ್ತಾ ನಾಗಕನ್ನಿಕೆಎಂದೇ ಪ್ರಖ್ಯಾತಿ ಪಡೆದಿದ್ದರು. ಇದಾದ ಹಲವು ವರ್ಷಗಳ ಬಳಿಕ ಮತ್ತೊಮ್ಮೆ ದೀಪಿಕ ದಾಸ್ ಕಿರುತೆರೆಗೆ ಕಂಬ್ಯಾಕ್ ಮಾಡುವುದಾಗಿ ತಿಳಿಸಿದ್ದಾರೆ.

Deepika Das Come Back with Antarapata Kannada New Serial

ಆಪ್ತಮಿತ್ರ ಸಿನಿಮಾ ನಂತರ ದ್ವಾರಕೀಶ್ ಮತ್ತು ವಿಷ್ಣುವರ್ಧನ್ ದೂರಾಗಿದ್ದು ಏಕೆ? ಇವರ ಸ್ನೇಹದಲ್ಲಿ ಬಿರುಕು ಮೂಡಲು ಕಾರಣ ಗೊತ್ತಾ?

ಅಷ್ಟಕ್ಕೂ ಯಾವ ಸೀರಿಯಲ್ ಮೂಲಕ ದೀಪಿಕಾ ಮತ್ತೆ ನಮ್ಮೆಲ್ಲರನ್ನು ರಂಜಿಸಲು ಬರುತ್ತಿದ್ದಾರೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ ಸೀರಿಯಲ್ ಮುಗಿದು ಸ್ವಲ್ಪ ದಿನಗಳ ಕಾಲ ಬ್ರೆಕ್ ಪಡೆದು ಅನಂತರ ಕಿಚ್ಚ ಸುದೀಪ್ (Kiccha Sudeep) ಅವರ ಸಾರಥ್ಯದಲ್ಲಿ ಮೂಡಿಬರುವಂತಹ ಬಿಗ್ ಬಾಸ್ 8 ಮತ್ತು 9ರಲ್ಲಿ ಸ್ಪರ್ಧಿಸಿ ತಮ್ಮ ಸ್ಟ್ರಾಂಗ್ ಆದ ಆಟಗಾರಿಕೆ ಹಾಗೂ ಸ್ಟಾರ್ಟರ್ಜಿಗಳ ಮೂಲಕ ಅದೆಷ್ಟೋ ಕನ್ನಡಿಗರ ಹೃದಯ ಗೆದ್ದಿದಂತಹ ದೀಪಿಕಾ ದಾಸ್ ಬಿಗ್ ಬಾಸ್ ಮುಗಿದ ಸ್ವಲ್ಪ ದಿನಗಳ ಕಾಲ ವಿದೇಶಗಳನ್ನು ಸುತ್ತಿ ಬಹಳ ಎಂಜಾಯ್ ಮಾಡಿದರು.

ಅಂದು ವಿಷ್ಣು ಸರ್ ಕಪಾಳಕ್ಕೆ ಹೊಡೆದು ಬಿಟ್ಟಿದ್ದ ಅವಿನಾಶ್, ಆ ನಂತರ ವಿಷ್ಣುವರ್ಧನ್ ಅಭಿಮಾನಿಗಳು ಮಾಡಿದ್ದೇನು ಗೊತ್ತಾ?

ಇದೀಗ ಮತ್ತೆ ತಮ್ಮ ವೃತ್ತಿ ಬದುಕಿಗೆ ಮರಳಿರುವ ದೀಪಿಕಾ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಅಂತರ್ಪಟ ಎಂಬ ಹೊಸ ಧಾರವಾಹಿಯಲ್ಲಿ (Antarapata Kannada New Serial) ನಟಿಸುತ್ತಿದ್ದಾರೆ.

Deepika Das

ಹೌದು ಗೆಳೆಯರೇ ದೀಪಿಕ ದಾಸ್ ಈ ಧಾರಾವಾಹಿಯಲ್ಲಿ ಸಮೀರ ಎಂಬ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದು ಅಂತರ್ಪಟ ಧಾರಾವಾಹಿಗೆ ಬೆಂಬಲಿಸಿ ಎಂದು ತಮ್ಮ ಸಾಮಾಜಿಕ ಜಾಲತಾಣಗಳಾದ ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ನಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ಇದೇ ಸೋಮವಾರ ಅಂದರೆ ಏಪ್ರಿಲ್ 24 ರಿಂದ ರಾತ್ರಿ 8.30 ಕ್ಕೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿದೆ. ಇದರ ಜೊತೆ ಜೊತೆಗೆ ದೀಪಿಕಾ ಅವರು ಪಾಯಲ್ ಎಂಬ ಸಿನಿಮಾದಲ್ಲೂ ನಟಿಸುತ್ತಿದ್ದು, ಇದರ ಶೂಟಿಂಗ್ ಸಲುವಾಗಿ ದೇಶ ವಿದೇಶಗಳನ್ನು ಸುತ್ತುತ್ತಿರುತ್ತಾರೆ.

15 ವರ್ಷವಿದ್ದಾಗ 35 ವರ್ಷದ ನಟನನ್ನು ಮದುವೆಯಾದ ನಟಿ ಸರಿತಾ ಈಗ ಎಲ್ಲಿದ್ದಾರೆ ಹೇಗಿದ್ದಾರೆ ಗೊತ್ತಾ?

ನಾಗಿಣಿ ಧಾರಾವಾಹಿ ಬಿಗ್ ಬಾಸ್ ಹಾಗೂ ಡ್ಯಾನ್ಸ್ ಶೋಗಳ ಮೂಲಕ ಕಿರುತೆರೆಯಲ್ಲಿ ಹೆಸರುವಾಸಿಯಾಗಿರುವಂತಹ ದೀಪಿಕಾ ಮತ್ತೊಮ್ಮೆ ಕಂಬ್ಯಾಕ್ ಮಾಡಿರುವುದು ಅಭಿಮಾನಿಗಳಿಗೆ ಸಂತಸವನ್ನು ತಂದಿದೆ.

Deepika Das Come Back with Antarapata Kannada New Serial

(Image Source: Times Of India)