ಲೋಕೇಶ್ ಹಾಗೂ ವಿಷ್ಣುದಾದನ ಜುಗಲ್ ಬಂದಿಯ ಭೂತಯ್ಯನ ಮಗ ಅಯ್ಯು ಸಿನಿಮಾ ಆಗಿನ ಕಾಲಕ್ಕೆ ಮಾಡಿದ ಕಲೆಕ್ಷನ್ ಎಷ್ಟು ಗೊತ್ತಾ?
Bhootayyana Maga Ayyu: ಕನ್ನಡ ಚಿತ್ರ ಬದುಕಿನಲ್ಲಿ ಮಹತ್ತರವಾದ ಸಂಚಲನ ಮೂಡಿಸಿದಂತಹ ಸಿನಿಮಾ ಭೂತಯ್ಯನ ಮಗ ಅಯ್ಯು ಮಾಡಿದಂತಹ ಒಟ್ಟು ಕಲೆಕ್ಷನ್ (Movie Collections) ಎಷ್ಟು ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ನಾವಿವತ್ತು ಈ ಪುಟದ ಮೂಲಕ ತಿಳಿಸ ಹೊರಟಿದ್ದೇವೆ.
ನಿಮಗೂ ಈ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲವಿದ್ದಲ್ಲಿ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಗೆಳೆಯರೇ ಲೋಕೇಶ್ (Actor Lokesh) ಅವರಂತಹ ಶ್ರೇಷ್ಠ ಕಲಾವಿದರ ಅಭಿನಯದಲ್ಲಿ ಮೂಡಿಬಂದಂತಹ ಭೂತಯ್ಯನ ಮಗ ಅಯ್ಯು ಸಿನಿಮಾವು ಶ್ರೀಮಂತರ ದಬ್ಬಾಳಿಕೆಯನ್ನು ಬಿಂಬಿಸುವಂತೆ ಸಿನಿಮಾ.
ಮದುವೆಗೆ ಬಂದಿದ್ದು 150 ಗೆಸ್ಟ್, ಖರ್ಚಾಗಿದ್ದು ಕೋಟಿ ಕೋಟಿ! ಅಭಿಷೇಕ್ ಅವಿವಾ ಅದ್ಧೂರಿ ವಿವಾಹದ ಲೆಕ್ಕ ಇಲ್ಲಿದೆ
ನಿರ್ದೇಶಕನಾಗಿ ಸಿದ್ಧಲಿಂಗಯ್ಯನವರು ಕೆಲಸ ಮಾಡಿದರೆ ಎನ್ ವೀರಸ್ವಾಮಿಯವರು (N Veeraswamy) ಹಣ ಹೂಡಿಕೆ ಮಾಡಿದ್ದರು. ಅದಂತೆ ಚಿತ್ರಕಥೆಯನ್ನು ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರಿಂದ ಎರವಲು ಪಡೆಯಲಾಯಿತು.
ಸಿನಿಮಾದಲ್ಲಿ ಡಾಕ್ಟರ್ ವಿಷ್ಣುವರ್ಧನ್ (Actor Vishnuvardhan), ಲೋಕೇಶ್, ಎಂಪಿ ಶಂಕರ್, ಭವಾನಿ ದಿನೇಶ್, ಬಿ ಎಂ ವೆಂಕಟೇಶ್, ಧೀರೇಂದ್ರ ಗೋಪಾಲ್, ಲೋಕನಾಥ್, ಜಯಮಾಲಾ, ಪವಿತ್ರ ಜೋಶಾಯಿ ಸೇರಿದಂತೆ ಅದ್ಭುತ ಕಲಾವಿದರು ಪಾತ್ರಕ್ಕೆ ಜೀವ ತುಂಬಿದರು.
ಕಷ್ಟದಲ್ಲೂ ಎಲ್ಲರನ್ನೂ ನಗಿಸುತ್ತಿದ್ದ ಹಾಸ್ಯ ಚಕ್ರವರ್ತಿ ನರಸಿಂಹರಾಜು ಅವರ ನಿಜ ಜೀವನ ಹೇಗಿತ್ತು ಗೊತ್ತಾ?
ಜಿಕೆ ವೆಂಕಟೇಶ್ ಸಂಗೀತ ಸಂಯೋಜನೆ ಹಾಗೂ ಡಿ ವಿ ರಾಜಾರಾಮ್ ಅವರ ಕ್ಯಾಮೆರಾದ ಕೈಚಳಕ ಸಿನಿಮಾದಲ್ಲಿ ಮೂಡಿ ಬಂದಿತ್ತು. ಜೈನ್ ಕಂಬೈನ್ಡ್ಸ್ ನಿರ್ಮಾಣ ಸಂಸ್ಥೆಯಲ್ಲಿ ತಯಾರದಂತಹ ಈ ಒಂದು ಚಿತ್ರವನ್ನು 1974 ರಲ್ಲಿ ಬಿಡುಗಡೆ ಮಾಡಲಾಯಿತು.
ಹೀಗೆ ತರೆ ಕಂಡ ಕೆಲವೇ ಕೆಲವು ದಿನಗಳಲ್ಲಿ ಕಾದಂಬರಿ ಆಧಾರಿತ ಈ ಸಿನಿಮಾವು ಎಲ್ಲಾ ದಾಖಲೆಗಳನ್ನು ಪುಡಿಪುಡಿ ಮಾಡಿ ಕನ್ನಡ ಚಿತ್ರರಂಗದ (Kannada Film Industry) ವಿಶಿಷ್ಟ ಸಿನಿಮಾಗಳ ಪಟ್ಟಿಗೆ ಸೇರಿತು.
ಹೌದು ಗೆಳೆಯರೇ ಶ್ರೀಮಂತರ ದಬ್ಬಾಳಿಕೆಯನ್ನು ಬಿಂಬಿಸುವಂತಹ ಈ ಒಂದು ಸಿನಿಮಾದಲ್ಲಿ ಅಯ್ಯು ಮತ್ತು ಗುಲ್ಲ ಎಂಬ ಇಬ್ಬರು ಗ್ರಾಮಸ್ಥರ ನಡುವಿನ ದ್ವೇಷ ಮತ್ತು ಅವರು ತಮ್ಮ ಸಂಬಂಧವನ್ನು ಹೇಗೆ ಸರಿಪಡಿಸಿಕೊಳ್ಳುತ್ತಾರೆ ಎಂಬುದರ ಸುತ್ತ ಚಿತ್ರಕಥೆ ಸುತ್ತುತ್ತಿರುತ್ತದೆ.
ಡಾಕ್ಟರ್ ವಿಷ್ಣುವರ್ಧನ್ ಅವರನ್ನು ಗುಲ್ಲ ಪಾತ್ರದಲ್ಲಿ ಹಾಗೂ ಭೂತಯ್ಯನ ಮಗ ಶಾಂಭಯ್ಯ ಅಯ್ಯು ಎಂಬ ಪಾತ್ರದಲ್ಲಿ ಲೋಕೇಶ್ ಅವರು ಅಭಿನಯಿಸಿ ಜನಮನ ಗೆದ್ದಿದ್ದರು.
ಹೀಗೆ ಆಗಿನ ಕಾಲದ ಸಿನಿ ಪ್ರೇಕ್ಷಕರ ಮನಸ್ಸನ್ನು ಸೆಳೆಯುವ ಕಥಾವಸ್ತುವನ್ನು ಹೊಂದಿದ್ದಂತಹ ಈ ಚಿತ್ರವು ಫೆಬ್ರವರಿ 2ನೇ ತಾರೀಕು 1974 ರಂದು ತೆರೆಕಂಡು ಬರೋಬ್ಬರಿ ನೂರು ದಿನಗಳಿಗಿಂತ ಹೆಚ್ಚು ಕಾಲ ಚಿತ್ರಮಂದಿರಗಳಲ್ಲಿ ರಾರಾಜಿಸಿತು.
ಅಲ್ಲದೆ ಲೋಕೇಶ್ ಅವರ ಅದ್ಭುತ ಅಭಿನಯಕ್ಕೆ ಅತ್ಯುತ್ತಮ ನಟ ಪ್ರಶಸ್ತಿಯನ್ನುತಮ್ಮ ಮುಡಿಗೇರಿಸಿಕೊಂಡರು. ಹೀಗೆ ಸಿನಿಮಾದಲ್ಲಿ ಅಭಿನಯಿಸಿದಂತಹ ಪ್ರತಿಯೊಬ್ಬ ಕಲಾವಿದರಿಗೂ ಭೂತಯ್ಯನ ಮಗ ಅಯ್ಯು ಚಿತ್ರ ಒಳ್ಳೆಯ ಹೆಸರನ್ನು ತಂದುಕೊಟ್ಟಿತ್ತು.
ಕೇವಲ ಎಂಟು ಲಕ್ಷದ ಬಜೆಟ್ನಲ್ಲಿ ತಯಾರದಂತಹ ಈ ಒಂದು ಸಿನಿಮಾ ಆಗಿನ ಕಾಲಕ್ಕೆ ಬರೋಬ್ಬರಿ 25 ರಿಂದ 30 ಲಕ್ಷ ಹಣವನ್ನು ಗಳಿಕೆ ಮಾಡುವ ಮೂಲಕ ಅಂದಿನ ಚಿತ್ರರಂಗದಲ್ಲಿ ಇದ್ದಂತಹ ಎಲ್ಲಾ ದಾಖಲೆಗಳನ್ನು ಅಳಿಸಿ ಹಾಕಿತ್ತು.
Do you know the collection of Bhootayyana Maga Ayyu Kannada Movie at that time
Our Whatsapp Channel is Live Now 👇