Dr Rajkumar’s favorite person: ಸ್ನೇಹಿತರೆ ಕನ್ನಡ ಸಿನಿಮಾ ರಂಗದ ನಟಸಾರ್ವಭೌಮ, ಗಂಧದಗುಡಿಯ ಗಾಡ್ ಫಾದರ್ ಎಂದೇ ಕರೆಯಲ್ಪಡುವಂತಹ ಡಾಕ್ಟರ್ ರಾಜಕುಮಾರ್ (Dr Rajkumar) ಅವರನ್ನು ಪ್ರೀತಿಸುವವರ ಸಂಖ್ಯೆ ಕೋಟಿಗೂ ಮಿಗಿಲಾದದ್ದು, ಈಗಲೂ ಕೂಡ ಡಾಕ್ಟರ್ ರಾಜಕುಮಾರ್ ಅವರ ಹೆಸರು ಹೇಳುತ್ತಿದ್ದ ಹಾಗೆ ಅಭಿಮಾನಿಗಳು ಪ್ರತಿಯೊಂದು ಮೂಲೆ ಮೂಲೆಯಿಂದಲೂ ತುಂಬು ಹೃದಯದ ಪ್ರೀತಿಯನ್ನು ತೋರುತ್ತಾರೆ.
ಇಂತಹ ವಿಶೇಷವಾದ ಅಭಿಮಾನಿ ಬಳಗವನ್ನು (Dr Rajkumar Fans) ಸಂಪಾದಿಸಿಕೊಂಡಿರುವಂತಹ ಅಣ್ಣಾವ್ರು ತಮ್ಮ ಕುಟುಂಬ ಹಾಗೂ ಅಭಿಮಾನಿಗಳ ಮೇಲೆ ಎಷ್ಟು ತುಂಬು ಹೃದಯದ ಪ್ರೀತಿಯನ್ನು ತೋರುತ್ತಿದ್ದರು ಎಂಬುದು ನಮಗೆಲ್ಲಾ ತಿಳಿದಿದೆ.
ಅಷ್ಟೇ ವಿಶೇಷವಾದ ಭಾಂದವ್ಯವನ್ನು ತಮ್ಮ ಆತ್ಮೀಯ ಸ್ನೇಹಿತರೊಂದಿಗೆ ಬೆಳೆಸಿಕೊಂಡಿದ್ದರು. ಹೀಗಿರುವಾಗ ನಾವಿವತ್ತು ಡಾ. ರಾಜಕುಮಾರ್ ಬಹಳಾನೆ ಇಷ್ಟಪಡುತ್ತಿದ್ದಂತಹ ವ್ಯಕ್ತಿ ಯಾರು? ಯಾರೊಂದಿಗೆ ಅಣ್ಣಾವ್ರು ಎಲ್ಲ ಮಾಹಿತಿಯನ್ನು ಹೇಳಿಕೊಳ್ಳಲು ಇಷ್ಟಪಡುತ್ತಿದ್ದರು ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ..
ಹೌದು ಗೆಳೆಯರೇ ತಮ್ಮ ಮನೋಜ್ಞ ಹಾಗೂ ಅದ್ಭುತ ಅಭಿನಯದ ಮೂಲಕ ಕನ್ನಡ ಸಿನಿಮಾ (Kannada Cinema Industry) ರಂಗದ ಹಿರಿಮೆಯನ್ನು ಮತ್ತೊಂದು ಲೋಕಕ್ಕೆ ಕೊಂಡೋಯ್ಯುವಲ್ಲಿ ಮೈಲುಗಲ್ಲನ್ನು ಹಾಕಿದಂತಹ ಡಾಕ್ಟರ್ ರಾಜಕುಮಾರ್ ಒಂದು ವರ್ಷಕ್ಕೆ ಬರೋಬ್ಬರಿ 16 ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಆಗಿನ ಕಾಲದ ಪ್ರೇಕ್ಷಕರಿಗೆ ಜಬರ್ದಸ್ತ್ ಮನೋರಂಜನೆಯನ್ನು ನೀಡುತ್ತಿದ್ದರು. ಇನ್ನು ಡಾಕ್ಟರ್ ರಾಜಕುಮಾರ್ ಅಭಿನಯಿಸುತ್ತಿದ್ದಂತಹ ಸಿನಿಮಾಗಳೆಲ್ಲವು ಜನರಿಗೆ ಮಾದರಿಯಾಗುವಂತಿರುತ್ತಿತ್ತು.
ತಮ್ಮ ಸಿನಿಮಾಗಳಲ್ಲಿ ಎಂದಿಗೂ ರಾಜಕುಮಾರ್ ಸಿಗರೇಟ್ ಸೇದುವುದನ್ನು ಆಗಲಿ ಅಥವಾ ಕುಡಿಯುವುದನ್ನು ಮಾಡುತ್ತಿರಲಿಲ್ಲ. ಇನ್ನು ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ರಾಜಕುಮಾರ್ ತಮ್ಮ ಪ್ರತಿ ಹೆಜ್ಜೆಯಲ್ಲಿಯು ಪಾರ್ವತಮ್ಮನವರ ಸಪೋರ್ಟ ಕೇಳುತ್ತಿದ್ದರು… ಅದರಂತೆ ಪಾರ್ವತಮ್ಮನವರು ಕೂಡ ತಮ್ಮ ಗಂಡನಿಗೆ ಏನು ಇಷ್ಟವಾಗುತ್ತದೆ? ಯಾವುದು ಇಷ್ಟವಾಗುವುದಿಲ್ಲ? ಹಾಗೂ ಅವರು ಯಾವ ಪಾತ್ರದಲ್ಲಿ ಅಭಿನಯಿಸಿದರೆ ಚೆನ್ನಾಗಿರುತ್ತೆ ಎಂಬುದನ್ನು ಗ್ರಹಿಸುವ ಶಕ್ತಿ ಇತ್ತು.
ಇನ್ನು ರಾಜಕುಮಾರ್ ಅಪಾರ ಸ್ನೇಹಿತರ ಸಂಖ್ಯೆಯನ್ನು ಹೊಂದಿದ್ದರು ಕೂಡ ಅವರಿಗೆ ಚೀ ಉದಯ್ ಶಂಕರ್ (Chi Udayashankar) ಅವರೆಂದರೆ ಎಲ್ಲಿಲ್ಲದ ಪ್ರೀತಿ ಹಾಗೂ ಬಾಂಧವ್ಯವಂತೆ. ಹೌದು ಗೆಳೆಯರೇ ಅವರು ಬರೆಯುತ್ತಿದ್ದಂತಹ ಹಾಡಿಗೆ ಡಾಕ್ಟರ್ ರಾಜಕುಮಾರ್ ಮನಸ್ಸೋತ್ತಿದ್ದರು.
ಅದರಲ್ಲೂ ಗುರು ರಾಘವೇಂದ್ರ ಸ್ವಾಮಿಯ ಹಾಡುಗಳೆಂದರೆ ರಾಜಕುಮಾರ್ ಅವರಿಗೆ ಪಂಚಪ್ರಾಣ. ಹೀಗಾಗಿ ಚಿ. ಉದಯಶಂಕರ್ ಅವರು ಅಣ್ಣಾವ್ರಿಗಾಗಿ ಅದೆಷ್ಟೋ ದೇವರ ಪೂಜ್ಯ ಭಾವದ ಹಾಡುಗಳನ್ನು ಮಾಡಿದ್ದಾರೆ.
ಮೇಘನಾ ರಾಜ್ ಅವರ ಹೊಸ ಸಿನಿಮಾದಲ್ಲಿ ನಟಿಸಲು ಪ್ರಜ್ವಲ್ ದೇವರಾಜ್ ಕೇಳಿ ಪಡೆದ ಸಂಭಾವನೆ ಎಷ್ಟು ಗೊತ್ತಾ?
ಅಲ್ಲದೆ ಚೀ ಉದಯ್ ಶಂಕರ್ ಅವರು ಅಣ್ಣವರಿಗಾಗಿ ಯಾವುದಾದರೂ ಕಥೆ ಸಿದ್ಧಪಡಿಸಿದ್ದಾರೆ ಎಂಬ ಮಾಹಿತಿ ತಿಳಿದರೆ ಸಾಕು ಹಿಂದೆ ಮುಂದೆ ನೋಡದೆ ಅಣ್ಣಾವ್ರು ಆ ಒಂದು ಸಿನಿಮಾದಲ್ಲಿ ಅಭಿನಯಿಸಿ ಸಿನಿಮಾವನ್ನು ಗೆಲ್ಲಿಸಿ ಕೊಡುತ್ತಿದ್ದರು. ಇಂತಹ ಮಧುರ ಬಾಂಧವ್ಯವನ್ನು ಅಣ್ಣಾವ್ರು ಹಾಗು ಉದಯಶಂಕರ್ ಅವರು ಹೊಂದಿದ್ದರು ಎಂದರೆ ತಪ್ಪಾಗಲಾರದು.
Do you know who is Dr Rajkumar’s favorite person
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.