ಯಾರಿಗೂ ಕಾಯದಂತಹ ಕ್ರೇಜಿ ಸ್ಟಾರ್ ರವಿಚಂದ್ರನ್ ಅಂದು ನಟಿ ಸೌಂದರ್ಯಗಾಗಿ ಹಗಲು ರಾತ್ರಿ ಎನ್ನದೆ ಕಾದಿದ್ಯಾಕೆ ಗೊತ್ತಾ?
ರವಿಚಂದ್ರನ್ ಮತ್ತು ಸೌಂದರ್ಯವರ ಕಾಂಬಿನೇಷನಲ್ಲಿ ಮೂಡಿ ಬಂದಿದ್ದಂತಹ ಸಿಪಾಯಿ ಸಿನಿಮಾದ 'ಬಂಗಾರದ ಬೊಂಬೆ ನನ್ನ ಹಾಡು ಕೇಳಮ್ಮ..' ಸಿನಿಮಾದ ಕೆಲ ದೃಶ್ಯಗಳು ಸರಿಯಾಗಿ ಮೂಡಿ ಬಂದಿರಲಿಲ್ಲ.
ಕನ್ನಡ ಸಿನಿಮಾ ರಂಗ (Kannada Film Industry) ಕಂಡಂತಹ ಸರ್ವ ಶ್ರೇಷ್ಠ ಕಲಾವಿದರಲ್ಲಿ ನಟ ರವಿಚಂದ್ರನ್ (Actor Ravichandran) ಅವರು ಕೂಡ ಒಬ್ಬರು. ಕೇವಲ ನಟನೆಯಲ್ಲಿ ಮಾತ್ರವಲ್ಲದೆ ನಿರ್ದೇಶನ ಹಾಗೂ ನಿರ್ಮಾಣದಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡು ಹಲವು ದಶಕಗಳಿಂದ ತಮ್ಮದೇ ಆದ ವಿಶೇಷ ಕೊಡುಗೆಯನ್ನು ಸ್ಯಾಂಡಲ್ ವುಡ್ ಗೆ (Sandalwood) ನೀಡಿದ್ದಾರೆ.
ಹೀಗಿರುವಾಗ ಯಾರಿಗೂ ಕಾಯದಂತಹ ರವಿಚಂದ್ರನ್ ಅವರು ಅದೊಂದು ದಿನ ಆ ಸ್ಟಾರ್ ನಟಿಗಾಗಿ ಹಗಲು ರಾತ್ರಿ ಎನ್ನದೆ ಕಾದರಂತೆ. ಹಾಗಾದ್ರೆ ಆ ನಟಿ ಯಾರು? ಯಾತಕ್ಕಾಗಿ ರವಿಚಂದ್ರನ್ ಅವರು ಆಕೆಯ ಕುರಿತು ಆಲೋಚನೆ ಮಾಡಿದರು? ಎಂಬ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಗೆಳೆಯರೇ ರವಿಚಂದ್ರನ್ ಅವರೊಳಗೆ ಅದೆಂತಹ ಅದ್ಭುತ ಕಲೆಗಾರನಿದ್ದನು ಎಂಬುದನ್ನು ನಾವು ಅವರ ಯಶಸ್ವಿ ಸಿನಿಮಾಗಳ ಮೂಲಕ ಕಾಣಬಹುದು.
ಹೀಗೆ ತಮ್ಮ ಸಿನಿಮಾದಲ್ಲಿ ಯಾವುದಾದರೂ ಒಂದು ಸೀನ್ ಸರಿಯಾಗಿ ಬರದೆ ಹೋದರು ಅದನ್ನು 10 ಬಾರಿಯಲ್ಲ ನೂರುಬಾರಿಯಾದರೂ, ರಿಟೆಕ್ ಮಾಡಿ ಅದನ್ನು ಸರಿಪಡಿಸುವವರೆಗೂ ರವಿಚಂದ್ರನ್ ಅವರಿಗೆ ಸಮಾಧಾನ ಇರುತ್ತಿರಲಿಲ್ಲ.
ಹೀಗಾಗಿ ತಮ್ಮ ಸಿನಿಮಾದಲ್ಲಿ ಅದೆಂತಹ ಸ್ಟಾರ್ ಕಲಾವಿದರು ಇದ್ದರೂ ಕೂಡ ಯಾವುದಕ್ಕೂ ರವಿಚಂದ್ರನ್ ಅವರು ಕೇರ್ ಮಾಡದೆ ಸಿನಿಮಾದ ಕ್ವಾಲಿಟಿ ಮೇಲೆ ಹೆಚ್ಚಿನ ಮಹತ್ವ ನೀಡುತ್ತಿದ್ದರು.
ಹೀಗಿರುವಾಗ ರವಿಚಂದ್ರನ್ ಮತ್ತು ಸೌಂದರ್ಯವರ (Actress Soundarya) ಕಾಂಬಿನೇಷನಲ್ಲಿ ಮೂಡಿ ಬಂದಿದ್ದಂತಹ ಸಿಪಾಯಿ ಸಿನಿಮಾದ (Sipayi Cinema) ‘ಬಂಗಾರದ ಬೊಂಬೆ ನನ್ನ ಹಾಡು ಕೇಳಮ್ಮ..’ ಸಿನಿಮಾದ ಕೆಲ ದೃಶ್ಯಗಳು ಸರಿಯಾಗಿ ಮೂಡಿ ಬಂದಿರಲಿಲ್ಲ.
ಹೀಗಾಗಿ ಚಿತ್ರೀಕರಣವೆಲ್ಲ ಮುಗಿದ ನಂತರ ಆ ಸಿನಿಮಾದ ಕೆಲ ಸೀನ್ಗಳನ್ನು ನೋಡುತ್ತಿದ್ದಂತಹ ರವಿಚಂದ್ರನ್ ಅವರು ಇದರಲ್ಲಿ ಏನೋ ಕೊರತೆ ಇದೆ ಎಂಬುದನ್ನು ಮನದಟ್ಟು ಮಾಡಿಕೊಂಡು ತಕ್ಷಣವೇ ಸೌಂದರ್ಯ ಅವರಿಗೆ ಕರೆ ಮಾಡಿ ಕೆಲವೇ ಕೆಲವು ದಿನಗಳ ಕಾಲ ಡೇಟ್ಸ್ ನೀಡುವಿರಾ? ಎಂದು ಕೇಳಿದ್ದರಂತೆ.
ಕರ್ಪೂರದ ಗೊಂಬೆ ಸಿನಿಮಾ ಖ್ಯಾತಿಯ ನಟಿ ಶ್ವೇತಾ ಅವರ ಬಾಳಿನ ದುರಂತ ಕಥೆ! ಈಗಿನ ಅವರ ನಿಜ ಜೀವನ ಹೇಗಿದೆ ಗೊತ್ತಾ?
ಹಾಡಿನ ಕೆಲ ಸೀನ್ಗಳನ್ನು ಅಷ್ಟು ಆಕರ್ಷಕವಾಗಿಲ್ಲ, ಈ ಸಿನ್ ಗಳನ್ನು ಮತ್ತೆ ಚಿತ್ರೀಕರಿಸಬೇಕು ಎಂದು ಕೇಳಿದರಂತೆ… ಆದರೆ ಆ ಒಂದು ಕಾಲಘಟ್ಟದಲ್ಲಿ ನಟಿ ಸೌಂದರ್ಯ ಅವರು ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಹಿಂದಿ ಸೇರಿದಂತೆ ಹಲವಾರು ಸಿನಿಮಾ ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಾ ಉತ್ತುಂಗದ ಪಿಕ್ನಲ್ಲಿ ಇರುತ್ತಾರೆ. ಹೀಗಾಗಿ ರವಿಚಂದ್ರನ್ ಅವರ ಸಿನಿಮಾಗೆ ನೀಡಿದಂತಹ ಡೇಟ್ಸ್ ಮುಗಿಸಿ ಸಿನಿಮಾ ಕೆಲಸಗಳಲ್ಲಿ ಸೌಂದರ್ಯ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.
ಅಂತಹ ಸಂದರ್ಭದಲ್ಲಿ ಸಿಪಾಯಿ ಸಿನಿಮಾದ ಹಾಡನ್ನು ರೀಶೂಟ್ ಮಾಡಬೇಕು ಎಂಬ ನಿರ್ಧಾರಕ್ಕೆ ಬಂದಂತಹ ರವಿಚಂದ್ರನ್ ಸೌಂದರ್ಯ ಅವರ ಬಳಿ ಹೇಳಿದಾಗ ಸದ್ಯದಲ್ಲಿ ನಾನು ಫ್ರೀಯಾಗಿಲ್ಲ ಬೇರೆ ಸಿನಿಮಾಗಳ ಶೂಟಿಂಗ್ ನಲ್ಲಿ ಬಿಜಿಯಾಗಿದ್ದೇನೆ ಎಂದು ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ.
ಅಂತಹ ಸಂದರ್ಭದಲ್ಲಿ ರವಿಚಂದ್ರನ್ ತಿಂಗಳುಗಳ ಕಾಲ ಸೌಂದರ್ಯ ಅವರ ಡೇಟ್ಗಾಗಿ ಕಾದರು. ಆನಂತರ ಸಿನಿಮಾದ ಹಾಡು ರೀಶೂಟ್ ಮಾಡಲು ಸೌಂದರ್ಯ ಅವರಿಗೋಸ್ಕರ ರಿಲೀಸ್ ಡೇಟ್ ಅನ್ನೇ ಮುಂದೂಡುತ್ತಾರೆ.
Do you know why Kannada Actor Ravichandran waited So Many Days for Actress Soundarya