ಬಾಡಿಗೆ ಕಟ್ಟಲು ದುಡ್ಡಿಲ್ಲ ದಯವಿಟ್ಟು ಅವಕಾಶ ಕೊಡಿ ಎಂದು ಅಂಗಲಾಚುತ್ತಿರುವ ದೈತ್ಯ ಹಾಸ್ಯ ನಟ! ಇದ್ದಕ್ಕಿದ್ದಹಾಗೆ ಏನಾಯ್ತು ಪಾಪ

Story Highlights

ಸಂದರ್ಶನ ಒಂದರಲ್ಲಿ ಮಾತನಾಡಿದಂತಹ ಕನ್ನಡದ ದೈತ್ಯ ಹಾಸ್ಯ ನಟ ಭಿಕ್ಷುಕನ ಪಾತ್ರ ನೀಡಿದರು ಪರವಾಗಿಲ್ಲ ಅಭಿನಯಿಸುತ್ತೇನೆ ದಯವಿಟ್ಟು ಅವಕಾಶ ಕೊಡಿ ಎಂದು ಅಂಗಲಾಚಿ ಬೇಡಿಕೊಂಡಿದ್ದಾರೆ.

ಸ್ನೇಹಿತರೆ, ಕನ್ನಡ ಸಿನಿಮಾ ರಂಗ (Kannada Film Industry) ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಾ ಹೋದಹಾಗೆ ಕಾಂತರಾ, ಕೆಜಿಎಫ್ ನಂತಹ ಸಿನಿಮಾಗಳು ಬಾಲಿವುಡ್ ಅಂಗಳದಲ್ಲಿ ಜೋರಾಗಿಯೇ ಸದ್ದು ಮಾಡಿದ್ದು, ಹೀಗೆ ಹೊಸ ಹೊಸ ಸಿನಿಮಾಗಳು ತನ್ನ ಅಬ್ಬರಸುತ್ತಾ ಹೋದ ಹಾಗೆ ಕಲಾವಿದರ ಸಂಖ್ಯೆಯು ದಿನ ಏರಿಕೆಯಾಗುತ್ತಿದೆ.

ಆದರೆ ಹೊಸ ಕಲಾವಿದರ ಆಗಮನದಿಂದಾಗಿ ಹಳೆಯ ಕಲಾವಿದರು ಅವಕಾಶಗಳನ್ನು ಕಳೆದುಕೊಂಡು, ಅದೆಂತಾ ಪರಿಸ್ಥಿತಿಗೆ ಸಿಲುಕಿ ಕೊಳ್ಳುತ್ತಿದ್ದಾರೆ. ಈ ಕುರಿತು ಸಂದರ್ಶನ ಒಂದರಲ್ಲಿ ಮಾತನಾಡಿದಂತಹ ಕನ್ನಡದ ದೈತ್ಯ ಹಾಸ್ಯ ನಟ ಭಿಕ್ಷುಕನ ಪಾತ್ರ ನೀಡಿದರು ಪರವಾಗಿಲ್ಲ ಅಭಿನಯಿಸುತ್ತೇನೆ ದಯವಿಟ್ಟು ಅವಕಾಶ ಕೊಡಿ ಎಂದು ಅಂಗಲಾಚಿ ಬೇಡಿಕೊಂಡಿದ್ದಾರೆ.

ಕರ್ಪೂರದ ಗೊಂಬೆ ಸಿನಿಮಾ ಖ್ಯಾತಿಯ ನಟಿ ಶ್ವೇತಾ ಅವರ ಬಾಳಿನ ದುರಂತ ಕಥೆ! ಈಗಿನ ಅವರ ನಿಜ ಜೀವನ ಹೇಗಿದೆ ಗೊತ್ತಾ?

ಅಷ್ಟಕ್ಕೂ ಆ ನಟ ಯಾರು? ಅದೆಂತಹ ಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ? ಎಂಬ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ. ಹೌದು ಸಿನಿಮಾದಲ್ಲಿ ನಟಿಸಲು ಅವಕಾಶಗಳು ಸಿಗದ ಕಾರಣ ನಾನು ಭಿಕ್ಷುಕನ ಪಾತ್ರ ಮಾಡೋಕೂ ರೆಡಿ ನೀವು ಅವಕಾಶ ಕೊಡಿ ಸಾಕು ಎಂದು ಕನ್ನಡದ ಧೈರ್ಯ ಹಾಸ್ಯ ನಟ ಮಿತ್ರ (Actor Mithra) ಭಾವುಕರಾಗಿದ್ದಾರೆ.

ಮಿತ್ರ ಅವರು ರಂಗಭೂಮಿ ಹಿನ್ನೆಲೆಯಿಂದ ಬಂದವರು ಅತಿ ಹೆಚ್ಚು ಹಾಸ್ಯ ಪಾತ್ರಗಳ ಮೂಲಕ ಗುರುತಿಸಿಕೊಂಡ ಮಿತ್ರ ತಮ್ಮದೇ ಆದಂತಹ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇಂತಹ ಅದ್ಭುತ ನಟನಿಗೆ ಸಿಲ್ಲಿಲಲ್ಲಿ ಎಂಬ ಹಾಸ್ಯ ಧಾರಾವಾಹಿಯು ದೊಡ್ಡಮಟ್ಟದ ಬ್ರೇಕ್ ನೀಡಿತು.

ರಿಲೀಸ್ ಗೂ ಮುನ್ನ ಬಾರಿ ಮೊತ್ತಕ್ಕೆ ಮಾರಾಟವಾಗಿದ್ದ ನೀ ಬರೆದ ಕಾದಂಬರಿ ಸಿನಿಮಾದ ಟೋಟಲ್ ಬಜೆಟ್ ಹಾಗೂ ಕಲೆಕ್ಷನ್ ಎಷ್ಟು ಗೊತ್ತಾ?

ತದನಂತರ ಸಿನಿಮಾಗಳಲ್ಲಿ ನಟಿಸಲು ಪ್ರಾರಂಭಮಾಡಿದ ಮಿತ್ರ ಅವರಿಗೆ ಅನೇಕ ಸಣ್ಣಪುಟ್ಟ ಪಾತ್ರಗಳು ಒದಗಿಬಂದವು. ರಾಗ ಸಿನಿಮಾದಲ್ಲಿ ನಾಯಕನಟರಾಗಿ ನಟಿಸಿದ ಮಿತ್ರ ಹೆಚ್ಚು ಕಡಿಮೆ 300 ರಿಂದ 400 ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ತಮ್ಮ ನಟನೆಯ ಛಾಪನ್ನು ಬೀರಿದ್ದಾರೆ.

Kannada Actor Mithraಸದ್ಯ ಖಾಸಗಿ ಸಂದರ್ಶನವೊಂದರಲ್ಲಿ ಮಾತನಾಡಿರುವ ಮಿತ್ರ ಅವರು ಅವಕಾಶಗಳ ಕುಂಟಿತದಿಂದಾಗಿ ತಾವು ತಮ್ಮ ವೈಯಕ್ತಿಕ ಬದುಕಿನಲ್ಲಿ ಅನುಭವಿಸುತ್ತಿರುವ ಕಷ್ಟಗಳ ಕುರಿತು ಮೆಲುಕು ಹಾಕಿದ್ದಾರೆ.

ಅವಕಾಶದ ಕೋಡಿಯೇ ಹರಿದು ಬಂದರು ವಿಷ್ಣುದಾದಾ ಮಾತ್ರ ಯಾಕೆ ರಾಜಕೀಯ ಪ್ರವೇಶ ಮಾಡ್ಲಿಲ್ಲ ಗೊತ್ತಾ?

“ನಾನು ಹೀರೋ ಅಲ್ಲ ಕಲಾವಿದ. ನನ್ನ ದೇಹದ ಬಣ್ಣಕ್ಕೆ, ಗಾತ್ರಕ್ಕೆ ಯಾವ ಪಾತ್ರ ಹೊಂದುತ್ತದೆಯೋ ಅದನ್ನು ನೀಡಿ ನಾನು ನಿರ್ವಹಿಸುತ್ತೇನೆ. ಹೀರೋ ಪಾತ್ರ ಮಾಡೋಕೆ ನನ್ನ ಬಳಿ ಸಾಧ್ಯವಿಲ್ಲ, ನನ್ನ ಸಾಮರ್ಥ್ಯ ಏನು ಎನ್ನುವುದು ನನಗೆ ಗೊತ್ತು.

ನನಗೆ ಅವಕಾಶ ನೀಡಿ ನಾನು ಮಾಡಿ ತೋರಿಸುತ್ತೇನೆ. ಅಟ್ಲಿಸ್ಟ್ ಬಿಕ್ಷುಕನ ಪಾತ್ರವಾದರೂ ಕೊಟ್ಟರೆ ನಾನು ಅದರಲ್ಲಿ ಅಭಿನಯಿಸೋಕೆ ಸದಾ ಸಿದ್ದ, ನಾನು ಸದ್ಯ ಹೀನಾಯ ಪರಿಸ್ಥಿತಿಯಲ್ಲಿದ್ದೇನೆ ತಿನ್ನೋದಕ್ಕೂ ಇಟ್ಟಿಲ್ಲ, ಬಾರಿಗೆ ಕಟ್ಟಲು ದುಡ್ಡಿಲ್ಲ ದಯಮಾಡಿ ಚಿತ್ರರಂಗದವರು ನನಗೆ ಸಹಾಯ ಮಾಡಿ” ಎಂದು ಖ್ಯಾತ ಹಾಸ್ಯ ನಟ ಮಿತ್ರ ಭಾವುಕತೆಯನ್ನು ವ್ಯಕ್ತಪಡಿಸಿದರು.

50ನೇ ವಯಸ್ಸಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪಂಡರಿ ಬಾಯಿ ಅವರ ಪತಿ ಯಾರು ಗೊತ್ತಾ? ಅವರೂ ಕೂಡ ಸಕ್ಕತ್ ಫೇಮಸ್!

ಹೀಗೆ ಮಿತ್ರ ಅವರಂತಹ ಸಾಕಷ್ಟು ಶ್ರೇಷ್ಠ ಕಲಾವಿದರು ತಮ್ಮೊಳಗೆ ಅಗಾಧವಾದ ಕಲೆಯನ್ನು ತುಂಬಿಕೊಂಡಿದ್ದರು ಕೂಡ ಅವಕಾಶಗಳ ಕೊರತೆಯಿಂದ ಮೂಲೆಗುಂಪಾಗುತ್ತಿದ್ದಾರೆ.

Kannada Actor Mithra Emotional words from lack of opportunities

Related Stories