ಕರ್ಪೂರದ ಗೊಂಬೆ ಸಿನಿಮಾ ಖ್ಯಾತಿಯ ನಟಿ ಶ್ವೇತಾ ಅವರ ಬಾಳಿನ ದುರಂತ ಕಥೆ! ಈಗಿನ ಅವರ ನಿಜ ಜೀವನ ಹೇಗಿದೆ ಗೊತ್ತಾ?

ಮೂಲತಃ ತಮಿಳುನಾಡಿನವರಾದರು ಕೂಡ ತಮ್ಮ ಅಮೋಘ ಕನ್ನಡ ಅಭಿನಯದ ಮೂಲಕ ಕನ್ನಡಿಗರ ಮನದರಸಿಯಾದಂತಹ ನಟಿ ಶ್ವೇತಾ ಸಿನಿಮಾ ಬದುಕಿನಲ್ಲಿ ಯಶಸ್ಸು ಕಂಡ ಹಾಗೆ ತಮ್ಮ ವೈಯಕ್ತಿಕ ಜೀವನದಲ್ಲಿ ಕಾಣಲಿಲ್ಲ.

ಅದೊಂದು ಕಾಲದಲ್ಲಿ ಕರ್ಪೂರದ ಗೊಂಬೆ (Karpoorada Gombe Kannada Cinema), ಚೈತ್ರದ ಪ್ರೇಮಾಂಜಲಿ ಹಿಟ್ ಸಿನಿಮಾಗಳನ್ನು ನೀಡಿ ಅಲ್ಪಾವಧಿಯಲ್ಲಿ ಸ್ಟಾರ್ ಪಟ್ಟವನ್ನು ಗಿಟ್ಟಿಸಿಕೊಂಡಂತಹ ನಟಿ ಶ್ವೇತಾ (Actress Shweta) ಯಾರಿಗೆ ತಾನೇ ತಿಳಿಯದಿರಲು ಸಾಧ್ಯ ಹೇಳಿ?

ಮೂಲತಃ ತಮಿಳುನಾಡಿನವರಾದರು ಕೂಡ ತಮ್ಮ ಅಮೋಘ ಕನ್ನಡ ಅಭಿನಯದ ಮೂಲಕ ಕನ್ನಡಿಗರ ಮನದರಸಿಯಾದಂತಹ ನಟಿ ಶ್ವೇತಾ ಸಿನಿಮಾ ಬದುಕಿನಲ್ಲಿ ಯಶಸ್ಸು ಕಂಡ ಹಾಗೆ ತಮ್ಮ ವೈಯಕ್ತಿಕ ಜೀವನದಲ್ಲಿ (Life Story) ಕಾಣಲಿಲ್ಲ.

50ನೇ ವಯಸ್ಸಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪಂಡರಿ ಬಾಯಿ ಅವರ ಪತಿ ಯಾರು ಗೊತ್ತಾ? ಅವರೂ ಕೂಡ ಸಕ್ಕತ್ ಫೇಮಸ್!

ಕರ್ಪೂರದ ಗೊಂಬೆ ಸಿನಿಮಾ ಖ್ಯಾತಿಯ ನಟಿ ಶ್ವೇತಾ ಅವರ ಬಾಳಿನ ದುರಂತ ಕಥೆ! ಈಗಿನ ಅವರ ನಿಜ ಜೀವನ ಹೇಗಿದೆ ಗೊತ್ತಾ? - Kannada News

ಹೌದು ಗೆಳೆಯರೇ ಮದುವೆಯಾದ ಬಳಿಕ ಸಿನಿಮಾ ರಂಗದಿಂದ ಸಂಪೂರ್ಣ ದೂರ ಉಳಿದಂತಹ ಈ ನಟಿಯ ಬಾಳಿನಲ್ಲಿ ಘೋರವಾದ ದುರಂತ ಒಂದು ಎದುರಾಯಿತು. ಹಾಗಾದ್ರೆ ಈ ನಟಿಯ ವೈಯಕ್ತಿಕ ಬದುಕು ಹೇಗಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ ಚೈತ್ರದ ಪ್ರೇಮಾಂಜಲಿ, ಕರ್ಪೂರದ ಗೊಂಬೆ, ಲಕ್ಷ್ಮಿ ಮಹಾಲಕ್ಷ್ಮಿ ಸಿನಿಮಾಗಳ ಮೂಲಕ ಇಂದಿಗೂ ಕೂಡ ಕನ್ನಡಿಗರ ಹೃದಯದಲ್ಲಿ ಅಚ್ಚಳಿಯದೆ ಉಳಿದಿರುವ ಪ್ರತಿಭೆ ನಟಿ ಶ್ವೇತಾ.

ಅವಕಾಶದ ಕೋಡಿಯೇ ಹರಿದು ಬಂದರು ವಿಷ್ಣುದಾದಾ ಮಾತ್ರ ಯಾಕೆ ರಾಜಕೀಯ ಪ್ರವೇಶ ಮಾಡ್ಲಿಲ್ಲ ಗೊತ್ತಾ?

80-90 ದಶಕದಲ್ಲಿ ಗೋಲ್ಡನ್ ನಟಿ ಎಂದೇ ಹೆಸರು ಮಾಡಿದ್ದಂತಹ ಶ್ವೇತಾ ಅವರು ಅಲ್ಪಾವಧಿಯಲ್ಲಿಯೇ ಉತ್ತುಂಗದ ಶಿಖರವನ್ನೇರುತ್ತಾರೆ. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡಿದಂತಹ ಈ ನಟಿಯ ಮೂಲ ಹೆಸರು ವಿನೋದಿನಿ, ಹೌದು ಚೈತ್ರದ ಪ್ರೇಮಾಂಜಲಿ ಸಿನಿಮಾದ ಮೂಲಕ ಶ್ವೇತಾ ಎಂದೇ ಪ್ರಖ್ಯಾತಿ ಪಡೆದಂತಹ ಈ ನಟಿ ಅಪ್ಪಟ ಬ್ರಾಹ್ಮಣ ಕುಟುಂಬಕ್ಕೆ ಸೇರಿದವರು. ಬಾಲ ನಟಿಯಾಗಿ ತಮಿಳು ಸಿನಿಮಾರಂಗವನ್ನು ಪ್ರವೇಶ ಮಾಡಿ ಆನಂತರ ಕನ್ನಡ ಚಿತ್ರರಂಗದಲ್ಲಿ ನೆಲೆ ಕಂಡುಕೊಂಡರು.

Karpoorada Gombe Fame Actress Shweta

1992 ರಲ್ಲಿ ತೆರೆಕಂಡಂತಹ ಎಸ್ ನಾರಾಯಣ್ ಅವರು ನಿರ್ದೇಶನ ಮಾಡಿರುವ ಹಾಗೂ ರಘುವೀರ್ ಅವರು ನಾಯಕನಟನಾಗಿ ಕಾಣಿಸಿಕೊಂಡಿರುವ ಚೈತ್ರದ ಪ್ರೇಮಾಂಜಲಿ ಸಿನಿಮಾದ ಮೂಲಕ ಕನ್ನಡಕ್ಕೆ ಕಾಲಿಡುತ್ತಾರೆ.

ರಿಲೀಸ್ ಗೂ ಮುನ್ನ ಬಾರಿ ಮೊತ್ತಕ್ಕೆ ಮಾರಾಟವಾಗಿದ್ದ ನೀ ಬರೆದ ಕಾದಂಬರಿ ಸಿನಿಮಾದ ಟೋಟಲ್ ಬಜೆಟ್ ಹಾಗೂ ಕಲೆಕ್ಷನ್ ಎಷ್ಟು ಗೊತ್ತಾ?

ಈ ಸಿನಿಮಾ ಇವರಿಗೆ ಎಲ್ಲಿಲ್ಲದ ಸರ್ಕಸ್ ತಂದುಕೊಡುತ್ತದೆ. ಒಂದೇ ಒಂದು ಸಿನಿಮಾದ ಮೂಲಕ ಕನ್ನಡಿಗರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾದರು ಶ್ವೇತಾ ಅವರು, ನಂತರ ಸ್ಯಾಂಡಲ್ ವುಡ್ನಲ್ಲಿ ಸತತ ಸಕ್ಸಸ್ ಕಾಣುತ್ತಾರೆ.

ಅನಂತ ಕರ್ಪೂರದ ಗೊಂಬೆ ಸಿನಿಮಾವನ್ನು ಒಪ್ಪಿಕೊಂಡು ತಮ್ಮ ಮನೋಜ್ಞ ಅಭಿನಯದ ಮೂಲಕ ಇನ್ನಷ್ಟು ಹೆಸರುಗಳಿಸಿದರು. ಅದಾದ ನಂತರ ಮಿನುಗುತಾರೆ, ನಮ್ಮ ಸಂಸಾರ ಆನಂದ ಸಾಗರ, ಲಕ್ಷ್ಮಿ ಮಹಾಲಕ್ಷ್ಮಿ ಸೇರಿದಂತೆ ಕನ್ನಡದ ಹಲವಾರು ಚಿತ್ರಗಳಿಗೆ ಬಣ್ಣ ಹಚ್ಚಿದರು.

ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಚಿತ್ರಗಳಲ್ಲಿ ಸಕ್ರಿಯವಾಗಿರುವಾಗಲೇ ‘ಶ್ರೀಧರ್’ ಎಂಬುವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶ್ವೇತಾ ಮದುವೆಯಾದ ಬಳಿಕ ನಟನೆಗೆ ಗುಡ್ ಬೈ ಹೇಳಿದರು.

ಹಿರಿಯ ನಟಿ ಮಾಧವಿಯವರ ಗಂಡ ಮಕ್ಕಳು ಹೇಗಿದ್ದಾರೆ ಗೊತ್ತಾ? ಸಿನಿಮಾ ರಂಗ ಬಿಟ್ಟ ಮೇಲೆ ಈ ನಟಿ ಕೋಟ್ಯಾಧಿಪತಿ ಆಗಿದ್ದೇಗೆ?

ಹೀಗೆ ತಮ್ಮ ವೃತ್ತಿ ಬದುಕಿನಲ್ಲಿ ಯಶಸ್ಸು ಕಂಡಂತಹ ಈ ನಟಿ ಶ್ರೀಧರ್ ಎಂಬುವರನ್ನು ಪ್ರೀತಿಸಿ ಮದುವೆಯಾಗುತ್ತಾರೆ. ಹೀಗೆ ಎಲ್ಲೆಡೆ ಬಹಳ ಖುಷಿ ಖುಷಿಯಿಂದ ಓಡಾಡಿಕೊಂಡಿದ್ದಂತಹ ಈ ಜೋಡಿಗಳ ಮೇಲೆ ಅದ್ಯಾರ ವಕ್ರ ದೃಷ್ಟಿ ಬಿತ್ತೋ ಗೊತ್ತಿಲ್ಲ, ಮದುವೆಯಾಗಿ ಒಂದು ಮಗುವಾದ ನಂತರ ಪತಿ ಶ್ರೀಧರ್ ಅವರು ಹೆಲ್ಮೆಟ್ ಧರಿಸದೆ ಗಾಡಿ ಓಡಿಸಿದ ಕಾರಣ ಆಕ್ಸಿಡೆಂಟ್ನಿಂದ ಇವರ ಎರಡು ಕಾಲುಗಳು ಸ್ವಾಧೀನ ಕಳೆದುಕೊಂಡವು.

ಎಲ್ಲೆಡೆ ಓಡಾಡಿ ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದರು ಕೂಡ ಚಿಕಿತ್ಸೆ ಫಲಕಾರಿಯಾಗದೆ ಇನ್ನೂ ವೀಲ್ಚೇರ್ನಲ್ಲಿಯೇ ಶ್ರೀಧರ್ ಓಡಾಡುತ್ತಿದ್ದಾರೆ. ಹೀಗೆ ಯಾರ ನೆರವು ಪಡೆಯದೆ ಶ್ವೇತಾ ಅವರು ತಮ್ಮ ಪತಿಯ ಆರೈಕೆಯೊಂದಿಗೆ ಮನೆ ಜವಾಬ್ದಾರಿಯನ್ನು ತೆಗೆದುಕೊಂಡು ತಮಿಳಿನ ಧಾರಾವಾಹಿಗಳಲ್ಲಿ ಸಣ್ಣಪುಟ್ಟ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

Karpoorada Gombe Fame Actress Shweta tragic story of Her Real Life

Follow us On

FaceBook Google News

Karpoorada Gombe Fame Actress Shweta tragic story of Her Real Life