ಹಿರಿಯ ನಟಿ ಮಾಧವಿಯವರ ಗಂಡ ಮಕ್ಕಳು ಹೇಗಿದ್ದಾರೆ ಗೊತ್ತಾ? ಸಿನಿಮಾ ರಂಗ ಬಿಟ್ಟ ಮೇಲೆ ಈ ನಟಿ ಕೋಟ್ಯಾಧಿಪತಿ ಆಗಿದ್ದೇಗೆ?

ಕನ್ನಡ, ತೆಲುಗು, ಹಿಂದಿ ಹಾಗೂ ತಮಿಳು ಸಿನಿಮಾರಂಗದ ಉತ್ತುಂಗದ ಶಿಖರದಲ್ಲಿ ಇರಬೇಕಾದರೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಂತಹ ನಟಿ ಮಾಧವಿ ನಟನೆಗೆ ಗುಡ್ ಬೈ ಹೇಳಿ ದಾಂಪತ್ಯ ಜೀವನದ ಸಂತಸವನ್ನು ಅನುಭವಿಸುತ್ತಿದ್ದಾರೆ.

ಸ್ನೇಹಿತರೆ, ನಟಿ ಮಾಧವಿ (Actress Madhavi) ಎಂಬ ಹೆಸರು ಕೇಳುತ್ತಿದ್ದ ಹಾಗೆ 90 ದಶಕದ ಕೈದಿ, ನಿರಪರಾಧಿ, ಶಿವಕಾ ಇನ್ಸಾನ್, ಮಾತೃದೇವೋಭವ, ಆಕಸ್ಮಿಕ, ಅಕ್ಕರೆ, ಮರೋ ಚರಿತ್ರ, ಅನುರಾಗ ಅರಳಿತು, ಜೀವನ ಚೈತ್ರ,‌ ಶ್ರುತಿ ಸೇರಿದಾಗ, ಸಿಟಿ ರೌಡಿ, ಹಾಲು ಜೇನು, ಭಾಗ್ಯದ ಲಕ್ಷ್ಮಿ ಬಾರಮ್ಮ, ಹಲೋ ಮದ್ರಾಸ್ ಗರ್ಲ್, ಒಂದೇ ಗುರಿ ಸೇರಿದಂತೆ ಸಾಕಷ್ಟು ಸಿನಿಮಾಗಳ ಪಟ್ಟಿ ನಮ್ಮೆಲ್ಲರ ತಲೆಗೆ ಬಂದುಬಿಡುತ್ತದೆ.

ಇನ್ನು ಅಣ್ಣವ್ರ ಹಾಗೂ ಮಾಧವಿಯವರ ಕಾಂಬಿನೇಷನ್ ನಲ್ಲಿ ಸಿನಿಮಾ ತಯಾರಾಗುತ್ತಿದೆ ಎಂದರೆ ಆ ಸಿನಿಮಾ ಹಿಟ್ ಪಟ್ಟಿಗೆ ಸೇರುವುದು ಪಕ್ಕ ಎಂದು ನಿರ್ದೇಶಕ ನಿರ್ಮಾಪಕರು ಊಹಿಸುತ್ತಿದ್ದಂತಹ ಕಾಲವದು. ಅಷ್ಟರಮಟ್ಟಿಗೆ ಡಾಕ್ಟರ್ ರಾಜಕುಮಾರ್ (Dr Rajkumar) ಹಾಗೂ ಮಾಧವಿ ಅವರ ಜೋಡಿ ತರೆಯ ಮೇಲೆ ಮೋಡಿ ಮಾಡಿತ್ತು‌.

ನಟಿ ಸುಧಾರಾಣಿ ಬಾಳನ್ನು ಬದಲಿಸಿದ್ದು ಎರಡನೇ ಪತಿ! ಮೊದಲ ಗಂಡನಿಂದ ಎಷ್ಟೆಲ್ಲಾ ನರಕಾಯಾತನೇ ಅನುಭವಿಸಿದ್ರು ಗೊತ್ತಾ?

ಹಿರಿಯ ನಟಿ ಮಾಧವಿಯವರ ಗಂಡ ಮಕ್ಕಳು ಹೇಗಿದ್ದಾರೆ ಗೊತ್ತಾ? ಸಿನಿಮಾ ರಂಗ ಬಿಟ್ಟ ಮೇಲೆ ಈ ನಟಿ ಕೋಟ್ಯಾಧಿಪತಿ ಆಗಿದ್ದೇಗೆ? - Kannada News

ಕನ್ನಡ (Kannada Cinema), ತೆಲುಗು, ಹಿಂದಿ ಹಾಗೂ ತಮಿಳು ಸಿನಿಮಾರಂಗದ ಉತ್ತುಂಗದ ಶಿಖರದಲ್ಲಿ ಇರಬೇಕಾದರೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಂತಹ ನಟಿ ಮಾಧವಿ ನಟನೆಗೆ ಗುಡ್ ಬೈ ಹೇಳಿ ದಾಂಪತ್ಯ ಜೀವನದ ಸಂತಸವನ್ನು ಅನುಭವಿಸುತ್ತಿದ್ದಾರೆ. ಹೀಗಿರುವಾಗ ಇವರ ಗಂಡ ಹಾಗೂ ಮಕ್ಕಳು ಹೇಗಿದ್ದಾರೆ?

ಅವರು ಸದ್ಯ ಏನು ಮಾಡುತ್ತಿದ್ದಾರೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ 1970 ರಿಂದ 1990ರ ಅವಧಿಯಲ್ಲಿ ಬಹು ಬೇಡಿಕೆಯನ್ನು ಗಿಟ್ಟಿಸಿಕೊಂಡಿದ್ದಂತಹ ಮಾಧವಿ ಅವರು ಬಹುತೇಕ ಎಲ್ಲಾ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡು ಬಹಳ ಫೇಮಸ್ ಆಗಿದ್ದರು.

ಮಾಲಾಶ್ರೀ ಜೊತೆ ಯಾರೇ ನಟಿಸಿದರು ಸ್ಟಾರ್ ಆಗ್ತಾಯಿದ್ರು, ಆದರೆ ಒಬ್ಬ ನಟ ಮಾತ್ರ ಸ್ಟಾರ್ ಆಗಲೇ ಇಲ್ಲ, ಆತ ಯಾರು ಗೊತ್ತಾ?

Actress Madhavi and Familyಹೀಗಿರುವಾಗ 14 ಫೆಬ್ರವರಿ 1996 ಪ್ರಖ್ಯಾತ ಉದ್ಯಮಿ ರಾಲ್ಫ್ ಶರ್ಮಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟು ನಟನೆಗೆ ಸಂಪೂರ್ಣ ಗುಡ್ ಬೈ ಹೇಳಿದರು.

ಉತ್ತುಂಗದ ಶಿಖರದಲ್ಲಿದ್ದ ಮಾಸ್ಟರ್ ಮಂಜುನಾಥ್ ಅವಕಾಶಗಳಿದ್ದರೂ ಅಭಿನಯಿಸದಿರಲು ಕಾರಣವೇನು? ಗುರು ಶಂಕರ್ ನಾಗ್ ಅವರ ಸಾವಿನಿಂದ ಕಂಗೆಟ್ರಾ?

ಮದುವೆಯಾದ ಬಳಿಕ ತಮ್ಮ ವೈಯಕ್ತಿಕ ಜೀವನದತ್ತ ಗಮನಹರಿಸಿದ ಈ ನಟಿ ಉದ್ಯಮಕ್ಕಿಳಿದರು. ಸದ್ಯ ಪತಿಯೊಂದಿಗೆ ಅಮೆರಿಕದಲ್ಲಿ ಮಾಧವಿಯವರು ಪತಿಯ ಮೆಡಿಕಲ್ ಕಂಪನಿ ಮತ್ತು ರೆಸ್ಟೋರೆಂಟ್ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದು, ತಮ್ಮ ಗಂಡನ ಕೆಲಸಗಳಲ್ಲಿ ಸಹಾಯ ಮಾಡುತ್ತಾ ಸಾವಿರಾರು ಕೋಟಿ ಆಸ್ತಿಯ ಒಡತಿಯಾಗಿದ್ದಾರೆ.

Actress Madhavi Daughtersಇನ್ನು ಮಾಧವಿಯವರಿಗೆ ಮೂರು ಜನ ಹೆಣ್ಣು ಮಕ್ಕಳಿದ್ದು, ಮುಂದಿನ ದಿನಗಳಲ್ಲಿ ಇವರು ಕೂಡ ತಮ್ಮ ತಾಯಿಯಂತೆ ಸಿನಿಮಾ ರಂಗದಲ್ಲಿ ಸಕ್ರಿಯರಾಗಲಿದ್ದಾರ ಎಂಬುದನ್ನು ಕಾದು ನೋಡಬೇಕಿದೆ.

ಲೋಕೇಶ್ ಹಾಗೂ ವಿಷ್ಣುದಾದನ ಜುಗಲ್ ಬಂದಿಯ ಭೂತಯ್ಯನ ಮಗ ಅಯ್ಯು ಸಿನಿಮಾ ಆಗಿನ ಕಾಲಕ್ಕೆ ಮಾಡಿದ ಕಲೆಕ್ಷನ್ ಎಷ್ಟು ಗೊತ್ತಾ?

ಈ ಪುಟದ ಮುಖಾಂತರ ನಟಿ ಮಾದವಿಯವರ ವೈಯಕ್ತಿಕ ಬದುಕಿನ ಮಧುರ ಕ್ಷಣಗಳನ್ನು ನೋಡಬಹುದಾಗಿದೆ. ಇವರ ಗಂಡ ಮತ್ತು ಮಕ್ಕಳು ಹೇಗಿದ್ದಾರೆ ಎಂಬುದನ್ನು ನೋಡಿ ಕಣ್ತುಂಬಿಕೊಳ್ಳಿ, ನಿಮಗೂ ಕೂಡ ನಟಿ ಮಾದೇವಿ ಅವರ ನಟನೆ ಇಷ್ಟವಾಗಿದ್ದಲ್ಲಿ ಆಕೆ ಅಭಿನಯದ ಯಾವ ಸಿನಿಮಾ ನಿಮಗೆ ಬಹಳ ಇಷ್ಟ ಎಂಬುದನ್ನು ತಪ್ಪದೆ ನಮಗೆ ಕಾಮೆಂಟ್ ಮೂಲಕ ತಿಳಿಸಿ.

ಮದುವೆಗೆ ಬಂದಿದ್ದು 150 ಗೆಸ್ಟ್, ಖರ್ಚಾಗಿದ್ದು ಕೋಟಿ ಕೋಟಿ! ಅಭಿಷೇಕ್ ಅವಿವಾ ಅದ್ಧೂರಿ ವಿವಾಹದ ಲೆಕ್ಕ ಇಲ್ಲಿದೆ

Interesting Facts About Actress Madhavi, Husband, Family, Daughters and More

Related Stories