ಉತ್ತುಂಗದ ಶಿಖರದಲ್ಲಿದ್ದ ಮಾಸ್ಟರ್ ಮಂಜುನಾಥ್ ಅವಕಾಶಗಳಿದ್ದರೂ ಅಭಿನಯಿಸದಿರಲು ಕಾರಣವೇನು? ಗುರು ಶಂಕರ್ ನಾಗ್ ಅವರ ಸಾವಿನಿಂದ ಕಂಗೆಟ್ರಾ?

ಶಂಕರ್ ನಾಗ್ ಮತ್ತು ಮಾಸ್ಟರ್ ಮಂಜುನಾಥ್ ತೆರೆಯ ಮೇಲೆ ಮಾಡಿದಂತಹ ಮೋಡಿಯನ್ನು ಯಾರಾದರೂ ಮರೆಯಲು ಸಾಧ್ಯವೇ? ಹೀಗಿರುವಾಗ ಕರಾಟೆ ಕಿಂಗ್ ಶಂಕರ್ ನಾಗ್ ತೀರಿಕೊಂಡ ಮೇಲೆ ಮಾಸ್ಟರ್ ಮಂಜುನಾಥ್ ಸಿನಿಮಾರಂಗಕ್ಕೆ ಕಾಲಿಡದಿರಲಿ ನಿರ್ಧಾರ ಮಾಡಿ ಬಿಡುತ್ತಾರೆ.

Bengaluru, Karnataka, India
Edited By: Satish Raj Goravigere

ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿಗೆ (Kannada Film Industry) ಸಾಕಷ್ಟು ಬಾಲ ಕಲಾವಿದರು ಬಂದು ಹೋದರು ನಮ್ಮೆಲ್ಲರ ತಲೆಯಲ್ಲಿ ಅಚ್ಚಳಿಯದೆ ಉಳಿದಿರುವುದು ಮಾತ್ರ ಮಾಸ್ಟರ್ ಆನಂದ್, ಬೇಬಿ ಶ್ಯಾಮಿಲಿ ಹಾಗೂ ಮಾಸ್ಟರ್ ಮಂಜುನಾಥ್ ರಂತಹ ಬಾಲಕಲಾವಿದರು.

ಹೌದು ಗೆಳೆಯರೇ 80-90 ದಶಕದಲ್ಲಿ ತಮ್ಮ ಅಮೋಘ ಅಭಿನಯದ ಮೂಲಕ ಅಲ್ಪಾವಧಿಯಲ್ಲಿಯೇ ಬಹು ಬೇಡಿಕೆಯನ್ನು ಪಡೆದು ಒಂದರ ಮೇಲೆ ಒಂದರಂತೆ ಹಿಟ್ ಸಿನಿಮಗಳಲ್ಲಿ ಅಭಿನಯಿಸುತ್ತಿದಂತಹ ಈ ಕಲಾವಿದರು ಬೆಳೆದು ದೊಡ್ಡವರಾದ ಬಳಿಕ ಚಿತ್ರರಂಗದಿಂದ ಕಣ್ಮರೆ ಆದದ್ದು ವಿಪರ್ಯಾಸವೇ ಸರಿ.

why Kannada Actor Master Manjunath does not act even he has opportunities in Cinema Industry

ಲೋಕೇಶ್ ಹಾಗೂ ವಿಷ್ಣುದಾದನ ಜುಗಲ್ ಬಂದಿಯ ಭೂತಯ್ಯನ ಮಗ ಅಯ್ಯು ಸಿನಿಮಾ ಆಗಿನ ಕಾಲಕ್ಕೆ ಮಾಡಿದ ಕಲೆಕ್ಷನ್ ಎಷ್ಟು ಗೊತ್ತಾ?

ಹೀಗಿರುವಾಗ ನಾವಿವತ್ತು ಎಂತಹ ಪಾತ್ರ ನೀಡಿದರು ಅದರೊಳಗೆ ಪರಕಾಯ ಪ್ರವೇಶ ಮಾಡಿ ಎಲ್ಲರಿಂದ ಮೆಚ್ಚುಗೆ ಪಡೆದುಕೊಳ್ಳುತ್ತಿದ್ದಂತಹ ಮಾಸ್ಟರ್ ಮಂಜುನಾಥ್ ಅವರ ಕುರಿತು ಯಾರಿಗೂ ತಿಳಿಯದಂತಹ ಅಸಲಿ ಮಾಹಿತಿ ಒಂದನ್ನು ತಿಳಿಸ ಹೊರಟಿದ್ದೇವೆ.

ಹೌದು ಸ್ನೇಹಿತರೆ ಅಂದಿಗೂ ಇಂದಿಗೂ ಎಂದೆಂದಿಗೂ ಮರೆಯಲಾಗದಂತಹ ನಟನೆಂದರೆ ಮಾಸ್ಟರ್ ಮಂಜುನಾಥ್ (Master Manjunath). ಬಹಳ ಚಿಕ್ಕವಯಸ್ಸಿನಲ್ಲೇ ಅತಿ ಹೆಚ್ಚು ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡರು.

ಕಡಿಮೆ ಅವಧಿಯಲ್ಲಿ ಅರವತ್ತಕ್ಕೂ ಹೆಚ್ಚು ಸಿನಿಮಾಗಳಿಗೆ ಬಣ್ಣ ಹಚ್ಚಿದಂತಹ ಮಹಾನ್ ನಟ. ಕನ್ನಡ ಮಾತ್ರವಲ್ಲದೆ ಹಿಂದಿ, ತೆಲುಗು, ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿ ತಮ್ಮ ನಟನೆಯ ಛಾಪನ್ನು ಬೀರಿ ಅಗಾಧವಾದ ಹೆಗ್ಗಳಿಕೆಯನ್ನು ಗಳಿಸಿದಂತಹ ನಟ.

ಮದುವೆಗೆ ಬಂದಿದ್ದು 150 ಗೆಸ್ಟ್, ಖರ್ಚಾಗಿದ್ದು ಕೋಟಿ ಕೋಟಿ! ಅಭಿಷೇಕ್ ಅವಿವಾ ಅದ್ಧೂರಿ ವಿವಾಹದ ಲೆಕ್ಕ ಇಲ್ಲಿದೆ

ಮಾಸ್ಟರ್ ಮಂಜುನಾಥ್ ಎನ್ನುತ್ತಿದ್ದ ಹಾಗೆ ನಮ್ಮೆಲ್ಲರ ತಲೆಯಲ್ಲಿ ತಟ್ಟನೆ ಒಳೆಯುವಂತಹ ಮತ್ತೊಂದು ಸರ್ವ ಶ್ರೇಷ್ಠ ನಟನೆಂದರೆ ಕರಾಟೆ ಕಿಂಗ್ ಶಂಕರಣ್ಣ.

Master Manjunath
Image Source: Youtube

ಹೌದು ಶಂಕರ್ ನಾಗ್ (Actor Shankar Nag) ಮತ್ತು ಮಾಸ್ಟರ್ ಮಂಜುನಾಥ್ ತೆರೆಯ ಮೇಲೆ ಮಾಡಿದಂತಹ ಮೋಡಿಯನ್ನು ಯಾರಾದರೂ ಮರೆಯಲು ಸಾಧ್ಯವೇ? ಹೀಗಿರುವಾಗ ಕರಾಟೆ ಕಿಂಗ್ ಶಂಕರ್ ನಾಗ್ ತೀರಿಕೊಂಡ ಮೇಲೆ ಮಾಸ್ಟರ್ ಮಂಜುನಾಥ್ ಸಿನಿಮಾರಂಗಕ್ಕೆ ಕಾಲಿಡದಿರಲಿ ನಿರ್ಧಾರ ಮಾಡಿ ಬಿಡುತ್ತಾರೆ.

ಹೌದು ಗೆಳೆಯರೇ ಮಾಸ್ಟರ್ ಮಂಜುನಾಥ್ ತಮ್ಮೊಳಗಿದ್ದಂತಹ ಕಲೆ ಅಥವಾ ಆಸಕ್ತಿಯಿಂದಾಗಲಿ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟವರಲ್ಲ ಬದಲಿಗೆ ಆಕಸ್ಮಿಕವಾಗಿ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದವರು.

ಕಷ್ಟದಲ್ಲೂ ಎಲ್ಲರನ್ನೂ ನಗಿಸುತ್ತಿದ್ದ ಹಾಸ್ಯ ಚಕ್ರವರ್ತಿ ನರಸಿಂಹರಾಜು ಅವರ ನಿಜ ಜೀವನ ಹೇಗಿತ್ತು ಗೊತ್ತಾ?

ಅವರು ಮೊದಮೊದಲು ನಟನೆ ಮಾಡುವಂತಹ ಸಂದರ್ಭದಲ್ಲಿ ಅವರ ವಯಸ್ಸು ಕೇವಲ ಮೂರು ವರ್ಷ. ಅಂಬರೀಷ್ ಮತ್ತು ಪ್ರಭಾಕರ್ ಎಂಬ ಘಟಾನುಘಟಿಗಳು ಇದ್ದಂತಹ ‘ಅಜಿತ್’ ಎಂಬ ಸಿನಿಮಾದ ಮೂಲಕ ಡೆಬ್ಯು ಮಾಡುತ್ತಾರೆ.

ಈ ಸಿನಿಮಾದಲ್ಲಿ ಚಿಕ್ಕದೊಂದು ಪಾತ್ರ ಮಾಸ್ಟರ್ ಮಂಜುನಾಥ್ ಅವರಿಗಿರುತ್ತದೆ. ಆ ಸಣ್ಣ ಪಾತ್ರದಿಂದ ಎಲ್ಲರ ಗಮನ ಸೆಳೆದಂತಹ ಮಾಸ್ಟರ್ ಮಂಜುನಾಥ್ ಅನಂತರ ‘ಬ್ಯಾಂಕರ್ ಮಾರ್ಗಯ್ಯ’ ಸಿನಿಮಾದಲ್ಲಿ ನಟಿಸಿದ್ದರು. ನಂತರ ಶಂಕ್ರಣ್ಣನ ಕಣ್ಣಿಗೆ ಬಿದ್ದು ಮಾಲ್ಗುಡಿ ಡೇಸ್ನಲ್ಲಿ ತಮ್ಮ ಬದುಕನ್ನೇ ಬದಲಿಸಿಕೊಳ್ಳುತ್ತಾರೆ.

 

ಟಾಪ್ ಬಾಲನಟಿಯಾಗಿದ್ದ ಬೇಬಿ ಶ್ಯಾಮಿಲಿ ಈಗ ಸಿನಿಮಾ ರಂಗಕ್ಕೆ ಬೇಡವಾದ್ರ? ಅಷ್ಟಕ್ಕೂ ಈಕೆ ಈಗ ಹೇಗಿದ್ದಾರೆ, ಎಲ್ಲಿದ್ದಾರೆ?

ಹೌದು ಗೆಳೆಯರೇ ಮಾಲ್ಗುಡಿ ಡೇಸ್ ಮೂಲಕ ಶಂಕರ್ ನಾಗ್ ಹಾಗೂ ಮಂಜುನಾಥ್ ಅವರ ಬಾಂಧವ್ಯ ಬಹಳಷ್ಟು ಗಟ್ಟಿಯಾಯಿತು. ಶಂಕರ್ ನಾಗ್ ತಮಗೆ ಗೊತ್ತಿದ್ದಂತಹ ಕಲೆಯನ್ನು ಮಂಜುನಾಥ್ ಅವರಿಗೆ ದಾರೆ ಎರೆಯುವಂತಹ ಉದ್ದೇಶದಲ್ಲಿದ್ದರು.

Kannada Actor Master Manjunathಇದರ ಪ್ರತಿಫಲ ಎನ್ನುವಂತೆ ಮಂಜುನಾಥ್ ಅವರಿಗೆ ಉತ್ಸವ್ ಎಂಬ ಸಿನಿಮಾದಲ್ಲಿಯೂ ಕೂಡ ಅವಕಾಶ ಸಿಗುತ್ತದೆ. ಹೀಗೆ ಕೈತುಂಬಾ ಸಿನಿಮಾಗಳ ಅವಕಾಶ ಇದ್ದರೂ ಕೂಡ ಮಾಸ್ಟರ್ ಮಂಜುನಾಥ್ ಅವರಿಗೆ ತಾನು ಎಜುಕೇಶನ್ ಕಡೆಗೆ ಗಮನ ವಹಿಸಬೇಕು ಎಂಬ ಯೋಚನೆ ಬಂತು.

ಹೌದು ಗೆಳೆಯರೇ ಕೇವಲ ಮೂರು ವರ್ಷವಿರುವಾಗಲೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಮಾಸ್ಟರ್ ಮಂಜುನಾಥ್ ವಿದ್ಯಾಭ್ಯಾಸದ ಕಡೆಗೆ ಮನಸ್ಸು ಮಾಡಬೇಕು ಎಂಬ ಉದ್ದೇಶದಲ್ಲಿರುತ್ತಾರೆ. ಅಲ್ಲದೆ ಆ ವೇಳೆಗೆ ಅಪಘಾತದಿಂದಾಗಿ ತನ್ನ ಗುರು ಶಂಕರ್ ನಾಗ್ ಅವರನ್ನು ಕಳೆದುಕೊಳ್ಳಬೇಕಾದಂತಹ ಸಂದರ್ಭ ಎದುರಾಗುತ್ತದೆ.

ಕಿವಿ ಕೇಳಿಸದಿದ್ರು ಅಮೋಘ ಅಭಿನಯ ಮಾಡ್ತಿದ್ರು ನಟ ಬಾಲಕೃಷ್ಣ, ಕಿಂಚಿತ್ತು ಕೇಳಿಸದೆ ಹೋದರು 560 ಸಿನಿಮಾಗಳಲ್ಲಿ ಅಭಿನಯಿಸಿದ್ದಾದರೂ ಹೇಗೆ?

ಇದೆಲ್ಲದರಿಂದ ಕಂಗೆಟ್ಟಂತಹ ಮಾಸ್ಟರ್ ಮಂಜುನಾಥ್ ಚಿತ್ರರಂಗದಿಂದ ದೂರ ಉಳಿಯುವ ನಿರ್ಧಾರ ಮಾಡಿ ಬೆಂಗಳೂರಿಗೆ ಬಂದು ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಾರೆ.

ಹೀಗೆ ಬೆಂಗಳೂರಿನ ಯುನಿವರ್ಸಿಟಿ ಒಂದರಲ್ಲಿ ತಮ್ಮ ಪದವಿ ಪಡೆದು ಅನಂತರ ಹೈಯರ್ ಎಜುಕೇಶನ್ಗಾಗಿ ಮಂಗಳೂರಿಗೆ ತೆರಳಿ ಇದೀಗ ಸ್ವಂತ ಉದ್ಯಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಹೀಗೆ ಮೂಲಗಳಿಂದ ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಶಂಕರ್ ನಾಗ್ ಅಗಲಿದ ನಂತರ ಮಾಸ್ಟರ್ ಮಂಜುನಾಥ್ ಎಷ್ಟೇ ಅವಕಾಶಗಳು ಹರಸಿ ಬಂದರು ಕೂಡ ಯಾವುದನ್ನು ಒಪ್ಪಿಕೊಳ್ಳದೆ ಸಿನಿಮಾ ಬದುಕಿಗೆ ಸಂಪೂರ್ಣ ಗುಡ್ ಬೈ ಹೇಳಿಬಿಟ್ಟರು. ಹೀಗೆ ಬೆಳೆದು ದೊಡ್ಡವರಾದ ಬಳಿಕ ಸಿನಿ ನಂಟನ್ನು ಬೆಳೆಸಿಕೊಳ್ಳಲು ಹೋಗಲೇ ಇಲ್ಲ.

why Kannada Actor Master Manjunath does not act even he has opportunities in Cinema Industry