Sandalwood News

ಮಾಲಾಶ್ರೀ ಜೊತೆ ಯಾರೇ ನಟಿಸಿದರು ಸ್ಟಾರ್ ಆಗ್ತಾಯಿದ್ರು, ಆದರೆ ಒಬ್ಬ ನಟ ಮಾತ್ರ ಸ್ಟಾರ್ ಆಗಲೇ ಇಲ್ಲ, ಆತ ಯಾರು ಗೊತ್ತಾ?

ತಮ್ಮ ಅದ್ಭುತ ಸಿನಿಮಾಗಳ ಮೂಲಕ ಅನಂತ್ ನಾಗ್, ಡೈನಮಿಕ್ ಹೀರೋ ದೇವರಾಜ್, ಸುಪ್ರೀಂ ಹೀರೋ ಶಶಿಕುಮಾರ್, ಸುನಿಲ್ ರಂತಹ ನಟರಿಗೆ ಟಕ್ಕರ್ ಕೊಡುವಂತಹ ಅಭಿನಯವನ್ನು ಮಾಡುವ ಮೂಲಕ ಕನ್ನಡ ಚಿತ್ರರಂಗದ ಲೇಡಿ ಡಾನ್ ಎಂಬ ಪಟ್ಟವನ್ನು ಗಿಟ್ಟಿಸಿಕೊಂಡಿದ್ದಂತಹ ಮಾಲಾಶ್ರೀ (actress Malashree) ಅವರು ವರ್ಷ ಒಂದರಲ್ಲಿ ಹದಿನಾರಕ್ಕು ಹೆಚ್ಚು ಕನ್ನಡ ಚಿತ್ರಗಳಲ್ಲಿ (Kannada Cinema) ನಟಿಸುವ ಮೂಲಕ ದಾಖಲೆಯನ್ನೇ ಸೃಷ್ಟಿಸಿದರು.

ಹೀಗೆ ತಮ್ಮ ಅದ್ಭುತ ಅಭಿನಯದ ಛಾಪಿನ ಮೂಲಕ ಒಂದರ ಮೇಲೊಂದರಂತೆ ಹಿಟ್ ಸಿನಿಮಾಗಳನ್ನು ನೀಡುತ್ತಿದ್ದಂತಹ ಮಾಲಾಶ್ರೀ ಅವರೊಂದಿಗೆ ತೆರೆ ಹಂಚಿಕೊಳ್ಳಲು ಸಾಕಷ್ಟು ಸ್ಟಾರ್ ನಟರು ಕಾತುರತೆಯನ್ನು ವ್ಯಕ್ತಪಡಿಸುತ್ತಿದ್ದಂತಹ ಕಾಲವದು.

Kannada actress Malashree

ಉತ್ತುಂಗದ ಶಿಖರದಲ್ಲಿದ್ದ ಮಾಸ್ಟರ್ ಮಂಜುನಾಥ್ ಅವಕಾಶಗಳಿದ್ದರೂ ಅಭಿನಯಿಸದಿರಲು ಕಾರಣವೇನು? ಗುರು ಶಂಕರ್ ನಾಗ್ ಅವರ ಸಾವಿನಿಂದ ಕಂಗೆಟ್ರಾ?

ಹೀಗಿರುವಾಗ ಹೊಸ ನಟರೇನಾದರೂ ಮಾಲಾಶ್ರೀ ಅವರೊಂದಿಗೆ ಅಭಿನಯಿಸುವ ಅವಕಾಶ ಪಡೆದರೆ ಸಾಕು ಅವರು ಸೂಪರ್ ಸ್ಟಾರ್ ಆಗುತ್ತಿದ್ದದ್ದು ಪಕ್ಕ. ಆಗಿನ ಕಾಲದ ಸ್ಟಾರ್ ಸೆಲೆಬ್ರಿಟಿಗಳ ಲಕ್ಕಿ ಚಾಮ್ ಎಂದು ಕರೆಯಲ್ಪಡುತ್ತಿದಂತಹ ಮಾಲಾಶ್ರೀ ಅವರು ಯಾವುದೇ ಸ್ಟಾರ್ ನಟರೊಂದಿಗೆ ಅಭಿನಯಿಸಿದರು ಅವರು ಸ್ಟಾರ್ ಆಗುತ್ತಿದ್ದರು.

ಆ ಚಿತ್ರ ಬಹುದೊಡ್ಡ ಮಟ್ಟದಲ್ಲಿ ಸಕ್ಸಸ್ ಕಾಣುತ್ತಿತ್ತು. ಆದರೆ ಕೆಲ ನಟರಿಗೆ ಮಾತ್ರ ಮಾಲಾಶ್ರೀ ಅವರ ಅದೃಷ್ಟ ರವಾನೆ ಆಗಲೇ ಇಲ್ಲ. ಅಷ್ಟಕ್ಕೂ ಆತ ಯಾರು ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಲೋಕೇಶ್ ಹಾಗೂ ವಿಷ್ಣುದಾದನ ಜುಗಲ್ ಬಂದಿಯ ಭೂತಯ್ಯನ ಮಗ ಅಯ್ಯು ಸಿನಿಮಾ ಆಗಿನ ಕಾಲಕ್ಕೆ ಮಾಡಿದ ಕಲೆಕ್ಷನ್ ಎಷ್ಟು ಗೊತ್ತಾ?

ಹೌದು ಗೆಳೆಯರೇ ಆಗಿನ ಕಾಲದಲ್ಲಿ ಮಾಲಾಶ್ರೀ ಅವರೊಂದಿಗೆ ತೆರೆ ಹಂಚಿಕೊಂಡಂತಹ ದೇವರಾಜ್, ಶಶಿಕುಮಾರ್, ಸುನಿನ್ ರವರು ಯಶಸ್ಸನ್ನು ಪಡೆದರು.

ಆದರೆ ಕೆಲವೊಮ್ಮೆ ಹಲವಾರು ನಟರು ಇವರ ಜೊತೆ ನಟಿಸಿದ್ದರು ಕೂಡ ಅಷ್ಟು ಯಶಸ್ಸನ್ನು ಪಡೆಯದೆ ಹೋದಂತಹ ಇತಿಹಾಸವೂ ಇದೆ. ಅವರಲ್ಲಿ ಒಬ್ಬರು ‘ರವಿರಾಜ್’ ಬಹುಶಹ ಯಾರು ಈ ರವಿರಾಜ್ ಎಂಬ ಪ್ರಶ್ನೆ ನಿಮ್ಮ ಮನದಲ್ಲಿ ಮೂಡಿರಬಹುದು.

Kannada actress Malashree‘ಅವಳೇ ನನ್ನ ಹೆಂಡತಿ’ ಎಂಬ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ನೀಡಿ ತಾನೊಬ್ಬ ಪ್ರಖ್ಯಾತ ನಿರ್ದೇಶಕನಾಗಬೇಕು ಅಲ್ಲದೆ ಚಿತ್ರರಂಗದಲ್ಲಿ ನೆಲೆ ಕಂಡುಕೊಂಡು ಟಾಪ್ ನಾಯಕನಾಗಬೇಕು ಎಂಬ ಹಂಬಲ ರವಿರಾಜ್ ಅವರಲ್ಲಿ ಬಹಳ ದಿನಗಳಿಂದ ಇತ್ತು. ನಂತರ ರವಿರಾಜ್ ಅವರೇ ನಿರ್ಮಾಣ ಮಾಡಿ ನಾಯಕನಾಗಿ ಅಭಿನಯಿಸಿದಂತಹ ‘ರಾಜ ಕೆಂಪು ರೋಜ’ ಎಂಬ ಸಿನಿಮಾ ಮಾಡುತ್ತಾರೆ.

ಮದುವೆಗೆ ಬಂದಿದ್ದು 150 ಗೆಸ್ಟ್, ಖರ್ಚಾಗಿದ್ದು ಕೋಟಿ ಕೋಟಿ! ಅಭಿಷೇಕ್ ಅವಿವಾ ಅದ್ಧೂರಿ ವಿವಾಹದ ಲೆಕ್ಕ ಇಲ್ಲಿದೆ

ಅಷ್ಟೇ ಅಲ್ಲದೆ ಈ ಚಿತ್ರಕ್ಕೆ ನಾಯಕಿಯನ್ನಾಗಿ ಮಾಲಾಶ್ರೀ ಅವರನ್ನು ಕೂಡ ಆಯ್ಕೆ ಮಾಡಿಕೊಳ್ಳುತ್ತಾರೆ. ಮಾಲಾಶ್ರೀ ಅವರು ಆಗಿನ ಚಿತ್ರರಂಗದಲ್ಲಿ ಯಶಸ್ಸಿನ ಮೊದಲ ಹೆಜ್ಜೆಯನ್ನು ಇಟ್ಟಿದ್ದರು.

ಆ ಸಮಯದಲ್ಲಿ ತೆರೆಗೆ ಬಂದಂತಹ ನಂಜುಂಡಿಕಲ್ಯಾಣ ಹಾಗೂ ಗಜಪತಿ ಗರ್ವಭಂಗ ಇತಿಹಾಸವನ್ನು ಸೃಷ್ಟಿ ಮಾಡಿತ್ತು. ಹೀಗೆ ರಾಘವೇಂದ್ರ ರಾಜಕುಮಾರ್ ಅವರೊಂದಿಗೆ ನಟಿಸಿ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾವನ್ನು ನೀಡಿದಂತಹ ಮಾಲಾಶ್ರೀ ಅವರು ಬೆಳೆಯುತ್ತಿದ್ದಂತಹ ರೀತಿಯೇ ಬೇರೆ. ಹೀಗಾಗಿ ಮಾಲಾಶ್ರೀ ಅವರನ್ನು ತಮ್ಮ ರಾಜ ಕೆಂಪು ರೋಜ ಎಂಬ ಸಿನಿಮಾಗೆ ಆಯ್ಕೆಮಾಡಿಕೊಂಡರು.

ಅಷ್ಟೇ ಅಲ್ಲದೆ ಘಟಾನುಘಟಿಗಳಾದ ಟೈಗರ್ ಪ್ರಭಾಕರ್ ಹಾಗೂ ವಜ್ರಮನಿಯವರನ್ನು ಕೂಡ ಸಿನಿಮಾದಲ್ಲಿ ನಟಿಸುವಂತೆ ಮಾಡಿದರು. ಹೀಗೆ ದೊಡ್ಡ ತಾರಾಗಣವೇ ಇದ್ದಂತಹ ಸಿನಿಮಾ ಅದ್ಯಾಕೋ ಪ್ರೇಕ್ಷಕರಿಗೆ ಇಷ್ಟವಾಗಲಿಲ್ಲ.

ಟಾಪ್ ಬಾಲನಟಿಯಾಗಿದ್ದ ಬೇಬಿ ಶ್ಯಾಮಿಲಿ ಈಗ ಸಿನಿಮಾ ರಂಗಕ್ಕೆ ಬೇಡವಾದ್ರ? ಅಷ್ಟಕ್ಕೂ ಈಕೆ ಈಗ ಹೇಗಿದ್ದಾರೆ, ಎಲ್ಲಿದ್ದಾರೆ?

ಮುದುಡಿದ ಗುಲಾಬಿಯಂತೆ ಸಿನಿಮಾ ಸೋಲನ್ನು ಅನುಭವಿಸಿತು. ಹೀಗಾಗಿ ಸತತ ಸೋಲುಗಳನ್ನು ಕಂಡಂತಹ ರವಿರಾಜ ಅಗಾಧವಾದ ಪ್ರಯತ್ನ ಮಾಡಿದರು ಕೂಡ ಪ್ರೇಕ್ಷಕರ ಮನಸನ್ನು ಗೆಲ್ಲಲು ಸಾಧ್ಯವೇ ಆಗಲಿಲ್ಲ.

Who acted with Kannada actress Malashree became a star

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories