ಟಾಪ್ ನಟಿ ಅನಿಸಿಕೊಂಡಿರುವ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಓದಿರೋದು ಎಷ್ಟನೇ ತರಗತಿ ಗೊತ್ತಾ?
ರಶ್ಮಿಕಾ ಮಂದಣ್ಣ ಅವರು 5ನೇ ತಾರೀಕು ಏಪ್ರಿಲ್ 1996 ರಂದು ನಮ್ಮ ಕರ್ನಾಟಕದ ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಜನಿಸಿದರು, ಕೊಡವ ಕುಟುಂಬದವರಾದ ರಶ್ಮಿಕಾ ಮಂದಣ್ಣ ಕೂರ್ಗ್ ಪಬ್ಲಿಕ್ ಸ್ಕೂಲ್ ನಲ್ಲಿ ಆರಂಭಿಕ ವಿದ್ಯಾಭ್ಯಾಸವನ್ನು ಪಡೆದು ಮೈಸೂರು ಇನ್ಸ್ಟಿಟ್ಯೂಟ್ ಆಫ್ ಕಾಮರ್ಸ್ ಮತ್ತು ಆರ್ಟ್ಸ್ನಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಪಡೆದರು.
Actress Rashmika Mandanna: ಸ್ನೇಹಿತರೆ 2014 ರಲ್ಲಿ ತೆರೆ ಕಂಡ ರಕ್ಷಿತ್ ಶೆಟ್ಟಿ ಅಭಿನಯದ ಕಿರಿಕ್ ಪಾರ್ಟಿ ಕನ್ನಡ ಸಿನಿಮಾದ (Kirik Party Kannada Cinema) ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದಂತಹ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (National Crush Rashmika Mandanna) ಇದೀಗ ತೆಲುಗು, ತಮಿಳು, ಮಲಯಾಳಂ, ಹಿಂದಿ ಸೇರಿದಂತೆ ಎಲ್ಲಾ ಭಾಷೆಗಳಿಗೂ ಬೇಡಿಕೆ ಇರುವಂತಹ ಏಕೈಕ ನಟಿಯಾಗಿ ಹೊರಹೊಮ್ಮಿದ್ದಾರೆ.
ಹೌದು ಗೆಳೆಯರೆ ಅಚಾನಕ್ಕಾಗಿ ಸಿನಿಮಾ ರಂಗವನ್ನು ಪ್ರವೇಶ ಮಾಡಿದ ಈ ಕೊಡಗಿನ ಕುವರಿಗೆ ಸಾಲು ಸಾಲು ಸಿನಿಮಾಗಳ ಅವಕಾಶ ಹರಸಿ ಬರುತ್ತಿದ್ದು, ನಾವಿವತ್ತು ನ್ಯಾಷನಲ್ ಕ್ರಶ್ ಸ್ಥಾನವನ್ನು ಅಲಂಕರಿಸಿರುವ ನಟಿ ರಶ್ಮಿಕಾ ಮಂದಣ್ಣ ಓದಿರುವುದು (Rashmika Education) ಎಷ್ಟು ಎಂಬ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.
ನಿಮಗೂ ಕೂಡ ಈ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಸ್ನೇಹಿತರೆ ನಟಿ ರಶ್ಮಿಕಾ ಮಂದಣ್ಣ ಅವರು 5ನೇ ತಾರೀಕು ಏಪ್ರಿಲ್ 1996 ರಂದು ನಮ್ಮ ಕರ್ನಾಟಕದ ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಜನಿಸಿದರು, ಕೊಡವ ಕುಟುಂಬದವರಾದ ರಶ್ಮಿಕಾ ಮಂದಣ್ಣ ಕೂರ್ಗ್ ಪಬ್ಲಿಕ್ ಸ್ಕೂಲ್ ನಲ್ಲಿ ಆರಂಭಿಕ ವಿದ್ಯಾಭ್ಯಾಸವನ್ನು (Studies) ಪಡೆದು ಮೈಸೂರು ಇನ್ಸ್ಟಿಟ್ಯೂಟ್ ಆಫ್ ಕಾಮರ್ಸ್ ಮತ್ತು ಆರ್ಟ್ಸ್ನಲ್ಲಿ ಪದವಿ ಪೂರ್ವ ಶಿಕ್ಷಣವನ್ನು (Degree) ಪಡೆದರು.
ಆನಂತರ ಎಂ ಎಸ್ ರಾಮಯ್ಯ ಕಾಲೇಜ್ ಆಫ್ ಆರ್ಟ್ಸ್ ಸೈನ್ಸ್ ಅಂಡ್ ಕಾಮರ್ಸ್ನಿಂದ ಸೈಕಾಲಜಿ ಜರ್ನಲಿಸಂ ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು.
ರಶ್ಮಿಕಾ ಮಂದಣ್ಣ ಡಿಗ್ರಿ ಓದುತ್ತಿದಂತಹ ಸಂದರ್ಭದಲ್ಲಿ 2014ರ ಬೆಂಗಳೂರು ಟೈಮ್ಸ್ನ (Bengaluru Times) 25 ಅತ್ಯಂತ ಅಪೇಕ್ಷಣೀಯ ಮಹಿಳೆಯರ ಪಟ್ಟಿಯಲ್ಲಿ ರಶ್ಮಿಕಾ ಅವರ ಫೋಟೋ ಪ್ರಕಟವಾಗಿತ್ತು.
ಅದರಲ್ಲಿ ರಶ್ಮಿಕಾ ಅವರು 24ನೇ ಸ್ಥಾನದಲ್ಲಿದ್ದರು. ಕಾಲೇಜು ದಿನಗಳಲ್ಲಿ (College Days) ಮಾಡೆಲಿಂಗ್ ಮಾಡುತ್ತಿದಂತಹ ರಶ್ಮಿಕಾ ಮಂದಣ್ಣ ಅವರು ಅದೇ ವರ್ಷದಲ್ಲಿ ಕ್ಲೀನ್ ಅಂಡ್ ಕ್ಲಿಯರ್ ಫ್ರೆಶ್ ಫೇಸ್ ಆಫ್ ಇಂಡಿಯಾ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದರು. ಜೊತೆಗೆ ಕ್ಲೀನ್ ಅಂಡ್ ಕ್ಲಿಯರ್ ಫ್ರೆಶ್ ಫೇಸ್ನ ಬ್ರಾಂಡ್ ಅಂಬಾಸಿಡರ್ ಆಗಿ ಗುರುತಿಸಿಕೊಂಡಿರು.
ರಶ್ಮಿಕಾ ಮಂದಣ್ಣ ಕ್ಲೀನ್ ಅಂಡ್ ಕ್ಲಿಯರ್ ಫ್ರೆಶ್ ಫೇಸ್ ಆಫ್ ಇಂಡಿಯಾ ಕಾಂಪಿಟೇಶನ್ಗೆ ನೃತ್ಯ ಮಾಡಿದ್ದರು. ಅದನ್ನು ಕಂಡಂತ ತಂಡ ಕಿರಿಕ್ ಪಾರ್ಟಿ ಸಿನಿಮಾದ ಮೊದಲ ಭಾಗದಲ್ಲಿ ನಾಯಕ ನಟಿಯಾಗಿ ನಟಿಸುವಿರಾ ಎಂದು ಕೇಳಿಕೊಳ್ಳುತ್ತಾರೆ.
ಹೀಗೆ ಯೋಚಿಸಿ ಕರ್ಣನ ಕಾಲೇಜ್ ಪ್ರೇಯಸಿ ಸಾನ್ವಿ ಜೋಸೆಫ್ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ಪ್ರಪ್ರಥಮ ಬಾರಿಗೆ ಅಭಿನಯಿಸುವ ಮೂಲಕ ಮೊದಲ ಸಿನಿಮಾದಲ್ಲಿ ಅದೆಷ್ಟೋ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದರು. ಹೀಗೆ ಕೇವಲ 9 ವರ್ಷಗಳಲ್ಲಿ ಬರೋಬ್ಬರಿ 23ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಸದ್ಯ ರಶ್ಮಿಕಾ ಮಂದಣ್ಣ ಬಾಲಿವುಡ್ ಅಂಗಳದಲ್ಲಿ ಮಿಂಚುತ್ತಿದ್ದಾರೆ.
ಯಾರಿಗೂ ಕಾಯದಂತಹ ಕ್ರೇಜಿ ಸ್ಟಾರ್ ರವಿಚಂದ್ರನ್ ಅಂದು ನಟಿ ಸೌಂದರ್ಯಗಾಗಿ ಹಗಲು ರಾತ್ರಿ ಎನ್ನದೆ ಕಾದಿದ್ಯಾಕೆ ಗೊತ್ತಾ?
Education Background of National Crush Actress Rashmika Mandanna