ಎಡಕಲ್ಲು ಗುಡ್ಡದ ಮೇಲೆ ಸಿನಿಮಾವನ್ನು ನಟಿ ಜಯಂತಿ ಮೊದಲು ರಿಜೆಕ್ಟ್ ಮಾಡಿದ್ದು ಯಾಕೆ? ಅನಂತರ ಒಪ್ಪಿಕೊಳ್ಳಲು ಕಾರಣವೇನು ಗೊತ್ತಾ?
ತಮ್ಮ ಮನೋಜ್ಞ ಅಭಿನಯದ ಮೂಲಕ ಡಾ. ರಾಜಕುಮಾರ್ ವಿಷ್ಣುವರ್ಧನ್ ಅವರಂತಹ ಖ್ಯಾತ ನಟರೊಂದಿಗೆ ತೆರೆ ಹಂಚಿಕೊಂಡು ಉತ್ತುಂಗದ ಶಿಖರದಲ್ಲಿದ್ದವರು ನಟಿ ಜಯಂತಿ
Actress Jayanthi : ಸ್ನೇಹಿತರೆ, ಕನ್ನಡ ಸಿನಿಮಾ ರಂಗದ (Kannada Cinema Industry) ಅಭಿನಯ ಶಾರದೆ ಎಂದೇ ಕರೆಯಲ್ಪಡುವ 80-90 ದಶಕದ ಅತ್ಯಂತ ಪ್ರತಿಭಾವಂತ ನಟಿ ಜಯಂತಿ ಅವರು ಯಾರಿಗೆ ತಾನೇ ಪರಿಚಯವಿರದಿರಲು ಸಾಧ್ಯ?
ತಮ್ಮ ಮನೋಜ್ಞ ಅಭಿನಯದ ಮೂಲಕ ಡಾ. ರಾಜಕುಮಾರ್ ವಿಷ್ಣುವರ್ಧನ್ ಅವರಂತಹ ಖ್ಯಾತ ನಟರೊಂದಿಗೆ ತೆರೆ ಹಂಚಿಕೊಂಡು ಉತ್ತುಂಗದ ಶಿಖರದಲ್ಲಿದ್ದವರು ನಟಿ ಜಯಂತಿ. ಹೀಗಿರುವಾಗ ಜಯಂತಿಯವರಿಗೆ ಬಿಗ್ ಸಕ್ಸಸ್ ತಂದು ಕೊಟ್ಟಂತಹ ಸಿನಿಮಾ ಎಡಕಲ್ಲು ಗುಡ್ಡದ ಮೇಲೆ (Edakallu Guddada Mele Kannada Cinema) ಚಿತ್ರದ ಕಥೆಯನ್ನು ಕೇಳಿದ ಜಯಂತಿಯವರು ಸಿನಿಮಾದಲ್ಲಿ ಯಾವುದೇ ಕಾರಣಕ್ಕೂ ನಟಿಸುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿಬಿಟ್ಟಿದ್ದರಂತೆ..
ಆನಂತರ ಒಪ್ಪುವಂತೆ ಮಾಡಿದವರು ಯಾರು? ಎಂಬ ಎಲ್ಲಾ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ. ನಿಮಗೂ ಕೂಡ ಈ ಒಂದು ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಗೆಳೆಯರೇ ನಟಿ ಜಯಂತಿಯವರು ಮೂಲತಃ ಬಳ್ಳಾರಿಯವರಾಗಿದ್ದು, ತಮ್ಮ 13ನೇ ವಯಸ್ಸಿನಲ್ಲಿ ಬಾಲ ನಟಿಯಾಗಿ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು, ಅನಂತರ ಮೊದಲ ಬಾರಿಗೆ ಡಾಕ್ಟರ್ ರಾಜಕುಮಾರ್ ಅವರ ಜೇನುಗೂಡು ಸಿನಿಮಾದಲ್ಲಿ ಅಭಿನಯಿಸಿದರು.
ಚಂದವಳ್ಳಿ ತೋಟ ಸಿನಿಮಾ ಬಹುದೊಡ್ಡ ಮಟ್ಟದ ಯಶಸ್ಸನ್ನು ಜಯಂತಿ ಅವರಿಗೆ ತಂದುಕೊಡುತ್ತದೆ. ಹೀಗೆ ಡಾ. ರಾಜಕುಮಾರ್ ಅವರೊಂದಿಗೆ ಅತಿ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ನಟಿಯರ ಪಟ್ಟಿಯಲ್ಲಿ ಜಯಂತಿ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ ಎಂದರೆ ತಪ್ಪಾಗಲಿಕ್ಕಿಲ್ಲ.
ವಿಷ್ಣುವರ್ಧನ್ ಅವರ ನಾಗರಹಾವು ಸಿನಿಮಾದಲ್ಲಿಯೂ ಸಣ್ಣ ಪಾತ್ರ ಒಂದರಲ್ಲಿ ಜಯಂತಿ ಅಭಿನಯಿಸಿ ಪ್ರೇಕ್ಷಕರ ಮನಸ್ಸನ್ನು ಗೆದ್ದರು. ಹೀಗಿರುವಾಗ ಜಯಂತಿ ಅವರು ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದಲ್ಲಿ ತಯಾರಾಗುತ್ತಿದ್ದ ಎಡಕಲ್ಲು ಗುಡ್ಡದ ಮೇಲೆ ಸಿನಿಮಾದಲ್ಲಿ ಅಭಿನಯಿಸಲು ಮನಸ್ಸನ್ನು ಮಾಡಲಿಲ್ಲವಂತೆ.
ಹೌದು ಗೆಳೆಯರೇ ಜಯಂತಿ ಅವರಿಗೆ ಸಿನಿಮಾದ ಕಥೆಯನ್ನು ವಿವರಿಸಿ ತಮ್ಮ ಚಿತ್ರದ ನಾಯಕ ನಟಿಯಾಗಿ ಅಭಿನಯಿಸುವಿರಾ ಎಂದು ಕೇಳಿಕೊಂಡಾಗ..
ಜಯಂತಿಯವರು ಈ ಕಥೆಯಲ್ಲಿ ನೆಗೆಟಿವ್ ಪಾತ್ರಗಳೆ ಹೆಚ್ಚಿದೆ ಆದ್ದರಿಂದ ಬೇರೆ ಯಾರನ್ನಾದರೂ ಆಯ್ಕೆ ಮಾಡಿಕೊಳ್ಳಿ ಎಂದು ಹೇಳುವ ಮುಖಾಂತರ ಜಯಂತಿ ಪುಟ್ಟಣ್ಣ ಅವರ ಸಿನಿಮಾವನ್ನು ರಿಜೆಕ್ಟ್ ಮಾಡುತ್ತಾರೆ.
ಯಾರಿಗೂ ಕಾಯದಂತಹ ಕ್ರೇಜಿ ಸ್ಟಾರ್ ರವಿಚಂದ್ರನ್ ಅಂದು ನಟಿ ಸೌಂದರ್ಯಗಾಗಿ ಹಗಲು ರಾತ್ರಿ ಎನ್ನದೆ ಕಾದಿದ್ಯಾಕೆ ಗೊತ್ತಾ?
ಆದರೆ ಪಟ್ಟು ಬಿಡದ ಪುಟ್ಟಣ್ಣ ಕಣಗಾಲ್, ಜಯಂತಿಯವರ ಮಾತನ್ನು ಅಷ್ಟು ಸುಲಭವಾಗಿ ಒಪ್ಪಲಿಲ್ಲ. ಬದಲಿಗೆ ಈ ಪಾತ್ರವನ್ನು ನಿಮ್ಮಿಂದ ಹೊರತುಪಡಿಸಿ ಬೇರೆ ಯಾರಿಂದಲೂ ಮಾಡಲು ಸಾಧ್ಯವಿಲ್ಲ ಎಂಬುದನ್ನು ನನ್ನ ಮನಸ್ಸು ಹೇಳುತ್ತಿದೆ.
ನೀವು ಅಭಿನಯ ಮಾಡಲೇಬೇಕು ಸಿನಿಮಾ ಸಕ್ಸಸ್ ಕಾಣದೆ ಹೋದಲ್ಲಿ ನಿಮ್ಮ ಮಾತನ್ನು ನಾನು ಒಪ್ಪಿಕೊಂಡು ಕ್ಷಮೆ ಯಾಚಿಸುತ್ತೇನೆ ಎಂದು ಕೇಳಿಕೊಂಡರು. ಹೀಗೆ ಪುಟ್ಟಣ್ಣ ಕಣಗಾಲ್ ಅವರ ಮೇಲೆ ಅಪಾರವಾದ ನಂಬಿಕೆ ಇಟ್ಟು ಜಯಂತಿಯವರು ನೆಗೆಟಿವ್ ಶೇಡ್ನಲ್ಲಿ ಕಾಣಿಸಿಕೊಂಡರು.
ಹೀಗೆ ಸಿನಿಮಾ ಬಿಡುಗಡೆಯಾದ ಮೊದಲ ದಿನದಿಂದ ಹಿಡಿದು 100 ದಿನಗಳ ವರೆಗೂ ಅದ್ಭುತ ಪ್ರದರ್ಶನ ಕಂಡು ಚಿತ್ರವು ಸೂಪರ್ ಹಿಟ್ ಅನಿಸಿಕೊಂಡಿತ್ತು. ಸಿನಿಮಾದಲ್ಲಿ ಅಭಿನಯಿಸಿದ ಪ್ರತಿಯೊಬ್ಬ ಕಲಾವಿದರಿಗೂ ಒಳ್ಳೆಯ ಹೆಸರನ್ನು ತಂದು ಕೊಟ್ಟಿತ್ತು.
Why Kannada Actress Jayanthi first Rejected the movie Edakallu Guddada Mele