Actor Vinod Raj: ಸ್ನೇಹಿತರೆ ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳ ತುಂಬೆಲ್ಲ ವಿನೋದ್ ರಾಜ್ (Vinod Raj) ಹಾಗೂ ಲೀಲಾವತಿ (Leelavathi) ಅಮ್ಮನವರ ವೈಯಕ್ತಿಕ ವಿಚಾರಗಳ ಕುರಿತು ಸಾಕಷ್ಟು ಚರ್ಚೆಯಾಗುತ್ತಿದೆ. ಈ ಕುರಿತು ಮಾಧ್ಯಮದ ಮುಂದೆ ಬಂದು ಪ್ರತಿಕ್ರಿಯೆ ನೀಡಿದ ವಿನೋದ್ ರಾಜ್ ಅವರು ರಾಕಿಂಗ್ ಸ್ಟಾರ್ ಯಶ್ ಅವರ ಡೈಲಾಗ್ ಹೊಡೆದಿದ್ದಾರೆ, ಅಷ್ಟಕ್ಕೂ ಯಾವ ಕಾರಣದಿಂದ ವಿನೋದ್ ರಾಜ್ ಈ ರೀತಿ ಮಾತನಾಡಿದರು?
ತಮ್ಮ ಮದುವೆ (Vinod Raj Marriage) ಅಸಲಿ ಸತ್ಯಗಳ ಕುರಿತು ಆತ ಹೇಳಿದ್ದೇನು ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೇ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಗೆಳೆಯರೇ ಈ ಕುರಿತು ಸಂದರ್ಶನದಲ್ಲಿ ಮಾತನಾಡಲು ಬಂದಂತಹ ವಿನೋದ್ ರಾಜ್ (Vinod Raj Wife) ಅವರಿಗೆ ಆ ಫೋಟೋಗಳು ಎಲ್ಲಿಂದ ಬಂತು? ಅದನ್ನು ಕಳಿಸಿದವರು ಯಾರು? ಮದುವೆಯಾಗಿರುವ ವಿಚಾರವನ್ನು ಗುಟ್ಟಾಗಿ ಇಟ್ಟಿದ್ದರೂ ಯಾಕೆ? ಹೆಂಡತಿ ಮಗ ಈಗ ಎಲ್ಲಿದ್ದಾರೆ?
ಅವರನ್ನು ಭೇಟಿ ಮಾಡಬಹುದಾ? ಎಂಬ ಸಾಕಷ್ಟು ಪ್ರಶ್ನೆಗಳು ಎದ್ದವು. ಇದಕ್ಕೆ ಉತ್ತರ ಕೊಡಲು ಪ್ರಾರಂಭ ಮಾಡಿದ ವಿನೋದ್ ರಾಜ್ ಅವರು “ಆ ಫೋಟೋಗಳು ಎಲ್ಲಿ ಸಿಕ್ತು, ಯಾರು ಕೊಟ್ಟರು ಎಂಬುದು ಗೊತ್ತಿಲ್ಲ, ಆದರೆ ಯಶ್ ಅವರ ಸಿನಿಮಾದಲ್ಲಿ ಒಂದು ಡೈಲಾಗ್ ಇದೆ.. ದುಶ್ಮನ್ ಕಿದರ್ ಹೇ ಅಂದ್ರೆ ಊರ್ ತುಂಬಾ ಹೈ ಅಂತ ನಮ್ಮ ಪರಿಸ್ಥಿತಿನು ಹಾಗೆ ಆಗಿರಬಹುದು. ಅಮ್ಮ ಇಳಿವಯಸ್ಸಿನಲ್ಲಿ ನೆಮ್ಮದಿಯಾಗಿದ್ದಾರೆ.
ಅವರನ್ನು ಹಾಗೆ ಇರಲು ಬಿಟ್ಟುಬಿಡಿ ಅವರು ನಮ್ಮ ಕರ್ನಾಟಕದ ಆಸ್ತಿ. ನಮ್ಮ ವೈಯಕ್ತಿಕ ಸುದ್ದಿಗಳನ್ನು ಈ ರೀತಿ ಕೆದಕಿ ಕೆದಕಿ ಹೇಳುವವರು ನರಕಕ್ಕೆ ಹೋಗುತ್ತಾರೆ. ನಮ್ಮ ಅಂತರಂಗದ ಸುದ್ದಿಗಳನ್ನು ಈ ರೀತಿ ಕೇಳುತ್ತಾರೆ ಎಂದು ಬೇಸರವಾಗುತ್ತದೆ, ಯಾರು ಏನೇ ಹೇಳಲಿ ನಾನು ನನ್ನ ಆತ್ಮಸಾಕ್ಷಿಯಂತೆ ನಡೆದುಕೊಂಡಿದ್ದೇನೆ” ಎಂದು ವಿನೋದ್ ರಾಜ್ ಮಾಧ್ಯಮದ ಮುಂದೆ ಬೇಸರ ವ್ಯಕ್ತಪಡಿಸಿದರು.
ಹೌದು ಗೆಳೆಯರೇ ಕಳೆದ ವಾರಗಳಿಂದ ವಿನೋದ್ ರಾಜ್ ಹಾಗೂ ಲೀಲಾವತಿ ಅಮ್ಮನವರ ವೈಯಕ್ತಿಕ ವಿಚಾರಗಳು ಬಹು ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿದ್ದವು.
ಲೀಲಾವತಿ ಅಮ್ಮನವರು ಮಹಾಲಿಂಗ ಭಾಗವತರ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಇದಕ್ಕೆ ಸಾಕ್ಷಿಯಾಗಿ ಆಸ್ತಿ ಪತ್ರದಲ್ಲಿ ಅವರ ಪತಿಯ ಹೆಸರನ್ನು ತಮಿಳಿನಲ್ಲಿ ನಮೂದಿಸಲಾಗಿದೆ. ಅದರಂತೆ ವಿನೋದ್ ರಾಜ್ ಅವರು ಹಲವಾರು ವರ್ಷಗಳ ಹಿಂದೆ ಅನು ಎಂಬ ಮನೆ ಕೆಲಸದಕೆಯೊಂದಿಗೆ ತಿರುಪತಿಯಲ್ಲಿ ಮದುವೆಯಾಗಿದ್ದು (Vinod Raj Wife), ಇವರಿಗೆ ಯುವರಾಜ್ ಎಂಬ ಇಂಜಿನಿಯರಿಂಗ್ ಓದುತ್ತಿರುವಂತಹ ಮಗನು ಕೂಡ ಇದ್ದಾನೆ ಎಂಬ ಸುದ್ದಿ ವೈರಲ್ ಆಗುತ್ತಿದೆ. ಈ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮಗೆ ಕಮೆಂಟ್ ಬಾಕ್ಸ್ ಮೂಲಕ ತಿಳಿಸಿ.
Real facts of Actor Vinod Raj Marriage Goes Viral, know what he said to Media
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.