Actor Darshan: ಸಾಮಾನ್ಯವಾಗಿ ಅಭಿಮಾನಿಗಳು ತಮ್ಮ ನೆಚ್ಚಿನ ನಟ ಅಥವಾ ನಟಿಯ ಮೇಲಿನ ಪ್ರೀತಿಯನ್ನು ಭಿನ್ನ-ಭಿನ್ನವಾಗಿ ವ್ಯಕ್ತಪಡಿಸುತ್ತಲೇ ಇರುತ್ತಾರೆ, ಅದೆಷ್ಟೋ ಜನ ಅಭಿಮಾನಿಗಳು ತನ್ನ ನೆಚ್ಚಿನ ನಟನ ಪ್ರತಿಯೊಂದು ಸಿನಿಮಾದ ಹೆಸರನ್ನು ತಮ್ಮ ದೇಹದ ಮೇಲೆ ಆಚ್ಚೆ ಹಾಕಿಸಿಕೊಂಡು ಅಭಿಮಾನ ಮೆರೆದರೆ ಇನ್ನು ಕೆಲವರು ಆ ನಟನ ಹೆಸರಿನಲ್ಲಿ ರಕ್ತದಾನ ಅನ್ನದಾನವನ್ನು ಮಾಡುವ ಮೂಲಕ ನಾಲ್ಕು ಜನರಿಗೆ ಸಹಾಯವಾಗುವಂತೆ ನಡೆದುಕೊಳ್ಳುತ್ತಾರೆ. ಇದು ಸೆಲೆಬ್ರಿಟಿ ಹಾಗೂ ಅಭಿಮಾನಿಗಳ ನಡುವೆ ಇರುವಂತಹ ಮಧುರವಾದ ಬಾಂಧವ್ಯ ಎಂದರೆ ತಪ್ಪಾಗಲಾರದು.
ಹಿರಿಯ ನಟಿ ಆರತಿ ಸಿನಿಮಾರಂಗ ತೊರೆಯಲು ಕಾರಣವಾದರೂ ಏನು? ಈಗ ಹೇಗಿದ್ದಾರೆ? ಎಲ್ಲಿದ್ದಾರೆ?
ಅದರಂತೆ ಸ್ಟಾರ್ ಸೆಲೆಬ್ರಿಟಿಗಳು ಕೂಡ ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳುವ ಹಾಗೂ ಅವರಿಗೆ ಉಪಯುಕ್ತ ವಾಗುವಂತಹ ಕೆಲಸ ಮಾಡುವ ಮುಖಾಂತರ ಅಭಿಮಾನಿಗಳ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging Star Darshan) ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಹುಟ್ಟು ಹಬ್ಬದ ಸಮಾರಂಭದ ಆಸುಪಾಸಿನಲ್ಲಿ ತಮ್ಮ ಎದೆಯ ಮೇಲೆ ನನ್ನ ಪ್ರೀತಿಯ ಸೆಲೆಬ್ರಿಟಿಸ್ ಎಂಬ ಟ್ಯಾಟು (Tattoo) ಒಂದನ್ನು ಹಾಕಿಕೊಂಡಿದ್ದರು.
ಆದರೆ ಇದೀಗ ವೈರಲ್ ಆಗುತ್ತಿರುವ ದರ್ಶನ್ ಅವರ ರೀಸೆಂಟ್ ವರ್ಕೌಟ್ ವಿಡಿಯೋದಲ್ಲಿ (Darshan Workout Video) ದರ್ಶನ್ ಎದೆ ಮೇಲಿದ್ದಂತಹ ಟ್ಯಾಟು ಮಾಯಾ ಆಗಿರುವುದನ್ನು ಕಂಡು ಕಾಲೆಳೆದ ನೆಟ್ಟಿಗರಿಗೆ ಡಿ ಬಾಸ್ ಅಭಿಮಾನಿಗಳು (D Boss Fans) ಕೊಟ್ಟಂತಹ ಉತ್ತರ ಹೇಗಿತ್ತು ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೇ ಸಂಪೂರ್ಣವಾಗಿ ಓದಿ.
ಹೌದು ಗೆಳೆಯರೇ ನಟ ದರ್ಶನ್ ಫೆಬ್ರವರಿ ತಿಂಗಳಿನ ಎರಡನೇ ವಾರದಲ್ಲಿ ಖ್ಯಾತ ಟ್ಯಾಟೂ ಆರ್ಟಿಸ್ಟ್ ಒಬ್ಬರನ್ನು ಸಂಪರ್ಕಿಸಿ ತಮ್ಮ ಎದೆಯ ಮೇಲೆ ಅಭಿಮಾನಿಗಳಿಗೋಸ್ಕರ ನನ್ನ ಪ್ರೀತಿಯ ಸೆಲೆಬ್ರಿಟಿಸ್ ಎಂಬ ಟ್ಯಾಟು ಹಾಕಿಕೊಂಡು ತಾವು ಅಭಿಮಾನಿಗಳಿಗೆ ತೋರುವ ಪ್ರೀತಿ ಎಂತದ್ದು ಎಂಬುದನ್ನು ಸಾಬೀತುಪಡಿಸಿದ್ದರು.
ಆದರಿಗ ದರ್ಶನ್ ಇತ್ತೀಚಿನ ಕೆಲವು ದಿನಗಳ ಹಿಂದಷ್ಟೇ ಮಾಡಿರುವಂತಹ ವರ್ಕೌಟ್ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲಾಗುತ್ತಿದ್ದು, ಅದರಲ್ಲಿ ದರ್ಶನ್ ಸಂಪೂರ್ಣ ದೇಹದ ವರ್ಕೌಟ್ ಹೇಗೆ ಮಾಡುವುದು ಎಂಬುದನ್ನು ತೋರಿಸಿದ್ದಾರೆ.
ಹೀಗೆ ವಿಡಿಯೋ ಕೊನೆಯಲ್ಲಿ ತಮ್ಮ ಟೀ ಶರ್ಟ್ ತೆಗೆದು ಕಟ್ಟು ಮಸ್ತಾದ ದೇಹದ ಪ್ರದರ್ಶನ ಮಾಡಿದ್ದು ಅಲ್ಲಿ ನನ್ನ ಸೆಲೆಬ್ರಿಟಿಸ್ ಎಂಬ ಟ್ಯಾಟೂ ಇಲ್ಲದಿರುವುದು ನೆಟ್ಟಿಗರ ಮುಂಗೋಪಕ್ಕೆ ಗುರಿಯಾಗಿದೆ. ಇದನ್ನೇ ಹಿಡಿದುಕೊಂಡು ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಹಾಗೂ ಇತರೆ ಅಭಿಮಾನಿಗಳು ಸ್ಟಾರ್ ವಾರನ್ನೇ ಶುರು ಮಾಡಿದರು.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ನಕಲಿ ಟ್ಯಾಟೂ ಹಾಕಿಸಿಕೊಂಡಿದ್ದಾರೆ ಅದು ಪರಮನೆಂಟ್ ಅಲ್ಲ ಎಂದಿದ್ದಾರೆ, ಆದರೆ ಇದ್ಯಾವುದನ್ನು ಒಪ್ಪಿಕೊಳ್ಳದ ಡಿ ಬಾಸ್ ಅಭಿಮಾನಿಗಳು ಇದು ದರ್ಶನ್ ಅವರ ಇತ್ತೀಚಿನ ವಿಡಿಯೋ ಅಲ್ಲ, ಬದಲಿಗೆ ಅವರು ಫೆಬ್ರವರಿಗೂ ಮುನ್ನ ಮಾಡಿರುವಂತಹ ವರ್ಕೌಟ್ ವಿಡಿಯೋ ಇದು. ಅವರು ಪ್ರತಿ ದಿನ ವರ್ಕೌಟ್ ಮಾಡುತ್ತಲೇ ಇರುತ್ತಾರೆ ಆದರೆ ಈ ಹಳೆಯ ವಿಡಿಯೋ ಈಗ ವೈರಲ್ ಆಗುತ್ತಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಸಿನಿಮಾ ರಂಗಕ್ಕೆ ಕಾಲಿಟ್ಟ ಕೆಲವೇ ದಿನಗಳಲ್ಲಿ ರೀಷ್ಮಾ ನಾನಯ್ಯ ಗಳಿಸಿದ ಆಸ್ತಿ ಎಷ್ಟು ಗೊತ್ತೇ ?
tattoo disappears in Actor Darshan new workout video Goes Viral
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.