ಸ್ನೇಹಿತರೆ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Power Star Puneeth Rajkumar) ಎಂಬ ಆಲದ ಮರ ನಮ್ಮೆಲ್ಲರಿಂದ ಅಗಲಿ ಬರೋಬ್ಬರಿ ಒಂದುವರೆ ವರ್ಷಗಳು ಕಳೆಯುತ್ತಾ ಬರುತ್ತಿದೆ. ಆದರೂ ಕೂಡ ಅಪ್ಪು ಇನ್ನಿಲ್ಲ ಎಂಬ ಸತ್ಯವನ್ನು ಯಾರಿಂದಲೂ ಕೂಡ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಅಪ್ಪು (Appu) ನಮ್ಮೊಂದಿಗೆ ನಾವು ಮಾಡುತ್ತಿರುವಂತಹ ಕಾರ್ಯದಲ್ಲಿ ಜೀವಂತವಾಗಿದ್ದಾರೆ ಎಂದು ಅಪ್ಪು ಹಾಕಿಕೊಟ್ಟಂತಹ ದಾರಿಯಲ್ಲಿ ದಾನ ಧರ್ಮಗಳನ್ನು ಮಾಡುತ್ತಾ ಸನ್ಮಾರ್ಗದಲ್ಲಿ ನಡೆಯುತ್ತಿರುವಂತಹ ಅಭಿಮಾನಿಗಳ ಸಂಖ್ಯೆ (Appu Fans) ಅಪಾರ ಇವರ ಅಗಲಿಕೆ ನಮ್ಮೆಲ್ಲರಿಗೂ ತುಂಬಲಾರದಂತಹ ನಷ್ಟವನ್ನು ಉಂಟು ಮಾಡಿರುವುದು ಸತ್ಯ.
ಡಾ ರಾಜಕುಮಾರ್ ಅತ್ಯಂತ ಇಷ್ಟ ಪಟ್ಟ ವ್ಯಕ್ತಿ ಯಾರು ಗೊತ್ತೇ? ಅಪ್ಪಾಜಿಗೆ ಪ್ರಿಯವಾದ ವ್ಯಕ್ತಿ ಇವರು!
ಹೀಗಿರುವಾಗ ಪುನೀತ್ ರಾಜಕುಮಾರ್ (Puneeth Rajkumar) ತಾನು ಕಷ್ಟದಲ್ಲಿದ್ದಾಗ ಬಹುದೊಡ್ಡ ಸಹಾಯ ಮಾಡಿದರು, ಆದರೆ ಭಗವಂತನಿಗೆ ಕರುಣೆ ಇಲ್ಲದೆ ಅವರನ್ನೇ ತನ್ನತ್ತ ಕರೆದುಕೊಂಡು ಬಿಟ್ಟಿದ್ದಾನೆ ಎಂಬ ನೋವಿನಿಂದ ಊಟ ನಿದ್ದೆ ಬಿಟ್ಟ ಯುವತಿ ಈಗ ಏನಾಗಿ ಹೋಗಿದ್ದಾಳೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ..
ಹೌದು ಗೆಳೆಯರೇ ಬಲಗೈಯಲ್ಲಿ ಮಾಡಿದಂತಹ ದಾನವು ಎಡಗೈಗೂ ತಿಳಿಯಬಾರದು ಎಂಬುದನ್ನು ಅಚ್ಚುಕಟ್ಟಾಗಿ ಪಾಲಿಸಿದಂತಹ ಪುನೀತ್ ರಾಜಕುಮಾರ್ ತಾವು ಬದುಕಿದ್ದಷ್ಟು ಮಾಡುತ್ತಿದ್ದಂತಹ ದಾನ ಧರ್ಮಗಳು ಕೊಂಚವೂ ಆಚೆ ಬರದ ಹಾಗೆ ನೋಡಿಕೊಂಡರು.
ಆದರೆ ಅಪ್ಪು ನಮ್ಮೆಲ್ಲರಿಂದ ಅಗಲಿದ ಮೇಲೆ ಅವರ ಹೃದಯ ಶ್ರೀಮಂತಿಕೆ ಎಷ್ಟು ತುಂಬಿ ತುಳುಕುತ್ತಿತ್ತು ಎಂಬುದರ ಪರಿಚಯ ಪ್ರತಿಯೊಬ್ಬ ಕನ್ನಡನಿಗೂ ಆಯಿತು.
ಹೀಗೆ ಪುನೀತ್ ರಾಜಕುಮಾರ್ ಅಗಲಿದ ದಿನ ದೇವರ ಫೋಟೋದ ಪಕ್ಕದಲ್ಲಿ ಅಪ್ಪುವಿನ ಫೋಟೋ (Appu Photo) ಇಟ್ಟು ಪೂಜೆ ಮಾಡಿ 18 ವರ್ಷದ ಪ್ರೀತಿ ಎಂಬ ಹುಡುಗಿ ಮಾಧ್ಯಮದ ಮುಂದೆ ನಿಂತು ತನಗೆ ಅಪ್ಪು ಮಾಡಿದ ಸಹಾಯವನ್ನು ಹೇಳಿಕೊಂಡಿದ್ದಳು.
ಹೌದು ಗೆಳೆಯರೇ ದಾವಣಗೆರೆಯ ಚೆನ್ನಗಿರಿ ಪಟ್ಟಣದಲ್ಲಿ ವಾಸವಿರುವಂತಹ ಕುಮಾರ್ ಮತ್ತು ಮಂಜುಳಾ ಎಂಬ ದಂಪತಿಗೆ ಪ್ರೀತಿ ಎಂಬ ಒಬ್ಬಳೇ ಒಬ್ಬಳು ಮುದ್ದಾದ ಮಗಳಿದ್ದಳು, ಆದರೆ ಈಕೆಗೆ ಚಿಕ್ಕಂದಿನಿಂದಲೂ ಕಿಡ್ನಿ ಸಮಸ್ಯೆ ಇತ್ತು…
ಈಕೆಯ ಆಪ ರೇಷನ್ ಗಾಗಿ 12.56 ಲಕ್ಷ ಹಣದ ಅಗತ್ಯ ಇತ್ತಂತೆ. ಈ ಒಂದು ಮಾಹಿತಿ ಪುನೀತ್ ರಾಜಕುಮಾರ್ ಅವರಿಗೆ ತಿಳಿದೊಡನೆ ಹಿಂದೆ ಮುಂದೆ ಯೋಚಿಸದೆ ಆಸ್ಪತ್ರೆಯ ವೆಚ್ಚವನ್ನು ಅಪ್ಪು ನೋಡಿಕೊಂಡು ಆಕೆಗೆ ಬೇಕಾದಂತಹ ಔಷಧಿಯನ್ನೆಲ್ಲ ಕೊಡಿಸಿದ್ದಾರೆ…
ಇದನ್ನು ಸ್ವತಹ ಪ್ರೀತಿಯೇ ಮಾಧ್ಯಮದ ಮುಂದೆ ಬಂದು ಹೇಳುತ್ತಾ ಕಣ್ಣೀರು ಹಾಕಿದಳು. ಆದರೆ ಈಗ ತನ್ನ ಆರಾಧ್ಯ ದೈವನನ್ನು ಕಳೆದುಕೊಂಡ ನೋವಿನಲ್ಲಿ ಪ್ರೀತಿ ಊಟ ನಿದ್ರೆ ಬಿಟ್ಟು ಬಾರದ ಲೋಕಕ್ಕೆ ಮರಳಿದ್ದಾಳೆ.
This Real story is the proof of Puneeth Rajkumar’s helpfulness
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.