ಅತಿಲೋಕ ಸುಂದರಿ ನಟಿ ಅಂಬಿಕಾ ಎಷ್ಟು ಮದುವೆಯಾಗಿದ್ದಾರೆ ಗೊತ್ತಾ? ಇವರ ಪತಿಯರು ಯಾರ್ಯಾರು ಗೊತ್ತಾ!
80-90 ರ ದಶಕದಲ್ಲಿ ತಮ್ಮ ಮಿಂಚಿನ ಅಭಿನಯದ ಮೂಲಕ ಅದೆಷ್ಟೋ ಪಡ್ಡೆ ಹುಡುಗರ ನಿದ್ದೆಗೆಡಿಸಿ ಕನಸಿನ ರಾಣಿ ಆಗಿದ್ದಂತಹ ನಟಿ ಅಂಬಿಕಾ (Actress Ambika) ಅವರು ಸಾಲು ಸಾಲು ಹಿಟ್ ಸಿನಿಮಾಗಳಲ್ಲಿ ನಟಿಸಿ ಕನ್ನಡ (Kannada Cinema), ತೆಲುಗು, ತಮಿಳು ಹಾಗೂ ಮಲಯಾಳಂ ಸಿನಿಮಾ ರಂಗದಲ್ಲಿ ತಮ್ಮದೇ ಆದ ವಿಶಿಷ್ಟ ಬೇಡಿಕೆಯನ್ನು ಸಂಪಾದಿಸಿಕೊಂಡಂತಹ ನಟಿ.
ಅತಿ ಕಡಿಮೆ ಅವಧಿಯಲ್ಲಿ ಹೆಚ್ಚು ಹೆಚ್ಚು ಸಿನಿಮಾಗಳಲ್ಲಿ (Sandalwood) ಅಭಿನಯಿಸುತ್ತ ಪ್ರತಿ ಸಿನಿಮಾ ಇಂಡಸ್ಟ್ರಿಗು ಬೇಕಿದ್ದಂತಹ ಸ್ಟಾರ್ ನಟಿಯಾಗಿ ಹೊರಹೊಮ್ಮಿದ ನಟಿ ಅಂಬಿಕಾ ಅವರು ವೃತ್ತಿ ಬದುಕಿನಲ್ಲಿ ಯಶಸ್ಸು ಕಂಡ ಹಾಗೆ ತಮ್ಮ ವೈಯಕ್ತಿಕ ಬದುಕಿನಲ್ಲಿ ಕಾಣಲಿಲ್ಲ.
ಹೌದು ಗೆಳೆಯರೇ, ಬಾಳ ಸಂಗಾತಿಯ ಆಯ್ಕೆಯಲ್ಲಿ ತಪ್ಪು ನಿರ್ಧಾರವನ್ನು ತೆಗೆದುಕೊಂಡಂತಹ ಅಂಬಿಕಾ (Actress Ambika Real Life) ಅವರು ತಮ್ಮ ವೈಯಕ್ತಿಕ ಬದುಕನ್ನು ಹಾಳು ಮಾಡಿಕೊಂಡರು.
ಹಾಗಾದ್ರೆ ಅಂಬಿಕಾ ಅವರ ಪತಿಯಂದಿರು ಯಾರ್ಯಾರು? ಎಷ್ಟು ಮದುವೆಯಾಗಿದ್ದಾರೆ ಈ ನಟಿ? ಎಂಬ ಎಲ್ಲ ಮಾಹಿತಿಯನ್ನು ಸಂಕ್ಷಿಪ್ತವಾಗಿ ಈ ಪುಟದ ಮುಖಾಂತರ ತಿಳಿಸುವ ಹೊರಟಿದ್ದೇವೆ.
ನಿಮಗೂ ಕೂಡ ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಗೆಳೆಯರೇ 1967 ರಂದು ಜನಿಸಿದ ಅಂಬಿಕಾ ಅವರು ಟೀನೇಜ್ನಲ್ಲೆ ನಟನೆ ಮಾಡಲು ಪ್ರಾರಂಭ ಮಾಡುತ್ತಾರೆ. ಹೌದು ಗೆಳೆಯರೇ ತಮಿಳುನ ‘ಚಕ್ಕಲಾತಿ’ ಎಂಬ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಂತಹ ಈ ನಟಿ ಈ ಮುನ್ನ ಮೂರು ಸಿನಿಮಾಗಳಲ್ಲಿ ಚೈಲ್ಡ್ ಆಕ್ಟ್ರೆಸ್ಸ್ ಆಗಿಯೂ ಕೆಲಸ ಮಾಡಿರುತ್ತಾರೆ.
ಟಾಪ್ ನಟಿ ಅನಿಸಿಕೊಂಡಿರುವ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಓದಿರೋದು ಎಷ್ಟನೇ ತರಗತಿ ಗೊತ್ತಾ?
ಹೀಗೆ ಸಿನಿ ಬದುಕಿನ ಪಯಣವನ್ನು ಆಗಷ್ಟೇ ಶುರು ಮಾಡಿದ ಅಂಬಿಕಾ ಅವರು ಹಲವು ಭಾಷೆಯ ಸಿನಿಮಾ ರಂಗದಲ್ಲಿ ನಟಿಸುತ್ತಾ ಬೇಡಿಕೆಯನ್ನು ಗಿಟ್ಟಿಸಿಕೊಳ್ಳುತ್ತಿದ್ದ ಸಂದರ್ಭದಲ್ಲಿಯೇ ‘ಶೀನು ಜಾನ್’ ಎಂಬುವರೊಂದಿಗೆ 1988 ರಲ್ಲಿ ತಮ್ಮ 25ನೇ ವಯಸ್ಸಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಹೀಗೆ ಮದುವೆಯಾದ ಬಳಿಕ ಸಿನಿಮಾರಂಗದಿಂದ ದೂರ ಉಳಿದು ಅಮೆರಿಕದಲ್ಲಿ ಸೆಟಲ್ ಆಗಿರುತ್ತಾರೆ. ಹೀಗೆ ಎರಡು ಮುದ್ದಾದ ಗಂಡು ಮಕ್ಕಳು ಕೂಡ ಈ ದಂಪತಿಗೆ ಜನಿಸಿದರು.
ಆನಂತರ ವೈಯಕ್ತಿಕ ಬದುಕಿನಲ್ಲಿ ಮೂಡಿದಂತಹ ಕಲಹ ಹಾಗೂ ಮನಸ್ತಾಪದಿಂದಾಗಿ ಅಂಬಿಕ ಮತ್ತು ಶೀನು ವಿಚ್ಛೇದನ ಪಡೆದು ದೂರ ಆಗುತ್ತಾರೆ.
ಆನಂತರ ಅಂಬಿಕಾ ಅವರು ‘ರವಿಕಾಂತ್’ ಎಂಬುವರೊಂದಿಗೆ ಪ್ರೀತಿಯಲ್ಲಿ ಬಿದ್ದು 2000 ಇಸವಿಯಲ್ಲಿ ಎರಡನೇ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆದರೆ ಇವರ ಈ ಸಾಂಸಾರಿಕ ಜೀವನ ಹೆಚ್ಚು ವರ್ಷಗಳ ಕಾಲ ಉಳಿಯಲಿಲ್ಲ 2002ರಲ್ಲಿ ಅವರಿಂದಲೂ ಡೈವೋರ್ಸ್ ಪಡೆದು ಅಂಬಿಕಾ ಒಂಟಿಯಾಗಿ ಜೀವನ ನಡೆಸುತ್ತಿರುತ್ತಾರೆ.
ಹೀಗೆ ಒಂದೆಡೆ ತಮ್ಮ ತಂಗಿ ರಾಧಾ ಅವರು ಮದುವೆಯಾಗಿ ಗಂಡ ಹಾಗೂ ಮಕ್ಕಳೊಂದಿಗೆ ಸುಖ ಜೀವನವನ್ನು ಅನುಭವಿಸುತ್ತಿರುತ್ತಾರೆ. ಆದರೆ ಅಂಬಿಕಾ ಅವರು ಎರಡು ಮದುವೆಗಳಾದರೂ ಕೂಡ ವೈಯಕ್ತಿಕ ಜೀವನದ ಸಂತೋಷ ತನಗೆ ಸಿಕ್ಕಲಿಲ್ಲ ಎಂದು ಖಿನ್ನತೆಗೆ ಜಾರಿದಂತಹ ಉದಾಹರಣೆಗಳಿವೆ.
Unknown Facts About Actress Ambika Real Life Story