ಜಿಯೋ vs ಏರ್‌ಟೆಲ್: 30 ದಿನಗಳ ವ್ಯಾಲಿಡಿಟಿಗೆ ಯಾವುದು ಬೆಸ್ಟ್ ಆಯ್ಕೆ ಗೊತ್ತಾ?

ಜಿಯೋ ಹಾಗೂ ಏರ್ಟೆಲ್ 30 ದಿನಗಳ ವ್ಯಾಲಿಡಿಟಿಯೊಂದಿಗೆ ಎರಡು ವಿಭಿನ್ನ ಪ್ಲಾನ್‌ಗಳನ್ನು ನೀಡುತ್ತಿವೆ. ಬೆಲೆ, ಡೇಟಾ, OTT ಫೀಚರ್ಸ್ ನೋಡಿದಾಗ ಯಾವುದು ಉತ್ತಮ ಅನ್ನೋದು ವಿವರವಾಗಿ ಇಲ್ಲಿದೆ.

  • ಜಿಯೋ ₹335 ಪ್ಲಾನ್‌ನಲ್ಲಿ 25GB ಡೇಟಾ, OTT ಪ್ರವೇಶ
  • ಏರ್ಟೆಲ್ ₹379 ಪ್ಲಾನ್‌ನಲ್ಲಿ ದಿನಕ್ಕೆ 2GB ಡೇಟಾ
  • ಬಜೆಟ್‌ ಮತ್ತು ಬಳಸುವ ಪ್ರಕಾರದ ಮೇಲೆ ಆಯ್ಕೆ ಮಾಡಿಕೊಂಡರೆ ಲಾಭ

Jio vs Airtel : ಟೆಲಿಕಾಂ ಕ್ಷೇತ್ರದಲ್ಲಿ ಪ್ರತಿಷ್ಠಿತ ಸ್ಪರ್ಧೆ ನಡೆಯುತ್ತಿರುವ ಜಿಯೋ (Jio) ಮತ್ತು ಏರ್ಟೆಲ್ (Airtel) ನಡುವೆ ಇದೀಗ 30 ದಿನಗಳ ವ್ಯಾಲಿಡಿಟಿಯ ಜೊತೆಗೆ ಬಜೆಟ್ ಸ್ನೇಹಿ ಪ್ಲಾನ್‌ಗಳ (Recharge Plans) ಯುದ್ಧವೊಂದು ನಡೆದಿದೆ.

ಎರಡು ಕಂಪನಿಗಳು ಕೂಡಾ ವಿಭಿನ್ನ ಬಳಕೆದಾರರ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಪ್ಲಾನ್‌ಗಳನ್ನು ಪರಿಚಯಿಸುತ್ತಿವೆ.

ಇದನ್ನೂ ಓದಿ: 55 ಇಂಚಿನ 4K ಸ್ಮಾರ್ಟ್ ಟಿವಿಗಳು ಈಗ ಡಿಸ್ಕೌಂಟ್‌ನಲ್ಲಿ ಮಾರಾಟ! ಬಂಪರ್ ಕೊಡುಗೆ

ಜಿಯೋ ತನ್ನ ₹335 ಪ್ಲಾನ್‌ನಲ್ಲಿ ಒಟ್ಟು 25GB ಡೇಟಾ ನೀಡುತ್ತದೆ. ಇದರಲ್ಲಿ ದೈನಂದಿನ ಡೇಟಾ ಮಿತಿ ಇಲ್ಲ. ಬಳಕೆದಾರರು ತಮ್ಮ ಅಗತ್ಯಕ್ಕೆ ತಕ್ಕಂತೆ ಈ ಡೇಟಾವನ್ನು 30 ದಿನಗಳಲ್ಲಿ ಯಾವುದೇ ಸಮಯದಲ್ಲಿ ಬಳಸಬಹುದಾಗಿದೆ. ಎಲ್ಲಾ ನೆಟ್‌ವರ್ಕ್‌ಗಳಿಗೆ ಅನ್‌ಲಿಮಿಟೆಡ್ ಕರೆಗಳು (unlimited calling), ಪ್ರತಿದಿನ 100 SMS ಹಾಗೂ JioCinema, JioTV ಮತ್ತು JioCloud (OTT services)ಗೆ ಉಚಿತ ಪ್ರವೇಶ ಸಹ ಇದೆ.

Jio Recharge Plans

ಅತ್ತ ಏರ್ಟೆಲ್ ತನ್ನ ₹379 ಪ್ಲಾನ್‌ನಲ್ಲಿ ಪ್ರತಿ ದಿನ 2GB ಡೇಟಾ ನೀಡುತ್ತದೆ, ಅಂದರೆ ಒಟ್ಟು 60GB ಡೇಟಾ. ಈ ಪ್ಲಾನ್‌ನಲ್ಲಿಯೂ ಎಲ್ಲ ನೆಟ್‌ವರ್ಕ್‌ಗಳಿಗೆ ಅನ್‌ಲಿಮಿಟೆಡ್ ಕರೆಗಳು ಲಭ್ಯವಿವೆ. ಇದಲ್ಲದೆ ಪ್ರತಿದಿನ 100 SMS ಹಾಗೂ Airtel Xstream App (streaming access)ಗೂ ಪ್ರವೇಶ ಸಿಗುತ್ತದೆ.

ಇದನ್ನೂ ಓದಿ: ಪ್ರಿಪೇಯ್ಡ್ to ಪೋಸ್ಟ್‌ಪೇಯ್ಡ್ ಪ್ರಕ್ರಿಯೆ ಈಗ ಸುಲಭ! ಬರಿ ಒಂದೇ ಕ್ಲಿಕ್ ಸಾಕು

Airtel Best Recharge Plan

ಜಿಯೋ ಪ್ಲಾನ್‌ ನೋಡಿದಾಗ, ಇದು ಕಡಿಮೆ ಬೆಲೆಯಲ್ಲಿ OTT ಸೇವೆಗಳನ್ನು ಉಚಿತವಾಗಿ ನೀಡುತ್ತದೆ. ಬಜೆಟ್‌ ಬಳಕೆದಾರರಿಗೆ ಇದು ಉತ್ತಮ ಆಯ್ಕೆ. ಆದರೆ ನಿಮಗೆ ಪ್ರತಿದಿನ ಹೆಚ್ಚು ಡೇಟಾ ಅಗತ್ಯವಿದ್ದರೆ, ಏರ್ಟೆಲ್‌ನ 2GB ಪ್ರತಿ ದಿನ ಪ್ಲಾನ್ ಉಪಯುಕ್ತವಾಗಬಹುದು. ಆದರೆ ಇದರ ಬೆಲೆ ಜಿಯೋ ಪ್ಲಾನ್‌ನಿಗಿಂತ ₹44 ಹೆಚ್ಚು ಇದೆ ಎಂಬುದನ್ನು ಗಮನದಲ್ಲಿಡಬೇಕು.

ಇದನ್ನೂ ಓದಿ: ನಿಮ್ಮ ಬಜೆಟ್ 20 ಸಾವಿರಕ್ಕಿಂತ ಕಡಿಮೆ ಇದ್ದರೆ, ಈ 6 ಸ್ಮಾರ್ಟ್‌ಫೋನ್‌ಗಳು ಬೆಸ್ಟ್ ಚಾಯ್ಸ್

ಅಂತಿಮವಾಗಿ, ನಿಮ್ಮ ಬಳಕೆ ಹೇಗಿದೆ ಎಂಬುದರ ಮೇಲೆ ಆಧಾರಿತವಾಗಿಯೇ ಆಯ್ಕೆ ಮಾಡಿಕೊಳ್ಳಬೇಕು. ದಿನವಿಡೀ ಡೇಟಾ ಬೇಕಾದವರಿಗೆ ಏರ್ಟೆಲ್ ಲಾಭದಾಯಕ. OTT ಹಾಗೂ ಸಾಂದರ್ಭಿಕ ಬಳಸುವವರಿಗೆ ಜಿಯೋ ಉತ್ತಮ ಆಯ್ಕೆ.

Jio vs Airtel, Best 30-Day Plan Compared

About Author:

Sai Teja Vasireddy

6 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿರುವ ಸಾಯಿ ತೇಜಾ ವಾಸಿರೆಡ್ಡಿ ರವರು, ತಂತ್ರಜ್ಞಾನ ಹಾಗೂ ಬಿಸಿನೆಸ್ ಪತ್ರಿಕೋದ್ಯಮದಲ್ಲಿ ಪರಿಣತರು. ವೇಗವಾಗಿ ಬದಲಾಗುವ ಆನ್‌ಲೈನ್…🔸ಇನ್ನಷ್ಟು ಓದಿ »

Related Stories