ರಮ್ಯಾಗೆ ಅಶ್ಲೀಲ ಕಮೆಂಟ್, ಬೆಂಗಳೂರು ಕೆ.ಆರ್.ಪುರಂ ಮೂಲದ ಆರೋಪಿ ಪೊಲೀಸರ ವಶಕ್ಕೆ
ನಟಿ ರಮ್ಯಾ ವಿರುದ್ಧ ಅಶ್ಲೀಲ ಕಮೆಂಟ್ ಪ್ರಕರಣದಲ್ಲಿ ಬೆಂಗಳೂರು ಕೆ.ಆರ್.ಪುರಂ ಮೂಲದ ದರ್ಶನ್ ಅಭಿಮಾನಿ ಪ್ರಮೋದ್ ಗೌಡ ಬಂಧನ. ಇನ್‌ಸ್ಟಾಗ್ರಾಂ ಖಾತೆಯಿಂದ ಕಾಮೆಂಟ್ ಮಾಡಿದ ಆರೋಪಕ್ಕೆ ಸಿಸಿಬಿ ಸೈಬರ್ ಕ್ರೈಂ ಕ್ರಮ.
- ನಟಿ ರಮ್ಯಾ ಮೇಲೆ ಅಶ್ಲೀಲ ಕಮೆಂಟ್ ಆರೋಪ
- ಕೆ.ಆರ್.ಪುರಂ ನಿವಾಸಿ ಪ್ರಮೋದ್ ಗೌಡ ಬಂಧನ
- ಸಿಸಿಬಿ ಸೈಬರ್ ಕ್ರೈಂ ತನಿಖೆ ಮುಂದುವರಿಕೆ
ಬೆಂಗಳೂರು (Bengaluru): ನಟಿ ರಮ್ಯಾ ವಿರುದ್ಧ ಇನ್‌ಸ್ಟಾಗ್ರಾಂನಲ್ಲಿ ಅಶ್ಲೀಲ ಕಾಮೆಂಟ್ (Comment) ಮಾಡಿದ್ದಾನೆಂದು ಆರೋಪಿಸಲ್ಪಟ್ಟ ದರ್ಶನ್ ಅಭಿಮಾನಿಯನ್ನು ಸಿಸಿಬಿ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಆರೋಪಿಯ ಗುರುತು ಕೆ.ಆರ್.ಪುರಂ ನಿವಾಸಿ ಪ್ರಮೋದ್ ಗೌಡ ಎಂದು ದೃಢಪಟ್ಟಿದೆ.
ಪ್ರಕರಣದ ತನಿಖೆಯಲ್ಲಿ, ಪ್ರಮೋದ್ ತನ್ನ ಸ್ನೇಹಿತನ ಫೋನ್ ಬಳಸಿಕೊಂಡು ‘ಪ್ರಮೋದ್ ಗೌಡ 87’ ಹೆಸರಿನಲ್ಲಿ ಇನ್‌ಸ್ಟಾಗ್ರಾಂ ಖಾತೆ ಸೃಷ್ಟಿಸಿದ್ದಾನೆಂಬುದು ಬೆಳಕಿಗೆ ಬಂದಿದೆ.
ಇದನ್ನೂ ಓದಿ: ನಟ ಧ್ರುವ ಸರ್ಜಾ ವಿರುದ್ಧ ಎಫ್‌ಐಆರ್ ದಾಖಲು! ವಿಚಾರ ಏನು ಗೊತ್ತಾ?
ಈ ಖಾತೆಯಿಂದಲೇ ನಟಿ ರಮ್ಯಾ (Actress Ramya) ವಿರುದ್ಧ ಅಶ್ಲೀಲ ಕಮೆಂಟ್‌ಗಳು ಪೋಸ್ಟ್ ಮಾಡಲಾಗಿದ್ದವು.
ಇತ್ತೀಚೆಗೆ ನಟಿ ರಮ್ಯಾ ಸ್ವತಃ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದು, ಅದನ್ನು ಆಧಾರವಾಗಿ ಸಿಸಿಬಿ ತನಿಖೆ ಆರಂಭಿಸಿತ್ತು. ಆರೋಪಿಯನ್ನು ವಶಕ್ಕೆ ಪಡೆದ ಬಳಿಕ ಮೊದಲ ಹಂತದಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ನಂತರ ಕಸ್ಟಡಿಗೆ ಪಡೆದು ವಿಚಾರಣೆ ಮುಂದುವರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಕರ್ನಾಟಕ ರಾಜ್ಯದಲ್ಲಿ ನಿಲ್ಲದ ಮಳೆ ಆರ್ಭಟ, ಇನ್ನೂ 5 ದಿನ ಭಾರೀ ಮಳೆ ಎಚ್ಚರಿಕೆ!
ಸಿಸಿಬಿ ಅಧಿಕಾರಿಗಳು ಉಳಿದ ಆರೋಪಿಗಳ ಪತ್ತೆಗೆ ಈಗಾಗಲೇ ಹುಡುಕಾಟ ಜೋರಾಗಿಸಿದ್ದು, ಸಂಬಂಧಿತ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ. ಈ ಪ್ರಕರಣದಲ್ಲಿ ಇನ್ನಷ್ಟು ಮಾಹಿತಿ ಹೊರಬರುವ ಸಾಧ್ಯತೆ ಇದೆ. ಸ್ವತಃ ಇವರೇ ಕಾಮೆಂಟ್ ಮಾಡಿದ್ದಾರೆಯೇ ಅಥವಾ ಇವರ ಹಿಂದೆ ಯಾರದ್ದಾದರೂ ಕುಮ್ಮಕ್ಕು ಇದೆಯೇ ಎಂಬ ಹಾದಿಯಲ್ಲಿಯೂ ಕೂಡ ತನಿಖೆ ನಡೆಸಲಾಗುತ್ತಿದೆ.
Bengaluru KR Puram Youth Arrested in Ramya Obscene Comment Case



