ನಟ ಧ್ರುವ ಸರ್ಜಾ ವಿರುದ್ಧ ಎಫ್‌ಐಆರ್ ದಾಖಲು! ವಿಚಾರ ಏನು ಗೊತ್ತಾ? - Actor Dhruva Sarja

ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಧ್ರುವ ಸರ್ಜಾ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಸಿನಿಮಾ ಮಾಡುವ ಹೆಸರಿನಲ್ಲಿ 3.15 ಕೋಟಿ ರೂ. ಪಡೆದು ವಂಚನೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿದೆ.

  • ಧ್ರುವ ಸರ್ಜಾ ವಿರುದ್ಧ ಮುಂಬೈ ಠಾಣೆಯಲ್ಲಿ ಎಫ್‌ಐಆರ್
  • ಸಿನಿಮಾ ಮಾಡುವ ನೆಪದಲ್ಲಿ ವಂಚನೆ ಆರೋಪ
  • ರಾಘವೇಂದ್ರ ಹೆಗ್ಡೆ ದೂರು

ಬೆಂಗಳೂರು (Bengaluru): ಜನಪ್ರಿಯ ನಟ ಧ್ರುವ ಸರ್ಜಾ (Actor Dhruva Sarja) ವಿರುದ್ಧ ಗಂಭೀರ ವಂಚನೆ ಪ್ರಕರಣ ದಾಖಲಾಗಿದೆ. ಸಿನಿಮಾ ಮಾಡುವ ಹೆಸರಿನಲ್ಲಿ 3.15 ಕೋಟಿ ರೂಪಾಯಿ ಪಡೆದು, ನಂತರ ಮಾತಿನಂತೆ ಸಿನಿಮಾ ಮಾಡದ ಆರೋಪದಡಿ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ರಾಘವೇಂದ್ರ ಹೆಗ್ಡೆ ಎಂಬವರು ದೂರು ನೀಡಿದ್ದು, 2016ರಿಂದ 2018ರವರೆಗೆ ಧ್ರುವ ಸರ್ಜಾ ಜೊತೆ ಕೆಲಸ ಮಾಡುತ್ತಿದ್ದಾಗ, ಧ್ರುವ ಸರ್ಜಾ ತಮ್ಮ ಬಳಿ “ಸೋಲ್ಜರ್” ಎಂಬ ಸಿನಿಮಾವನ್ನು ಮಾಡುವ ಬಗ್ಗೆ ಸ್ಕ್ರಿಪ್ಟ್ ಹಂಚಿಕೊಂಡಿದ್ದರು ಎಂದು ತಿಳಿಸಿದ್ದಾರೆ. ಆದರೆ, ಒಪ್ಪಂದಕ್ಕೆ ಸಹಿ ಹಾಕುವ ಮೊದಲೇ 3.15 ಕೋಟಿ ರೂಪಾಯಿ ಪಡೆದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ: ಯದ್ವಾತದ್ವ ಬಾಡಿಗೆಗೆ ಕಡಿವಾಣ! ಬಾಡಿಗೆ ಕೊಟ್ಟ ಮನೆ ಮಾಲೀಕರಿಗೆ ಹೊಸ ರೂಲ್ಸ್

ದೂರಿನ ಪ್ರಕಾರ, ರಾಘವೇಂದ್ರ ಹೆಗ್ಡೆ ಹೆಚ್ಚಿನ ಬಡ್ಡಿದರದಲ್ಲಿ ಸಾಲ (Loan) ಪಡೆದು, ಆ ಹಣವನ್ನು ಧ್ರುವ ಸರ್ಜಾ ಒಡೆತನದ ಆರ್‌ಹೆಚ್ ಎಂಟರ್ಟೈನ್ಮೆಂಟ್‌ಗೆ ನೇರವಾಗಿ ವರ್ಗಾವಣೆ ಮಾಡಿದ್ದರು. ಈ ಹಣವನ್ನು ಅವರು ಅಪಾರ್ಟ್ಮೆಂಟ್ ಖರೀದಿಗೆ ಬಳಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.

2019ರ ಫೆಬ್ರವರಿ 21ರಂದು ಅಧಿಕೃತ ಒಪ್ಪಂದ ಮಾಡಿಕೊಳ್ಳಲಾದರೂ, ಹಣದ ವ್ಯವಹಾರವು ಅದರ ಮೊದಲು ನಡೆದಿತ್ತು ಎಂದು ದೂರಿನಲ್ಲಿ ಸ್ಪಷ್ಟಪಡಿಸಲಾಗಿದೆ. ಸದ್ಯಕ್ಕೆ ಅಂಬೋಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ.

Dhruva Sarja booked for cheating case

English Summary▼

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories