ಯದ್ವಾತದ್ವ ಬಾಡಿಗೆಗೆ ಕಡಿವಾಣ! ಬಾಡಿಗೆ ಕೊಟ್ಟ ಮನೆ ಮಾಲೀಕರಿಗೆ ಹೊಸ ರೂಲ್ಸ್ - Karnataka Rent Act

ಕರ್ನಾಟಕ ಸರ್ಕಾರ ಬಾಡಿಗೆ ಕಾಯ್ದೆಗೆ ತಿದ್ದುಪಡಿ ತರಲು ಸಜ್ಜಾಗಿದೆ. ನಿಯಮ ಉಲ್ಲಂಘನೆಗೆ ಭಾರಿ ದಂಡ, ಆನ್‌ಲೈನ್‌ ನೋಂದಣಿ ಕಡ್ಡಾಯ ಮತ್ತು ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಬಾಡಿಗೆ ನಿಗದಿಪಡಿಸುವ ಕ್ರಮ ಜಾರಿಗೆ ಬರಲಿದೆ.

  • ಬಾಡಿಗೆ ಕಾಯ್ದೆಗೆ ತಿದ್ದುಪಡಿ – ಉಲ್ಲಂಘನೆಗೆ ದಂಡ ಹೆಚ್ಚಳ
  • ಆನ್‌ಲೈನ್‌ ನೋಂದಣಿ ಪೋರ್ಟಲ್ ಮೂಲಕ ಬಾಡಿಗೆ ಒಪ್ಪಂದ ಕಡ್ಡಾಯ
  • ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಬಾಡಿಗೆ ನಿಗದಿ

ಬೆಂಗಳೂರು (Bengaluru): ಕರ್ನಾಟಕದಲ್ಲಿ ಬಾಡಿಗೆ ಕಾಯ್ದೆಗೆ ಸರ್ಕಾರ ಮಹತ್ವದ ಬದಲಾವಣೆ ತರಲು ನಿರ್ಧರಿಸಿದೆ. ಹೊಸ ನಿಯಮಗಳ ಪ್ರಕಾರ ಬಾಡಿಗೆದಾರರು ಹಾಗೂ ಮನೆ ಮಾಲೀಕರು ಇಬ್ಬರೂ ನಿಯಮ ಉಲ್ಲಂಘಿಸಿದರೆ ಭಾರಿ ದಂಡ ಬೀಳಲಿದೆ. ದುಬಾರಿ ಬಾಡಿಗೆಗೆ ಕಡಿವಾಣ ಹಾಕಲು ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಬಾಡಿಗೆ ನಿಗದಿಪಡಿಸಲಾಗುವುದು.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಅವರ ನೇತೃತ್ವದ ಸಮಿತಿಯು ತಿದ್ದುಪಡಿಗೆ ಹಸಿರು ನಿಶಾನೆ ತೋರಿದ್ದು, ವಿಧಾನಸಭೆಯಲ್ಲಿ ಶೀಘ್ರ ಮಂಡನೆಗೆ ಸರ್ಕಾರ ಸಜ್ಜಾಗಿದೆ.

ಬೆಂಗಳೂರಿನಂತಹ ನಗರಗಳಲ್ಲಿ ಬಾಡಿಗೆ ಮನೆಗಳ (Rent House in Bengaluru) ಸಂಖ್ಯೆ ಹೆಚ್ಚುತ್ತಿರುವುದರಿಂದ, ಮನೆ ಮಾಲೀಕರ ಮತ್ತು ಬಾಡಿಗೆದಾರರ ನಡುವಿನ ವಿವಾದಗಳೂ ಹೆಚ್ಚುತ್ತಿವೆ.

ಇದನ್ನೂ ಓದಿ: ಕೃಷಿ ಭೂಮಿಯಲ್ಲಿ ಮನೆ–ಕಟ್ಟಡಕ್ಕೆ ಹೊಸ ರೂಲ್ಸ್! ಉಲ್ಲಂಘಿಸಿದರೆ ಕಾನೂನು ಕ್ರಮ

ಬಾಡಿಗೆ ಮನೆಯನ್ನು ಮಾಲೀಕರ ಅನುಮತಿ ಇಲ್ಲದೆ ಬೇರೆಯವರಿಗೆ ನೀಡಿದರೆ, ಈಗಿನ ₹5,000 ದಂಡವನ್ನು ₹50,000ಕ್ಕೆ ಏರಿಸಲಾಗುತ್ತಿದೆ. ಇದೇ ರೀತಿ ಮಾಲೀಕರು ಅನಧಿಕೃತವಾಗಿ ಬಾಡಿಗೆ ನೀಡಲು ಅವಕಾಶ ಮಾಡಿದರೆ, ₹3,000 ದಂಡವನ್ನು ₹30,000ಕ್ಕೆ ಹೆಚ್ಚಿಸಲಾಗುವುದು. ಜೈಲು ಶಿಕ್ಷೆಯ ಬದಲು ದಂಡದ ಮೊತ್ತವನ್ನು ಗಣನೀಯವಾಗಿ ಹೆಚ್ಚಿಸಲಾಗುತ್ತಿದೆ.

ಅನಧಿಕೃತ ಬ್ರೋಕರ್‌ಗಳಿಗೂ ಕಠಿಣ ಕ್ರಮ ಕೈಗೊಳ್ಳಲಾಗಿದ್ದು, ನೋಂದಣಿ ಇಲ್ಲದೆ ಕಾರ್ಯನಿರ್ವಹಿಸಿದರೆ ದಿನಕ್ಕೆ ₹25,000 ದಂಡ ವಿಧಿಸಲಾಗುತ್ತದೆ. ಮೊದಲು ಈ ಮೊತ್ತ ₹2,000 ಇತ್ತು. ತಪ್ಪು ಮರುಕಳಿಸಿದರೆ ಹೆಚ್ಚುವರಿ ₹20,000 ದಂಡ ಬೀಳಲಿದೆ.

ಇದನ್ನೂ ಓದಿ: ನಿಮ್ಮ ಮಕ್ಕಳಿಗೆ 15 ಸಾವಿರ ಸ್ಕಾಲರ್‌ಶಿಪ್‌ ಸಿಗುತ್ತೆ! ಈ ವಿದ್ಯಾಸಿರಿ ಯೋಜನೆ ಬಗ್ಗೆ ಗೊತ್ತಾ?

ಸರ್ಕಾರ (Karnataka Government) ಹೊಸ ಆನ್‌ಲೈನ್‌ ಪೋರ್ಟಲ್ ಪ್ರಾರಂಭಿಸಿದ್ದು, ಇದರಿಂದ ಬಾಡಿಗೆ ಒಪ್ಪಂದಗಳನ್ನು (Rental Agreement) ಕಡ್ಡಾಯವಾಗಿ ನೋಂದಾಯಿಸಬೇಕು. ಈ ಕ್ರಮದಿಂದ ಪಾರದರ್ಶಕತೆ ಹೆಚ್ಚುವುದು, ವ್ಯಾಜ್ಯಗಳು ಕಡಿಮೆಯಾಗುವುದು. ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಬಾಡಿಗೆ ನಿಗದಿ ಮಾಡುವ ಮೂಲಕ, ಏಕಾಏಕಿ ಬಾಡಿಗೆ ಏರಿಕೆಯನ್ನು ತಡೆಯಬಹುದು.

ಮನೆ ಮಾಲೀಕರು ಬಾಡಿಗೆದಾರರನ್ನು ಮನೆಯಿಂದ ಹೊರಹಾಕುವ ಮೊದಲು ನೋಟಿಸ್ ನೀಡುವುದು ಕಡ್ಡಾಯವಾಗಲಿದೆ. ಕಡಿಮೆ ಬಾಡಿಗೆಗೆ ಮನೆ (Rent House) ನೀಡುವವರಿಗೆ ಸರ್ಕಾರ ತೆರಿಗೆ ವಿನಾಯಿತಿ ಮತ್ತು ಸಬ್ಸಿಡಿ ನೀಡಲು ಯೋಚನೆ ಮಾಡುತ್ತಿದೆ. ಫಾಸ್ಟ್‌ಟ್ರ್ಯಾಕ್ ವ್ಯವಸ್ಥೆ ಮೂಲಕ ಬಾಡಿಗೆ ವ್ಯಾಜ್ಯಗಳನ್ನು ಬೇಗನೆ ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳಲಾಗಿದೆ.

Karnataka to Amend Rent Act with Stricter Penalties

English Summary▼

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories