ಮೇವು ಕತ್ತರಿಸುವ ಯಂತ್ರ ಖರೀದಿಗೆ ಸಿಗುತ್ತೆ 50% ಸಬ್ಸಿಡಿ! ರೈತರಿಗೆ ಬಂಪರ್ ಸುದ್ದಿ

ರೈತರಿಗೆ ಕೇಂದ್ರದಿಂದ ಬಂಪರ್ ಆಫರ್; ಈ ಯಂತ್ರ ಖರೀದಿ ಮಾಡಲು ಸಿಗಲಿದೆ 50% ಸಬ್ಸಿಡಿ ಜೊತೆ ಸಾಲ

ಯಾವುದೇ ಕ್ಷೇತ್ರ (field) ಕಾಲಕ್ಕೆ ತಕ್ಕಂತೆ ಬೆಳವಣಿಗೆ ಹೊಂದಬೇಕು, ಅಂದ್ರೆ ಆ ಕ್ಷೇತ್ರದಲ್ಲಿ ಅಗತ್ಯ ಇರುವ ಬದಲಾವಣೆಗಳು ಆಗಬೇಕು, ಉದಾಹರಣೆಗೆ ಕೃಷಿ ಕ್ಷೇತ್ರ (agriculture field) ವನ್ನೇ ತೆಗೆದುಕೊಂಡರೆ ಅದೇ ಹಳೆಯ ಸಾಂಪ್ರದಾಯಿಕ ಪದ್ಧತಿ (traditional method) ಯಲ್ಲಿ ಕೃಷಿ ಮಾಡಿಕೊಂಡು ಇದ್ದರೆ ಅಥವಾ ಯಾವುದೇ ರೀತಿಯ ತಾಂತ್ರಿಕವಾಗಿ ಹಾಗೂ ವೈಜ್ಞಾನಿಕವಾಗಿ ಹೊಸ ಪದ್ದತಿಯನ್ನು ಅಳವಡಿಸಿಕೊಳ್ಳದೆ ಇದ್ದರೆ ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಹಾಗಾಗಿ ಸರ್ಕಾರವು ಕೂಡ ಇಂತಹ ಕ್ಷೇತ್ರಗಳ ಅಭಿವೃದ್ಧಿಗೆ ಮುಂದಾಗಿದೆ.

ಹೌದು, ಕೃಷಿ ಕ್ಷೇತ್ರದಲ್ಲಿ ರೈತರು ಉತ್ತಮ ಬೆಳೆಯನ್ನು ಬೆಳೆಯಲು ಹಾಗೂ ತಮ್ಮ ಉಪಕಸುವನ್ನು ಇನ್ನಷ್ಟು ಉತ್ತಮಗೊಳಿಸಲು ಕೆಲವು ಯಂತ್ರೋಪಕರಣಗಳ (machineries) ಬಳಕೆ ಮಾಡಬೇಕಾಗುತ್ತದೆ.

ಆಧಾರ್ ಕಾರ್ಡ್ ಉಚಿತವಾಗಿ ಅಪ್ಡೇಟ್ ಮಾಡಿಕೊಳ್ಳಿ! ಮಾರ್ಚ್ 14 ಕೊನೆಯ ಗಡುವು

ಮೇವು ಕತ್ತರಿಸುವ ಯಂತ್ರ ಖರೀದಿಗೆ ಸಿಗುತ್ತೆ 50% ಸಬ್ಸಿಡಿ! ರೈತರಿಗೆ ಬಂಪರ್ ಸುದ್ದಿ - Kannada News

ಮೊದಲಿನಂತೆ ಈಗ ಮ್ಯಾನ್ ಪವರ್ ಅಂದರೆ ಗದ್ದೆ, ಹೊಲಗಳಲ್ಲಿ ಕೆಲಸ ಮಾಡುವವರು ಸುಲಭವಾಗಿ ಸಿಗುವುದಿಲ್ಲ. ಹಾಗಾಗಿ ಜನರ ಕೆಲಸವನ್ನು ಯಂತ್ರ ಬಳಕೆ ಮಾಡುವುದು ಅನಿವಾರ್ಯವಾಗಿದೆ.

ಸರ್ಕಾರದಿಂದ ನೀವು ಕತ್ತರಿಸುವ ಯಂತ್ರಕ್ಕೆ ಸಬ್ಸಿಡಿ!

ಹೈನುಗಾರಿಕೆ (dairy farming) ಎನ್ನುವುದು ಹಳ್ಳಿಗಳಲ್ಲಿ ರೈತರು ಹೆಚ್ಚಾಗಿ ಅವಲಂಬಿಸಿರುವ ಉಪ ಕಸುಬು. ಇದರಲ್ಲಿಯೂ ಕೂಡ ಸಾಂಪ್ರದಾಯಿಕ ಪದ್ಧತಿಗಿಂತ ಹೊಸ ರೀತಿಯ ಪದ್ಧತಿಯನ್ನು ಅಳವಡಿಸಿಕೊಂಡು ಬಂದರೆ ಹೆಚ್ಚು ಲಾಭದಾಯಕವಾಗಿರುತ್ತದೆ.

ಸ್ವಲ್ಪ ದೊಡ್ಡ ಪ್ರಮಾಣದಲ್ಲಿ ಹೈನುಗಾರಿಕೆ ಮಾಡುತ್ತಿರುವ ರೈತರಿಗೆ ತಮ್ಮ ಧನ ಕರುಗಳಿಗೆ ಮೇವು ಹಾಕಲು ಹುಲ್ಲು ಕತ್ತರಿಸುವುದು ಅಗತ್ಯವಾಗಿರುತ್ತದೆ. ಹಾಗಾಗಿ ಇದಕ್ಕೆ ಯಂತ್ರವನ್ನು ಬಳಸಬೇಕು.

ಇದೀಗ, ಪಶುಪಾಲನೆ ಮತ್ತು ಪಶು ವೈದ್ಯ ಸೇವಾ ಇಲಾಖೆ, 2023 – 24ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ಅಡಿಯಲ್ಲಿ ರೈತರಿಗೆ ನೀವು ಕತ್ತರಿಸುವ ಯಂತ್ರವನ್ನು ವಿತರಣೆ ಮಾಡಲಾಗುತ್ತಿದೆ ಇದಕ್ಕೆ 50% ಸಬ್ಸಿಡಿ ಸಾಲವನ್ನು (Subsidy Loan) ಸರ್ಕಾರ ನೀಡುತ್ತಿದೆ.

ರೆಟ್ರೋ ಲುಕ್ ನೊಂದಿಗೆ ರೋಡಿಗಿಳಿಯಲಿದೆ RX 100 ಬೈಕ್; ಖರೀದಿಗೆ ಮುಗಿಬಿದ್ದ ಜನ!

fodder cutting machineಸಬ್ಸಿಡಿ ಸಾಲ ಪಡೆದುಕೊಳ್ಳುವುದು ಹೇಗೆ? (How to get subsidy loan)

*ಹೈನುಗಾರಿಕೆ ಮಾಡುವ ರೈತರಿಗೆ 2HP ಸಾಮರ್ಥ್ಯದ ಮೇವು ಕಟಾವು ಯಂತ್ರವನ್ನು ಖರೀದಿ ಮಾಡಬಹುದು.

*33,000 ಘಟಕ ವೆಚ್ಚವಾಗಿದ್ದರೆ 50%ನಷ್ಟು ಸರ್ಕಾರ ಭರಿಸುತ್ತದೆ. ಅಂದರೆ 16,500 ಸಹಾಯಧನವಾಗಿ ಪಡೆಯಬಹುದು.

*ಈ ಯೋಜನೆ ರಾಜ್ಯದ ಎಲ್ಲಾ ಜಿಲ್ಲೆಗಳ ರೈತರಿಗೂ ಕೂಡ ಲಭ್ಯವಿದೆ ಆದರೆ ಮೊದಲು ಅರ್ಜಿ ಸಲ್ಲಿಸಿದವರಿಗೆ ಮೊದಲ ಆದ್ಯತೆಯ ಮೇರೆಗೆ ಸಬ್ಸಿಡಿ ಸಾಲ ಸಿಗುತ್ತದೆ.

ಉಚಿತ ವಸತಿ ಯೋಜನೆಯ ಮನೆ ಹಂಚಿಕೆಗೆ ಪಟ್ಟಿ ಬಿಡುಗಡೆ; ಇಲ್ಲಿದೆ ಮಾಹಿತಿ

ಸಬ್ಸಿಡಿ ಸಾಲ ಪಡೆಯಲು ಬೇಕಾಗಿರುವ ದಾಖಲೆಗಳು! (Needed documents For Loan)

ಆಧಾರ್ ಕಾರ್ಡ್
ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರ (ಎಸ್ ಎಸ್ ಸಿ / ಎಸ್ ಟಿ ವರ್ಗದ ರೈತರಿಗೆ ಮಾತ್ರ)
ವಿಳಾಸ ಪುರಾವೆ
ಜಾನುವಾರುಗಳ ಬಗ್ಗೆ ಪಶು ವೈದ್ಯರಿಂದ ಪಡೆದುಕೊಂಡ ದೃಢೀಕರಣ ಪ್ರಮಾಣ ಪತ್ರ
ಅಂಗವಿಕಲತೆ ಹೊಂದಿರುವ ರೈತರಾಗಿದ್ದರೆ ಪ್ರಮಾಣ ಪತ್ರ
ಇತ್ತೀಚಿನ ಭಾವಚಿತ್ರ

ಬಾಡಿಗೆ ಮನೆಯಲ್ಲಿ ಇರೋರಿಗೆ ಗುಡ್ ನ್ಯೂಸ್! ಇನ್ಮುಂದೆ ಕೊಡಬೇಕಿಲ್ಲ ಅಡ್ವಾನ್ಸ್

ಅರ್ಜಿ ಸಲ್ಲಿಸುವುದು ಹೇಗೆ? (How to apply)

ಹತ್ತಿರದ ಜಿಲ್ಲಾ ಪಶು ವೈದ್ಯ ಆಸ್ಪತ್ರೆಯಲ್ಲಿ ಅರ್ಜಿ ನಮೂನೆಯನ್ನು ಪಡೆದುಕೊಂಡು ಭರ್ತಿ ಮಾಡಿ ಅಗತ್ಯ ಇರುವ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಬೇಕು. ಪಶುಪಾಲನ ಮತ್ತು ಪಶುವೈದ್ಯ ಇಲಾಖೆಯ ಅಧಿಕೃತ ವೆಬ್ಸೈಟ್ https://ahvs.karnataka.gov.in/ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.

Follow us On

FaceBook Google News

50 Percent subsidy for purchase of fodder cutting machine