ನಿಮ್ಮ ಮನೆ, ಜಮೀನು, ಆಸ್ತಿ ಪತ್ರಕ್ಕೆ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯ! ಹೊಸ ಅಪ್ಡೇಟ್
ನೀವು ಯಾವುದೇ ರೀತಿಯ ಆಸ್ತಿ ಖರೀದಿ ಮಾಡಿದ್ದರೆ, ಯಾವುದೇ ರೀತಿ ಆಸ್ತಿಯ ವಾರಸುದಾರರಾಗಿದ್ದರೆ, ನೋಂದಣಿ (property registration) ಸಮಯದಲ್ಲಿ ಈ ಒಂದು ಪ್ರಮುಖ ಕೆಲಸ ಮಾಡದೆ ಇದ್ದಲ್ಲಿ ನೀವು ನಿಮ್ಮ ಆಸ್ತಿಯ ವಿಚಾರದಲ್ಲಿ ಮುಂದೆ ಸಾಕಷ್ಟು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.
ಇದಕ್ಕಾಗಿ ರಾಜ್ಯ ಸರ್ಕಾರ ಮಹತ್ವದ ನಿಯಮ ಒಂದನ್ನು ಜಾರಿಗೆ ತರಲಿದ್ದು, ಕಂದಾಯ ಇಲಾಖೆ ಸಚಿವ ಕೃಷ್ಣ ಬೈರೇಗೌಡ (revenue minister Krishna bairagowda) ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಕೇಂದ್ರ ಸರ್ಕಾರದ ಮತ್ತೊಂದು ಯೋಜನೆ; ಪ್ರತಿದಿನ ಸಿಗಲಿದೆ ₹500 ರೂಪಾಯಿ!
ಆಸ್ತಿ ಪತ್ರಗಳಿಗೆ ಆಧಾರ್ ಲಿಂಕ್! (Aadhar link for property documents)
ಬ್ಯಾಂಕ್ ಖಾತೆಗೆ (Bank Account) ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಲಿಂಕ್ ಎಷ್ಟು ಮುಖ್ಯ ಎನ್ನುವುದು ಈಗಾಗಲೇ ಪ್ರತಿಯೊಬ್ಬರಿಗೂ ತಿಳಿದಿರುತ್ತದೆ. ಇದಕ್ಕೆ ಪೂರಕವಾಗಿ ದೆಹಲಿ ಹೈಕೋರ್ಟ್, ಚರ ಮತ್ತು ಸ್ಥಿರ ಆಸ್ತಿಗೆ ಆಧಾರ್ ಲಿಂಕ್ ಮಾಡುವ ಪ್ರಾತಿನಿಧ್ಯವನ್ನು ಪರಿಗಣಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು ಲಿಂಕ್ ಮಾಡುವ ಬಗ್ಗೆ ಜನರು ಹೆಚ್ಚಿನ ಗಮನವಹಿಸುತ್ತಿದ್ದಾರೆ. ಕಳೆದ ಬುಧವಾರ ದೆಹಲಿ ಹೈಕೋರ್ಟ್ (Delhi High court) ನಲ್ಲಿ ಆಸ್ತಿ ಪತ್ರಗಳಿಗೆ ಆಧಾರ ದಾಖಲೆಗಳನ್ನು ಲಿಂಕ್ ಮಾಡುವ ಬಗ್ಗೆ ಮನವಿ ಸಲ್ಲಿಸಲಾಗಿದ್ದು, ಕೇಂದ್ರ ಸರ್ಕಾರ (Central government) ಕ್ಕೆ ಈ ವಿಷಯವನ್ನು ಪರಿಗಣಿಸುವಂತೆ ದೆಹಲಿ ಹೈಕೋರ್ಟ್ ಕೇಳಿದೆ ಎನ್ನುವ ವರದಿ ಸಿಕ್ಕಿದೆ.
ಬ್ಯಾಂಕ್ ಚೆಕ್ ಹಿಂಭಾಗದಲ್ಲಿ ಏಕೆ ಸೈನ್ ಮಾಡಬೇಕು! ನಿಜವಾದ ಕಾರಣ ಏನು ಗೊತ್ತಾ?
ಆಸ್ತಿ ಪತ್ರಕ್ಕೆ ಆಧಾರ್ ಲಿಂಕ್ ಮಾಡುವ ಪ್ರಯೋಜನ ಏನು?
ಖರೀದಿ ಮತ್ತು ಮಾರಾಟದ ವಿಚಾರದಲ್ಲಿ ಎಷ್ಟೇ ಮುತುವರ್ಜಿಯಿಂದ ಇದ್ದರೂ ಕೂಡ ಸಾಕಾಗುವುದಿಲ್ಲ. ಯಾಕೆಂದರೆ ಆಸ್ತಿ ವಿಚಾರದಲ್ಲಿ ಸಾಕಷ್ಟು ವಂಚನೆ, ಭ್ರಷ್ಟಾಚಾರಗಳು ನಡೆಯುತ್ತವೆ ಇದನ್ನು ತಪ್ಪಿಸುವ ಸಲುವಾಗಿ ನಿಜವಾದ ಆಸ್ತಿ ವಾರಸುದಾರರು ಯಾವುದೇ ಸಮಸ್ಯೆ ಇಲ್ಲದೆ ತಮ್ಮ ಆಸ್ತಿಯನ್ನು ಉಳಿಸಿಕೊಳ್ಳುವ ಸಲುವಾಗಿ ಆಸ್ತಿ ಪತ್ರಕ್ಕೆ ಆಧಾರ್ ಲಿಂಕ್ ಮಾಡಿಸುವುದು ಬಹಳ ಮುಖ್ಯ.
ದೆಹಲಿ ಹೈ ಕೋರ್ಟ್ ನಲ್ಲಿ ಆಧಾರ್ ಲಿಂಕ್ ಮಾಡುವ ಬಗ್ಗೆ ಮನವಿ ಸಲ್ಲಿಕೆ ಮಾಡಲಾಗಿತ್ತು ಹಾಗೂ, ದ್ವಿ ಸದನ ಪೀಠ, ಕೇಂದ್ರ ಸರ್ಕಾರಕ್ಕೆ ಮೂರು ತಿಂಗಳ ಅವಧಿಯ ಒಳಗೆ ಈ ಪ್ರಾತಿನಿಧ್ಯವನ್ನು ಪರಿಗಣಿಸಬೇಕು ಎಂದು ತಿಳಿಸಿದೆ.
ಪ್ಯಾನ್ ಕಾರ್ಡ್ ಕುರಿತು ಹೊಸ ನಿಯಮ! ಈ ತಪ್ಪು ಮಾಡಿದ್ರೆ ಕಟ್ಟಬೇಕು 10,000 ದಂಡ
ಒಂದು ವೇಳೆ ಆಸ್ತಿ ಪತ್ರಕ್ಕೆ, ಆಧಾರ್ ಲಿಂಕ್ ಮಾಡಿಸಿಕೊಂಡರೆ ಆಸ್ತಿಗೆ ಸಂಬಂಧಪಟ್ಟ ಎಲ್ಲಾ ವಿವರಗಳು ಕೂಡ ಸರ್ಕಾರಿ ದಾಖಲೆಯಲ್ಲಿಯೂ ಇರುತ್ತದೆ. ಉದಾಹರಣೆಗೆ ಕಾಲಕಾಲಕ್ಕೆ ತಕ್ಕಂತೆ ಆಸ್ತಿ ಬೆಳವಣಿಗೆ ಆದರೆ ಅದು ಬೇನಾಮಿ ಆಸ್ತಿಯೋ ಅಥವಾ ನಿಜವಾಗಿ ವಾರಸುದಾರರಿಗೆ ಸೇರಿದ್ದೋ ಎನ್ನುವ ವಿಚಾರಗಳು ತಿಳಿಯುತ್ತವೆ. ಹಾಗೂ ಈ ಬಗ್ಗೆ ಸರ್ಕಾರಕ್ಕೆ ಗಮನಹರಿಸಲು ಸಂಬಂಧಪಟ್ಟವರನ್ನು ಪ್ರಶ್ನೆ ಮಾಡಲು ಸುಲಭವಾಗುತ್ತದೆ.
ದೆಹಲಿ ಹೈಕೋರ್ಟ್ ನಲ್ಲಿ ಈ ವಿಚಾರದ ಪ್ರಸ್ತಾವನೆ ನಂತರ ಕೇಂದ್ರ ಸರ್ಕಾರ ಆಧಾರ್ ಲಿಂಕ್ ಮಾಡುವ ಬಗ್ಗೆ ಸದ್ಯದಲ್ಲಿಯೇ ತನ್ನ ನಿಲುವನ್ನು ವ್ಯಕ್ತಪಡಿಸಬಹುದು. ಹಾಗೆಯೇ ಆಸ್ತಿ ಪತ್ರಕ್ಕೆ ಆಧಾರ್ ಲಿಂಕ್ ಕಡ್ಡಾಯ ಎನ್ನುವ ನಿಯಮ ಬಂದರೆ ರಾಜ್ಯದಲ್ಲಿಯೂ ಕೂಡ ತಕ್ಷಣ ಈ ನಿಯಮವನ್ನು ಇಂಪ್ಲಿಮೆಂಟ್ ಮಾಡಿಕೊಳ್ಳಲು ಸಿದ್ಧರಿದ್ದೇವೆ ಎಂದು ಸಚಿವರು ತಿಳಿಸಿದ್ದಾರೆ.
ಯಾವುದೇ ಬ್ಯಾಂಕ್ ನಲ್ಲಿ ಸಾಲ ಮಾಡುವವರಿಗೆ ಆರ್‌ಬಿಐ ಹೊಸ ಸೂಚನೆ! ಇಲ್ಲಿದೆ ಮಾಹಿತಿ
Aadhaar card link is mandatory for your house, land, property deed