ಭರ್ಜರಿ ಆಫರ್, ಕೇವಲ 36,960ಕ್ಕೆ ಎಲೆಕ್ಟ್ರಿಕ್ ಸ್ಕೂಟರ್! 3 ಖರೀದಿಸಿದರೆ ₹1 ಲಕ್ಷ - Electric Scooter Offer
ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲು ಬಯಸುವವರಿಗೆ ಯಾಕುಜಾ ಕಂಪನಿ ಬಂಪರ್ ಆಫರ್ ನೀಡಿದೆ. ಕೇವಲ ₹36,960 ಕ್ಕೆ ಸ್ಕೂಟರ್ ಲಭ್ಯ. 3 ಸ್ಕೂಟರ್ ಖರೀದಿಸಿದರೆ ಕೇವಲ 1 ಲಕ್ಷದಲ್ಲೇ ಸಿಗುತ್ತಿದೆ.

- ಅಗ್ಗದ ದರದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಆಫರ್
- ಯಾಕುಜಾ ನ್ಯೂ ಸ್ಕೂಟರ್ 70-80 ಕಿಮೀ ರೇಂಜ್
- 3 ಸ್ಕೂಟರ್ 1 ಲಕ್ಷ ರೂಪಾಯಿಗೆ ವಿಶೇಷ ಆಫರ್
Electric Scooter Offer : ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ದಿನೇ ದಿನೇ ಹೆಚ್ಚಾಗುತ್ತಿರುವಾಗ, ಯಾಕುಜಾ ನ್ಯೂ ಎಲೆಕ್ಟ್ರಿಕ್ ಸ್ಕೂಟರ್ (Yakuza Electric Scooter) ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ. ಕೇವಲ ₹36,960 ದರದಲ್ಲಿ ಲಭ್ಯವಾಗುತ್ತಿರುವ ಈ ಸ್ಕೂಟರ್ ಯುವಕರಿಂದ ಹಿಡಿದು, ಮಧ್ಯಮ ವರ್ಗದ ಕುಟುಂಬಗಳವರೆಗೆ ಎಲ್ಲರಿಗೂ ಆಕರ್ಷಕ ಆಯ್ಕೆಯಾಗಿದೆ.
ಒಮ್ಮೆ ಫುಲ್ ಚಾರ್ಜ್ ಮಾಡಿದರೆ 70-80 ಕಿಮೀ ವರೆಗೆ ಓಡಬಲ್ಲ ಈ ಸ್ಕೂಟರ್, ದಿನನಿತ್ಯ ನಗರ ಪ್ರದೇಶಗಳಲ್ಲಿ ಸಂಚರಿಸಲು ಸೂಕ್ತವಾಗಿದೆ. 4 ರಿಂದ 5 ಗಂಟೆಯ ಚಾರ್ಜಿಂಗ್ ಟೈಂ ಇದಕ್ಕೆ ಬೇಕಾಗುತ್ತದೆ. ಜೊತೆಗೆ ರಿಜೆನರೇಟಿವ್ ಬ್ರೇಕಿಂಗ್ ಸಿಸ್ಟಮ್ ಇರುವುದರಿಂದ ಬ್ರೇಕ್ ಹಾಕಿದಾಗ ಬ್ಯಾಟರಿ ಸ್ವಲ್ಪ ಮಟ್ಟಿಗೆ ಚಾರ್ಜ್ ಆಗುತ್ತದೆ.
ಇದನ್ನೂ ಓದಿ: ವಾಹ್! 50 ಇಂಚಿನ ಸ್ಮಾರ್ಟ್ ಟಿವಿ ಈಗ 25 ಸಾವಿರಕ್ಕಿಂತ ಕಡಿಮೆ ಬೆಲೆಗೆ ಲಭ್ಯ
ಡಿಜಿಟಲ್ ಡಿಸ್‌ಪ್ಲೇ, ಎಲ್‌ಇಡಿ ಲೈಟ್ ಹಾಗೂ ಸ್ಮಾರ್ಟ್ ಕನೆಕ್ಟಿವಿಟಿ ಫೀಚರ್‌ಗಳಿರುವ ಈ ಸ್ಕೂಟರ್ 6 ವಿಭಿನ್ನ ಬಣ್ಣಗಳಲ್ಲಿ ಲಭ್ಯ. ಲೈಟ್‌ವೆಯ್ಟ್ ಬಾಡಿ ಹಾಗೂ ಆಕರ್ಷಕ ವಿನ್ಯಾಸದಿಂದಾಗಿ ನಗರ ಟ್ರಾಫಿಕ್‌ನಲ್ಲಿ ಸುಲಭವಾಗಿ ಓಡಿಸಬಹುದಾದ ಅನುಭವವನ್ನು ನೀಡುತ್ತದೆ.
ಅಗ್ಗದ ದರದಲ್ಲೇ ಉತ್ತಮ ಫೀಚರ್‌ಗಳನ್ನು ನೀಡುತ್ತಿರುವ ಯಾಕುಜಾ ನ್ಯೂ, ಮಾರುಕಟ್ಟೆಯಲ್ಲಿ ಒಲಾ ಎಲೆಕ್ಟ್ರಿಕ್ ಮತ್ತು ಏಥರ್ ಬ್ರಾಂಡ್‌ಗಳಿಗೆ ಬಲವಾದ ಸ್ಪರ್ಧಿಯಾಗುತ್ತಿದೆ. ಸರ್ಕಾರದ ಸಬ್ಸಿಡಿ ಹಾಗೂ ರಾಜ್ಯ ಮಟ್ಟದ ರಿಯಾಯಿತಿಗಳು ಸೇರಿಕೊಂಡರೆ, ಇದರ ಬೆಲೆ ಇನ್ನೂ ಕಡಿಮೆಯಾಗಬಹುದು.
ಇದನ್ನೂ ಓದಿ: ಏರ್‌ಟೆಲ್-ಜಿಯೋ ಪೈಪೋಟಿ, ಗ್ರಾಹಕರಿಗೆ ಬಿಗ್ ಬೆನಿಫಿಟ್ ಯೋಜನೆ ಬಿಡುಗಡೆ
ಪರಿಸರ ಸ್ನೇಹಿ ಸ್ಕೂಟರ್ ಆಗಿರುವುದರಿಂದ ಪೆಟ್ರೋಲ್ ವೆಚ್ಚವನ್ನು ಉಳಿಸಿ, ಜೀರೋ ಪಲ್ಯೂಶನ್ ಮೂಲಕ ಪರಿಸರ ಸಂರಕ್ಷಣೆಗೆ ಸಹಕಾರಿಯಾಗುತ್ತಿದೆ. ಭಾರತದಲ್ಲಿ ಪೆಟ್ರೋಲ್ ಬೆಲೆ ಏರಿಕೆಯಾಗುತ್ತಿರುವ ಸಂದರ್ಭದಲ್ಲಿದು ಬಹುತೇಕ ಕುಟುಂಬಗಳಿಗೆ ಆರ್ಥಿಕ ಹಾಗೂ ಅನುಕೂಲಕರ ಆಯ್ಕೆಯಾಗಿದೆ.
ಈ ಕಂಪನಿ ತಮ್ಮ ವೆಬ್‌ಸೈಟ್‌ನಲ್ಲಿ ವಿಶೇಷ ಆಫರ್ ನೀಡಿದ್ದು, ಒಟ್ಟಾರೆ 3 ಸ್ಕೂಟರ್ ಖರೀದಿಸಿದರೆ ಕೇವಲ ₹1 ಲಕ್ಷದಲ್ಲೇ ಸಿಗಲಿದೆ. ಈಗಾಗಲೇ ಕೆಲವು ರಾಜ್ಯಗಳಲ್ಲಿ ಬುಕ್ಕಿಂಗ್‌ಗಳು ಜೋರಾಗಿದ್ದು, ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿಯೂ ಮಾರಾಟ ಆರಂಭವಾಗಿದೆ.
ಇದನ್ನೂ ಓದಿ: ಎಲ್ಲಾ ದಾಖಲೆ ಧೂಳಿಪಟ! ಇದೇ ಈಗ ನಂಬರ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಗುರು
ಸೋಶಿಯಲ್ ಮೀಡಿಯಾದಲ್ಲೂ ಈ ಸ್ಕೂಟರ್ ಬಗ್ಗೆ ಚರ್ಚೆ ಜೋರಾಗಿದೆ. ಬೆಲೆ, ಡಿಸೈನ್ ಮತ್ತು ಮೈಲೇಜ್ ಕುರಿತು ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಕೆಲವರು ಸರ್ವಿಸ್ ಸೆಂಟರ್ ಲಭ್ಯತೆ ಮತ್ತು ಬ್ಯಾಟರಿ ಲೈಫ್ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಕಂಪನಿ ಸರ್ವಿಸ್ ನೆಟ್ವರ್ಕ್ ವಿಸ್ತರಿಸುವ ಭರವಸೆ ನೀಡಿದೆ.
Affordable Electric Scooter, Special Offer by Yakuza




