ಇನ್ಮುಂದೆ ಸಿಗಲಿದೆ 300 ಯೂನಿಟ್ ಉಚಿತ ವಿದ್ಯುತ್; ಕೇಂದ್ರ ಸರ್ಕಾರದ ಹೊಸ ಯೋಜನೆ

ರಾಜ್ಯ ಸರ್ಕಾರದ ಗೃಹ ಜ್ಯೋತಿ ಯೋಜನೆ (Gruha Jyothi Yojana) ಯ ಅಡಿಯಲ್ಲಿ 200 ಯೂನಿಟ್ ಗಳ ವರೆಗೆ ಉಚಿತ ವಿದ್ಯುತ್ ಪಡೆದುಕೊಳ್ಳುತ್ತಿರುವವರಿಗೆ ಹಾಗೂ ಈ ಪ್ರಯೋಜನ ಸಿಗದೇ ಇರುವವರೆಗೂ ಕೂಡ ಕೇಂದ್ರ ಸರ್ಕಾರ (Central government) ಮತ್ತೊಂದು ಗುಡ್ ನ್ಯೂಸ್ ನೀಡಿದೆ.

ನೀವು ಈ ಯೋಜನೆ ಮೂಲಕ 300 ಯೂನಿಟ್ ವರೆಗೂ ವಿದ್ಯುತ್ ಉಚಿತವಾಗಿ (Free Electricity) ಪಡೆಯಬಹುದು. ಅಷ್ಟೇ ಅಲ್ಲ ನೀವೇ ವಿದ್ಯುತ್ ಮಾರಾಟ ಮಾಡಿ ಹಣ ಕೂಡ ಸಂಪಾದನೆ ಮಾಡಬಹುದು!

ಇನ್ಮುಂದೆ ಇದಕ್ಕಿಂತ ಹೆಚ್ಚಿನ ಹಣ ಮನೆಯಲ್ಲಿ ಇಡುವಂತಿಲ್ಲ! ಹೊಸ ರೂಲ್ಸ್ ತಿಳಿಯಿರಿ

Surya Ghar Muft Bijli ಯೋಜನೆ!

ಸರ್ಕಾರ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಈಗ ಸೋಲಾರ್ ಪ್ಯಾನೆಲ್ (solar panel) ಗಳನ್ನು ಪ್ರತಿ ಮನೆಗೂ ಅಳವಡಿಸಲು ನಿರ್ಧರಿಸಿದೆ. ಸುಮಾರು ಒಂದು ಕೋಟಿಗೂ ಅಧಿಕ ಮನೆಯ ಮೇಲ್ಚಾವಣಿಯ ಮೇಲೆ ಸೋಲಾರ್ ಪ್ಯಾನೆಲ್ ಅಳವಡಿಸಲು 75,000 ಕೋಟಿ ರೂಪಾಯಿಗಳನ್ನು ಅನುದಾನ ನೀಡಲಾಗಿದೆ. ಈ ಮೂಲಕ 300 ಯೂನಿಟ್ ಉಚಿತ ವಿದ್ಯುತ್ತನ್ನು ಸುಮಾರು ಒಂದು ಕೋಟಿ ಕುಟುಂಬಗಳು ಪಡೆದುಕೊಳ್ಳಲಿವೆ.

ಸರ್ಕಾರದಿಂದ ಸಿಗುತ್ತೆ ಸಬ್ಸಿಡಿ!

ಸೋಲಾರ್ ಪ್ಯಾನೆಲ್ ಅಳವಡಿಸಲು ನಾಗರಿಕರಿಗೆ ಯಾವುದೇ ರೀತಿಯ ಆರ್ಥಿಕ ಹೊರೆ ಆಗದಂತೆ ಬ್ಯಾಂಕ್ ನಲ್ಲಿ ಸಾಲ ಸೌಲಭ್ಯ (Loan facility) ಕೊಡಿಸಿ ಅದಕ್ಕೆ ಕೂಡ ಸರ್ಕಾರ ನೀಡುತ್ತದೆ.

ಇದಕ್ಕಾಗಿ ಕೆಲವು ಥರ್ಡ್ ಪಾರ್ಟಿ ಕಂಪನಿಗಳು ಕೂಡ ಸಹಕರಿಸಲಿದ್ದು, ಅವುಗಳ ಮೂಲಕ ಸರ್ಕಾರ ಜನರಿಗೆ ಸೋಲಾರ್ ಪ್ಯಾನೆಲ್ ಒದಗಿಸುವ ವ್ಯವಸ್ಥೆ ಮಾಡಲಿದೆ. ಇದು ಸಂಪೂರ್ಣ ಡಿಜಿಟಲೀಕರಣವಾಗಿದ್ದು, ಎಲ್ಲಾ ಮಾಹಿತಿಗಳನ್ನು ಆನ್ಲೈನ್ ನಲ್ಲಿ ಅಪ್ಲೋಡ್ ಮಾಡುವುದರ ಮೂಲಕ ಗ್ರಾಹಕರು ಉಚಿತ ಸೋಲಾರ್ ಪ್ಯಾನೆಲ್ ಪಡೆದುಕೊಳ್ಳಬಹುದು.

ನಿಮ್ಮ ಬ್ಯಾಂಕ್ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಎಷ್ಟಿರಬೇಕು! ಇಲ್ಲಿದೆ ಬಿಗ್ ಅಪ್ಡೇಟ್

get 300 units of free electricity, New Scheme of Central Govtಈ ಯೋಜನೆಯನ್ನು ಸಾಕಾರಗೊಳಿಸಲು ಹಾಗೂ ಆರಂಭದಿಂದಲೇ ಜನರಿಗೆ ತಲುಪಿಸಲು, ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತ್ಗಳು ಜನರನ್ನು ಪ್ರೋತ್ಸಾಹಿಸಬೇಕು. ಉಚಿತ ಸೋಲಾರ್ ವ್ಯವಸ್ಥೆಯಿಂದಾಗಿ ಜನರ ವಿದ್ಯುತ್ ವೆಚ್ಚ ಕಡಿಮೆಯಾಗುತ್ತದೆ. ಜೊತೆಗೆ ಸಾಕಷ್ಟು ಉದ್ಯೋಗ ಕೂಡ ಸೃಷ್ಟಿಯಾಗುತ್ತಿದೆ. ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರು ತಮ್ಮ (X) ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಈ ಬ್ಯಾಂಕುಗಳಲ್ಲಿ ಸಿಗುತ್ತೆ ಕಡಿಮೆ ಬಡ್ಡಿಗೆ ಪರ್ಸನಲ್ ಲೋನ್! ಇಲ್ಲಿದೆ ಬ್ಯಾಂಕುಗಳ ಪಟ್ಟಿ

“ನಾವು ಸೌರಶಕ್ತಿ ಸುಸ್ಥಿರ ಅಭಿವೃದ್ಧಿಯನ್ನು ಹೆಚ್ಚಿಸೋಣ. ಎಲ್ಲಾ ವಸತಿ ಗ್ರಾಹಕರು ವಿಶೇಷವಾಗಿ ಯುವಕರು ಈ ಯೋಜನೆಗೆ ಹೆಚ್ಚಿನ ಬೆಂಬಲ ನೀಡಲು http://at-pmsuryaghar.gov.in/ ಮೂಲಕ ಸಹಕರಿಸಬೇಕು. ಎಂದು ಮೋದಿಜಿ ಅವರ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ.

ಇನ್ನೇನು ಸದ್ಯದಲ್ಲಿಯೇ ಪ್ರತಿ ಮನೆಯ ಮೇಲ್ಚಾವಣಿಯ ಮೇಲೆ ಸೋಲಾರ್ ಪ್ಯಾನೆಲ್ ಅಳವಡಿಸುವ ವ್ಯವಸ್ಥೆ ಆರಂಭವಾಗುತ್ತದೆ. ಗ್ರಾಹಕರು ಆದಷ್ಟು ಸರಕಾರದೊಂದಿಗೆ ಕೈಜೋಡಿಸಿ ತಮ್ಮ ಮನೆಯ ಮೇಲ್ಚಾವಣಿಯ ಮೇಲೆ ಸೋಲಾರ್ ಅಳವಡಿಸಲು ಸಹಕರಿಸಿದರೆ, 300 unit ವರೆಗೆ ಉಚಿತ ವಿದ್ಯುತ್ ಪಡೆದುಕೊಳ್ಳುವುದು ಮಾತ್ರವಲ್ಲದೆ ಅದರಿಂದಲೇ ಆದಾಯವನ್ನು ಕೂಡ ಗಳಿಸಬಹುದು.

ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳಲು ಕೊನೆಯ ಗಡುವು! 30 ದಿನ ಮಾತ್ರ ಅವಕಾಶ

get 300 units of free electricity, New Scheme of Central Govt

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories