ಹಬ್ಬದ ಸೀಸನ್ ಎಫೆಕ್ಟ್, ಮತ್ತೆ ಚಿನ್ನದ ಬೆಲೆ ಏರಿಕೆ! ಇಲ್ಲಿದೆ ಬೆಂಗಳೂರು ಬೆಲೆಗಳು - Gold Price Today

Gold Price Today : ಚಿನ್ನದ ಬೆಲೆಗಳು ಏರಿಕೆ ಕಂಡಿದ್ದು, ಬೆಂಗಳೂರಿನಲ್ಲಿ 24 ಕ್ಯಾರೆಟ್ ಬಂಗಾರ ತುಲಾ ₹1,49,000 ತಲುಪಿದೆ. ಈ ಹಬ್ಬದ ವೇಳೆ ದರಗಳು ಇನ್ನಷ್ಟು ಏರಿಕೆಯಾಗುವ ನಿರೀಕ್ಷೆ.

  • ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ತುಲಾ ಬಂಗಾರದ ಬೆಲೆ ₹1.49 ಲಕ್ಷ
  • ಬಂಗಾರದ ಜೊತೆ ಬೆಳ್ಳಿ ಬೆಲೆಯಲ್ಲಿಯೂ ಜಿಗಿತ, ಕಿಲೋ ಬೆಳ್ಳಿ ₹1.17 ಲಕ್ಷ
  • ಹಬ್ಬದ ಸೀಸನ್ ಆರಂಭದ ಜೊತೆಗೆ ಬಂಗಾರದ ದರ ಮತ್ತಷ್ಟು ಏರಿಕೆಯಾಗುವ ಮುನ್ಸೂಚನೆ

ಬೆಂಗಳೂರು (Bengaluru): ಚಿನ್ನದ ಬೆಲೆ (Gold Rate) ಮತ್ತೆ ಸಾಮಾನ್ಯ ಜನರಿಗೆ ಶಾಕ್ ನೀಡುವಂತೆ ಏರಿಕೆಯಾಗಿವೆ. ಜುಲೈ 31ರ ಮುಂಜಾನೆ ವೇಳೆಗೆ ಬೆಂಗಳೂರಿನಲ್ಲಿ 24 ಕ್ಯಾರೆಟ್ 10 ಗ್ರಾಂ ಬಂಗಾರದ ದರ (Gold Price Today) ₹1,49,000 ಆಗಿದ್ದು, 22 ಕ್ಯಾರೆಟ್‌ಗೆ ₹92,210 ಆಗಿದೆ. ಇದರಿಂದ ಮಹಿಳೆಯರು ಮತ್ತು ಹೂಡಿಕೆದಾರರಿಗೆ ಬಂಗಾರದ ಖರೀದಿ ಮತ್ತೆ ತಲೆನೋವಾಗಿ ಮಾರ್ಪಟ್ಟಿದೆ.

ಹಬ್ಬ, ಮದುವೆ ಅಥವಾ ಹಬ್ಬದ ಸೀಸನ್ ಖರೀದಿಗೆ ಬಂಗಾರ ಬೇಕು (Buy Gold) ಎನ್ನುವವರಿಗೆ ಈಗ ಇನ್ನು ಹೆಚ್ಚು ವೆಚ್ಚವಾಗಲಿದೆ. ತಕ್ಷಣದಲ್ಲೇ ವಿನಾಯಕ ಚತುರ್ಥಿ, ದಸರಾ, ದೀಪಾವಳಿ ಹಬ್ಬಗಳು ಸಮೀಪಿಸುತ್ತಿರುವ ಕಾರಣದಿಂದಾಗಿ ದರಗಳು ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎನ್ನುವುದು ಮಾರುಕಟ್ಟೆ ತಜ್ಞರ ಅಭಿಪ್ರಾಯ.

ಇದೇ ವೇಳೆ ಬೆಳ್ಳಿಯ ದರದಲ್ಲಿಯೂ ಏರಿಕೆ ಕಂಡುಬಂದಿದೆ. ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಈಗ ಕಿಲೋ ಬೆಳ್ಳಿ ₹1,17,000 ರಲ್ಲಿದೆ. ಆದರೆ ಹೈದ್ರಾಬಾದ್, ಚೆನ್ನೈ, ಕೋಲ್ಕತಾ ಮೊದಲಾದ ನಗರಗಳಲ್ಲಿ ಈ ದರ ₹1,27,000 ತಲುಪಿದೆ. ಇದರಿಂದ ಬೆಳ್ಳಿ ಆಭರಣಗಳ ಬೆಲೆಯೂ ಹೆಚ್ಚಾಗುತ್ತಿದೆ.

ಇದನ್ನೂ ಓದಿ: ಬ್ಯಾಂಕ್ ಅಕೌಂಟ್ ಹೊಸ ರೂಲ್ಸ್! ಒಂದಕ್ಕಿಂತ ಹೆಚ್ಚು ಅಕೌಂಟ್ ಇದ್ಯಾ? ಹಾಗಾದ್ರೆ..

ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ವಿವರಗಳು ಹೀಗಿವೆ:

  1. ಬೆಂಗಳೂರು: 24 ಕ್ಯಾರೆಟ್ ₹1,49,000, 22 ಕ್ಯಾರೆಟ್ ₹92,210
  2. ದೆಹಲಿ: 24 ಕ್ಯಾರೆಟ್ ₹1,64,000, 22 ಕ್ಯಾರೆಟ್ ₹92,260
  3. ಚೆನ್ನೈ: 24 ಕ್ಯಾರೆಟ್ ₹1,49,000, 22 ಕ್ಯಾರೆಟ್ ₹92,210
  4. ಮುಂಬೈ: 24 ಕ್ಯಾರೆಟ್ ₹1,49,000, 22 ಕ್ಯಾರೆಟ್ ₹92,210
  5. ಕೋಲ್ಕತಾ: 24 ಕ್ಯಾರೆಟ್ ₹1,49,000, 22 ಕ್ಯಾರೆಟ್ ₹92,210
  6. ಕೇರಳ: 24 ಕ್ಯಾರೆಟ್ ₹1,49,000, 22 ಕ್ಯಾರೆಟ್ ₹92,210

Gold Price Today

ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಚಿನ್ನದ ಬೆಲೆ ಜಿಗಿತ

  1. ದುಬೈ: 24 ಕ್ಯಾರೆಟ್ AED 396 (₹95,020), 22 ಕ್ಯಾರೆಟ್ AED 368.50 (₹87,980)
  2. ಸೌದಿ: 24 ಕ್ಯಾರೆಟ್ SAR 410 (₹95,840), 22 ಕ್ಯಾರೆಟ್ SAR 377 (₹88,130)
  3. ಸಿಂಗಪೂರ: 24 ಕ್ಯಾರೆಟ್ SGD 146.50 (₹99,150), 22 ಕ್ಯಾರೆಟ್ SGD 133.10 (₹90,080)

ಇದನ್ನೂ ಓದಿ: ನೀವೇ ಗ್ಯಾಸ್ ಏಜೆನ್ಸಿ ಆರಂಭಿಸಿ, ಬಂಪರ್ ಅವಕಾಶ! ಕಮ್ಮಿ ಬಂಡವಾಳಕ್ಕೆ ಭರ್ಜರಿ ಆದಾಯ

ಪೆಟ್ರೋಲ್ ದರದ ಏರಿಕೆ, ಡಾಲರ್ ಎದುರು ರೂಪಾಯಿ ಮೌಲ್ಯದ ಕುಸಿತ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉದ್ವಿಗ್ನತೆ ಈ ದರ ಏರಿಕೆಗೆ ಕಾರಣವೆಂದು ವಿಶ್ಲೇಷಕರು ಹೇಳಿದ್ದಾರೆ. ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರ ತಗ್ಗಿಸುವ ನಿರೀಕ್ಷೆಯೂ ಬಂಗಾರದ ಮೇಲೆ ಪರಿಣಾಮ ಬೀರಿದೆ.

ಒಟ್ಟಿನಲ್ಲಿ, ಬೆಂಗಳೂರು ಸೇರಿದಂತೆ ದೇಶದಾದ್ಯಾಂತ ಜನರಿಗೆ ಚಿನ್ನದ ಖರೀದಿ ಈಗ ದುಬಾರಿಯಾಗಿದ್ದು, ಚಿನ್ನಾಭರಣ ಪ್ರಿಯ ಮಹಿಳೆಯರಿಗೆ ದೊಡ್ಡ ಹೊರೆ ಆಗಿದೆ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories