ಹೆಚ್ಚು ಕ್ರೆಡಿಟ್ ಸ್ಕೋರ್ ಇದ್ದರೂ ಇಂತವರಿಗೆ ಸಾಲ ಸಿಗಲ್ಲ! ಇಲ್ಲಿದೆ ನಿಜವಾದ ಕಾರಣ
ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದರೂ ಬ್ಯಾಂಕುಗಳು ಸಾಲ ನಿರಾಕರಿಸಬಹುದು. ಸ್ಥಿರ ಆದಾಯದ ಕೊರತೆ, ಈಗಾಗಲೇ ಇರುವ ಸಾಲ ಭಾರ, ವಯಸ್ಸು, ಅಥವಾ ಅತಿಯಾದ ಸಾಲ ಮೊತ್ತವೇ ಪ್ರಮುಖ ಕಾರಣಗಳಾಗಬಹುದು.

Credit Score: ಅನೇಕರಿಗೆ “ಉತ್ತಮ ಕ್ರೆಡಿಟ್ ಸ್ಕೋರ್ ಇದ್ದರೆ ಸಾಲ (Loan) ಸಿಗುತ್ತದೆ” ಎಂಬ ತಪ್ಪು ಕಲ್ಪನೆ ಇದೆ. ವಾಸ್ತವದಲ್ಲಿ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳು ಕೇವಲ ಕ್ರೆಡಿಟ್ ಸ್ಕೋರ್ ಆಧರಿಸದೇ, ಆರ್ಥಿಕ ಸ್ಥಿರತೆ, ಆದಾಯ, ಹಾಗೂ ಸಾಲ ಇತಿಹಾಸವನ್ನೂ ಪರಿಶೀಲಿಸುತ್ತವೆ.
ನಿಮ್ಮ ಮಾಸಿಕ ಆದಾಯ ಕಡಿಮೆ ಇದ್ದರೆ ಅಥವಾ ಆದಾಯ ಸ್ಥಿರವಾಗಿರದಿದ್ದರೆ, ಉತ್ತಮ ಕ್ರೆಡಿಟ್ ಸ್ಕೋರ್ ಇದ್ದರೂ ಸಾಲ ಮಂಜೂರು ಆಗುವ ಸಾಧ್ಯತೆ ಕಡಿಮೆ. ಬ್ಯಾಂಕ್ಗಳು ಮುಖ್ಯವಾಗಿ “ಈ ವ್ಯಕ್ತಿ ಸಾಲವನ್ನು ನಿಗದಿತ ಅವಧಿಯಲ್ಲಿ ಹಿಂತಿರುಗಿಸಬಹುದೇ?” ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತವೆ.
ಇದಾಗಲೇ ನಿಮ್ಮ ಮೇಲೆ ಹೆಚ್ಚಿನ ಸಾಲ ಬಾಧ್ಯತೆ ಇದ್ದರೆ, ಹೊಸ ಸಾಲ ಪಡೆಯುವುದು ಕಷ್ಟ. ಏಕೆಂದರೆ ಬ್ಯಾಂಕ್ ನಿಮ್ಮ ಆದಾಯದ ಭಾಗದಷ್ಟು ಈಗಾಗಲೇ ಹಿಂದಿನ ಸಾಲಕ್ಕೆ ತೆರಳುತ್ತಿದ್ದರೆ, ಮತ್ತೊಂದು ಸಾಲ ನೀಡುವುದು ಅಪಾಯ ಎಂದು ಪರಿಗಣಿಸುತ್ತದೆ.
ಇದನ್ನೂ ಓದಿ: ಪೋಸ್ಟ್ ಆಫೀಸ್ ಸ್ಕೀಮ್: ಗಂಡ-ಹೆಂಡತಿಗೆ ತಿಂಗಳಿಗೆ ₹9,000 ಸ್ಥಿರ ಆದಾಯ! ಭಾರೀ ಯೋಜನೆ
ವಯಸ್ಸು ಸಹ ಸಾಲ ಮಂಜೂರಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಯುವ ಉದ್ಯೋಗಿಗಳಿಗೆ ಸಾಲ ಪಡೆಯುವ ಅವಕಾಶ ಹೆಚ್ಚು, ಏಕೆಂದರೆ ಅವರ ಆದಾಯ ದೀರ್ಘಾವಧಿಯದು. ಆದರೆ ನಿವೃತ್ತಿಗೆ ಹತ್ತಿರವಾಗಿರುವವರಿಗೆ ಸಾಲ ಸಿಗುವುದು ಕಷ್ಟವಾಗಬಹುದು. ಬ್ಯಾಂಕ್ಗಳು ಅವರು ಸಾಲ ಅವಧಿ ಮುಗಿಯುವ ಮುನ್ನವೇ ನಿವೃತ್ತರಾಗಬಹುದು ಎಂದು ಭಾವಿಸುತ್ತವೆ.
ಸಾಲದ ಮೊತ್ತವೂ ನಿರ್ಧಾರದಲ್ಲಿ ಪ್ರಭಾವ ಬೀರುತ್ತದೆ. ಕೆಲವೊಮ್ಮೆ ನಾವು ನಮ್ಮ ಆದಾಯ ಮಟ್ಟಕ್ಕಿಂತ ಹೆಚ್ಚಿನ ಮೊತ್ತಕ್ಕೆ ಅರ್ಜಿ ಹಾಕುತ್ತೇವೆ. ಇಂತಹ ಸಂದರ್ಭಗಳಲ್ಲಿ ಬ್ಯಾಂಕ್ ಅದನ್ನು ಅಪಾಯವಾಗಿ ಪರಿಗಣಿಸಿ ನಿರಾಕರಿಸುತ್ತದೆ. ಬ್ಯಾಂಕ್ಗಳು ನಿಮ್ಮ ಆದಾಯ, ಖರ್ಚು, ಮತ್ತು ಹಿಂತಿರುಗಿಸುವ ಸಾಮರ್ಥ್ಯವನ್ನು ಗಮನಿಸುತ್ತವೆ.
ಇದನ್ನೂ ಓದಿ: ಫೋನ್ಪೇ ಧಮಾಕ ಆಫರ್: ₹2000 ಕ್ಕೆ ಬಂಗಾರ ಖರೀದಿಸಿದರೆ ಪಕ್ಕ ಕ್ಯಾಶ್ಬ್ಯಾಕ್
ಹೀಗಾಗಿ, ಉತ್ತಮ ಕ್ರೆಡಿಟ್ ಸ್ಕೋರ್ ಮಾತ್ರ ಸಾಲ ಮಂಜೂರಿಗೆ ಸಾಕಾಗುವುದಿಲ್ಲ. ನಿಮ್ಮ ಆದಾಯದ ಸ್ಥಿರತೆ, ವಯಸ್ಸು, ಹಿಂದಿನ ಸಾಲದ ಭಾರ ಹಾಗೂ ಆರ್ಥಿಕ ಶಿಸ್ತೂ ಸಮಾನವಾಗಿ ಮುಖ್ಯವಾಗಿವೆ. ಈ ಅಂಶಗಳನ್ನು ಗಮನಿಸಿದರೆ, ಸಾಲ ನಿರಾಕರಣೆಯ ಕಾರಣ ಸ್ಪಷ್ಟವಾಗುತ್ತದೆ.
High Credit Score but Loan Rejected? Here’s Why



