ಈ ಯೋಜನೆಯಲ್ಲಿ ಸಿಗುತ್ತೆ 300 ಯೂನಿಟ್ ಉಚಿತ ವಿದ್ಯುತ್, ಜೊತೆಗೆ 15,000 ರೂಪಾಯಿ
ಕೇಂದ್ರ ಸರ್ಕಾರ, ಈಗಾಗಲೇ ಬೇರೆ ಬೇರೆ ಉಪಯುಕ್ತವಾಗಿರುವ ಯೋಜನೆಗಳನ್ನು ಘೋಷಿಸಿದ್ದು ಅವುಗಳಲ್ಲಿ Surya Ghar Muft Bijli ಅಥವಾ ಸೂರ್ಯೋದಯ ಯೋಜನೆ ಕೂಡ ಒಂದು.
ಇತ್ತೀಚಿನ ದಿನಗಳಲ್ಲಿ ಈ ಯೋಜನೆಯ ಬಗ್ಗೆ ಹೆಚ್ಚು ಕುತೂಹಲ ಜನರಲ್ಲಿ ಸೃಷ್ಟಿಯಾಗಿದೆ .ಯಾಕೆಂದರೆ ಪ್ರತಿಯೊಬ್ಬರ ಮನೆಯ ಮೇಲ್ಚಾವಣಿಯ ಮೇಲೆ ಸೋಲಾರ್ ಪ್ಯಾನೆಲ್ (rooftop solar panel) ಅಳವಡಿಸುವುದರ ಮೂಲಕ ನಾವೇ ವಿದ್ಯುತ್ ಉತ್ಪಾದನೆ ಮಾಡಿ ನಮಗೆ ಬಳಕೆ ಮಾಡಿಕೊಳ್ಳುವುದರ ಜೊತೆಗೆ ಅದನ್ನ ವಿದ್ಯುತ್ ಉತ್ಪಾದನಾ ಕಂಪನಿಗಳಿಗೆ ಮಾರಾಟ ಮಾಡಲು ಕೂಡ ಸಾಧ್ಯವಿದೆ.
ನೀವೇನಾದ್ರು ಈ ಬಿಸಿನೆಸ್ ಮಾಡಿದ್ರೆ ತಿಂಗಳಿಗೆ 3 ಲಕ್ಷ ಸಂಪಾದನೆ ಮಾಡಬಹುದು
ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆ! (Pm suryodaya scheme)
2024ರ ಆರಂಭದಲ್ಲಿ ಘೋಷಿಸಲಾಗಿರುವ ಬಜೆಟ್ ನಲ್ಲಿ ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆಯ ಬಗ್ಗೆ ಮಂಡಿಸಲಾಗಿತ್ತು. ಇದೀಗ ಸಚಿವ ಸಂಪುಟ ಸಭೆ ಈ ಯೋಜನೆಗೆ ಅನುಮೋದನೆ ನೀಡಿದ್ದು ಇದಕ್ಕಾಗಿ ಸುಮಾರು, 75, 021 ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರ ಮೀಸಲಿಟ್ಟಿದೆ. ಸುಮಾರು ಒಂದು ಕೋಟಿ ಮನೆಗಳ ಮೇಲ್ಚಾವಣಿಯ ಮೇಲೆ ಸೋಲಾರ್ ಪ್ಯಾನೆಲ್ ಅಳವಡಿಸುವ ಉದ್ದೇಶ ಈ ಯೋಜನೆಯದ್ದು.
ಸೋಲಾರ್ ಪ್ಯಾನಲ್ ಅಳವಡಿಕೆಗೆ ಸಿಗಲಿದೆ ಸಬ್ಸಿಡಿ! (Get subsidy for solar panel installation)
ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆಯ ಅಡಿಯಲ್ಲಿ ಎರಡು ಕಿಲೋ ವ್ಯಾಟ್ ವರೆಗೆ ಸೋಲಾರ್ ಪ್ಯಾನೆಲ್ ಅಳವಡಿಸುವುದಕ್ಕೆ ಶೇಕಡಾ 60% ಹಾಗೂ ಒಂದು ಕಿಲೋ ವ್ಯಾಟ್ ಸೋಲಾರ್ ಪ್ಯಾನೆಲ್ ಅಳವಡಿಸುವುದಕ್ಕೆ ಶೇಕಡ 40% ನಷ್ಟು ಸಬ್ಸಿಡಿ ಅನ್ನು ಸರ್ಕಾರದಿಂದ ಪಡೆಯಬಹುದು.
ಸುಮಾರು 70,000ಗಳ ವೆಚ್ಚದ ಸೋಲಾರ್ ಪ್ಯಾನೆಲ್ ಅನ್ನು ನೀವು ನಿಮ್ಮ ಮನೆಯ ಮೇಲ್ಚಾವಣಿಯ ಮೇಲೆ ಅಳವಡಿಸುವುದಾದರೆ ಅದರಲ್ಲಿ 40% ನಷ್ಟು ಸರ್ಕಾರ ಭರಿಸುತ್ತದೆ ಹಾಗೂ ಉಳಿದ 60% ಅನ್ನು ನೀವು ಭರಿಸಬೇಕು. ಈ ಯೋಜನೆಯ ಅಡಿಯಲ್ಲಿ ಗರಿಷ್ಠ 78,000 ವರೆಗೆ ಸಬ್ಸಿಡಿ ಪಡೆದುಕೊಳ್ಳಲು ಸಾಧ್ಯವಿದೆ.
ನಿಮ್ಮ ಮಗಳ ಹೆಸರಲ್ಲಿ 1,799 ರೂಪಾಯಿ ಹೂಡಿಕೆ ಮಾಡಿ ಬರೋಬ್ಬರಿ 7 ಲಕ್ಷ ಪಡೆಯಿರಿ
ಪ್ರಧಾನ್ ಮಂತ್ರಿ ಸೂರ್ಯೋದಯ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? (How to apply for subsidy)
* ಮೊದಲಿಗೆ https://pmsuryaghar.gov.in/ ವೆಬ್ಸೈಟ್ ಗೆ ಭೇಟಿ ನೀಡಿ.
* Apply for roof top solar ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
* ಈಗ ನಿಮ್ಮ ರಾಜ್ಯ, ಜಿಲ್ಲೆ ವಿದ್ಯುತ್ ವಿತರಣಾ ಕಂಪನಿ ಯನ್ನು ಆಯ್ಕೆ ಮಾಡಬೇಕು.
* ನಿಮ್ಮ ವಿದ್ಯುತ್ ಬಿಲ್ ಹಾಗೂ ಮೊಬೈಲ್ ಸಂಖ್ಯೆ ಜೊತೆಗೆ ಇಮೇಲ್ ಐಡಿ ಭರ್ತಿ ಮಾಡಬೇಕು.
* ನಿಮಗೆ ಅನುಮೋದನೆ ಸಿಕ್ಕ ನಂತರ DISCOM ನಲ್ಲಿ ಅಂದರೆ ವಿದ್ಯುತ್ ವಿತರಣಾ ಕಂಪನಿಯಲ್ಲಿ ನೊಂದಾಯಿಸಲ್ಪಟ್ಟ ಯಾವುದೇ ಕಂಪನಿಯಿಂದ ನೀವು ಸೋಲಾರ್ ಪ್ಯಾನಲ್ಲಿ ಪಡೆಯಬಹುದಾಗಿದೆ.
* ಈ ಪ್ರಕ್ರಿಯೆ ಪೂರ್ಣಗೊಂಡ ನಂತರ ನೀವು ನೆಟ್ ಮೀಟರ್ಗಾಗಿ ಅರ್ಜಿ ಸಲ್ಲಿಸಬೇಕು.
* ನೆಟ್ ಮೀಟರ್ ಸ್ಥಾಪಿಸಿದ ಬಳಿಕ ವಿದ್ಯುತ್ ವಿತರಣಾ ಕಂಪನಿ ಪರಿಶೀಲನೆ ನಡೆಸಿ, ಕಮಿಷನಿಂಗ್ ಪ್ರಮಾಣ ಪತ್ರವನ್ನು ಇದೇ ಪೋರ್ಟಲ್ಲಿಂದ ಪಡೆದುಕೊಳ್ಳಬಹುದು.
* ಅನುಮೋದನೆ ಸಿಕ್ಕ ನಂತರ ನೀವು ಬ್ಯಾಂಕ್ ಗೆ ಈ ಅನುಮೋದನೆಯ ಪತ್ರ ಮತ್ತು ರದ್ದುಪಡಿಸಲ್ಪಟ್ಟ ಚೆಕ್ ಅನ್ನು ನೀಡಿ ಸೋಲಾರ್ ಪ್ಯಾನೆಲ್ಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
* ಅರ್ಜಿ ಸಲ್ಲಿಸಿದ 30 ದಿನಗಳ ಒಳಗೆ ಸಬ್ಸಿಡಿ ಹಣವನ್ನು ನಿಮ್ಮ ಖಾತೆಗೆ ಜಮಾ ಮಾಡಲಾಗುತ್ತದೆ.
ಡ್ರೈವಿಂಗ್ ಲೈಸೆನ್ಸ್ ಪಡೆಯೋದು ಈಗ ಇನ್ನಷ್ಟು ಸುಲಭ! ನಿಯಮದಲ್ಲಿ ಬದಲಾವಣೆ
ಒಟ್ಟಿನಲ್ಲಿ ಮುಂದಿನ 25 ವರ್ಷಗಳವರೆಗೆ ಉಚಿತ ವಿದ್ಯುತ್ ಪಡೆದುಕೊಳ್ಳುವುದರ ಜೊತೆಗೆ ಪ್ರತಿ ತಿಂಗಳು ಹೆಚ್ಚುವರಿ ವಿದ್ಯುತ್ ಉತ್ಪಾದನೆ ಮಾಡಿ, ನೀವು ವಿದ್ಯುತ್ ಕಂಪನಿಗಳಿಗೆ ಮಾರಾಟ ಮಾಡುವುದರ ಮೂಲಕ ಹಣವನ್ನು ಸಂಪಾದನೆ ಮಾಡಬಹುದು.
In this scheme you will get 300 units of free electricity, along with 15,000 rupees