ಕರೆಂಟ್ ಬಿಲ್ ಜೀರೋ ಬರಬೇಕಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ ಸಾಕು
ಹೆಚ್ಚು ವಿದ್ಯುತ್ ಯೂನಿಟ್ ಖರ್ಚಾಗುವುದನ್ನು ಕಡಿಮೆಗೊಳಿಸುವುದು ಹೇಗೆ ಗೊತ್ತಾ? ಇಲ್ಲಿದೆ ಮಾಹಿತಿ
ರಾಜ್ಯಸರ್ಕಾರ ಗೃಹಜ್ಯೋತಿ ಯೋಜನೆ (Gruha Jyothi Yojana) ಯ ಅಡಿಯಲ್ಲಿ ಉಚಿತ ವಿದ್ಯುತ್ (free electricity) ಅನ್ನೇನೋ ಕೊಟ್ಟಿದೆ. ಆದರೆ ಇದು 200 ಯೂನಿಟ್ ಗಳವರೆಗೆ ಮಾತ್ರ.
ಅದಕ್ಕಿಂತ ಹೆಚ್ಚಿಗೆ ನೀವು ಬಳಕೆ ಮಾಡಿದರೆ ಎಲೆಕ್ಟ್ರಿಸಿಟಿ ಬಿಲ್ (electricity bill) ಪಾವತಿ ಮಾಡಲೇಬೇಕು. ಆದರೆ ನೀವು ಸ್ವಲ್ಪ ಜಾಣ್ಮೆಯಿಂದ ದಿನವನ್ನು ಕಳೆದರೆ ಒಂದು ರೂಪಾಯಿ ವಿದ್ಯುತ್ ಬಿಲ್ ಬಾರದಂತೆ ಮಾಡಿಕೊಳ್ಳಬಹುದು.
ಹೌದು, ವಿದ್ಯುತ್ ಬಿಲ್ (electricity bill) ಎನ್ನುವುದು ನಮ್ಮ ಪ್ರತಿ ತಿಂಗಳ ಬಜೆಟ್ ನಲ್ಲಿ ಸೇರಿಸಿಕೊಳ್ಳಲೇಬೇಕಾದ ವಿಷಯ. ವಿದ್ಯುತ್ ಬಳಸದೆ ಇರಲು ಸಾಧ್ಯವೇ ಇಲ್ಲ. ಹಾಗಂದ ಮಾತ್ರಕ್ಕೆ ನೀವು ಅತಿಯಾಗಿ ವಿದ್ಯುತ್ ಬಳಸಿದರೆ ಅದರಿಂದ ಹೆಚ್ಚಿನ ಬಿಲ್ ಬರುವುದು ಮಾತ್ರ ಅಲ್ಲದೆ ಸರ್ಕಾರಕ್ಕೆ ಹೊರೆ ಆಗುತ್ತದೆ.
ಈ ಬ್ಯಾಂಕ್ ಖಾತೆ ಇದ್ರೆ ಸರ್ಕಾರವೇ ನೀಡುತ್ತೆ 2.30 ಲಕ್ಷ ರೂಪಾಯಿ; ಬೆನಿಫಿಟ್ ಪಡೆಯಿರಿ
ಈ ವರ್ಷ ಸರಿಯಾಗಿ ಮಳೆ ಆಗದೆ ಇರುವ ಹಿನ್ನೆಲೆಯಲ್ಲಿ ಸರಿಯಾದ ವಿದ್ಯುತ್ ಉತ್ಪಾದನೆ ಆಗುತ್ತಿಲ್ಲ ಹಾಗಾಗಿ ವಿದ್ಯುತ್ ಅಭಾವವು ಕೂಡ ಜನರನ್ನು ಕಾಡುತ್ತಿದೆ. ಅಂತಹ ಸಂದರ್ಭದಲ್ಲಿ ವಿದ್ಯುತ್ ಉಳಿತಾಯ ಮಾಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯು ಆಗಿರುತ್ತದೆ. ಹಾಗಾದ್ರೆ ಸುಲಭವಾಗಿ ಮನೆಯಲ್ಲಿ ಅನಗತ್ಯವಾಗಿ ಖರ್ಚಾಗುವ ವಿದ್ಯುತ್ತನ್ನು ಹೇಗೆ ಉಳಿತಾಯ ಮಾಡಬಹುದು ಎನ್ನುವುದನ್ನು ನೋಡೋಣ.
* ಮೊಟ್ಟಮೊದಲನೆಯದಾಗಿ ನೀವು ಎಸಿ, ರೆಫ್ರಿಜರೇಟರ್, ವಾಷಿಂಗ್ ಮಷೀನ್, ಮೊದಲಾದ ಎಲೆಕ್ಟ್ರಾನಿಕ್ ವಸ್ತು (electronic gadget) ಗಳನ್ನ ಬಳಸುತ್ತೀರಿ ಎಂದಾದರೆ ಐದು ಸ್ಟಾರ್ ಹೊಂದಿರುವ ಮಾರುಕಟ್ಟೆಯಲ್ಲಿ ಹೊಸದಾಗಿ ಲಭ್ಯ ಇರುವ ವಸ್ತುಗಳನ್ನು ಖರೀದಿ ಮಾಡಿ.
ಈ ರೀತಿ ಮಾಡೋದ್ರಿಂದ ಇದು ಆಟೋಮೆಟಿಕ್ ಆಗಿ ವಿದ್ಯುತ್ ಉಳಿತಾಯ ಮಾಡುವ ಕೆಪಾಸಿಟಿ ಹೊಂದಿರುತ್ತದೆ. ಎಸಿ ಚಲಾಯಿಸುವಾಗ 24 ಡಿಗ್ರಿಯಲ್ಲಿ ಹಾಗೂ ಆಟೋಮ್ಯಾಟಿಕ್ ಆಗಿ ಆಫ್ ಆಗುವ ಎಸಿ ಖರೀದಿ ಮಾಡಿದ್ರೆ ನಿಮಗೆ ವಿದ್ಯುತ್ ಉಳಿತಾಯವಾಗುತ್ತದೆ.
ನೀವೇನಾದ್ರೂ ಈ ಬಿಸಿನೆಸ್ ಶುರು ಮಾಡಿದ್ರೆ, ದಿನಕ್ಕೆ 15,000 ಆದಾಯ ಫಿಕ್ಸ್!
* ಇನ್ನು ಎರಡನೆಯದಾಗಿ ನಾವು ಸಾಕಷ್ಟು ವಸ್ತುಗಳನ್ನ ಸ್ಟ್ಯಾಂಡ್ ಬೈ ಆಗಿ ಇಡುತ್ತೇವೆ. ಉದಾಹರಣೆಗೆ ಲ್ಯಾಪ್ಟಾಪ್ ಚಾರ್ಜ ಮಾಡಿದ್ರೆ ಚಾರ್ಜರ್ ಪ್ಲಗ್ ತೆಗೆಯುವುದೇ ಇಲ್ಲ. ಅದೇ ರೀತಿ ಕಂಪ್ಯೂಟರ್, ಮೊಬೈಲ್, ಟಿವಿ ಎಲ್ಲವನ್ನು ಕೂಡ ಮುಖ್ಯ ಸ್ವಿಚ್ ಆಫ್ ಮಾಡದೆ ಹಾಗೆ ಬಿಡುತ್ತೇವೆ. ಈ ಸ್ಟ್ಯಾಂಡ್ ಬೈ ಮೂಡ್ ನಲ್ಲಿಯೂ ಕೂಡ ವಿದ್ಯುತ್ ಖರ್ಚಾಗುತ್ತಿರುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳಿ. ಹಾಗಾಗಿ ನೀವು ನಿಮ್ಮ ಕೆಲಸ ಮುಗಿದ ನಂತರ ಸ್ವಿಚ್ ಆಫ್ ಮಾಡುವ ಪರಿಪಾಠವನ್ನು ರೂಡಿಸಿಕೊಳ್ಳಿ.
* ಸಾಂಪ್ರದಾಯಿಕ ಬಲ್ಬ್ ಅನ್ನು ಮನೆಯಲ್ಲಿ ಬಳಸಬೇಡಿ ಅದರ ಬದಲು ಎಲ್ಇಡಿ ಬಲ್ಪ್ (LED bulb) ಬಳಸಿ ಇದು ನಿಮ್ಮ ಹಳೆಯ ಗಿಂತಲೂ ಅತ್ಯುತ್ತಮ ರೀತಿಯಲ್ಲಿ ವಿದ್ಯುತ್ ಸೇವ್ ಮಾಡುತ್ತದೆ.
ಒಬ್ಬ ವ್ಯಕ್ತಿ ವರ್ಷಕ್ಕೆ ಎಷ್ಟು ಗ್ಯಾಸ್ ಸಿಲೆಂಡರ್ ಖರೀದಿಸಬಹುದು ಗೊತ್ತಾ? ಇಲ್ಲಿದೆ ಲೆಕ್ಕಚಾರ
* ಮನೆಯಲ್ಲಿ ಎಲೆಕ್ಟ್ರಾನಿಕ್ ವಸ್ತುಗಳು ಬೇಕಿದ್ದಾಗ ಮಾತ್ರ ಬಳಸಿ ಯಾವುದರ ಸ್ವಚ್ಛ ಕೂಡ ಆನ್ ಮಾಡಿ ಇಡಬೇಡಿ. ಇನ್ನು ಬೇಸಿಗೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಜನ ಹೆಚ್ಚಾಗಿ ಬಳಸುತ್ತಾರೆ. ಆದರೆ ಹಗಲಿನ ಸಮಯದಲ್ಲಿ ಕಿಟಕಿ ಹಾಗೂ ಬಾಗಿಲುಗಳನ್ನು ತೆರೆದಿಡುವುದರ ಮೂಲಕ ಸೂರ್ಯನ ಬೆಳಕು ಮತ್ತು ಗಾಳಿ ಮನೆಯೊಳಗೆ ಬರುವಂತೆ ಮಾಡಿ ಇದರಿಂದ ಮನೆ ಸ್ವಲ್ಪ ತಣ್ಣಗೆ ಇರುತ್ತದೆ ಹಾಗೂ ದಿನದ 24 ಗಂಟೆ ಎಸಿ ಚಲಾಯಿಸುವ ಅಗತ್ಯ ಇರುವುದಿಲ್ಲ.
ಒಟ್ಟಿನಲ್ಲಿ ವಿದ್ಯುತ್ ಉಳಿತಾಯ ಮಾಡುವುದು ನಮ್ಮ ತಿಂಗಳ ಬಜೆಟ್ ಗೆ ಅನುಕೂಲ ಮಾಡಿಕೊಡುವುದು ಮಾತ್ರವಲ್ಲದೆ ರಾಜ್ಯದಲ್ಲಿ ಇರುವ ವಿದ್ಯುತ್ ಅಭಾವವನ್ನು ಕೂಡ ಸ್ವಲ್ಪ ಮಟ್ಟಿಗೆ ಸರ್ಕಾರಕ್ಕೆ ನಿಭಾಯಿಸಲು ಸಹಾಯವಾಗುತ್ತದೆ. ಹಾಗಾಗಿ ಮುತುವರ್ಜಿಯಿಂದ ವಿದ್ಯುತ್ ಬಳಕೆ ಮಾಡಿ.
Just follow these tips to get zero Electricity bill