ಆಸ್ತಿ ಖರೀದಿ ಹಾಗೂ ಮಾರಾಟಕ್ಕೆ ಇನ್ಮುಂದೆ ಹೊಸ ರೂಲ್ಸ್! ಪ್ರತ್ಯೇಕ ನಿಯಮ ಜಾರಿಗೆ

ಭಾರತದಲ್ಲಿ ಆಸ್ತಿ ಖರೀದಿ (property purchase) ಹಾಗೂ ಮಾರಾಟಕ್ಕೆ ಸಂಬಂಧಪಟ್ಟಹಾಗೆ ಸಾಕಷ್ಟು ಕಾನೂನುಗಳು ಇವೆ, ಬೇರೆ ಬೇರೆ ಸಂದರ್ಭದಲ್ಲಿ ಬೇರೆ ಬೇರೆ ರೀತಿಯ ಕಾನೂನುಗಳು ಅನ್ವಯವಾಗುತ್ತವೆ.

ಭಾರತದಲ್ಲಿ ಆಸ್ತಿ ಖರೀದಿ (property purchase) ಹಾಗೂ ಮಾರಾಟಕ್ಕೆ ಸಂಬಂಧಪಟ್ಟಹಾಗೆ ಸಾಕಷ್ಟು ಕಾನೂನುಗಳು ಇವೆ, ಬೇರೆ ಬೇರೆ ಸಂದರ್ಭದಲ್ಲಿ ಬೇರೆ ಬೇರೆ ರೀತಿಯ ಕಾನೂನುಗಳು ಅನ್ವಯವಾಗುತ್ತವೆ.

ಈಗಾಗಲೇ ಹಲವು ಕಾನೂನುಗಳಲ್ಲಿ ತಿದ್ದುಪಡಿಯನ್ನು ಕೂಡ ಮಾಡಲಾಗಿದ್ದು ಇದರ ಬಗ್ಗೆ ಸಾಮಾನ್ಯರಿಗೆ ಗೊತ್ತಿರುವುದಿಲ್ಲ, ಹಾಗಾಗಿ ಆಸ್ತಿ ಖರೀದಿ ಮತ್ತು ಮಾರಾಟ ಮಾಡುವ ಮುನ್ನ ಕೆಲವು ಪ್ರಮುಖ ನಿಯಮಗಳ ಬಗ್ಗೆ ತಿಳಿದುಕೊಳ್ಳಬೇಕು.

ಮೊದಲನೇದಾಗಿ ನೀವು ಒಂದು ಆಸ್ತಿಯನ್ನು ಖರೀದಿ ಮಾಡಿ ಅದನ್ನು ಮಾರಾಟ ಮಾಡುವ ಹಂತದಲ್ಲಿ ಎಷ್ಟು ಟ್ಯಾಕ್ಸ್ ಕಟ್ಟಬೇಕಾಗುತ್ತದೆ ಎಂಬುದರ ಬಗ್ಗೆ ನಿಮಗೆ ಅರಿವು ಇರಬೇಕು ಇಲ್ಲವಾದರೆ ಹೆಚ್ಚಿನ ಮೊತ್ತ ಕಳೆದುಕೊಳ್ಳುವ ಸಂದರ್ಭ ಇರುತ್ತದೆ.

ಆಸ್ತಿ ಖರೀದಿ ಹಾಗೂ ಮಾರಾಟಕ್ಕೆ ಇನ್ಮುಂದೆ ಹೊಸ ರೂಲ್ಸ್! ಪ್ರತ್ಯೇಕ ನಿಯಮ ಜಾರಿಗೆ - Kannada News

ನವೆಂಬರ್ 1ರಿಂದ ದೇಶಾದ್ಯಂತ ಹೊಸ ರೂಲ್ಸ್! ಹೊಸ ನಿಯಮಗಳನ್ನು ತಿಳಿದುಕೊಳ್ಳಿ

ಒಬ್ಬ ವ್ಯಕ್ತಿ ಚರಾಸ್ತಿ (immovable property) ಅಂದರೆ ಒಂದು ಮನೆಯನ್ನು ಖರೀದಿ ಮಾಡಿದ್ದಾನೆ ಎಂದು ಭಾವಿಸಿ, ಆತ ಅದನ್ನ ಮೂರು ವರ್ಷಗಳ ಕಾಲ ತನ್ನ ಬಳಿ ಇಟ್ಟುಕೊಂಡು ನಂತರ ಮಾರಾಟ ಮಾಡಲು ಬಯಸುತ್ತಾನೆ. ಇಂತಹ ಸಂದರ್ಭದಲ್ಲಿ ಆತ ಅದಕ್ಕೆ ಆದಾಯ ತೆರಿಗೆ ಪಾವತಿ ಮಾಡಬೇಕು, ಅಷ್ಟೇ ಅಲ್ಲದೆ ಮೂರು ವರ್ಷಗಳ ನಂತರ ಆ ಮನೆಯನ್ನು ಮಾರಾಟ ಮಾಡಲು ಹೊರಟರೆ ಅದಕ್ಕೂ ಕೂಡ ಟ್ಯಾಕ್ಸ್ ಪೇ ಮಾಡಬೇಕು.

ಹಾಗಾದ್ರೆ ಯಾವ ಸಂದರ್ಭದಲ್ಲಿ ಎಷ್ಟು ಟ್ಯಾಕ್ಸ್ ಪೇ ಮಾಡಬೇಕು ಎನ್ನುವುದನ್ನು ಈ ಲೇಖನದಲ್ಲಿ ನೋಡೋಣ.

ಬಂಡವಾಳ ಲಾಭಗಳು (capital gains tax)

ಭಾರತದಲ್ಲಿ ಎರಡು ರೀತಿಯ ಟ್ಯಾಕ್ಸ್ ಪದ್ಧತಿ ಇದೆ, ಒಂದು ಅಲ್ಪಾವಧಿಯ ಬಂಡವಾಳ ಲಾಭಗಳು (short term capital gains) ಹಾಗೂ ದೀರ್ಘಾವಧಿಯ ಬಂಡವಾಳ ಲಾಭಗಳು (long term capital gains). ಯಾವುದೇ ಆಸ್ತಿಯ ಖರೀದಿಯ ಲಾಭ ಹಾಗೂ ನಷ್ಟ ಆದರದ ಮೇಲೆ ನಿಮಗೆ ತೆರಿಗೆ ನಿರ್ಧಾರಿತವಾಗುತ್ತದೆ. ಈಗ ಯಾವ ಸಂದರ್ಭದಲ್ಲಿ ಯಾವ ರೀತಿಯ ಟ್ಯಾಕ್ಸ್ ಕಟ್ಟಬೇಕು ಎನ್ನುವುದನ್ನು ನೋಡುವುದಾದರೆ..

ಗೂಗಲ್ ಪೇ ನಿಂದ ಪಡೆಯಿರಿ ₹15,000 ಸಾಲ, ಯಾವುದೇ ಗ್ಯಾರಂಟಿ ಕೊಡುವ ಅಗತ್ಯವಿಲ್ಲ

ಅಲ್ಪಾವಧಿಯ ಬಂಡವಾಳ ಲಾಭಗಳು!

property Documentsಶಾರ್ಟ್ ಟರ್ಮ್ ಕ್ಯಾಪಿಟಲ್ ಗೇನ್ಸ್ ಎನ್ನುವುದು ನಿಮ್ಮ ಸ್ಥಿರಾಸ್ತಿ ಅಥವಾ ಚಿರಾಸ್ತಿ ಮೇಲೆ ಅನ್ವಯವಾಗುತ್ತದೆ. ನೀವು ಚಿರಾಸ್ತಿ ಅಂದರೆ ಒಂದು ಮನೆಯನ್ನು ಖರೀದಿ ಮಾಡಿ ಅದನ್ನು ಲಾಭಕ್ಕೆ ಮಾರಾಟ ಮಾಡುತ್ತೀರಿ ಎಂದಾದರೆ ಕ್ಯಾಪಿಟಲ್ ಗೇಮ್ಸ್ ಟ್ಯಾಕ್ಸ್ (tax) ಭರಿಸಬೇಕು.

ನೀವು ನಿಮ್ಮ ಮನೆಯನ್ನು ಮೂರು ವರ್ಷಗಳ ಒಳಗೆ ಮಾರಾಟ ಮಾಡಿ ಅದರಿಂದ ಲಾಭ ಗಳಿಸಿದರೆ ಶಾರ್ಟ್ ಟರ್ಮ್ ಕ್ಯಾಪಿಟಲ್ ಗೇನ್ಸ್ ಟ್ಯಾಕ್ಸ್ ಕಟ್ಟಬೇಕು. ಅದೇ ನೀವು ಮೂರು ವರ್ಷಕ್ಕಿಂತ ಹೆಚ್ಚು ಅವಧಿಯವರೆಗೆ ನಿಮ್ಮ ಬಳಿ ಮನೆಯನ್ನು ಇಟ್ಟುಕೊಂಡು ನಂತರ ಲಾಭಕ್ಕಾಗಿ ಮಾರಾಟ ಮಾಡಿದರೆ ಆಗ ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ಸ್ ಟ್ಯಾಕ್ಸ್ ಪಾವತಿ ಮಾಡಬೇಕು. ಶಾರ್ಟ್ ಟರ್ಮ್ ಗೈನ್ ಟ್ಯಾಕ್ಸ್ ಆದಾಯ ತೆರಿಗೆಯ ದರವನ್ನು ಆಧರಿಸಿದ್ದರೆ, ಲಾಂಗ್ ಟರ್ಮ್ ಗೇನ್ಸ್ ಟ್ಯಾಕ್ಸ್ 20% ನಷ್ಟು ಇರುತ್ತದೆ.

ಇತ್ತೀಚಿನ ದಿನಗಳಲ್ಲಿ ಭೂಮಿ ಹಾಗೂ ಮನೆ ಖರೀದಿ ಮಾಡಿ ಅದನ್ನು ಮತ್ತೆ ಮಾರಾಟ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದು. ಯಾಕೆಂದರೆ ಕೇವಲ ಒಂದರಿಂದ ಎರಡು ವರ್ಷಗಳಲ್ಲಿ ಖರೀದಿ ಮಾಡಿದ ಚಿರಾಸ್ತಿರ ಮೊತ್ತಕ್ಕಿಂತ ಎರಡು ಪಟ್ಟು ಹೆಚ್ಚಿನ ಹಣಕ್ಕೆ ಮಾರಾಟ ಮಾಡಬಹುದು. ಹಾಗಾಗಿ ನೀವು ಲಾಭಕ್ಕಾಗಿ ನಿಮ್ಮ ಬಳಿ ಇರುವ ಆಸ್ತಿಯನ್ನು ಮಾರಾಟ ಮಾಡಿದರೆ ಅದಕ್ಕೆ ಆದಾಯ ತೆರಿಗೆ ಪಾವತಿ ಮಾಡಬೇಕು.

ಗಂಡ-ಹೆಂಡತಿ ಇಬ್ಬರಿಗೂ ಸಿಗುತ್ತೆ ಪ್ರತಿ ತಿಂಗಳು 9 ಸಾವಿರ ರೂ.! ಇಂದೇ ಈ ಯೋಜನೆಗೆ ಅರ್ಜಿ ಸಲ್ಲಿಸಿ

ಶಾರ್ಟ್ ಟರ್ಮ್ ಗೇಮ್ಸ್ ಟ್ಯಾಕ್ಸ್ ಹೇಗೆ ಅನ್ವಯವಾಗುತ್ತೆ?

ಇದು ನೀವು ಆಸ್ತಿಯನ್ನು ಮಾರಾಟ ಮಾಡಿ ಎಷ್ಟು ಲಾಭಗಳಿಸುತ್ತೀರಿ ಎನ್ನುವುದರ ಆಧಾರದ ಮೇಲೆ ನಿರ್ಧಾರವಾಗುತ್ತದೆ. ಉದಾಹರಣೆಗೆ ನೀವು ಒಂದು ಮನೆಯನ್ನು ಖರೀದಿ ಮಾಡಿ ಅದನ್ನು ಮೂರು ವರ್ಷದ ಒಳಗೆ ಮಾರಾಟ ಮಾಡಿ ಆರು ಲಕ್ಷ ರೂಪಾಯಿಗಳನ್ನು ಲಾಭವಾಗಿ ಗಳಿಸಿದರೆ ಅದಕ್ಕೆ 5% ಟ್ಯಾಕ್ಸ್, ಅದೇ ನೀವು 9 ಲಕ್ಷ ರೂಪಾಯಿಗಳ ಲಾಭಗಳಿಸಿದರೆ 45,000 ಹಾಗೂ ಲಾಭ ಮೊತ್ತದ 15% ನನ್ನು ಟ್ಯಾಕ್ಸ್ ಆಗಿ ಪಾವತಿಸಬೇಕು.

ಲಾಂಗ್ ಟರ್ಮ್ ಗೇನ್ಸ್ ಕ್ಯಾಪಿಟಲ್ ಹೇಗೆ ಅನ್ವಯವಾಗುತ್ತದೆ?

ಮನೆ ಖರೀದಿ ಮಾಡಿ ಮೂರು ವರ್ಷಗಳಿಗಿಂತ ಹೆಚ್ಚು ಸಮಯ ನಿಮ್ಮ ಬಳಿ ಇಟ್ಟುಕೊಂಡು ನಂತರ ಮಾರಾಟ ಮಾಡಿದರೆ ಆಗ ಲಾಂಗ್ ಟರ್ಮ್ ಗೇಮ್ಸ್ ಕ್ಯಾಪಿಟಲ್ ಅನ್ವಯವಾಗುತ್ತದೆ. ಇದರಲ್ಲಿ ವೆಚ್ಚ ಮೊದಲಾದ ಶುಲ್ಕಗಳು ಕೂಡ ಸೇರುತ್ತದೆ.

ಲಾಂಗ್ ಟರ್ಮ್ ಗೇಮ್ಸ್ ಕ್ಯಾಪಿಟಲ್ ಲೆಕ್ಕಾಚಾರ ಹಾಕುವುದಾದರೆ, ಉದಾಹರಣೆಗೆ ನೀವು 2018ರಲ್ಲಿ ಒಂದು ಮನೆಯನ್ನು 50 ಲಕ್ಷ ರೂಪಾಯಿಗಳಿಗೆ ಖರೀದಿ ಮಾಡಿದ್ದೀರಿ ಎಂದು ಭಾವಿಸಿ. ಅದನ್ನು 2023ರಲ್ಲಿ 90 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡುತ್ತೀರಿ. ಅಲ್ಲಿಗೆ ನಿಮಗೆ ಉತ್ತಮ ಲಾಭ ದೊರೆತಿರುತ್ತದೆ. ಮನೆ ಮಾರಾಟದ ವಹಿವಾಟಿನಲ್ಲಿ ಬ್ರೋಕರ್ ಗೆ ಎರಡು ಲಕ್ಷ ರೂಪಾಯಿಗಳನ್ನು ಕೊಟ್ಟಿರುತ್ತೀರಿ ಅದೇ ರೀತಿ ಮನೆ ಖರೀದಿ ಮಾಡಿದಾಗ ಮೂರು ಲಕ್ಷ ರೂಪಾಯಿಗಳನ್ನು ಮನೆ ನಿರ್ವಹಣಾ ವೆಚ್ಚವಾಗಿ ಖರ್ಚು ಮಾಡಿರುತ್ತೀರಿ.

ಆಸ್ತಿ ಖರೀದಿಗೆ ಇನ್ಮುಂದೆ ಈ ದಾಖಲೆಗಳು ಕಡ್ಡಾಯ! ಇಲ್ಲದೆ ಇದ್ರೆ ಭೂಮಿ ಖರೀದಿಸಲು ಸಾಧ್ಯವಿಲ್ಲ

ಇಲ್ಲಿ ನೀವು ಇಂಡೆಕ್ಸ್ಶನ್ ಫ್ಯಾಕ್ಟರ್ ಗಳನ್ನು ಲೆಕ್ಕ ಹಾಕಬೇಕು. ನೀವು ಮನೆ ಖರೀದಿ ಮಾಡುವಾಗ, ಕಾಸ್ಟ್ ಇನ್ಫ್ಲೇಶನ್ ಇಂಡೆಕ್ಸ್ 1,500 ಆಗಿದ್ದರೆ. 2023ರಲ್ಲಿ ಇದು 2,000 ಆಗಿರಬಹುದು. ಈಗ 2,000 ಅನ್ನು 1,500 ರಿಂದ ಭಾಗಿಸಬೇಕು. ಆಗ ಇಂಡೆಕ್ಸೇಶನ್ ಫ್ಯಾಕ್ಟರ್ 1.33.

ಈಗ ಇಂಡಿಕೇಷನ್ ಫ್ಯಾಕ್ಟರ್ ಮೊತ್ತದಿಂದ ನೀವು ಮನೆ ನಿರ್ವಹಣೆಗೆ ಬ್ರೋಕರ್ ಗೆ ಹಾಗೂ ಇತರ ಖರ್ಚುಗಳಿದ್ದರೆ ಅದೆಲ್ಲವನ್ನು ಗುಣಾಕಾರ ಮಾಡಿದ ನಂತರ ಬರುವ ಮೊತ್ತವನ್ನು, ನೀವು ಗಳಿಸಿದ ಲಾಭದಲ್ಲಿ ಕಳೆಯಬೇಕು ಆಗ ಉಳಿದ ಹಣಕ್ಕೇ ನೀವು ದೀರ್ಘವಾದ ಬಂಡವಾಳ ತೆರಿಗೆ 20 % ಪಾವತಿ ಮಾಡಬೇಕಾಗುತ್ತದೆ.

New rules for buying and selling property on Tax

Follow us On

FaceBook Google News

New rules for buying and selling property on Tax