ಏಪ್ರಿಲ್ 2024, ಮಾಸಿಕ ಪಿಂಚಣಿ (monthly pension) ಬಿಡುಗಡೆ ಮಾಡಲಾಗಿದ್ದು, ಫಲಾನುಭವಿಗಳ ಖಾತೆಗೆ (Bank Account) ನೇರವಾಗಿ ಜಮಾ ಮಾಡಲಾಗುವುದು. ಪಿಂಚಣಿ ನಿರ್ದೇಶನಾಲಯ ಈ ಬಗ್ಗೆ ಮಾಹಿತಿ ಒದಗಿಸಿದೆ.

ಕಂದಾಯ ಇಲಾಖೆ (revenue department) ಯ ಪಿಂಚಣಿ ನಿರ್ದೇಶನಾಲಯ ಪ್ರತಿ ತಿಂಗಳು ಫಲಾನುಭವಿಗಳಿಗೆ ಪಿಂಚಣಿ ಹಣವನ್ನು ಡಿಬಿಟಿ (DBT ) ಮೂಲಕ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತದೆ.

Pension

ಇನ್ಮುಂದೆ ಇಂಥವರಿಗೆ ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ ಆಗೋಲ್ಲ! ಇಲ್ಲಿದೆ ಕಾರಣ

ಪ್ರತಿ ತಿಂಗಳು 15ನೇ ತಾರೀಖಿನ ನಂತರ ಹಣ ಜಮಾ ಮಾಡುವ ಪ್ರಕ್ರಿಯೆ ಆರಂಭವಾಗುತ್ತದೆ. ಏಪ್ರಿಲ್ ತಿಂಗಳ ಹಣ ನಿಮ್ಮ ಖಾತೆಗೆ ಜಮಾ ಆಗಿದ್ಯೋ, ಇಲ್ಲವೋ ಎನ್ನುವುದನ್ನು ನೀವು ಯಾವುದೇ ಬ್ಯಾಂಕ್ ಗೆ ಹೋಗದೆ ನಿಮ್ಮ ಮೊಬೈಲ್ ನಲ್ಲಿ ಆನ್ಲೈನ್ ನಲ್ಲಿ ಚೆಕ್ ಮಾಡಬಹುದು.

ಲೋಕಸಭಾ ಎಲೆಕ್ಷನ್ ಇರುವ ಹಿನ್ನಲೆಯಲ್ಲಿ ಏಪ್ರಿಲ್ ತಿಂಗಳ ಹಣವನ್ನು ಬಹಳ ಬೇಗ ಬಿಡುಗಡೆ ಮಾಡಲಾಗಿದೆ. ಜೊತೆಗೆ ಮೇ ತಿಂಗಳಲ್ಲಿಯೂ ಕೂಡ 15ನೇ ತಾರೀಕಿಗೆ ಮೊದಲೇ ಪಿಂಚಣಿ ಹಣ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇನ್ನು ಮೊಬೈಲ್ ನಲ್ಲಿ ನೀವು ನಿಮ್ಮ ಡಿಬಿಟಿ ಸ್ಟೇಟಸ್ ಚೆಕ್ ಮಾಡುವುದು ಹೇಗೆ ಎಂಬುದನ್ನು ನೋಡೋಣ.

ಹೊಸ ರೇಷನ್ ಕಾರ್ಡ್ ಗ್ರಾಮೀಣ ಪಟ್ಟಿ ಬಿಡುಗಡೆ! ನಿಮ್ಮ ಹೆಸರು ಇದ್ಯಾ ನೋಡಿಕೊಳ್ಳಿ

Pensionಡಿಬಿಟಿ ಕರ್ನಾಟಕ ಮೊಬೈಲ್ ಅಪ್ಲಿಕೇಶನ್!

ಕರ್ನಾಟಕ ಸರ್ಕಾರ ಬಿಡುಗಡೆ ಮಾಡಿರುವ DBT Karnataka ಮೊಬೈಲ್ ಅಪ್ಲಿಕೇಶನ್ ಮೂಲಕ ನೀವು ನಿಮ್ಮ ಖಾತೆಗೆ ಹಣ ಬಂದಿರುವ ಸಂಪೂರ್ಣ ವಿವರವನ್ನು ತಿಳಿದುಕೊಳ್ಳಬಹುದು.
* ಮೊದಲನೇದಾಗಿ ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ DBT Karnataka mobile ಅಪ್ಲಿಕೇಶನ್ ಡೌನ್ಲೋಡ್ ಮಾಡಿ.
* ಅಪ್ಲಿಕೇಶನ್ ಡೌನ್ಲೋಡ್ ಮಾಡಿದ ನಂತರ ಮೊಬೈಲ್ ನಲ್ಲಿ ಇನ್ಸ್ಟಾಲ್ ಮಾಡಿ. ಬಳಿಕ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು.
* ನಿಮ್ಮ ಮೊಬೈಲ್ ಗೆ ಒಂದು ಒಟಿಪಿ ಕಳುಹಿಸಲಾಗುತ್ತದೆ ಅದನ್ನು ನಮೂದಿಸಬೇಕು.
* ಈಗ ನಾಲ್ಕು ವರ್ಡ್ ನ mPIN ರಚನೆ ಮಾಡಬೇಕು.
* ಇದು ನಿಮ್ಮ ಪಾಸ್ವರ್ಡ್ ಆಗಿರುತ್ತದೆ. ಪ್ರತಿ ಬಾರಿ ಡಿ ಬಿ ಟಿ ಸ್ಟೇಟಸ್ ಚೆಕ್ ಮಾಡಲು ಇದೇ ಪಾಸ್ವರ್ಡ್ ನಮೂದಿಸಬೇಕಾಗುತ್ತದೆ.
* ಈಗ ಅಪ್ಲಿಕೇಶನ್ ನಲ್ಲಿ ನಾಲ್ಕು ಆಯ್ಕೆಗಳು ಕಾಣಿಸುತ್ತವೆ. ಅದರಲ್ಲಿ ನಾಲ್ಕನೇ ಆಯ್ಕೆ ಪಾವತಿ ಸ್ಥಿತಿ ಎಂಬುದರ ಮೇಲೆ ಕ್ಲಿಕ್ ಮಾಡಿ.
* ಇಲ್ಲಿ ನಿಮ್ಮ ಖಾತೆಗೆ ಹಣ ಜಮಾ ಆಗಿರುವ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು.

ಈ ಪಟ್ಟಿಯಲ್ಲಿ ಹೆಸರು ಇಲ್ಲದೇ ಇದ್ರೆ ಅಂಥವರಿಗೆ ಸಿಗಲ್ಲ ಅನ್ನಭಾಗ್ಯ ಯೋಜನೆ ಹಣ!

ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದ್ದರೆ ಮಾತ್ರ ಪಿಂಚಣಿ ಹಣ ಬರುತ್ತೆ!

https://dssp.karnataka.gov.in/dssp/villageWise_list_Of_beneficiaries.aspx ಈ ಅಧಿಕೃತ ಲಿಂಕ್ ಮೇಲೆ ಕ್ಲಿಕ್ ಮಾಡಿ ನಂತರ ನಿಮ್ಮ ಜಿಲ್ಲೆ, ತಾಲೂಕು ಮೊದಲಾದ ಮಾಹಿತಿಗಳನ್ನು ನೀಡಿ ಬಳಿಕ ಒಂದು ಲಿಸ್ಟ್ ಕಾಣಿಸುತ್ತದೆ. ಅದರಲ್ಲಿ ನಿಮ್ಮ ಹೆಸರು ಇದ್ರೆ ಈ ತಿಂಗಳ ಪಿಂಚಣಿ ಎಂದು ಅರ್ಥ ಅಂದರೆ ನಿಮ್ಮ ಖಾತೆಗೆ ತಪ್ಪದೇ ಪಿಂಚಣಿ ಹಣ ಜಮಾ ಆಗುತ್ತದೆ.

ಗೃಹಜ್ಯೋತಿ ಉಚಿತ ವಿದ್ಯುತ್ 200 ಯೂನಿಟ್ ದಾಟದಂತೆ ಮಾಡಿಕೊಳ್ಳಿ! ಇಲ್ಲಿದೆ ಟ್ರಿಕ್ಸ್

Deposited all pension money of this month, list was released