10ನೇ ತರಗತಿ ಪಾಸ್ ಆದವರಿಗೆ ಜಿಲ್ಲಾ ಪಂಚಾಯತ್ ಉದ್ಯೋಗ! ಆಕರ್ಷಕ ಸಂಬಳ
10ನೇ ತರಗತಿ ಉತ್ತೀರ್ಣರಾದವರು ಕೂಡ ಜಿಲ್ಲಾ ಪಂಚಾಯತ್ (Zilla Panchayat recruitment) ನಲ್ಲಿ ಖಾಲಿ ಇರುವ ಹುದ್ದೆಗಳಿಗೆ (Job) ಅರ್ಜಿ ಸಲ್ಲಿಸಬಹುದು.
ಸಾಮಾನ್ಯವಾಗಿ ಕಡಿಮೆ ಶಿಕ್ಷಣ ಹೊಂದಿರುವವರಿಗೆ ಸರ್ಕಾರಿ ನೌಕರಿ (government job) ಪಡೆದುಕೊಳ್ಳಲು ಬಯಕೆ ಇದ್ದರೂ ಸ್ವಲ್ಪ ಕಷ್ಟವಾಗಬಹುದು ಆದರೆ ಇದೀಗ ಕಡಿಮೆ ಶಿಕ್ಷಣ ಹೊಂದಿರುವವರಿಗೆ ಕೂಡ ಸಿಗಬಹುದಾದ ಉದ್ಯೋಗಾವಕಾಶದ ಬಗ್ಗೆ ನಾವು ಈ ಲೇಖನದಲ್ಲಿ ಮಾಹಿತಿ ಕೊಡುತ್ತಿದ್ದೇವೆ.
10ನೇ ತರಗತಿ ಉತ್ತೀರ್ಣರಾದವರು ಕೂಡ ಜಿಲ್ಲಾ ಪಂಚಾಯತ್ (Zilla Panchayat recruitment) ನಲ್ಲಿ ಖಾಲಿ ಇರುವ ಹುದ್ದೆಗಳಿಗೆ (Job) ಅರ್ಜಿ ಸಲ್ಲಿಸಬಹುದು. ಈ ಹುದ್ದೆಯ ಬಗ್ಗೆ ಇಲ್ಲಿಗೆ ಸಂಪೂರ್ಣ ವಿವರ.
ಕೃಷಿ ಮಾಡೋ ಮಹಿಳೆಯರಿಗೆ ಭೂಮಿ ಖರೀದಿಗೆ ಸರ್ಕಾರದಿಂದ 25 ಲಕ್ಷ ಸಬ್ಸಿಡಿ ಸಾಲ
ಜಿಲ್ಲಾ ಪಂಚಾಯತ್ ನಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ವಿವರ!
ಹಾಸನ ಜಿಲ್ಲಾ ಪಂಚಾಯತ್ (Hassan Zilla Panchayat recruitment) ನಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಆಯುಷ್ ಇಲಾಖೆ ಗುತ್ತಿಗೆ ಆಧಾರದ ಮೇಲೆ ಕೆಲವು ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿದೆ. ಹಾಸನ ಜಿಲ್ಲಾ ಪಂಚಾಯತ್ ಹೊರಡಿಸಿರುವ ಅದಿಸೂಚನೆಯ ಪ್ರಕಾರ ಒಟ್ಟು 13 ಹುದ್ದೆಗಳು ಭರ್ತಿಯಾಗಬೇಕು ಆಸಕ್ತ ಅರ್ಹ ಅಭ್ಯರ್ಥಿಗಳು ತಕ್ಷಣ ಅರ್ಜಿ ಸಲ್ಲಿಸಿ.
ಖಾಲಿ ಇರುವ ಹುದ್ದೆಗಳು
ಒಟ್ಟು 13 ಹುದ್ದೆಗಳು! ( Vacancies)
ತಜ್ಞ ವೈದ್ಯರು (AYU), ತಜ್ಞ ವೈದ್ಯರು (BNYS), ಔಷದ ವಿತರಕರು, ಮಸಾಜಿಸ್ಟ್, ಮಲ್ಟಿಪರ್ಪಸ್ ವರ್ಕರ್, ಸಮುದಾಯ ಆರೋಗ್ಯ ಅಧಿಕಾರಿ.
ವಿದ್ಯಾರ್ಹತೆ! (Qualification)
ತಜ್ಞ ವೈದ್ಯರು ಹಾಗೂ ಸಮುದಾಯ ಆರೋಗ್ಯ ಅಧಿಕಾರಿಗಳನ್ನು ಹೊರತುಪಡಿಸಿ ಇತರ ಹುದ್ದೆಗಳಿಗೆ 10ನೇ ತರಗತಿ ಉತ್ತೀರ್ಣರಾಗಿದ್ದರೆ ಸಾಕು. ಆರೋಗ್ಯ ಅಧಿಕಾರಿ ಹಾಗೂ ತಜ್ಞ ವೈದ್ಯರು ಆಯಾ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ಇನ್ನು ಆಯ್ಕೆಯಾದ ಅಭ್ಯರ್ಥಿಗಳು ಹಾಸನ ಜಿಲ್ಲಾ ಪಂಚಾಯತ್ ನಲ್ಲಿ ಕಾರ್ಯನಿರ್ವಹಿಸಲು ಸಿದ್ಧರಿರಬೇಕು.
ಉದ್ಯೋಗ ಸಿಕ್ಕಿಲ್ವಾ? ಹಾಗಾದ್ರೆ ನಿರುದ್ಯೋಗಿಗಳಿಗೆ ಸರ್ಕಾರವೇ ಕೊಡುತ್ತೆ 3,000 ರೂಪಾಯಿ
ವಯೋಮಿತಿ (Age limit)
ಸಾಮಾನ್ಯ ಅಭ್ಯರ್ಥಿಗಳ ವಯೋಮಿತಿ 18 ವರ್ಷದಿಂದ 35 ವರ್ಷ ವಯಸ್ಸಿನವರೆಗೆ. ಎಷ್ಟು ಜಾತಿ ಪರಿಶಿಷ್ಟ ಪಂಗಡದವರಿಗೆ ವಯೋಮಿತಿ ಸಡಿಲಿಕೆ ನೀಡಲಾಗಿದೆ. ಎಎಸ್ ಸಿ/ ಎಸ್ ಟಿ ವರ್ಗಕ್ಕೆ 40 ವರ್ಷಗಳವರೆಗೆ ವಯೋಮಿತಿ ಸಡಿಲಿಕೆ ಘೋಷಣೆಯಾಗಿದ್ದರೆ 2A, 2B, 3A, 3B ವರ್ಗಕ್ಕೆ 38 ವರ್ಷಗಳವರೆಗೆ ವಯೋಮಿತಿ ಸಡಿಲಿಕೆ ಇದೆ ಎಂದು ಹಾಸನ್ ಜಿಲ್ಲಾ ಪಂಚಾಯತ್ ಅಧಿಸೂಚನೆಯಲ್ಲಿ ತಿಳಿಸಿದೆ.
ಈ ತಿಂಗಳ ಅನ್ನಭಾಗ್ಯ ಹಣ ವರ್ಗಾವಣೆ! ನಿಮ್ಮ ಖಾತೆಗೂ ಜಮಾ ಆಗಿದ್ಯಾ ಚೆಕ್ ಮಾಡಿ
ವೇತನ (Salary)
ಹಾಸನ ಜಿಲ್ಲಾ ಪಂಚಾಯತ್ ಹೊರಡಿಸಿರುವ ಸೂಚನೆಯ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳಿಗೆ ಸಿಗುವ ವೇತನ ಇಂತಿದೆ. ತಜ್ಞ ವೈದ್ಯರು (AYU/ BNYS) – ರೂ.52,500 , ಔಷದ ವಿತರಕರ ವೇತನ ರೂ. 27,500, ಮಸಾಜಿಸ್ಟ್ – ರೂ. 18,500, ಮಲ್ಟಿಪರ್ಪಸ್ ವರ್ಕರ್ – ರೂ. 16,900 ಹಾಗೂ ಸಮುದಾಯ ಆರೋಗ್ಯ ಅಧಿಕಾರಿ – ರೂ.40,000 ಅನುಭವದ ಆಧಾರದ ಮೇಲೆ ವೇತನ ಶ್ರೇಣಿಯಲ್ಲಿ ವ್ಯತ್ಯಾಸ ಆಗಬಹುದು.
ಅರ್ಜಿ ಸಲ್ಲಿಸುವುದು ಹೇಗೆ? (How to apply)
ಮೇಲೆ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆನ್ ಲೈನ್ ನಲ್ಲಿ ಅವಕಾಶವಿಲ್ಲ ನೀವು ಆನ್ಲೈನ್ ನಲ್ಲಿ ಅರ್ಜಿ ಫಾರಂ ಡೌನ್ಲೋಡ್ ಮಾಡಿಕೊಂಡು ಅಗತ್ಯ ಇರುವ ದಾಖಲೆಗಳನ್ನು ಅಟ್ಯಾಚ್ ಮಾಡಿ ರಿಜಿಸ್ಟರ್ ಪೋಸ್ಟ್ ಕಳುಹಿಸಬೇಕಾಗುತ್ತದೆ. https://hassan.nic.in ಈ ಅಧಿಕೃತ ವೆಬ್ಸೈಟ್ನಲ್ಲಿ ಮಾಹಿತಿ ತಿಳಿದುಕೊಳ್ಳಿ ಹಾಗೂ ಅರ್ಜಿ ಫಾರಂ ಡೌನ್ಲೋಡ್ ಮಾಡಿಕೊಳ್ಳಿ. ನಂತರ ಈ ಕೆಳಗಿನ ವಿಳಾಸಕ್ಕೆ ಪೋಸ್ಟಲ್ ಮೂಲಕ ಅರ್ಜಿ ಕಳುಹಿಸಿ.
ಮಹಿಳೆಯರು ಸ್ವಂತ ಉದ್ಯಮ ಆರಂಭಿಸಲು ಸರ್ಕಾರವೇ ಕೊಡುತ್ತೆ 2.5 ಲಕ್ಷ ಸಬ್ಸಿಡಿ ಸಾಲ
ಅರ್ಜಿ ಸಲ್ಲಿಸಬೇಕಾದ ವಿಳಾಸ (Address)
ಸದಸ್ಯ ಕಾರ್ಯದರ್ಶಿ,
ಜಿಲ್ಲಾ ಆಯುಷ್ ಅಧಿಕಾರಿಗಳ ಕಚೇರಿ, ಹೊಸ ಲೈನ್ ರಸ್ತೆ,
ಹಾಸನ – 573201
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 28, 2023. ಅರ್ಜಿ ಸಲ್ಲಿಸಲು ಕೆಲವೇ ದಿನಗಳು ಮಾತ್ರ ಲಭ್ಯವಿದ್ದು ತಕ್ಷಣವೇ ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅಪ್ಲೈ ಮಾಡಿ.
Zilla Panchayat job for 10th class pass with Attractive salary