ಇನ್ಮುಂದೆ ಎಲ್ಲಾ ಹಂತದಲ್ಲೂ ನಾನು ವಿಷ್ಣು ಅಪ್ಪಾಜಿ ತರ ನಿಮ್ಮ ಜೊತೆ ಇರ್ತೀನಿ ಎಂದು ಶಿವಣ್ಣ ಹೇಳಿದ್ದು ಯಾರಿಗೆ ಗೊತ್ತಾ? ಕೊಟ್ಟ ಮಾತನ್ನು ಉಳಿಸಿಕೊಂಡ್ರಾ ಶಿವಣ್ಣ?

ವಿಷ್ಣು ದಾದಾ ಅಗಲಿದ ಸಂದರ್ಭದಲ್ಲಿ ಶಿವಣ್ಣ, ಆ ಒಬ್ಬ ವ್ಯಕ್ತಿಗೆ ನಾನು ಎಲ್ಲಾ ಸಂದರ್ಭದಲ್ಲಿಯೂ ವಿಷ್ಣು ಸರ್ ತರ ನಿಮ್ಮ ಜೊತೆಗೆ ಇರ್ತೀನಿ ಎಂದು ಭಾಷೆ ಕೊಟ್ಟಿರುತ್ತಾರೆ

Bengaluru, Karnataka, India
Edited By: Satish Raj Goravigere

ಸ್ನೇಹಿತರೆ, ತಮ್ಮ ಅಮೋಘ ಅಭಿನಯದ ಮೂಲಕ ಆಗಿನ ಕಾಲದ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ಕನ್ನಡ ಚಿತ್ರರಂಗದ (Kannada Cinema) ಹಿರಿಮೆಯನ್ನು ಬೇರೊಂದು ಲೋಕಕ್ಕೆ ಕೊಂಡೋಯ್ಯುವಲ್ಲಿ ಮೈಲುಗಲ್ಲನ್ನು ಹಾಕಿದಂತಹ ಸಾಕಷ್ಟು ನಟರಲ್ಲಿ ವಿಷ್ಣುವರ್ಧನ್ (Actor Vishnuvardhan) ಅವರು ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ ಎಂದರೆ ತಪ್ಪಾಗಲಾರದು.

ಎಂತಹ ಪಾತ್ರ ನೀಡಿದರು ನಟನೆಯ ಪ್ರವೃತ್ತಿಯನ್ನು ಎತ್ತಿ ಹಿಡಿಯುತ್ತಿದ್ದಂತಹ ವಿಷ್ಣು ದಾದಾ ಅಗಲಿದ ಸಂದರ್ಭದಲ್ಲಿ ಶಿವಣ್ಣ (Actor Shiva Rajkumar), ಆ ಒಬ್ಬ ವ್ಯಕ್ತಿಗೆ ನಾನು ಎಲ್ಲಾ ಸಂದರ್ಭದಲ್ಲಿಯೂ ವಿಷ್ಣು ಸರ್ ತರ ನಿಮ್ಮ ಜೊತೆಗೆ ಇರ್ತೀನಿ ಎಂದು ಭಾಷೆ ಕೊಟ್ಟಿರುತ್ತಾರೆ…

Actor Shiva Rajkumar Given Promise to Actor Abhijith

ಕಾಂತಾರ ಸಿನಿಮಾಗೆ ನಟಿ ಸಪ್ತಮಿ ಗೌಡ ಡಿಮ್ಯಾಂಡ್ ಮಾಡಿದ ಹಣ ಎಷ್ಟು ಕೋಟಿ ಗೊತ್ತಾ? ಚಿತ್ರ ಯಶಸ್ಸು ಕಂಡ ನಂತರ ರಿಷಬ್ ಶೆಟ್ಟಿ ಕೊಟ್ಟಿದ್ದೆಷ್ಟು?

ಆಗದ್ರೆ ಕೊಟ್ಟಂತಹ ಮಾತನ್ನು ಶಿವಣ್ಣನಿಂದ ಉಳಿಸಿಕೊಳ್ಳಲು ಸಾಧ್ಯ ಆಯ್ತಾ ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ ಸಾಮಾನ್ಯವಾಗಿ ಡಾಕ್ಟರ್ ವಿಷ್ಣುವರ್ಧನ್ ಅವರ ಸಾಕಷ್ಟು ಸಿನಿಮಾಗಳಲ್ಲಿ ಅವರ ಆಪ್ತ ಗೆಳೆಯನಾದ ಅಭಿಜಿತ್ (Kannada Actor Abhijith) ಅವರಿಗೊಂದು ಪಾತ್ರ ನಿಗದಿಯಾಗಿರುತ್ತಿತ್ತು. ಅವರು ಅಭಿನಯಿಸಿದ ತುಂಬಿದ ಮನೆಯಾಗಲಿ, ಕೋಟಿಗೊಬ್ಬ, ಯಜಮಾನ, ರಾಜ ನರಸಿಂಹ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ವಿಷ್ಣುವರ್ಧನ್ ಅವರೊಂದಿಗೆ ಅಭಿನಯಿಸುವಂತಹ ಪುಣ್ಯವನ್ನು ಅಭಿಜಿತ್ ಪಡೆದುಕೊಂಡಿದ್ದರು.

ದರ್ಶನ್ ಹೊಸ ವರ್ಕೌಟ್ ವಿಡಿಯೋದಲ್ಲಿ ‘ನನ್ನ ಪ್ರೀತಿಯ ಸೆಲೆಬ್ರಿಟಿ’ ಟ್ಯಾಟೂ ಮಾಯ! ಇಷ್ಟೇನಾ ನಿಮ್ಮ ಡಿಬಾಸ್ ಪ್ರೀತಿ ಎಂದವರಿಗೆ ಅಭಿಮಾನಿಗಳು ಕೊಟ್ಟ ಟಕ್ಕರ್ ಹೇಗಿತ್ತು ಗೊತ್ತಾ?

ಅಭಿಜಿತ್ ಅವರು ಒಳ್ಳೆಯ ನಟ ಆದರೆ ಅವರಿಗೆ ತಕ್ಕ ಪಾತ್ರಗಳು ಸಿಗಲಿಲ್ಲವಷ್ಟೇ ಎಂದು ಸ್ವತಃ ಅಭಿಜಿತ್ ಅವರ ಪತ್ನಿ ರೋಹಿಣಿಯವರ ಸಾಕಷ್ಟು ಮಾಧ್ಯಮಗಳಲ್ಲಿ ಹೇಳಿದ್ದರು.

kannada Actor Abhijith

ಹಿರಿಯ ನಟಿ ಆರತಿ ಸಿನಿಮಾರಂಗ ತೊರೆಯಲು ಕಾರಣವಾದರೂ ಏನು? ಈಗ ಹೇಗಿದ್ದಾರೆ? ಎಲ್ಲಿದ್ದಾರೆ?

ಇನ್ನು ವಿಷ್ಣುವರ್ಧನ್ ಅವರು ಅಕಾಲಿಕ ಅಗಲಿಕೆಯಿಂದ ಸಾಕಷ್ಟು ಕುಗ್ಗಿ ಹೋಗಿದ್ದಂತಹ ಅಭಿಜಿತ್ ಅವರನ್ನು ಕಂಡು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿಜಿತ್ ನೀವು ಒಳ್ಳೆ ಫೈಟರ್… ಜೀವನವನ್ನು ಫೈಟ್ ಮಾಡಿಕೊಂಡು ಬಂದಿದ್ದೀರಾ ನೀವು ಯಾವತ್ತಿಗೂ ಸೋತಿಲ್ಲ ಸೋಲಬೇಡಿ ಇನ್ಮುಂದೆ ವಿಷ್ಣು ಸರ್ ತರ ನಾನು ನಿಮ್ಮ ಬಾಳಲ್ಲಿ ಇರ್ತೀನಿ, ನನ್ನ ಎಲ್ಲಾ ಸಿನಿಮಾದಲ್ಲಿಯೂ ನಿಮಗೊಂದು ಪಾತ್ರ ನಿಗದಿಯಾಗಿರಲಿದೆ ಎಂದಿದ್ದರು.

ಮಾಲಾಶ್ರೀ ಮತ್ತು ಶಶಿಕುಮಾರ್ ಲವ್ ಗಾಸಿಪ್ ಸೃಷ್ಟಿಯಾಗಿದ್ದು ಹೇಗೆ? ಈ ಕುರಿತು ಶಶಿಕುಮಾರ್ ಮಾಧ್ಯಮದಲ್ಲಿ ಹೇಳಿದ್ದೇನು ಗೊತ್ತಾ?

ನಿಮ್ಮ ಜೊತೆ ಸದಾ ಕಾಲ ನಾನು ಇರುತ್ತೇನೆ ಎಂದಿದ್ದರಂತೆ. ಹೀಗೆ ಶಿವಣ್ಣ ಭಾಷೆ ನೀಡಿದಂತೆ ನಡೆದುಕೊಂಡ್ರಾ? ಶಿವರಾಜಕುಮಾರ್ ಅವರ ಸಿನಿಮಾಗಳಲ್ಲಿ ನಾವು ಅಭಿಜಿತ್ ಅವರನ್ನು ಕಂಡಿದ್ದೇವಾ?

Actor Shiva Rajkumar Given Promise to Actor Abhijith