ವೈಯಕ್ತಿಕ ವಿಚಾರ ಬಿಡ್ರಿ, ಇಂಥ ಇಳಿ ವಯಸ್ಸಿನಲ್ಲಿ ಲೀಲಾವತಿ ಅಮ್ಮನವರು ಬಡವರಿಗಾಗಿ ಅದೆಂತ ಮಹತ್ಕಾರ್ಯ ಮಾಡ್ತಿದ್ದಾರೆ ಗೊತ್ತಾ? ನಿಜಕ್ಕೂ ಗ್ರೇಟ್!
ಸಿನಿಮಾ ರಂಗದಲ್ಲಿ ಎದುರಾದಂತಹ ಕೆಲ ಘಟನೆಯಿಂದಾಗಿ ಲೀಲಾವತಿ ಅಮ್ಮನವರು ಸಿನಿಮಾ ರಂಗವನ್ನು ತೊರೆದು ತಮ್ಮ ಮಗ ವಿನೋದ್ ರಾಜ್ ಅವರೊಂದಿಗೆ ಕೃಷಿ ಮಾಡಿಕೊಂಡು ಇದ್ದಂತಹ ಮಾಹಿತಿ ನಿಮ್ಮೆಲ್ಲರಿಗೂ ತಿಳಿದೆ ಇದೆ.
ಸ್ನೇಹಿತರೆ, ನಟಿ ಲೀಲಾವತಿ (Kannada Actress Leelavathi) ಅಮ್ಮನವರು ಸುಮಾರು 50 ದಶಕಗಳಿಂದ ನಮ್ಮ ಕನ್ನಡ ಸಿನಿಮಾರಂಗದಲ್ಲಿ (Kannada Film Industry) ನಿಸ್ವಾರ್ಥ ಸೇವೆ ಸಲ್ಲಿಸುತ್ತಾ ಬಂದಿರುವಂತಹ ನಟಿ. ಅದೊಂದು ಕಾಲದಲ್ಲಿ ಡಾಕ್ಟರ್ ರಾಜಕುಮಾರ್ ವಿಷ್ಣುವರ್ಧನ್ ಅವರಂತಹ ನಟರೊಂದಿಗೆ ತೆರೆ ಹಂಚಿಕೊಂಡು ಪೀಕ್ನಲ್ಲಿ ಇದ್ದಂತಹ ನಟಿ ಲೀಲಾವತಿ ಅಮ್ಮನವರು..
ಅನಂತರ ಪೋಷಕ ಪಾತ್ರಗಳಿಗೆ ಜೀವ ತುಂಬುತ್ತಾ ಹಲವಾರು ಸಿನಿಮಾಗಳಲ್ಲಿ ತಾಯಿಯಾಗಿ, ಅತ್ತೆಯಾಗಿ ಹಾಗೂ ಮಹಿಳಾ ವಿಲನ್ ಆಗಿಯೂ ಕಾಣಿಸಿಕೊಳ್ಳುವ ಮೂಲಕ ಎಂತಹ ಪಾತ್ರ ನೀಡಿದರು ಅದರೊಳಗೆ ಪರಕಾಯ ಪ್ರವೇಶ ಮಾಡಿ ಸೈ ಎನ್ನುವಂತಹ ಅಭಿನಯ ತೋರುತ್ತಿದ್ದಂತಹ ಮಹಾನ್ ನಟಿ.
ಆದ್ರೆ ಸಿನಿಮಾ ರಂಗದಲ್ಲಿ (Kannada Cinema) ಎದುರಾದಂತಹ ಕೆಲ ಘಟನೆಯಿಂದಾಗಿ ಲೀಲಾವತಿ ಅಮ್ಮನವರು ಸಿನಿಮಾ ರಂಗವನ್ನು ತೊರೆದು ತಮ್ಮ ಮಗ ವಿನೋದ್ ರಾಜ್ ಅವರೊಂದಿಗೆ ಕೃಷಿ ಮಾಡಿಕೊಂಡು ಇದ್ದಂತಹ ಮಾಹಿತಿ ನಿಮ್ಮೆಲ್ಲರಿಗೂ ತಿಳಿದೆ ಇದೆ.
ಎಲ್ಲಾ ಭಾಷೆಗಳಿಗೂ ರೀಮೇಕ್ ಆಗಿ ಬಾಕ್ಸ್ ಆಫೀಸ್ ದೋಚಿದ್ದ ಅಣ್ಣಾವ್ರ ಶಂಕರ್ ಗುರು ಸಿನಿಮಾ ಕಲೆಕ್ಷನ್ ಎಷ್ಟು ಗೊತ್ತಾ?
ಅದರಿಂದ ಬಂದಂತಹ ಹಣದಲ್ಲಿ ನಿಸ್ವಾರ್ಥವಾಗಿ ಸಮಾಜ ಸೇವೆಯನ್ನು (Social Service) ಮಾಡುತ್ತಿದ್ದಂತಹ ಲೀಲಾವತಿ ಮತ್ತು ವಿನೋದ್ ರಾಜ್ ಬಡವರಿಗೆ ನಿರ್ಗತಿಕರಿಗೆ ಅದೆಂತ ಸಹಾಯ ಮಾಡಿದ್ದಾರೆ ಎಂಬ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದು, ನಿಮಗೂ ಕೂಡ ಈ ಒಂದು ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಗೆಳೆಯರೇ, ಕಳೆದ ಕೆಲವು ದಿನಗಳ ಹಿಂದಷ್ಟೇ ನಿರ್ದೇಶಕ ಪ್ರಕಾಶ್ ರಾಜ್ ಮೇಹು ಅವರು ತಮ್ಮ ಫೇಸ್ಬುಕ್ ಖಾತೆಯಲ್ಲಿ (Facebook Page) ಹಂಚಿಕೊಂಡಂತಹ ಕೆಲ ಫೋಟೋಗಳು (Photos) ಹಾಗೂ ವಿವರಣೆಗಳು ಬಾರಿ ಚರ್ಚೆಗೆ ಗ್ರಾಸವಾಗಿತ್ತು.
ಸೂರ್ಯವಂಶ ಸಿನಿಮಾದಲ್ಲಿ ವಿಷ್ಣು ದಾದನನ್ನೆ ಏಕವಚನದಲ್ಲಿ ಮಾತನಾಡಿಸಿದ್ದ ಮಾಸ್ಟರ್ ಚಂದನ್ ಈಗ ಹೇಗಿದ್ದಾರೆ ಗೊತ್ತಾ?
ಅದರಂತೆ ವಿನೋದ್ ರಾಜ್ ಕೂಡ ನಾನು ಮದುವೆಯಾಗಿದ್ದೇನೆ ಅಷ್ಟೇ, ಭಯೋತ್ಪಾದನೆ ಮಾಡಿಲ್ಲ ಇದೆಲ್ಲವನ್ನು ಇಲ್ಲಿಗೆ ಬಿಟ್ಟುಬಿಡಿ ಎಂದು ಕೇಳಿಕೊಂಡರು. ಹೀಗೆ ಕೇವಲ ಲೀಲಾವತಿ ಅಮ್ಮನವರು ಹಾಗೂ ವಿನೋದ್ ರಾಜ್ ಅವರ ವೈಯಕ್ತಿಕ ವಿಚಾರವನ್ನೇ ಹಿಡಿದು ಮಾತನಾಡುವ ಜನರಿಗೆ ಅವರು ಈವರೆಗೂ ಮಾಡಿರುವಂತಹ ಸಮಾಜ ಸೇವೆಯ ಕುರಿತು ಮಾಹಿತಿ ತಿಳಿದೆ ಇಲ್ಲ.
ಬೆಂಗಳೂರಿಗೆ (Bengaluru) ಸಮೀಪ ಇರುವಂತಹ ಸೋಲದೇವನಹಳ್ಳಿಯಲ್ಲಿ ನಟಿ ಲೀಲಾವತಿ ಅಮ್ಮನವರು ಸೈಟ್ ಒಂದನ್ನು ಖರೀದಿಸಿ ಬಡವರಿಗಾಗಿ ಪ್ರಾಥಮಿಕ ಚಿಕಿತ್ಸೆ ನೀಡಲು ಆಸ್ಪತ್ರೆ (Hospital) ಕಟ್ಟಿಸಿ ಅದನ್ನು ಮುಖ್ಯಮಂತ್ರಿ ಆಗಿದ್ದ ಬಸವರಾಜ ಬೊಮ್ಮಾಯಿ ಅವರಿಗೆ ಹಸ್ತಾಂತರಿಸಿದರು.
ಇಂದಿಗೂ ಕೂಡ ಅಲ್ಲಿ ರೋಗದಿಂದ ಬಳಲುತ್ತಿರುವವರಿಗೆ ಉಚಿತವಾಗಿ ನೀಲಾವತಿ ಅಮ್ಮನವರ ಹೆಸರಿನಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡುವಂತಹ ಆರೋಗ್ಯ ಕೇಂದ್ರವಿದೆ. ಇನ್ನು ಲಾಕ್ಡೌನ್ ಸಮಯದಲ್ಲಂತೂ ತಮ್ಮದೇ ಜಮೀನಿನಲ್ಲಿ ಕೃಷಿ ಮಾಡಿ ಬಡವರಿಗೆ, ನಿರ್ಗತಿಕರಿಗೆ ಹಾಗೂ ಸಿನಿಮಾ ರಂಗದ ಕೆಳವರ್ಗದ ಕಲಾವಿದರಿಗೆ ದೈನಂದಿನ ಆಹಾರವನ್ನು ಒದಗಿಸುವ ಕೆಲಸ ಮಾಡಿದರು.
ಅಲ್ಲದೆ ತಮ್ಮ ತೋಟಗಾರಿಕೆ ಇಂದ ಬಂದಂತಹ ಹಣವನ್ನು ಬಡಜನರ ಅಭಿವೃದ್ಧಿಗಾಗಿ ಲೀಲಾವತಿ ಮತ್ತು ವಿನೋದ್ ರಾಜ್ ಅವರು ಬಳಸುತ್ತಿರುವ ಮಾಹಿತಿ ತಿಳಿದು ಬಂದಿದ್ದು, ಇಂತಹ ಇಳಿ ವಯಸ್ಸಿನಲ್ಲಿಯೂ ಲೀಲಾವತಿ ಅಮ್ಮನವರು ನಿರ್ಗತಿಕರ ಬಗ್ಗೆ ಯೋಚನೆ ಮಾಡುತ್ತಿರುವುದಕ್ಕೆ ಮೆಚ್ಚುಗೆ ಇರಲೇಬೇಕು.
Kannada Senior Actress Leelavathi Social Service Goes Viral
Follow us On
Google News |