ನಾಳೆ ಪ್ರಧಾನಿ ಮೋದಿ ಬೆಂಗಳೂರು ಭೇಟಿ, ಹಲವೆಡೆ ಸಂಚಾರ ದಟ್ಟಣೆ ಸಾಧ್ಯತೆ - PM Bengaluru Visit
ಆಗಸ್ಟ್ 10ರಂದು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸಿ ಹಳದಿ ಮೆಟ್ರೋ ಲೋಕಾರ್ಪಣೆ, ವಂದೇ ಭಾರತ್ ರೈಲು ಚಾಲನೆ ಹಾಗೂ ಮೆಟ್ರೋ 3ನೇ ಹಂತಕ್ಕೆ ಶಂಕುಸ್ಥಾಪನೆ ಸೇರಿದಂತೆ ಮೂರು ಪ್ರಮುಖ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
- ಹಳದಿ ಮೆಟ್ರೋ ಲೋಕಾರ್ಪಣೆ, ವಂದೇ ಭಾರತ್ ಚಾಲನೆ
- ಮೆಟ್ರೋ 3ನೇ ಹಂತ ಶಂಕುಸ್ಥಾಪನೆಗೆ ಮೋದಿ
- ಬೆಂಗಳೂರಿನಲ್ಲಿ 4 ಗಂಟೆಯಲ್ಲಿ 3 ಕಾರ್ಯಕ್ರಮಗಳು
ಬೆಂಗಳೂರು (Bengaluru): ನಾಳೆ (ಆಗಸ್ಟ್ 10) ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಬೆಂಗಳೂರಿನ ಭೇಟಿ ಭರ್ಜರಿಯಾಗಿ ನಡೆಯಲಿದೆ. ಬೆಳಗ್ಗೆ 10.30ಕ್ಕೆ ಹೆಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಪ್ರಧಾನಿ, ನಾಲ್ಕು ಗಂಟೆಗಳ ಕಾಲ ನಗರದ ವಿವಿಧ ಭಾಗಗಳಲ್ಲಿ ಮೂರು ಪ್ರಮುಖ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಮೊದಲು ಕೆಎಸ್‌ಆರ್ ಬೆಂಗಳೂರು ರೈಲು ನಿಲ್ದಾಣದಲ್ಲಿ, ಪ್ರಧಾನಿ ಮೋದಿ ಬೆಂಗಳೂರು-ಬೆಳಗಾವಿ ವಂದೇ ಭಾರತ್ ರೈಲಿಗೆ ಚಾಲನೆ ನೀಡಲಿದ್ದಾರೆ. ಇದೇ ವೇದಿಕೆಯಿಂದ ಅಮೃತ್‌ಸರ್–ವೈಷ್ಣೋದೇವಿ ಕತ್ರಿ ಮತ್ತು ಅಜ್ನಿ (ನಾಗಪುರ್)–ಪುಣೆ ವಂದೇ ಭಾರತ್ ರೈಲುಗಳಿಗೂ ವರ್ಚುವಲ್ ಚಾಲನೆ ನೀಡಲಾಗುವುದು.
ಇದನ್ನೂ ಓದಿ: ನಟ ಧ್ರುವ ಸರ್ಜಾ ವಿರುದ್ಧ ಎಫ್‌ಐಆರ್ ದಾಖಲು! ವಿಚಾರ ಏನು ಗೊತ್ತಾ?
ನಂತರ ರಸ್ತೆ ಮಾರ್ಗದ ಮೂಲಕ ರಾಗಿಗುಡ್ಡ (ಆರ್‌ವಿ ರಸ್ತೆ) ಮೆಟ್ರೋ ನಿಲ್ದಾಣಕ್ಕೆ ತೆರಳಲಿದ್ದು, ಬೆಳಿಗ್ಗೆ 11.45ರಿಂದ ಮಧ್ಯಾಹ್ನ 12.50ರವರೆಗೆ ಹಳದಿ ಮಾರ್ಗ ಲೋಕಾರ್ಪಣೆ ಮಾಡಿ, ಎಲೆಕ್ಟ್ರಾನಿಕ್ ಸಿಟಿವರೆಗೆ ಮೆಟ್ರೋ ಪ್ರಯಾಣಿಸಲಿದ್ದಾರೆ. ಈ ಹಳದಿ ಮಾರ್ಗವು 19.15 ಕಿ.ಮೀ ಉದ್ದದಿದ್ದು, 16 ನಿಲ್ದಾಣಗಳನ್ನು ಹೊಂದಿದೆ. ಒಟ್ಟು ₹5,056.99 ಕೋಟಿ ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದೆ.
ಮೂರನೇ ಕಾರ್ಯಕ್ರಮವಾಗಿ, ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ) ಬೆಂಗಳೂರಿನಲ್ಲಿ ಮೆಟ್ರೋ 3ನೇ ಹಂತ (ಆರೆಂಜ್ ಲೈನ್) ಯೋಜನೆಗೆ ಪ್ರಧಾನಿ ಮೋದಿ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ. 44.65 ಕಿ.ಮೀ ಉದ್ದದ ಈ ಮಾರ್ಗವನ್ನು ₹15,611 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಯೋಜಿಸಲಾಗಿದೆ.
ಇದನ್ನೂ ಓದಿ: ಯದ್ವಾತದ್ವ ಬಾಡಿಗೆಗೆ ಕಡಿವಾಣ! ಬಾಡಿಗೆ ಕೊಟ್ಟ ಮನೆ ಮಾಲೀಕರಿಗೆ ಹೊಸ ರೂಲ್ಸ್
ಮೋದಿಯವರ ಭೇಟಿ ಹಿನ್ನೆಲೆಯಲ್ಲಿ ನಗರದ ಕೆಲವು ಪ್ರಮುಖ ಮಾರ್ಗಗಳಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ. ಹೊಸೂರು ರಸ್ತೆ, ಸಿಲ್ಕ್ ಬೋರ್ಡ್ ಜಂಕ್ಷನ್ ಮತ್ತು ಎಲೆಕ್ಟ್ರಾನಿಕ್ ಸಿಟಿ ಜಂಕ್ಷನ್ ಪ್ರದೇಶಗಳಲ್ಲಿ ವಾಹನಗಳ ಒತ್ತಡ ಹೆಚ್ಚಾಗಲಿದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಇದೇ ವೇಳೆ, ಬಿಜೆಪಿ ಕಾರ್ಯಕರ್ತರು ವಿವಿಧ ಸ್ಥಳಗಳಲ್ಲಿ ಪ್ರಧಾನಿಗೆ ಅದ್ದೂರಿ ಸ್ವಾಗತ ಕೋರಲು ಸಜ್ಜಾಗಿದ್ದಾರೆ. ಬೆಳಗ್ಗೆ 7.50ಕ್ಕೆ ನವದೆಹಲಿಯಿಂದ ಪ್ರಯಾಣ ಆರಂಭಿಸುವ ಮೋದಿ, ಮಧ್ಯಾಹ್ನ 2.40ಕ್ಕೆ ಹೆಚ್‌ಎಎಲ್ ನಿಂದ ಮತ್ತೆ ದೆಹಲಿಯತ್ತ ಹಾರಲಿದ್ದಾರೆ.
PM Modi’s 4-hour Bengaluru visit packed with key events



